ಝೊಮೇಟೋ ಮೆಸೇಜ್‌ಗೆ ಜನರು ಫುಲ್ ಫಿದಾ

By Suvarna News  |  First Published Jun 5, 2022, 5:19 PM IST

ನಗರಗಳಲ್ಲಿ ಅದೆಷ್ಟೋ ಮಂದಿ ತಮ್ಮ ಆಹಾರ (Food)ಕ್ಕಾಗಿ ಆನ್‌ಲೈನ್‌ ಡೆಲಿವರಿ ಆ್ಯಪ್‌ (Delivery app) ಗಳನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ಇಂಥಾ ಫುಡ್‌ ಅಪ್ಲಿಕೇಶನ್‌ಗಳು ಹೊಸ ಹೊಸ ಆಫರ್‌ಗಳನ್ನು ಕೊಡ್ತಾನೇ ಇರ್ತವೆ. ಲೇಟೆಸ್ಟ್ ಆಗಿ ಝೊಮೆಟೋ (Zomato) ಕಳ್ಸಿರೋ  ಮೆಸೇಜ್‌ (Messege) ನೊಡಿದ್ರೆ ಮಾತ್ರ ನೀವು ಬಿದ್ದೂ ಬಿದ್ದೂ ನಗ್ತೀರಾ.


ದೇಶದ ಅತ್ಯಂತ ಜನಪ್ರಿಯ ಆಹಾರ (Food) ವಿತರಣಾ ಅಪ್ಲಿಕೇಶನ್‌ಗಳಲ್ಲಿ ಒಂದಾದ ಝೊಮಾಟೊ (Zomato) ವಿಭಿನ್ನ ಮಾರ್ಕೆಟಿಂಗ್ (Marketing) ಮೂಲಕ ಜನರನ್ನು ಸೆಳೀತಿದೆ. ಸಾಮಾನ್ಯವಾಗಿ ಯಾವುದೇ ಆ್ಯಪ್‌ (App)ಗಳನ್ನು ಯೂಸ್ ಮಾಡುತ್ತಿರಲಿ ಅದರ ನೋಟಿಫಿಕೇಶ್‌ನಗಳು ಆಗಿಂದಾಗೆ ಮೊಬೈಲ್‌ಗೆ ಬರುತ್ತಿರುತ್ತವೆ. ಅಮೆಜಾನ್, ಫ್ಲಿಪ್ ಕಾರ್ಟ್‌, ಮಿಂತ್ರಾ, ಮ್ಯಾಕ್ಸ್ ಎಲ್ಲವೂ ಈ ರೀತಿಯ ಸಂದೇಶಗಳನ್ನು ಕಳುಹಿಸುತ್ತವೆ. ಅದರಲ್ಲೂ ಆ್ಯಪ್‌ಗಳ ಮೂಲಕ ಅತಿ ಹೆಚ್ಚು ಹಣವನ್ನು ಗಳಿಸುತ್ತಿರುವ ಫುಡ್ ಡೆಲಿವರಿ ಫ್ಲಾಟ್‌ಫಾರ್ಮ್‌ಗಳನ್ನು ಜನರನ್ನು ಸೆಳೆಯಲು ಹೊಸ ಹೊಸ ಟೆಕ್ನಿಕ್ ಯೂಸ್ ಮಾಡುತ್ತವೆ. ಫ್ರೀ ಡೆಲಿವರಿ, ಡಿಸ್ಕೌಂಟ್‌ ಕೂಪನ್‌ನ್ನು ಪರಿಚಯಿಸುತ್ತವೆ.

ಅದರಲ್ಲೂ ಸ್ವಿಗ್ಗೀ, ಝೊಮೆಟೋ ಗಳಂತೂ ನೀವು ಬೆಳಗ್ಗೆ ಏನ್‌ ತಿನ್ತೀರಾ, ಮಧ್ಯಾಹ್ನ ಏನ್‌ ತಿನ್ತೀರಾ, ರಾತ್ರಿಯ ಅಡುಗೆ ( Cooking) ಆಗಿದ್ಯಾ ? ಬಿರಿಯಾನಿ (Biriyani) ಟೇಸ್ಟ್ ಮಾಡಿದ್ದೀರಾ ಹೀಗೆ ನಾನಾ ನಮೂನೆಯ ಮೆಸೇಜ್‌ಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಅದಕ್ಕಾಗಿ ಫ್ರೀ ಡೆಲಿವರಿ, 50 ಪರ್ಸೆಂಟ್ ಡಿಸ್ಕೌಂಟ್‌, ಸಂಡೇ ನಾನ್‌ ಕುಕ್ಕಿಂಗ್ ಡೇ ಹೀಗೆ ಹಲವು ಆಫರ್ಸ್ ಸುರಿಮಳೆ ಸುರಿಸ್ತಾರೆ. ಸದ್ಯ ಕೆಲವೊಬ್ಬರ ಮೊಬೈಲ್‌ಗೆ ಝೊಮೇಟೋದಿಂದ ಬರ್ತಿರೋ ಮೆಸೇಜ್ ಎಲ್ಲರ ಹುಬ್ಬೇರುವಂತೆ ಮಾಡಿದೆ. 'ನಿಮ್ಗೆ ಕಾಫಿ ಬೇಕಾ, ಟೀ ಬೇಕಾ' ಎಂಬ ಸಂದೇಶವನ್ನು ಝೊಮೆಟೋ ಕಳುಹಿಸುತ್ತಿದೆ. ಈ ಮೆಸೇಜ್‌ನ ಡೀಟೈಲ್‌ನಲ್ಲಿ ಮತ್ತೆ ಸ್ನ್ಯಾಕ್ಸ್‌ನ್ನು (Snacks) ಕೂಡಾ ಆರ್ಡರ್‌ ಮಾಡೋದನ್ನು ಮರೀಬೇಡಿ. ಟಾಪ್‌ ಅಂಡ್ ಎಂಜಾಯ್ ಯುವರ್ ಇವಿನಿಂಗ್ ಎಂದು ಸೇರಿಸಲಾಗಿದೆ.

