
ಕೆಲವೊಮ್ಮೆ ನಮಗೆ ತಿಳಿಯದೇ ನಾವು ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸ್ತೇವೆ. ನಾವು ತಿನ್ನುವ ಅಂತಹ ಆಹಾರದಲ್ಲಿ ಔಷಧೀಯ ಗುಣವಿದೆ ಎನ್ನುವುದೇ ನಮಗೆ ತಿಳಿದಿರೋದಿಲ್ಲ. ಅಂತಹ ಆಹಾರಗಳಲ್ಲಿ ಪನ್ನೀರ್ ಕೂಡ ಒಂದು ಅಂದರೆ ನೀವು ನಂಬಲೇಬೇಕು.
ಪನ್ನೀರ್ (Panneer) ಯಾರಿಗೆ ತಿಳಿದಿಲ್ಲ ಹೇಳಿ. ಪನ್ನೀರ್ ನಿಂದ ಮಾಡುವ ನಾನಾ ಬಗೆಯ ಗ್ರೇವಿಗಳನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಕೇವಲ ಹೋಟೆಲ್ (Hotel) ಗಳಲ್ಲಿ ಮಾತ್ರವಲ್ಲ, ಮನೆಯಲ್ಲಿ ಕೂಡ ಗೃಹಿಣಿಯರು ಪನ್ನೀರ್ ಬಳಸಿ ನಾನಾ ಬಗೆಯ ತಿಂಡಿಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಪನ್ನೀರ್ ಸೇವಿಸುವುದರಿಂದ ತೂಕ ಹೆಚ್ಚುತ್ತದೆ ಎಂದು ಅದನ್ನು ಅವೈಡ್ ಮಾಡುತ್ತಾರೆ. ಆದರೆ ಪನ್ನೀರ್ ತೂಕವನ್ನು ಇಳಿಸುತ್ತದೆ ಎಂಬುದು ಅನೇಕ ಮಂದಿಗೆ ತಿಳಿದಿಲ್ಲ.
ಪದೇ ಪದೇ ಮೂಡ್ ಸ್ವಿಂಗ್ ಸಮಸ್ಯೆ ಆಗ್ತಿದ್ಯಾ? ಆಹಾರದಲ್ಲಿ ಈ ಬದಲಾವಣೆ ಇರಲಿ
ಜಂಕ್ ಫುಡ್ (Junk Food) ಗಳ ಹಾವಳಿಯಿಂದಾಗಿ ಇಂದು ಬಹುತೇಕ ಮಂದಿಯಲ್ಲಿ ಬೊಜ್ಜಿನ ಸಮಸ್ಯೆಯಿದೆ. ಜಿಮ್, ವ್ಯಾಯಾಮ, ವಾಕಿಂಗ್ ಮುಂತಾದವುಗಳನ್ನು ಮಾಡಿದರೂ ತೂಕ ಇಳಿಯಾಗುವುದಿಲ್ಲ. ಇನ್ನು ಕೆಲವರಿಗೆ ತೂಕವನ್ನು ಹೇಗೆ ಇಳಿಸಿಬೇಕೆನ್ನುವ ವಿಧಾನ ತಿಳಿದಿರುವುದಿಲ್ಲ. ಸ್ವಲ್ಪ ಎಣ್ಣೆಯ ಪದಾರ್ಥಗಳನ್ನು ತಿಂದ ತಕ್ಷಣ ತೂಕದಲ್ಲಿ ವ್ಯತ್ಯಾಸವಾಗೋದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ಹಲವು ಮಂದಿ ತೂಕ ಇಳಿಸಲು ಹಣ್ಣು, ತರಕಾರಿಗಳ ಸೇವನೆ ಮಾಡುತ್ತಾರೆ. ಹಣ್ಣು, ತರಕಾರಿಯಂತೆಯೇ ಪನ್ನೀರ್ ಸೇವನೆಯಿಂದಲೂ ತೂಕವನ್ನು ಸುಲಭವಾಗಿ ಕಡಿಮೆಮಾಡಿಕೊಳ್ಳಬಹುದು.
