HotDog History: ಆಹಾರಕ್ಕೆ ಯಾಕೆ ಈ ವಿಚಿತ್ರ ಹೆಸರು..? ಇದಕ್ಕೂ ನಾಯಿಗೂ ಏನು ಸಂಬಂಧ..?

By Suvarna NewsFirst Published Dec 28, 2021, 10:28 AM IST
Highlights

ಭಾರತ ಸೇರಿದಂತೆ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಹಾಟ್‌ ಡಾಗ್‌ (Hotdog) ಖಾದ್ಯ ಮೂಲತಃ ವಿವಿಧ ಸ್ಟಫ್ಪಿಂಗ್‌ ಇರುವ ಉದ್ದನೆಯ ಬನ್‌ (Bun) ಆಗಿದೆ. ಆದರೆ ಇದಕ್ಯಾಕೆ ಈ ವಿಚಿತ್ರ ಹೆಸರು ಬಂತು ಅನ್ನೋದು ಮಾತ್ರ ಹಲವರಿಗೆ ಗೊತ್ತಿಲ್ಲದ ವಿಷಯ. ನಿಜಕ್ಕೂ ಹಾಟ್ ಡಾಗ್ ಎಂದರೇನು.?

ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್‍ನಂತೆಯೇ ಫುಡ್‌ ಪ್ರಿಯರ ಫೇವರಿಟ್‌, ಹಾಟ್ ಡಾಗ್. ಭಾರತ ಸೇರಿದಂತೆ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಹಾಟ್‌ ಡಾಗ್‌ ಖಾದ್ಯ ಮೂಲತಃ ವಿವಿಧ ಸ್ಟಫ್ಪಿಂಗ್‌ ಇರುವ ಉದ್ದನೆಯ ಬನ್‌ ಆಗಿದೆ. ಅಮೆರಿಕನ್ನರು ಅತಿ ಹೆಚ್ಚು ಇಷ್ಟಪಡುವ ಆಹಾರಗಳಲ್ಲಿ ಹಾಟ್ ಡಾಗ್ ಸಹ ಒಂದು. ಇದು ಅಮೇರಿಕನ್ ಪಾಕಪದ್ಧತಿಯ ಅತ್ಯಂತ ಜನಪ್ರಿಯ ತಿಂಡಿಯಾಗಿದೆ. ಜಾಲರಿ ಅಥವಾ ಆವಿಯಲ್ಲಿ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಬನ್ ಮಧ್ಯದಲ್ಲಿ ಸಾಸೇಜ್, ಚೀಸ್‌ನ್ನು ಸೇರಿಸಲಾಗುತ್ತದೆ. ಮಾತ್ರವಲ್ಲದೆ ಈ ಹಾಟ್ ಡಾಗ್ ಸಾಕಷ್ಟು ಇತರ ಫಿಲ್ಲಿಂಗ್ಸ್, ಕೆಚಪ್‌ನ್ನು ಸಹ ಒಳಗೊಂಡಿರುತ್ತದೆ. ಈ ಬಗೆಯ ಸಾಸೇಜ್‌ಗಳು ಮತ್ತು ಅವುಗಳ ಸ್ಯಾಂಡ್‌ವಿಚ್‌ಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಯಿತು. ನಂತರ ಇತರ ದೇಶಗಳಲ್ಲೂ ಫುಡ್ ಪರಿಚಯಗೊಂಡಿತು. 

ತಿನ್ನಲು ರುಚಿಕರವಾಗಿದ್ದರೂ ಹಾಟ್ ಡಾಗ್‌ಗೆ ಯಾಕೆ ಈ ವಿಚಿತ್ರ ಹೆಸರು ಬಂತು ಎಂಬುದು ಹಲವರ ಕುತೂಹಲಕ್ಕೆ ಕಾರಣವಾಗಿರುವ ವಿಷಯ. ನಾಯಿಗೂ ಈ ಆಹಾರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಹಾಟ್ ಡಾಗ್‌ಗೂ ನಾಯಿಗೂ ಇರುವ ಲಿಂಕ್ ಏನು..? ಈ ತಿಂಡಿಗೆ ಯಾಕೆ ಈ ಹೆಸರಿಡಲಾಗಿದೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

Round Up 2021: ಜನ ಹೆಚ್ಚು ಹುಡುಕಿದ ಆಹಾರದಲ್ಲಿ ಮೋದಕವೂ ಇದೆ

'ಹಾಟ್ ಡಾಗ್' ಹೆಸರು ಬರಲು ಹಿಂದಿರುವ ಕಾರಣ..?