Tap to resize

Latest Videos

ಓಲಾ ಝೊಮ್ಯಾಟೋದಲ್ಲಿ ದುಡಿಯುತ್ತ ಸಾಫ್ಟವೇರ್ ಇಂಜಿನಿಯರ್ ಆದ ಯುವಕ

ಸಂಜೆ ಹೊತ್ತಿಗೆ ಬಿಸಿ ಬಿಸಿ ಟೀ (Tea), ಕಾಫಿ (Coffee) ಕುಡೀಬೇಕು ಅಂತ ಆಗೋದು ನಿಜ. ಜೊತೆಗೆ ಕರುಂಕುರುಂ ಅಂತ ತಿನ್ನೋಕೆ ಏನಾದ್ರೂ ಇರ್ಲಿ ಅಂತ ಅನ್ಸೋದು ನಿಜ. ಜನರ ಇದೇ ಮೈಂಟ್‌ಸೆಟ್‌ನ್ನು ಅರ್ಥ ಮಾಡಿಕೊಂಡಿರೋ ಝೊಮೆಟೋ ಟೀ ಜೊತೆ ಸ್ನ್ಯಾಕ್ಸ್ ಕೂಡಾ ಆರ್ಡರ್ ಮಾಡ್ಬಿಡಿ ಅಂತಿದೆ. ಝೊಮೆಟೋ ಮಾರ್ಕೆಟಿಂಗ್‌ ಮೈಂಡ್‌ಗೆ ಮೆಚ್ಚುಗೆ ಸೂಚಿಸ್ಬೇಕೋ, ನಗ್ಬೇಕೋ ಅಂತ ಕನ್‌ಫ್ಯೂಶನ್‌ನಲ್ಲಿದ್ದಾರೆ ಜನ್ರು. 

ಜನಪ್ರಿಯ ಆಹಾರ ವಿತರಣಾ (Food Delivery) ಅಪ್ಲಿಕೇಶನ್‌ಗಳಲ್ಲಿ ಒಂದಾದ ಝೊಮಾಟೊ (Zomato) ಆಹಾರ ಪ್ರೇಮಿಗಳಿಗಾಗಿ  ಮಾರ್ಚ್ 21 ರಂದು  10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ಘೋಷಿಸಿತ್ತು. ಝೊಮಾಟೊ ಈ ಸೇವೆಯನ್ನು ಘೋಷಿಸಿದ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೇಕೆಗೆ ಗುರಿಯಾಯ್ತು. ಈ ಹೊಸ ಸೇವೆಯು ವಿತರಣಾ ಪಾಲುದಾರರನ್ನು ಕಠಿಣ ಪರಿಸ್ಥಿತಿಗೆ ದೂಡುತ್ತದೆ ಮತ್ತು ಅಸುರಕ್ಷಿತ ಕೆಲಸದ ವಾತಾವರಣ ನಿರ್ಮಾಣವಾಗುತ್ತದೆ ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದರು.

ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ, ಸಿಇಒ ದೀಪಿಂದರ್‌ ಘೋಷಣೆ

ಇದಕ್ಕೆ ಮಾ.22 ರಂದು ಸ್ಪಷ್ಟನೆ ನೀಡಿದ  ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ (Deepinder Goyal) ಅವರು 10 ನಿಮಿಷಗಳ ವಿತರಣಾ ಸೇವೆಯು ಜನಪ್ರಿಯವಾದ, ಪ್ರಮಾಣಿತವಾಗಿರುವ ವಸ್ತುಗಳಿಗೆ ಮಾತ್ರ ಇರುತ್ತದೆ ಮತ್ತು ಆದ್ದರಿಂದ 2 ನಿಮಿಷಗಳಲ್ಲಿ ಕಳುಹಿಸಬಹುದು ಎಂದು ತಿಳಿಸಿದ್ದರು.  ಜೊತೆಗೆ  10 ನಿಮಿಷಗಳಲ್ಲಿ ವಿತರಿಸಲಾಗುವ  ಆಹಾರ ಪದಾರ್ಥಗಳ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ. ಬ್ರೆಡ್ ಆಮ್ಲೆಟ್, ಪೋಹಾ, ಕಾಫಿ, ಚಾಯ್, ಬಿರಿಯಾನಿ, ಮೊಮೊಸ್, ಇತ್ಯಾದಿ ಆಹಾರ ಪದಾರ್ಥಗಳನ್ನು ತತ್‌ಕ್ಷಣದ ಸೇವೆಯ ಅಡಿಯಲ್ಲಿ 10 ನಿಮಿಷಗಳಲ್ಲಿ  ತಲುಪುವ ಬಗ್ಗೆ ಬಳಕೆದಾರರು ನಿರೀಕ್ಷಿಸಬಹುದು ಎಂದಿದ್ದರು

click me!