ಪಾಲಾಕ್ ಪನ್ನೀರ್ ಒಳ್ಳೆಯದು ಎನ್ನುವ ಕಾರಣಕ್ಕೆ ನಾವು ಕಣ್ಮುಚ್ಚಿ ಇದನ್ನು ಸೇವನೆ ಮಾಡ್ತೆವೆ. ಆದ್ರೆ ಪಾಲಾಕ್ ಪನ್ನೀರ್ ಸೇವನೆ ಮಾಡೋದು ಒಳ್ಳೆಯದಲ್ಲ. ಈ ಕಾಂಬಿನೇಷನ್ ನಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ.
ಪಾಲಾಕ್ ಪನೀರ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಚಪಾತಿ ಜೊತೆ ಪಾಲಾಕ್ ಪನ್ನೀರ್ ಇದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತೆ. ಸಾಮಾನ್ಯವಾಗಿ ಪಾಲಾಕ್ ಎಂದಾಗ ಎಲ್ಲರ ಮನದಲ್ಲಿ ಬರೋ ರೆಸಿಪಿ ಪಾಲಾಕ್ ಪನ್ನೀರ್. ಪಾಲಾಕ್ ಹಾಗೂ ಪನ್ನೀರ್ ಎರಡೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದ್ರೆ ಪಾಲಕ್ ಮತ್ತು ಪನೀರ್ ಅನ್ನು ಒಟ್ಟಿಗೆ ತಿನ್ನಬಾರದು. ಪಾಲಾಕ್ ಜೊತೆ ಪನ್ನೀರ್ ಸೇವನೆ ಮಾಡಿದ್ರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುತ್ತದೆ. ಪಾಲಾಕ್ ನಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಆದ್ರೆ ಪಾಲಾಕ್ ಪನ್ನೀರ್ ಮಾಡಿದ್ರೆ ಕಬ್ಬಿಣಾಂಶ ಹೇಗೆ ಕಡಿಮೆಯಾಗುತ್ತೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದು ಹೇಗೆ ಅಂತಾ ನಾವಿಂದು ಹೇಳ್ತೆವೆ.
ಪಾಲಾಕ್ (Palak ) ತಿಂದ್ರೆ ದೇಹದಲ್ಲಿ ಕಬ್ಬಿಣಾಂಶ (Iron) ಹೆಚ್ಚಾಗುತ್ತದೆ. ಆದ್ರೆ ಪಾಲಕ್ ಪನೀರ್ ಹಾನಿಕಾರಕ ಕಾಂಬಿನೇಷನ್ (Combination) ಆಗಿದೆ. ಪಾಲಕ್ ನಲ್ಲಿರುವ ಪೌಷ್ಟಿಕಾಂಶವನ್ನು ಪನ್ನೀರ್ ಕೊಲ್ಲುತ್ತದೆ. ಪಾಲಾಕ್ ಪನೀರ್ ತಿನ್ನುವುದರಿಂದ ಕಬ್ಬಿಣ ಮತ್ತು ಕ್ಯಾಲ್ಸಿಯಂ (Calcium) ಒಟ್ಟಿಗೆ ನಮ್ಮ ದೇಹಕ್ಕೆ ದೊರೆಯುತ್ತದೆ. ಆದ್ರೆ ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳಲು ಸಾಧ್ಯವಾಗೋದಿಲ್ಲ. ಪಾಲಾಕ್ ನಲ್ಲಿರುವ ಕಬ್ಬಿಣ ಹಾಗೆಯೇ ದೇಹದಿಂದ ಹೊರಗೆ ಹೋಗುತ್ತದೆ.
undefined
ಪಾಲಾಕ್ ಪನ್ನೀರ್ ಸೇವನೆ ಮಾಡಿದಾಗ ದೇಹ ಸೇರುವ ಕ್ಯಾಲ್ಸಿಯಂ, ಕಬ್ಬಿಣದ ಕೆಲಸವನ್ನು ನಿಲ್ಲಿಸುತ್ತದೆ. ಆಗ ದೇಹಕ್ಕೆ ಕಬ್ಬಿಣ ಸಿಗುವುದಿಲ್ಲ. ಆಗ ನಮಗೆ ಕಬ್ಬಿಣದ ಕೊರತೆ ಕಾಡಲು ಶುರುವಾಗುತ್ತದೆ. ನೀವು ಪಾಲಾಕ್ ಜೊತೆ ಪನ್ನೀರ್ ಬಳಸಬೇಕು ಎಂದೇನೂ ನಿಯಮವಿಲ್ಲ. ನೀವು ಪಾಲಾಕ್ ಜೊತೆ ಬೇರೆ ಕಾಂಬಿನೇಷನ್ ಬಳಕೆ ಮಾಡಬಹುದು. ಪಾಲಾಕ್ ಜೊತೆ ಆಲೂಗಡ್ಡೆ (Potato) ಅಥವಾ ಪಾಲಾಕ್ ಜೊತೆ ಕಾರ್ನ್ (Corn) ಹಾಕಿ ಅಡುಗೆ ತಯಾರಿಸಬಹುದು. ಪಾಲಾಕ್ ಆಲೂಗಡ್ಡೆ ತಿನ್ನಲು ರುಚಿ (Taste) ಯೂ ಹೌದು, ದೇಹಕ್ಕೆ ಕಬ್ಬಿಣ ಕೂಡ ಇದರಿಂದ ಸಿಗುತ್ತದೆ.