ಆಹಾರಕ್ಕೆ ಈ ಹೆಸರು ಬರಲು ಹಲವಾರು ಕಾರಣಗಳಿವೆ. ಜರ್ಮನಿಯಲ್ಲಿ 700 ಬಿಸಿಇಯಲ್ಲಿ ಮೊದಲ ಬಾರಿಗೆ ಈ ಆಹಾರ ಪರಿಚಯಗೊಂಡಿತು ಎಂದು ತಿಳಿದುಬಂದಿದೆ. ಮೊದಲು ಹಾಟ್ ಡಾಗ್‌ (HotDog)ಗಳನ್ನು 'ಡ್ಯಾಶ್‌ಶಂಡ್ ಸಾಸೇಜ್‌ಗಳು' ಎಂದು ಕರೆಯಲಾಗುತ್ತಿತ್ತು. 1860ರ ದಶಕದಲ್ಲಿ ನ್ಯೂಯಾರ್ಕ್ ನಲ್ಲಿ ಜರ್ಮನಿಯಿಂದ ಬಂದ ವಲಸಿಗರು ಈ ಆಹಾರ (Food)ವನ್ನು ಮಾರಾಟ ಮಾಡುತ್ತಿದ್ದರು. ಈ ಸಾಸೇಜ್‌ ತೆಳ್ಳಗಾಗಿ ಉದ್ದವಾಗಿತ್ತು, ಹೆಚ್ಚು ಫಿಲ್ಲಿಂಗ್ಸ್‌ನ್ನು ತುಂಬಿ ತಯಾರಿಸುತ್ತಿದ್ದ ಕಾರಣ ಇದನ್ನು ತಯಾರಿಸಲು ಹೆಚ್ಚು ವೆಚ್ಚ ತಗಲುತ್ತಿತ್ತು. 

1916ರಲ್ಲಿ, ನಾಥನ್ ಹ್ಯಾಂಡ್‌ರ್ಕರ್ ಎಂಬ ಪೋಲಿಷ್ ವಲಸೆಗಾರ ಮತ್ತು ಫೆಲ್ಟ್‌ಮ್ಯಾನ್‌ನ ಉದ್ಯೋಗಿ ತನ್ನದೇ ಆದ ಹಾಟ್ ಡಾಗ್ ಸ್ಟ್ಯಾಂಡ್ ಅನ್ನು ತೆರೆದರು. ಅದನ್ನು ತನ್ನ ಪ್ರತಿಸ್ಪರ್ಧಿಯ ಅರ್ಧದಷ್ಟು ಬೆಲೆಗೆ ಮಾರಾಟ ಮಾಡಿದರು. ಆದರೆ ಕೊನೆಗೆ ಫೆಲ್ಟ್‌ಮ್ಯಾನ್ ಅಂತಿಮವಾಗಿ ಅಂಗಡಿಯನ್ನು ಮುಚ್ಚಬೇಕಾಯಿತು. 1920ರ ಹೊತ್ತಿಗೆ, ನಾಥನ್‌ನ ಹಾಟ್ ಡಾಗ್‌ಗಳು ರಾಷ್ಟ್ರವ್ಯಾಪಿಯಾಗಿ ಪರಿಚಿತವಾಗಿದ್ದವು.

Healthy Eating Tips: ವೀಕೆಂಡ್‌ಗಳಲ್ಲಿ ಬೇಕಾಬಿಟ್ಟಿ ತಿನ್ನೋದಕ್ಕೆ ಬ್ರೇಕ್ ಹಾಕೋದು ಹೇಗೆ..?

