ಸ್ಕ್ರೂಡ್ರೈವರ್ (Screwdriver) ಅಂದ್ರೆ ನಿಮಗೆ ಸಾಮಾನ್ಯವಾಗಿ ಏನು ನೆನಪಾಗುತ್ತೆ. ರಿಪೇರಿ ಮಾಡುವ ಸಂದರ್ಭದಲ್ಲಿ ಬಳಸುವ ಒಂದು ಟೂಲ್ಸ್ ಅಷ್ಟೆ ಅಲ್ವಾ. ಆದ್ರೆ ಪಬ್, ಪಾರ್ಟಿ ಹಾಲ್‌ಗಳಲ್ಲಿ ಇದರರ್ಥಾನೇ ಬೇರೆ. ಪಾರ್ಟಿ (Party)ಗಳಲ್ಲಿ ಸ್ಕ್ರೂಡ್ರೈವರ್ ಅನ್ನೋ ಹೆಸರಲ್ಲಿ ಒಂದು ಡ್ರಿಂಕ್ (Drink) ಅನ್ನು ಸರ್ವ್ ಮಾಡಲಾಗುತ್ತೆ ಅಂದ್ರೆ ನಂಬ್ತೀರಾ. ಏನದು ? ಯಾಕೆ ಈ ವಿಚಿತ್ರ ಹೆಸರು ?
ಪಾರ್ಟಿ ಅಂದ್ರೆ ಡ್ಯಾನ್ಸ್, ಮಸ್ತಿ, ಮೋಜು ನೆನಪಾಗೋ ಹಾಗೇ. ಥಟ್ಟಂತ ನೆನಪಾಗೋದು ಕಾಕ್‌ಟೇಲ್ ಹಾಗೂ ವೋಡ್ಕಾ. ಮದುವೆ ಪಾರ್ಟಿ, ಬರ್ತ್ ಡೇ ಪಾರ್ಟಿ, ವೀಕೆಂಡ್ ಪಾರ್ಟಿ ಎಲ್ಲಾ ಕಡೆನೂ ಇದ್ರ ಹಾವಳಿ ಅಂತೂ ಇದ್ದೇ ಇರುತ್ತೆ. ಇವತ್ತಿನ ಯುವಜನಾಂಗಗಂತೂ ಈ ಡ್ರಿಂಕ್ಸ್‌ಗಳು ಒಂದಷ್ಟು ಜಾಸ್ತಿನೇ ಫೇವರಿಟ್. ವೋಡ್ಕಾ ಸಾಮಾನ್ಯವಾಗಿ ಧಾನ್ಯಗಳು ಅಥವಾ ಆಲೂಗಡ್ಡೆಗಳಿಂದ ತಯಾರಿಸಿದ ಭಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ. ಸಾಂಪ್ರದಾಯಿಕವಾಗಿದ ಈ ಮದ್ಯವು ರಷ್ಯಾ ಮತ್ತು ಪೋಲೆಂಡ್‌ನಿಂದ ಆರಂಭವಾಗಿದೆ, ಆದರೆ ಇಂದು ಇದನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತದೆ. ವೋಡ್ಕಾವನ್ನು ಸಾಮಾನ್ಯವಾಗಿ ರುಚಿಯಿಲ್ಲದ ಮದ್ಯವೆಂದು ವಿವರಿಸಲಾಗುತ್ತದೆ. ವೋಡ್ಕಾ ನೋಡಲು ಪಾರದರ್ಶನ ನೀರಿನಂತೆ ಕಂಡು ಬಂದರೂ ಅಮಲೇರಿಸುವಲ್ಲಿ ಬೇರೆ ಯಾವುದೇ ಪಾನೀಯಗಳಿಗೆ ಕಡಿಮೆಯಿಲ್ಲ.
ಹಣ್ಣಿನ ರಸ ಮತ್ತು ಇತರ ಪದಾರ್ಥಗಳೊಂದಿಗೆ ಬೆರೆಸಿದ ಅಲ್ಕೋಹಾಲ್ ಒಳಗೊಂಡ ಪಾನೀಯವನ್ನು ಕಾಕ್‌ಟೇಲ್ ಎಂದು ಕರೆಯುತ್ತಾರೆ. ವೋಡ್ಕಾ ಆಯ್ತು, ಕಾಕ್‌ಟೇಲ್ ಆಯ್ತು ಹಾಗಾದ್ರೆ ಸ್ಕ್ರೂ ಡ್ರೈವರ್ ಎಂದರೇನು ?
