Kitchen Tips: ಇಷ್ಟೆಲ್ಲಾ ತಿಳ್ಕೊಂಡಿದ್ರೆ ಅಡುಗೆ ಮಾಡೋದು ದೊಡ್ಡ ಟಾಸ್ಕೇ ಅಲ್ಲ

By Suvarna News  |  First Published Oct 6, 2022, 11:12 AM IST

ಕೆಲವೊಬ್ಬರ ಪಾಲಿಗೆ ಅಡುಗೆ ಮಾಡೋದು ಅಂದ್ರೆ ದೊಡ್ಡ ಸಾಹಸ. ಅಡುಗೆಗೆ ಬೇಕಾಗಿರುವ ವಸ್ತುಗಳನ್ನು ಪಟ್ಟಿ ಮಾಡಿ, ಕಿಚನ್‌ನ ಯಾವುದೋ ಮೂಲೆಯಲ್ಲಿರುವ ಆ ವಸ್ತುಗಳನ್ನು ಹುಡುಕಿ ಅಡುಗೆ ಮಾಡ್ಕೊಳ್‌ಬೇಕು ಅಂದ್ರೆ ರಗಳೆ. ಆದ್ರೆ ನೀವು ಕುಕ್ಕಿಂಗ್‌ ಬಗ್ಗೆ ಈ ಕೆಲವೊಂದು ವಿಚಾರಗಳನ್ನು ತಿಳ್ಕೊಂಡಿದ್ರೆ ಕುಕ್ಕಿಂಗ್ ದೊಡ್ಡ ಟಾಸ್ಕೇ ಅಲ್ಲ.  


ಅಡುಗೆ ಮಾಡುವುದು ಒಂದು ಕಲೆ. ಈ ಕಾರಣಕ್ಕಾಗಿಯೇ ಅಡುಗೆಯನ್ನು ಪಾಕ ಕಲೆ ಎಂದು ಕರೆಯುತ್ತಾರೆ. ಸಣ್ಣಪುಟ್ಟ ವಸ್ತುಗಳೆಲ್ಲಾ ಸೇರಿ ಆಹಾರದ ಸಂಪೂರ್ಣ ರುಚಿಯನ್ನು ಬದಲಾಯಿಸುತ್ತವೆ. ಆದರೆ ಕೆಲವೊಬ್ಬರ ಪಾಲಿಗೆ ಅಡುಗೆ ಮಾಡುವುದು ದೊಡ್ಡ ಕಿರಿಕಿರಿಯ ಕೆಲಸ. ಎಲ್ಲಾ ವಸ್ತುಗಳನ್ನು ಜೋಡಿಸಿಕೊಂಡು ಅಡುಗೆ ಮಾಡ್ಬೇಕಲ್ಲಪ್ಪಾ ಅಂತ ಮುಖ ಸಿಂಡರಿಸಿಕೊಳ್ತಾರೆ. ಆದ್ರೆ ಹೊಸದಾಗಿ ಅಡುಗೆ ಮಾಡಲು ತೊಡಗಿರುವವರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಸಾಲೆಗಳನ್ನು ನಿರ್ವಹಿಸುವುದರಿಂದ ಹಿಡಿದು ನಿರ್ದಿಷ್ಟ ಪದಾರ್ಥಗಳ ವಿನ್ಯಾಸ ಮತ್ತು ರುಚಿಯನ್ನು ಕಂಡುಹಿಡಿಯುವುದು ಮೊದಲಾದ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂದು ನಾವು ನಿಮಗೆ ಅಡುಗೆಗೆ ಸಂಬಂಧಿಸಿದ ಕೆಲವು ಸೀಕ್ರೆಟ್ ಕಿಚನ್ ಟಿಪ್ಸ್ ಹೇಳುತ್ತಿದ್ದೇವೆ. ಈ ಸಲಹೆಗಳ ಸಹಾಯದಿಂದ, ನೀವು ಸುಲಭವಾಗಿ ರುಚಿಕರವಾದ ಆಹಾರವನ್ನು ತಯಾರಿಸಬಹುದು.

1. ತರಕಾರಿಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳಿ: ತರಕಾರಿ (Vegetables)ಗಳನ್ನು ಮೊದಲೇ ಸಂರಕ್ಷಿಸಿ ಇಟ್ಟುಕೊಳ್ಳುವುದರಿಂದ ನೀವು ಸುಲಭವಾಗಿ ಅಡುಗೆ ಮಾಡಬಹುದು. ತರಕಾರಿಗಳನ್ನು ತಂದ ತಕ್ಷಣ ನೀಟಾಗಿ ವಿಂಗಡಿಸಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಎಲ್ಲಾ ತರಕಾರಿಗಳು ತಾಜಾವಾಗಿರುತ್ತವೆ. ಮತ್ತು ಯಾವುದೇ ಅಡುಗೆ (Cooking)ಯನ್ನು ಮಾಡಲು ಹೊರಟಾಗಲೂ ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. 

