ಪುಟ್ಟ ಮಗುವೊಂದು ಮೊದಲ ಸಲ ಫಿಜ್ಜಾ ತಿಂದು ಸಖತ್ ಆಗಿ ರಿಯಾಕ್ಟ್ ಮಾಡಿದ್ದು, ಮಗುವಿನ ಮುದ್ದಾದ ಪ್ರತಿಕ್ರಿಯೆಯೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಷಕರು ಮಗುವಿಗೆ ಪಿಜ್ಜಾ ತಿನ್ನಿಸುತ್ತಿದ್ದು, ಒಂದು ತುತ್ತು ತಿಂದ ಮಗು ಆಹಾ ಎಂಬಂತೆ ರಿಯಾಕ್ಟ್ ಮಾಡಿದೆ.
ಪುಟ್ಟ ಮಕ್ಕಳ ಮೊದ ಮೊದಲ ತೊದಲ ಮಾತುಗಳಿಂದ ಹಿಡಿದು ಪ್ರತಿಯೊಂದು ಚಟುವಟಿಕೆಯೂ ಕೂಡ ಪೋಷಕರಿಗೆ ಅಚ್ಚರಿ ಹಾಗೂ ತುಂಬಾ ಖುಷಿ ನೀಡುವುದು. ಮೊದಲ ಬಾರಿಗೆ ಮಕ್ಕಳಿಗೆ ಹೊಸ ಹೊಸ ರುಚಿಗಳನ್ನು ಆಹಾರ ತರಕಾರಿ ಹಣ್ಣು ಹಂಪಲುಗಳನ್ನು ತಿನ್ನಿಸಲು ಪೋಷಕರು ಕೂಡ ಕುತೂಹಲದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ಮಕ್ಕಳು ಕೂಡ ಮೊದಲ ಬಾರಿ ರುಚಿ ನೋಡಿದಾಗ ಅವರು ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ಕೂಡ ತುಂಬಾ ಮುದ್ದಾಗಿರುತ್ತದೆ. ಮಕ್ಕಳು ಮೊದಲ ಬಾರಿ ಹೊಸದಾಗಿ ತಿನಿಸುಗಳನ್ನು ತಿಂದು ಪ್ರತಿಕ್ರಿಯಿಸುವ ಹಲವು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಅದೇ ರೀತಿ ಈಗ ಪುಟ್ಟ ಮಗುವೊಂದು ಮೊದಲ ಬಾರಿ ಫಿಜ್ಜಾ ತಿಂದು ಸಖತ್ ಆಗಿ ರಿಯಾಕ್ಟ್ ಮಾಡಿದ್ದು, ಮಗುವಿನ ಮುದ್ದಾದ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಷಕರು ಮಗುವಿಗೆ ಪಿಜ್ಜಾ ತಿನ್ನಿಸುತ್ತಿದ್ದು, ಒಂದು ತುತ್ತು ತಿಂದ ಮಗು ಆಹಾ ಎಂಬಂತೆ ರಿಯಾಕ್ಟ್ ಮಾಡುತ್ತದೆ. ಮಗುವಿನ ಈ ವಿಡಿಯೋವನ್ನು 'oh_shoot_girl' ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ.
ಮಕ್ಕಳು ಮಣ್ಣು ತಿಂದ್ರೆ ತಪ್ಪಲ್ಲ, ಹಾಗಂಥ ಪದೆ ಪದೇ ತಿಂದ್ರೆ ಡೇಂಜರಸ್!
ಅದನ್ನು 'emotional.babies' ಎಂಬ ಇನ್ಸ್ಟಾ ಪುಟದಲ್ಲಿ ಮರು ಪೋಸ್ಟ್ ಮಾಡಲಾಗಿದೆ, ಈ ವಿಡಿಯೋವನ್ನು 11 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ 1.1 ಮಿಲಿಯನ್ ಗೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಹೆಣ್ಣು ಮಗುವೊಂದಕ್ಕೆ ಮೊದಲ ಬಾರಿಗೆ ತಾಯಿಯೊಂದು ಪಿಜ್ಜಾ ತಿನ್ನಿಸುತ್ತಿದ್ದಾಳೆ. ಸ್ವಲ್ಪ ತಿಂದ ಮಗುವಿನ ರಿಯಾಕ್ಷನ್‌ಗೆ ನಾವು ಕೂಡ ಪಿಜ್ಜಾ ಆರ್ಡರ್ ಮಾಡೋಣ ಅನ್ಸೋದು ನಿಜ.