ಪ್ರೋಟೀನ್ ಆಗರ ಈ ಪನ್ನೀರ್ : 100 ಗ್ರಾಂ ಪನ್ನೀರ್ ನಲ್ಲಿ ಸುಮಾರು 11 ಗ್ರಾಂ ಪ್ರೋಟೀನ್ ಇರುತ್ತದೆ. ತೂಕವನ್ನು ಇಳಿಸುವವರು ತಮ್ಮ ಡಯಟ್ ನಲ್ಲಿ ಪ್ರೋಟೀನ್ ಅಂಶಗಳನ್ನು ಹೊಂದಿದ ಆಹಾರವನ್ನು ಸೇರಿಸಿಕೊಳ್ಳುತ್ತಾರೆ. ಪನ್ನೀರ್ ನಲ್ಲೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ಇದು ಕೂಡ ಬಹಳ ಸಮಯದ ತನಕ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಫುಡ್ ಕ್ರೇವಿಂಗ್ ಅನ್ನು ಕಡಿಮೆಗೊಳಿಸುತ್ತದೆ. ಇದರಿಂದ ತೂಕ ಬಹಳ ಬೇಗ ಇಳಿಯುತ್ತದೆ.
ಒಂದೇ ಒಂದು ತಿಂಗಳು ಸಕ್ಕರೆ ಬಿಟ್ಟು ನೋಡಿ, Health Goal ರಿಚ್ ಆಗದಿದ್ದರೆ ಕೇಳಿ!
ಕಡಿಮೆ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ : ಕಡಿಮೆ ಕ್ಯಾಲೊರಿ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುವುದು ಪನ್ನೀರ್ ನ ಮತ್ತೊಂದು ವಿಶೇಷತೆಯಾಗಿದೆ. ಹೆಚ್ಚು ಫ್ಯಾಟ್ ಅಂಶ ಹೊಂದಿರುವ ಹಾಲಿನಿಂದ ಮಾಡಿದ ಪನ್ನೀರ್ ನಲ್ಲಿ ಮಾತ್ರ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ನೀವು ಕಡಿಮೆ ಫ್ಯಾಟ್ ಹೊಂದಿರುವ ಹಾಲಿನಿಂದ ಮಾಡಿದ ಪನ್ನೀರ್ ಅನ್ನೇ ಸೇವಿಸಬೇಕು.
ಆರೋಗ್ಯಕರ ಫ್ಯಾಟ್ : ಪನ್ನೀರ್ ನಲ್ಲಿ ತೂಕವನ್ನು ಹೆಚ್ಚಿಸುವ ಮತ್ತು ಆರೋಗ್ಯಕ್ಕೆ ಹಾನಿಯುಂಟುಮಾಡುವ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಪನ್ನೀರ್ ನಲ್ಲಿ ಹೆಲ್ದಿ ಫ್ಯಾಟ್ ಇರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ತೂಕ ಇಳಿಸುವಲ್ಲಿ ಕೂಡ ಸಹಕಾರಿಯಾಗಿದೆ.
ಪೋಷಕಾಂಶಗಳಿಂದ ಸಮೃದ್ಧವಾದ ಪನ್ನೀರ್ : ಪನ್ನೀರ್ ನಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಮತ್ತು ಮಿನರಲ್ಸ್ ಇರುತ್ತವೆ. ಹಸಿ ಪನ್ನೀರ್ ತಿನ್ನುವುದರಿಂದ ಕ್ಯಾಲ್ಶಿಯಮ್, ಸೆಲೆನಿಯಮ್ ಮತ್ತು ಪೊಟ್ಯಾಶಿಯಮ್ ಮುಂತಾದವುಗಳು ಶರೀರಕ್ಕೆ ಸಿಗುತ್ತವೆ. ಇದು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕೂಡ ಕಡಿಮೆ ಮಾಡುತ್ತದೆ.
ತೂಕ ಕಡಿಮೆಯಾಗಲು ಪನ್ನೀರ್ ಅನ್ನು ಹೀಗೆ ಸೇವಿಸಿ : ಒಂದು ಆಹಾರವನ್ನು ನಾವು ಔಷಧಿಯ ರೂಪದಲ್ಲಿ ಸೇವಿಸುತ್ತೇವೆ ಎಂದಾದರೆ ಅದನ್ನು ಸರಿಯಾದ ರೀತಿಯಲ್ಲಿ ಹಾಗೂ ಪ್ರಮಾಣದಲ್ಲಿ ಸೇವಿಸಬೇಕು. ಹಾಗೆ ಸೇವಿಸಿದಾಗ ಮಾತ್ರ ಅದು ನಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಸಾಧ್ಯ. ಪನ್ನೀರ್ ಅನ್ನು ಕೂಡ ನೀವು ಹಸಿಯಾಗಿ ಸೇವಿಸಿದರೆ ತೂಕ ಇಳಿಕೆಯಾಗುತ್ತದೆ. ಇದರ ಹೊರತಾಗಿ ಸಲಾಡ್ ಜೊತೆ ಸೇರಿಸಿ ಅಥವಾ ಬೆಳಗ್ಗಿನ ತಿಂಡಿಯನ್ನು ಪನ್ನೀರ್ ಅನ್ನು ಸೇವಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.