ಪಾಲಾಕ್ ಹಾಗೂ ಪನ್ನೀರ್ ಎರಡೂ ಆರೋಗ್ಯಕರ ಆಹಾರವೇ ಆಗಿದೆ. ಜನರು ಆರೋಗ್ಯಕರ ಆಹಾರ ಸೇವನೆ ಮಾಡ್ತಿದ್ದೀವಲ್ಲ ಎಂದು ಪ್ರಶ್ನೆ ಮಾಡಬಹುದು. ಇವೆರಡನ್ನೂ ಬೇರೆ ಬೇರೆ ತಿಂದ್ರೆ ಪ್ರಯೋಜನ ಹೆಚ್ಚು. ಯಾವಾಗ್ಲೂ ನಾವು ಯಾವ ಆಹಾರ (food) ವನ್ನು ಸೇವನೆ ಮಾಡ್ತಿದ್ದೇವೆ ಎನ್ನುವ ಜೊತೆಗೆ ಯಾವ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಮಾಡ್ತಿದ್ದೇವೆ ಎಂಬುದನ್ನು ತಿಳಿಯಬೇಕು.
Rainbow Diet: ಈ ಸ್ಪೆಷಲ್ ಡಯೆಟ್ ಮಾಡಿದ್ರೆ ಕಾಯಿಲೆಗಳಿಂದ ದೂರವಿರ್ಬೋದು
ಪಾಲಾಕ್ ಪನ್ನೀರ್ ಹಾನಿ: ಪಾಲಾಕ್ ಪನೀರ್ ತಿನ್ನುವುದ್ರಿಂದ ದೇಹ ಕಬ್ಬಿಣವನ್ನು ಹೀರಿಕೊಳ್ಳುವುದಿಲ್ಲ. ಈ ಸಮಸ್ಯೆ ಮಾತ್ರವಲ್ಲ ಇದ್ರ ಜೊತೆ ಮೂತ್ರಪಿಂಡದಲ್ಲಿ ಕಲ್ಲಾಗುವ ಸಾಧ್ಯತೆಯಿರುತ್ತದೆ. ಅಧ್ಯಯನದ ಪ್ರಕಾರ, ಪಾಲಕ್ ನಲ್ಲಿ ಆಕ್ಸಾಲಿಕ್ ಆಮ್ಲವಿದೆ. ಇದು ಪನೀರ್‌ನಲ್ಲಿರುವ ಕ್ಯಾಲ್ಸಿಯಂ ಬಳಕೆಗೆ ಅಡ್ಡಿ ಮಾಡುತ್ತದೆ. ಕ್ಯಾಲ್ಸಿಯಂ ನಮ್ಮ ದೇಹ ಸೇರುವ ಬದಲು ಕ್ಯಾಲ್ಸಿಯಂ ಮೂತ್ರಪಿಂಡ ಸೇರುತ್ತದೆ. ಮೂತ್ರಪಿಂಡದಲ್ಲಿ ಸೇರುವ ಕ್ಯಾಲ್ಸಿಯಂ ಕ್ರಮೇಣ ಕಲ್ಲಾಗಿ ರೂಪಗೊಳ್ಳುತ್ತದೆ.
Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ
ಅತಿಯಾಗಿ ಪಾಲಾಕ್ ಸೇವನೆ ಮಾಡ್ಬೇಡಿ : ಪಾಲಾಕ್ ಒಳ್ಳೆಯದು ಎನ್ನುವ ಕಾರಣಕ್ಕೆ ಕೆಲವರು ಅತಿಯಾಗಿ ಪಾಲಾಕ್ ತಿನ್ನುತ್ತಾರೆ. ಆದ್ರೆ ಇದನ್ನು ಹೆಚ್ಚು ಸೇವಿಸಿದರೆ ಅಡ್ಡಪರಿಣಾವ ಉಂಟಾಗುತ್ತದೆ. ಪಾಲಾಕ್ ಹೆಚ್ಚಿನ ಪ್ರಮಾಣದಲ್ಲಿ ತಿಂದ್ರೆ ಗ್ಯಾಸ್, ಕಿಡ್ನಿ ಕಲ್ಲು, ಕೀಲು ನೋವು ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡುವ ಅಪಾಯವಿದೆ. ದಿನ ನಿತ್ಯದ ಜೀವನದಲ್ಲಿ ಹೆಚ್ಚು ಪಾಲಾಕ್ ಬಳಕೆ ಮಾಡುತ್ತೇವೆ ಎನ್ನುವವರು ಪಾಲಾಕ್ ಕಾಂಬಿನೇಷನ್ ತಿಳಿದಿರಬೇಕು. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ಪಾಲಕ್ ಸೊಪ್ಪಿನ ಜೊತೆ ಸೇವಿಸಬಾರದು. ಕ್ಯಾಲ್ಸಿಯಂ ಹೆಚ್ಚಿರುವ ಮೊಸರು, ಹಾಲು, ಟೋಫ಼ು ಹಾಗೂ ಪನ್ನೀರ್ ಸೇವನೆ ಮಾಡಬಾರದು.