ಫಾಸ್ಟ್‌ಫುಡ್ ಎನಿಸಿರುವ ಪಿಜ್ಜಾವನ್ನು ಇಷ್ಟ ಪಡದ ಜನರಿಲ್ಲ. ಇದೇ ರೀತಿಯ ವಿಡಿಯೋವೊಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈರಲ್ ಆಗಿತ್ತು. ಮಗುವೊಂದು ಮೊದಲ ಬಾರಿಗೆ ಕೊಕಾಕೋಲಾದ ರುಚಿ ನೋಡಿದ ವಿಡಿಯೋ ಇದಾಗಿತ್ತು. ಕೊಕಾಕೋಲಾದ ರುಚಿಯನ್ನು ಮೊದಲಿಗೆ ನೋಡಿದ ಮಗು ಇದಕ್ಕೆ ಮಗು ಪ್ರತಿಕ್ರಿಯಿಸಿದ ರೀತಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿರುವ ಮಗು ವಿದೇಶಿ ಆಗಿದ್ದು, ವಿದೇಶದಲ್ಲಿ ಚಿತ್ರೀಕರಣಗೊಂಡ ವಿಡಿಯೋ ಇದಾಗಿತ್ತು. ತನ್ನ ಪೋಷಕರೊಂದಿಗೆ ಮ್ಯಾಕ್ ಡೊನಾಲ್ಡ್ ಶಾಪ್‌ಗೆ ತೆರಳುವ ಮಗುವಿಗೆ ಮೊದಲ ಬಾರಿಗೆ ಕೊಕಾಕೋಲಾ ನೀಡಲಾಗುತ್ತದೆ. ಅದುವರೆಗೆ ಕೊಕಾಕೋಲಾದ ರುಚಿ ನೋಡಿರದ ಮಗು ಕೊಕಾಕೋಲಾವನ್ನು ಒಂದು ಸಿಪ್ ಕುಡಿದು ಮುಖ ಕಿವುಚಿ ಕೊಳ್ಳುತ್ತದೆ. ಮಗುವಿನ ಆ ಪ್ರತಿಕ್ರಿಯೆ ತುಂಬಾ ಮುದ್ದಾಗಿದೆ.
ಬರೋಬ್ಬರಿ 23 ವರ್ಷದಿಂದ ಸ್ಯಾಂಡ್‌ವಿಚ್ ಬಿಟ್ಟು ಬೇರೇನೂ ತಿಂದೇ ಇಲ್ಲ ಈಕೆ !
ಸ್ಟ್ರಾ ಸಹಾಯದಿಂದ ಲೋಟದಿಂದ ಒಂದು ಗುಟುಕು ತೆಗೆದುಕೊಂಡ ಆಕೆ ಒಮ್ಮೆಗೆ ಗಾಬರಿಯಾಗುತ್ತಾಳೆ. ನಂತರ ಪಾನೀಯದ ಜುಮ್ಮೆನಿಸುವಿಕೆಯಿಂದ ಅವಳು ಆಶ್ಚರ್ಯಚಕಿತಳಾಗುತ್ತಾಳೆ. ಮತ್ತು ಆ ರುಚಿಯನ್ನು ವಿಶ್ಲೇಷಿಸಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾಳೆ. ನಂತರ ಮುಗುಳ್ನಕ್ಕು ಮತ್ತೊಂದು ಸಿಪ್ ಕುಡಿಯುತ್ತಾಳೆ ಈ ಮೂಲಕ ಕೊನೆಗೂ ಆ ಪಾನೀಯವನ್ನು ಆಕೆ ನಿಜವಾಗಿಯೂ ಇಷ್ಟಪಟ್ಟಿದ್ದಾಳೆ ಎಂಬುದನ್ನು ಸಾಬೀತುಪಡಿಸುತ್ತಾಳೆ. ಇದಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ವಿಡಿಯೋ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದರೆ ಮತ್ತೂ ಕೆಲವರು ಇದು ಮಕ್ಕಳಿಗೆ ಕೊಡುವಂತಹ ಪಾನೀಯ ಅಲ್ಲ. ಸಣ್ಣ ಮಕ್ಕಳು ಈ ಕೊಕಾಕೋಲಾ ಪಾನೀಯವನ್ನು ಕುಡಿಯಬಾರದು ಎಂದು ಕಾಮೆಂಟ್ ಮಾಡಿದ್ದಾರೆ.