ಸಾಸೇಜ್‌ಗಳು ಮತ್ತು ಬನ್‌ನ ಕಥೆ

ಆರಂಭದಲ್ಲಿ ಇದನ್ನು ತಯಾರಿಸಿ ವಿತರಿಸುವಾಗ ಬನ್ (Bun) ಅನ್ನು ಬಳಸಲಾಗುತ್ತಿರಲಿಲ್ಲ. ಬದಲಾಗಿ ಫಿಲ್ಲಿಂಗ್ಸ್ ಅನ್ನು ಬಿಳಿ ಕೈಗವಸುಗಳಲ್ಲಿಟ್ಟು ನೀಡಲಾಗುತ್ತಿತ್ತು. ಫಿಲ್ಲಿಂಗ್ಸ್‌ನಿಂದ ತುಂಬಿರುವ ಈ ಆಹಾರ ತಿನ್ನುವಾಗ ತೊಂದರೆಯಾಗಬಾರದು ಎಂಬುದೇ ಇದರ ಹಿಂದಿದ್ದ ಉದ್ದೇಶ. ಹೀಗಾಗಿ ಇದನ್ನು ರೆಡ್ ಹಾಟ್ ಎಂದು ಕರೆಯಲಾಯಿತು. ನಂತರ ಇದನ್ನು ತಯಾರಿಸಿದ ವ್ಯಾಪಾರಿ ಸಾಸೇಜ್ ಅನ್ನು ನಡುವೆ ಇಡಲು ಬನ್‌ಗಳನ್ನು ಬಳಸಿದರು. ಸಾಸೇಜ್ ಮೂಲತಃ ರುಬ್ಬಿದ ಮಾಂಸ ಅಥವಾ ಮಾಂಸದ ತುಂಡುಗಳನ್ನು ಸೇರಿಸಿ ತಯಾರಿಸುವ ಆಹಾರವಾಗಿದ್ದು, ಹಲವು ಮಸಾಲೆಗಳು ಮತ್ತು ಉಪ್ಪನ್ನು ಒಳಗೊಂಡಿರುತ್ತದೆ. ಸಾಸೇಜ್‌ಗಳನ್ನು ಹೆಚ್ಚಾಗಿ ನಾನ್ ವೆಜ್ ಆಗಿರುತ್ತದೆ. ಆದರೆ ಕೆಲವು ದೇಶಗಳು ವಿವಿದ ರೀತಿಯ ತರಕಾರಿಗಳನ್ನು ಬಳಸಿಕೊಂಡು ಸಸ್ಯಾಹಾರಿ ಸಾಸೇಜ್‌ಗಳನ್ನು ಸಹ ತಯಾರಿಸುತ್ತವೆ.

ಸಾಸೇಜ್‌ಗಳು ಮತ್ತು ಬನ್‌ಗಳ ಬಗ್ಗೆ ಇನ್ನೂ ಒಂದು ಕಥೆಯಿದೆ, ಇದು ಈ ರೀತಿ ಏಕೆ ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ವಿವರಿಸುತ್ತದೆ. ಚಾರ್ಲ್ಸ್ ಫೆಲ್ಟ್‌ಮ್ಯಾನ್ ಎಂಬ ವ್ಯಾಪಾರಿ ತಳ್ಳುಗಾಡಿಯೊಂದರಲ್ಲಿ ಸ್ಯಾಂಡ್ ವಿಚ್ (Sandwich) ಅನ್ನು ಮಾರಾಟ ಮಾಡುತ್ತಿದ್ದನು. ಆದರೆ ಸ್ಯಾಂಡ್ ವಿಚ್‌ನಿಂದ ಗಾಡಿ ಭರ್ತಿಯಾಗುತ್ತಿರಲ್ಲಿಲ್ಲ. ಹೀಗಾಗಿ ರೆಡ್ ಹಾಟ್ ಅನ್ನು ಸಹ ಒಟ್ಟಿಗೆ ಮಾರಲು ಆರಂಭಿಸಿದರು. ಇದಕ್ಕೇ ಹಾಟ್ ಡಾಗ್ ಎಂದು ಹೆಸರಿಡಲಾಯಿತು.

ಅಂದಿನಿಂದ ಅಮೇರಿಕಾದಲ್ಲಿ ಹಾಟ್ ಡಾಗ್ ಹೆಚ್ಚು ಪರಿಚಿತವಾಯಿತು. ಆ ನಂತರ ಕಾಲಕ್ರಮೇಣ ಇತರ ದೇಶಗಳಲ್ಲೂ ಹಾಟ್ ಡಾಗ್ ಅನ್ನು ಜನರು ಇಷ್ಟಪಡಲು ತೊಡಗಿದರು. ಸದ್ಯ ಹಲವು ಜನರ ಪಾಲಿಗೆ ಹಾಟ್ ಡಾಗ್ ಫೇವರಿಟ್ ಆಗಿದೆ. 

click me!