Round Up 2021: ಜನ ಹೆಚ್ಚು ಹುಡುಕಿದ ಆಹಾರದಲ್ಲಿ ಮೋದಕವೂ ಇದೆ

By Suvarna News  |  First Published Dec 27, 2021, 7:05 PM IST

ಭಾರತೀಯರು ಸ್ವಭಾವತಃ ಆಹಾರಪ್ರಿಯರು. ನಾರ್ತ್, ಸೌತ್, ಕಾಂಟಿನೆಂಟಲ್ ಎಂದು ವೆರೈಟಿ ಫುಡ್‌ಗಳ ರೆಸಿಪಿ (Recipe)ಯನ್ನು ಟ್ರೈ ಮಾಡುತ್ತಲೇ ಇರುತ್ತಾರೆ. 2021ರಲ್ಲಿ ಭಾರತೀಯರು ಹುಡುಕಿದ ಅಗ್ರ ಐದು ಆಹಾರ (Food) ಪಾಕವಿಧಾನಗಳು ಇಲ್ಲಿವೆ. ಅದರಲ್ಲಿ ಗಣೇಶನಿಗೆ ಪ್ರಿಯವಾದ ಮೋದಕವೂ ಇದೆ ಅನ್ನೋದು ವಿಶೇಷ.
 


ಆಹಾರಪ್ರಿಯರು ಹೊಸ ಹೊಸ ರೆಸಿಪಿಗಳಿಗಾಗಿ ಹುಡುಕುತ್ತಲೇ ಇರುತ್ತಾರೆ. ಕೆಲವೊಮ್ಮೆ ತಯಾರಿಸುತ್ತಿರುವ ಆಹಾರಗಳಿಗೆ ಇನ್ನೇನನ್ನೋ ಸೇರಿಸಿ ಹೊಸ ಟಚ್ ನೀಡಿದರೆ, ಇನ್ನು ಕೆಲವೊಮ್ಮೆ ಹಳೆಯ ಆಹಾರ ಪದ್ಧತಿಗಳಲ್ಲೇ ಎಕ್ಸಪರಿಮೆಂಟ್ ಮಾಡುತ್ತಿರುತ್ತಾರೆ. ಹೀಗಾಗಿಯೇ ಪ್ರತಿವರ್ಷವೂ ಹಲವು ಆಹಾರಗಳು ಟ್ರೆಂಡಿಂಗ್‌ನಲ್ಲಿರುತ್ತವೆ. ಗೂಗಲ್ 2021ರಲ್ಲಿ ಟ್ರೆಂಡಿಂಗ್‌ನಲ್ಲಿದ್ದ ಹಲವು ಪಾಕವಿಧಾನಗಳನ್ನು ಪಟ್ಟಿ ಮಾಡಿದೆ., ಗೂಗಲ್ ತನ್ನ 'ಇಯರ್ ಇನ್ ಸರ್ಚ್ 2021' ವರದಿಯಲ್ಲಿ, ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿ ಯಾವ ಆಹಾರವಿತ್ತು ಎಂಬುದನ್ನು ಪಟ್ಟಿ ಮಾಡಿದೆ. 2021ರಲ್ಲಿ ಭಾರತದ ಜನರು ಹುಡುಕಿದ ಅಗ್ರ ಐದು ಆಹಾರ ಪಾಕವಿಧಾನಗಳು ಇಲ್ಲಿವೆ:

ಎನೋಕಿ ಮಶ್ರೂಮ್ (Enoki Mushroom)

Latest Videos

ಎನೋಕಿ ಮಶ್ರೂಮ್ ರೆಸಿಪಿಯು 2021ರಲ್ಲಿ ಭಾರತದಲ್ಲಿ ಗೂಗಲ್‌ (Google)ನಲ್ಲಿ ಹೆಚ್ಚು ಹುಡುಕಲಾದ ಪಾಕವಿಧಾನಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎನೋಕಿ ಮಶ್ರೂಮ್, ಅಣಬೆಗೆ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಿದ್ಧಪಡಿಸುವ ಒಂದು ಆಹಾರವಾಗಿದೆ. ಗೂಗಲ್ ನೀಡಿದ ಅಂಕಿಅಂಶಗಳ ಪ್ರಕಾರ, ಮಣಿಪುರದಲ್ಲಿ ಜನರು ಈ ಖಾದ್ಯದ ಪಾಕವಿಧಾನವನ್ನು ಹೆಚ್ಚು ಹುಡುಕಿದ್ದಾರೆ. ಎನೋಕಿ ಮಶ್ರೂಮ್ (Mushroomರೆಸಿಪಿಯನ್ನು ಹುಡುಕಿದ ಎರಡನೇ ರಾಜ್ಯ ಮಿಜೋರಾಂ ಆಗಿದೆ. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಬಿಹಾರ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆದುಕೊಂಡಿವೆ.

Food Trend 2021: ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, 2021ರ ವಿಚಿತ್ರ ಆಹಾರಗಳಿವು

ಮೋದಕ (Modak)

ಮೋದಕ ರೆಸಿಪಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲಾದ ಪಾಕವಿಧಾನಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೋದಕ್ ಭಾರತದ ಜನಪ್ರಿಯ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಗಣೇಶ ಚತುರ್ಥಿ ಆಚರಣೆಯ ಸಮಯದಲ್ಲಿ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಪ್ರಸಾದವಾಗಿ ವಿತರಿಸಲಾಗುತ್ತದೆ. ಇದು ಅಕ್ಕಿ ಅಥವಾ ಗೋಧಿ, ಮೈದಾದ ಹೊರಮೈ, ಒಳಗಡೆ ಬೆಲ್ಲ, ಕಾಯಿತುರಿಯಿಂದ ತಯಾರಿಸಿದ ಹೂರಣವನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಮೋದಕ (Modak)ದ ಪಾಕವಿಧಾನವನ್ನು ಹುಡುಕಿದ ಭಾರತದ ಅಗ್ರ ಐದು ಸ್ಥಳಗಳೆಂದರೆ ಕ್ರಮವಾಗಿ ಗೋವಾ, ಮಹಾರಾಷ್ಟ್ರ, ದಾದ್ರಾ ಮತ್ತು ನಗರ ಹವೇಲಿ, ಪಶ್ಚಿಮ ಬಂಗಾಳ, ಮೇಘಾಲಯವಾಗಿದೆ.

ಮೇಥಿ ಮಟರ್ ಮಲೈ (Methi Matar Malai)

ಮೇಥಿ ಮಟರ್ ಮಲೈ ರೆಸಿಪಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಪಾಕವಿಧಾನಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮೇಥಿ ಮಟರ್ ಮಲೈ ಮೆಂತ್ಯದ ಎಲೆಗಳು, ಬಟಾಣಿ ಮತ್ತು ಕೆನೆಯಿಂದ ಮಾಡಿದ ರೆಸಿಪಿಯಾಗಿದೆ. ಮೇಥಿ ಮತರ್ ಮಲೈಯನ್ನು ಮಾಡುವುದು ಹೇಗೆಂದು ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಹುಡುಕಲಾಗಿದೆ ನಂತರ ಛತ್ತೀಸ್‌ಗಢದಲ್ಲಿ. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನ ಜನರು ಕೂಡ ಗೂಗಲ್‌ನಲ್ಲಿ ಈ ರೆಸಿಪಿಯನ್ನು ಹುಡುಕಿದ್ದಾರೆ.

Health Tips: ಹಾಲಿನ ಜತೆ ಈ ಆಹಾರಗಳನ್ನು ಸೇವಿಸಿದರೆ ಜೀವಕ್ಕೇ ಅಪಾಯ..!

ಪಾಲಕ್ (Palak)

ಪಾಲಕ್ ಅನ್ನು ಇಂಗ್ಲಿಷ್‌ನಲ್ಲಿ ಸ್ಪಿನಾಚ್ ಎಂದು ಕರೆಯಲಾಗುತ್ತದೆ, ಈ ಖಾದ್ಯವನ್ನು ಅವರೆಕಾಳು, ಚೀಸ್ ಮೊದಲಾದವುಗಳೊಂದಿಗೆ ಸೇರಿಸಿ ಸಿದ್ಧಪಡಿಸಲಾಗುತ್ತದೆ. ಪಾಲಕ್ ಪಾಕವಿಧಾನವು ಜನರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಫುಡ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಭಾರತದಲ್ಲಿ ದಾಮನ್ ಮತ್ತು ದಿಯುವಿನಲ್ಲಿರುವ ಜನರು ಪಾಲಕ್ ಬಗ್ಗೆ ಹೆಚ್ಚು ಗೂಗಲ್ ಸರ್ಚ್ ಮಾಡಿದ್ದಾರೆ. ಗೂಗಲ್ ನೀಡಿದ ಅಂಕಿಅಂಶಗಳ ಪ್ರಕಾರ ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರು ಸಹ ಈ ಖಾದ್ಯದ ರೆಸಿಪಿಯನ್ನು ಹುಡುಕಿದ್ದಾರೆ.

ಚಿಕನ್ ಸೂಪ್ (Chicken Soup)

ಚಿಕನ್ ಸೂಪ್ ಗೂಗಲ್ 2021 ರ ಹಲವಾರು ಪಾಕವಿಧಾನಗಳಲ್ಲಿ ಟ್ರೆಂಡಿಂಗ್ (Trending) ಆದ ಆಹಾರಗಳ ಪೈಕಿ ಸ್ಥಾನದಲ್ಲಿದೆ. ಚಿಕನ್ ಸೂಪ್ ಎಂಬುದು ಚಿಕನ್, ನೀರು ಮತ್ತು ರುಚಿಗೆ ತಕ್ಕಂತೆ ವಿವಿಧ ಮಸಾಲೆ ಪದಾರ್ಥಗಳಿಂದ ತಯಾರಿಸಿದ ಸೂಪ್ ಆಗಿದೆ. ಗೋವಾ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಗೂಗಲ್‌ನಲ್ಲಿ ಚಿಕನ್ ಸೂಪ್ ರೆಸಿಪಿಯನ್ನು ಹುಡುಕಿದ ಪ್ರಮುಖ ರಾಜ್ಯಗಳು.

click me!