Tap to resize

Latest Videos

Kitchen Hacks: ಫಾಸ್ಟ್ ಆಗಿ ಅಡುಗೆ ಕೆಲಸ ಮುಗಿಸ್ಬೇಕೆನ್ನುವವರು ಇದನ್ನೋದಿ

2. ಉಪ್ಪು ಮತ್ತು ಖಾರ ಎಷ್ಟು ಹಾಕಬೇಕೆಂದು ತಿಳಿದುಕೊಳ್ಳಿ: ಯಾವುದೇ ಆಹಾರ (Food) ತಯಾರಿಸುವಾಗಲೂ ಉಪ್ಪು ಮತ್ತು ಖಾರ ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.  ಸರಿಯಾದ ಸಮತೋಲನವು ಯಾವುದೇ ಆಹಾರ ರುಚಿ (Taste)ಯನ್ನು ಉತ್ತಮಗೊಳಿಸುತ್ತದೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ನಿಂಬೆ, ಗರಂ ಮಸಾಲಾ, ಖಾರದ ಪುಡಿಯನ್ನು ಎಲ್ಲಾ ಭಕ್ಷ್ಯಗಳಿಗೆ ಬಳಸಲು ಹೋಗಬೇಡಿ. ಬದಲಿಗೆ ಅಗತ್ಯವಿದ್ದ ಆಹಾರಗಳಿಗೆ ಮಾತ್ರ ಬಳಸುವ ಅಭ್ಯಾಸ (Habit) ರೂಢಿಸಿಕೊಳ್ಳಿ.

3. ಅಡುಗೆ ಸಲಕರಣೆಗಳನ್ನು ಖರೀದಿಸಿ: ಅಡುಗೆ ಕೆಲಸ ತ್ವರಿತವಾಗಿ ಮುಗಿಸಲು ಸಮರ್ಪಕವಾದ ಅಡುಗೆ ಸಲಕರಣೆಯಿರುವುದು ಸಹ ಮುಖ್ಯವಾಗಿದೆ. ಇಂಥವುಗಳು ಕಿಚನ್‌ನಲ್ಲಿ ಸಮಯವನ್ನು ಉಳಿಸಲು ನೆರವಾಗುತ್ತವೆ. ಕುಕ್ಕಿಂಗ್‌ ಫಾಸ್ಟ್ ಆಗಿ ಮುಗಿಸಲು ರೈಸ್ ಕುಕ್ಕರ್ ಮತ್ತು ಏರ್ ಫ್ರೈಯರ್ ಅದ್ಭುತ ಸಾಧನವಾಗಿದೆ. ಇವನ್ನು ಬಳಸಿಕೊಂಡು ನೀವು ಆಹಾರ ಪದಾರ್ಥಗಳನ್ನು ಬೇಯಿಸುವ ಮೂಲಕ ಹೆಚ್ಚು ಸಮಯವನ್ನು ಉಳಿಸಬಹುದಾಗಿದೆ. 

ಮಾಡೋ ಅಡುಗೆ ಸೂಪರ್‌ ಆಗಿರ್ಬೇಕಂದ್ರೆ ಕಿಚನ್‌ಗೆ ಸ್ವಲ್ಪ ಬದಲಾವಣೆ ತನ್ನಿ!

4. ತರಕಾರಿ ಕತ್ತರಿಸುವ ಚಾಕು ತೀಕ್ಷ್ಣಗೊಳಿಸಿ: ಅಡುಗೆ ಕೋಣೆಯಲ್ಲಿ ತರಕಾರಿ ಕತ್ತರಿಸಲು ಚಾಕು ಒಂದಿದ್ದರಾಯ್ತು ಎಂದು ಅಂದುಕೊಳ್ಳಬಾರದು. ಕಿಚನ್‌ನಲ್ಲಿ ಬಳಸುವ ಚಾಕು (Knife) ಹೇಗಿದೆ ಎಂಬುದು ಸಹ ಮುಖ್ಯವಾಗುತ್ತದೆ. ಚಾಕು ಹರಿತವಾಗಿದ್ದರೆ ತರಕಾರಿಗಳನ್ನು ಬೇಗ ಕತ್ತರಿಸಬಹುದು. ಇದು ತರಕಾರಿ ಕತ್ತರಿಸಲು ಹೆಚ್ಚು ಸಮಯ (Time) ತೆಗೆದುಕೊಳ್ಳುವುದನ್ನು ತಪ್ಪಿಸುತ್ತದೆ. ಅಡುಗೆ ಮಾಡುವಾಗ ತರಕಾರಿ ಕತ್ತರಿಸುವುದೇ ದೊಡ್ಡ ಟಾಸ್ಕ್‌ ಎಂದು ಅಂದುಕೊಳ್ಳುವವರು ಹರಿತವಾದ ಚಾಕು ಬಳಸುವ ಮೂಲಕ ಆ ರಗಳೆಯನ್ನು ತಪ್ಪಿಸಬಹುದು.

5. ಬೇಳೆಯನ್ನು ನೆನೆಸಿಡಿ: ನೀವು ಮಾಡುವ ಅಡುಗೆಗೆ ಬೇಳೆ (Dal) ಬಳಸುತ್ತಿರಾದರೆ ಹಿಂದಿನ ದಿನವೇ ಅದನ್ನು ನೀರಿನಲ್ಲಿ ನೆನೆಸಿಡಲು ಮರೆಯದಿರಿ. ಯಾಕೆಂದರೆ ಇದರಿಂದ ಅಡುಗೆ ಮಾಡುವುದು ತಡವಾಗುವುದು ತಪ್ಪುತ್ತದೆ. ಬೇಳೆ ನೆನೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಡುಗೆ ಮಾಡಲು ಹೊರಟಾಗ ಇದನ್ನು ನೆನೆಸಲು ಹೊರಟರೆ ತಡವಾಗುತ್ತದೆ. ಹೀಗಾಗಿ ಹಿಂದಿನ ದಿನವೇ ಅಥವಾ ಸಾಕಷ್ಟು ಗಂಟೆಗಳ ಮೊದಲೇ ನೆನೆಸಿಡಲು ಮರೆಯಬೇಡಿ.

click me!