
ಭಾರತೀಯರು ಸ್ವಭಾವತಃ ಆಹಾರಪ್ರಿಯರು. ಪುರಾಣ ಕಾಲದಿಂದಲೂ ನಳ ಮಹಾರಾಜ, ಭೀಮಸೇನ ಸೇರಿ ಅದೆಷ್ಟೋ ಮಂದಿ ಅಡುಗೆಯಲ್ಲಿ ಪರಿಣಿತರಾಗಿದ್ದರು. ಭಾರತೀಯರು ಯಾವಾಗಲೂ ಅಡುಗೆಯಲ್ಲಿ ಹೊಸ ಹೊಸತನ್ನು ಬಯಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಒಂದೇ ಆಹಾರಕ್ಕೆ ಹೆಚ್ಚು ಒಗ್ಗಿಕೊಳ್ಳುತ್ತಾರೆ. ಒಂದೇ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಕೆಲವೊಂದು ವರ್ಷ ಒಂದೇ ಆಹಾರ ಹೆಚ್ಚು ಟ್ರೆಂಡ್ ಆಗುವುದೂ ಇದೆ. ಹಾಗೆಯೇ 2021ರಲ್ಲಿಯೂ ಹಲವು ಆಹಾರಗಳು ಹೆಚ್ಚು ಟ್ರೆಂಡ್ ಆಗಿವೆ. ಜನರು ಆನ್‌ಲೈನ್‌ನಲ್ಲಿ ಅಂಥಹಾ ಫುಡ್‌ಗಳನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ.
2020, 2021ರಲ್ಲಿ ಕೊರೋನಾ ವೈರಸ್‌ನಿಂದಾಗಿ ರಾಷ್ಟ್ರ ವ್ಯಾಪಿ ಲಾಕ್ ಡೌನ್ ಹೇರಲಾಗಿತ್ತು. ಹೀಗಾಗಿಯೇ ಮನೆಯಿಂದ ಹೊರಬರದ ಜನರು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಹಲವಾರು ಕಛೇರಿಗಳು ಮತ್ತು ಸಂಸ್ಥೆಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆ ಮುಂದುವರಿಸಿದ ಕಾರಣ ಜನರು ಸಹ ಆನ್ ಲೈನ್ ಫುಡ್ ಮೇಲೆ ಅವಲಂಬಿತರಾಗಬೇಕಾಗಿ ಬಂತು. ಕೆಲವೊಂದು ಹೊಟೇಲ್, ಹೋಮ್ ಡೆಲಿವರಿ ಮತ್ತು ಟೇಕ್-ಅವೇ ಸೌಲಭ್ಯವನ್ನು ಒದಗಿಸಿದ್ದವು. ಹೀಗಿದ್ದೂ ಹೆಚ್ಚಿನವರು ಜೊಮ್ಯಾಟೋ, ಸ್ವಿಗ್ಗೀ ಅಪ್ಲಿಕೇಶನ್‌ನನ್ನು ತಮ್ಮ ನೆಚ್ಚಿನ ಫುಡ್ ಆರ್ಡರ್ ಮಾಡಲು ಬಳಸುತ್ತಾರೆ.
Weight Loss Tips 2022: ಹೊಸ ವರ್ಷದಲ್ಲಿ ತೂಕ ಇಳಿಸಿಕೊಳ್ಳಬೇಕೆಂದರೆ ಈ ಆಹಾರ ತಿನ್ನಲೇಬೇಡಿ
2021ರಲ್ಲಿ ಹಲವಾರು ಆಹಾರಗಳು ಟ್ರೆಂಡಿಂಗ್ ಆಗಿವೆ. ಜೊಮ್ಯಾಟೋ (Zomato), ಸ್ವಿಗ್ಗೀ (Swiggy)ಯಲ್ಲಿ ಒಂದೇ ಆಹಾರವನ್ನು ಜನರು ಹೆಚ್ಚೆಚ್ಚು ಬಾರಿ ಆರ್ಡರ್ ಮಾಡಿದ್ದಾರೆ. ಅದೇ ಪಟ್ಟಿಗೆ ಮೊಮೋ ಸಹ ಸೇರುತ್ತದೆ. ಜೊಮ್ಯಾಟೋ ವರದಿಯ ಪ್ರಕಾರ, 2021ರಲ್ಲಿ ಜನರು ಹೆಚ್ಚು ಆರ್ಡರ್ (Order) ಮಾಡಿದ ಆಹಾರಗಳಲ್ಲಿ ಮೊಮೋ ಸಹ ಒಂದು. 2021ರಲ್ಲಿ ಒಂದು ಕೋಟಿಗೂ ಹೆಚ್ಚು ಮೊಮೊ (Momo)ಗಳನ್ನು ಜನರು ತಮ್ಮ ಅಪ್ಲಿಕೇಶನ್ ಮೂಲಕ ಆರ್ಡರ್ ಮಾಡಿದ್ದಾರೆ ಎಂದು ಜೊಮ್ಯಾಟೋ ಹೇಳುತ್ತದೆ. ಈ ವರದಿಯನ್ನು ಜೊಮ್ಯಾಟೋದ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ, '2021ರ ಮೆಮೆ ರಿವೈಂಡ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಮತ್ತು ಭಾರತವು ಎಷ್ಟು ಮೊಮೊಗಳನ್ನು ಆರ್ಡರ್ ಮಾಡಿದೆ' ಎಂದು ಬರೆಯಲಾಗಿದೆ.
ಮೊಮೋಸ್ ಎಂದರೇನು..?
ಮೊಮೋ ಎಂಬುದು ಟಿಬೆಟ್ ಹಾಗೂ ನೇಪಾಳದಲ್ಲಿ ಸ್ಥಳೀಯವಾಗಿ ಜನರು ತಿನ್ನುವ ಒಂದು ಬಗೆಯ ಡಂಪ್ಲಿಂಗ್ ಆಹಾರವಾಗಿದೆ. ಅಸ್ಸಾಂ ಮಣಿಪುರದಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಮೈದಾವನ್ನು ಉಪಯೋಗಿಸಿ ಹೊರ ಮೈ ತಯಾರಿಸಿ ಅದರೊಳಗೆ ತರಕಾರಿ (Vegetables)ಗಳನ್ನು ಸೇರಿಸಿ ಬೇಯಿಸಿ ಮೊಮೋಸ್ ಅನ್ನು ತಯಾರಿಸಲಾಗುತ್ತದೆ. ನಾನ್ ವೆಜ್ ಮೊಮೋಸ್ ತಯಾರಿಸುವಾಗ ಫಿಲ್ಲಿಂಗ್ಸ್‌ನಲ್ಲಿ ಕೋಳಿ ಮಾಂಸವನ್ನು ಸೇರಿಸಲಾಗುತ್ತದೆ. ಮೊಮೋವನ್ನು ಆವಿಯಲ್ಲಿ ಬೇಯಿಸಿ ಅಥವಾ ಎಣ್ಣೆಯಲ್ಲಿ ಫ್ರೈ ಮಾಡಿ ಹೀಗೆ ಎರಡು ರೀತಿಯಲ್ಲೂ ತಯಾರಿಸಲಾಗುತ್ತದೆ.
Healthy Eating Tips: ವೀಕೆಂಡ್‌ಗಳಲ್ಲಿ ಬೇಕಾಬಿಟ್ಟಿ ತಿನ್ನೋದಕ್ಕೆ ಬ್ರೇಕ್ ಹಾಕೋದು ಹೇಗೆ..?
ಮೃದುವಾಗಿ, ಸಾಕಷ್ಟು ಫಿಲ್ಲಿಂಗ್ಸ್ ತುಂಬಿರುವ ಈ ಆಹಾರವನ್ನು ಹಲವರು ಇಷ್ಟಪಟ್ಟು ಸೇವಿಸುತ್ತಾರೆ. ಮೊಮೋಸ್ ಜತೆ ನೀಡುವ ಖಾರದ ಕೆಂಪು ಚಟ್ನಿ ಸ್ವಾದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಸ್ವಾದಿಷ್ಟಕರ ಮೊಮೋ 2021ರಲ್ಲಿ ಜನರಿಗೆ ಅತಿ ಹೆಚ್ಚು ಪ್ರಿಯವಾಗಿದೆ. ಜೊಮ್ಯಾಟೋ, ಸ್ವಿಗ್ಗೀಯಲ್ಲಿ ಮೊಮೋಸ್ ಅನ್ನು ಜನರು ಹೆಚ್ಚೆಚ್ಚು ಬಾರಿ ಆರ್ಡರ್ ಮಾಡಿದ್ದಾರೆ.
ಮುಂಬೈಯಲ್ಲಿ ಪ್ರಸಿದ್ಧವಾಗಿರುವ ವಡಾ ಪಾವ್ (Vada Pav) ಅನ್ನು ಸುಮಾರು 32 ಲಕ್ಷ ಜನರು ಆರ್ಡರ್ ಮಾಡಿದ್ದು, ಸಮೋಸಾ (Samosa)ಗಳು ಸುಮಾರು 73 ಲಕ್ಷ ಆರ್ಡರ್‌ಗಳನ್ನು ಪಡೆದಿವೆ ಎಂದು ವರದಿ ತಿಳಿಸಿದೆ.ಮತ್ತೊಂದು ಪೋಸ್ಟ್‌ನಲ್ಲಿ, ಜೊಮ್ಯಾಟೋ ದಲ್ಲಿ ಅತ್ಯಂತ ಹಚ್ಚು ಪ್ರಸಿದ್ಧವಾದ ಕಾಂಬಿನೇಷನ್ ಬಗ್ಗೆ ಹೇಳಲಾಗಿದೆ. ಇದರಲ್ಲಿ ಪನೀರ್ ಬಟರ್ ಮಸಾಲಾ ಮತ್ತು ಬಟರ್ ನಾನ್. ಅವರನ್ನು 1.1 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಒಟ್ಟಿಗೆ ಆರ್ಡರ್ ಮಾಡಿರುವುದು ತಿಳಿದುಬಂದಿದ. 2021ರಲ್ಲಿ ಭಾರತದ ಅಗ್ರ ಖಾದ್ಯದ ಪಟ್ಟಿಯಲ್ಲಿ ಬಿರಿಯಾನಿ ಸಹ ಸೇರಿಕೊಂಡಿದೆ. ನಾವು ಪ್ರತಿ ಸೆಕೆಂಡಿಗೆ 2 ಬಿರಿಯಾನಿಗಳನ್ನು ವಿತರಿಸಿದ್ದೇವೆ ಎಂದು ಜೊಮ್ಯಾಟೊ ಮಾಹಿತಿ ನೀಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.