ವೋಡ್ಕಾ,ಕಾಕ್‌ಟೇಲ್ ಮಾತ್ರವಲ್ದೆ ಇನ್ನಷ್ಟು ಕೆಲವು ವಿಚಿತ್ರ ಹೆಸರಿನ ಡ್ರಿಂಕ್ (Drink)ಗಳು ಪಾರ್ಟಿಯಲ್ಲಿ ಸಿಗುತ್ತವೆ. ಬ್ಲಡ್ ಆಂಡ್ ಸ್ಯಾಂಡ್, ಬ್ಲ್ಯಾಕ್ ವೆಲ್ವೆಟ್, ಬೆಡ್ ಆಫ್ ರೋಸಸ್, ಬ್ಲ್ಯಾಕ್ ಕ್ಯಾಟ್, ಬ್ಲಶಿಂಗ್ ಲೇಡಿ, ಹಾರ್ಸ್ ನೆಕ್, ಟ್ವೆಂಟಿಯತ್ ಸೆಂಚುರಿ ಹೀಗೆ ವಿವಿಧ ಹೆಸರಿನ ವೋಡ್ಕಾಗಳು ಲಭ್ಯವಿರುತ್ತವೆ. ಇದೇ ರೀತಿಯ ಡ್ರಿಂಕ್‌ಗಳಲ್ಲಿ ಒಂದು ಸ್ಕ್ರೂ ಡ್ರೈವರ್. ಹಾಗಿದ್ರೆ ಸ್ಕ್ರೂ ಡ್ರೈವರ್ (Screwdriver) ಎಂದರೇನು ? ಡ್ರಿಂಕ್ ಗೆ ಆ ಹೆಸರು ಬಂದಿದ್ಯಾಕೆ ?
Water Bottles Expiry Date: ಕುಡಿಯುವ ನೀರಿಗೂ ಎಕ್ಸ್‌ಪಯರಿ ಡೇಟ್ ಇದ್ಯಾ..?
undefined
ಸ್ಕ್ರೂಡ್ರೈವರ್ ಎಂಬ ಹೆಸರು ಯಾಕೆ ?
ವೋಡ್ಕಾ ಹಾಗೂ ಕಿತ್ತಳೆಯ ರಸದ ಕಾಂಬಿನೇಶನ್‌ಗೆ ಸ್ಕ್ರೂ ಡ್ರೈವರ್ ಎಂಬ ವಿಚಿತ್ರವಾದ ಹೆಸರು ಯಾಕೆ ಬಂತು ಎಂಬುದು ಸೋಜಿಗದ ಸಂಗತಿ. ಲೇಖಕ ವಿಕ್ಟೋರಿನೊ ಮ್ಯಾಟಸ್ ಅವರ ಪುಸ್ತಕ. ‘ವೋಡ್ಕಾ: ಹೇಗೆ ಬಣ್ಣರಹಿತ, ವಾಸನೆಯಿಲ್ಲದ, ಸುವಾಸನೆಯಿಲ್ಲದ ಅಮೇರಿಕಾವನ್ನು ವಶಪಡಿಸಿಕೊಂಡಿದೆ’ ಎಂಬ ಪುಸ್ತಕದ ಪ್ರಕಾರ, 1950ರ ದಶಕದಲ್ಲಿ, ಪರ್ಷಿಯನ್ ಗಲ್ಫ್‌ನಲ್ಲಿನ ಅಮೇರಿಕನ್ ತೈಲ ಕಾರ್ಮಿಕರು ಕೆಲಸದಲ್ಲಿರುವಾಗ ತಮ್ಮ ಕಿತ್ತಳೆ ರಸಕ್ಕೆ ವೋಡ್ಕಾವನ್ನು ಸೇರಿಸಿದರು. ಈ ರೀತಿ ಮಿಶ್ರಣವನ್ನು ಬೆರೆಸಲು ಒಂದು ಚಮಚ, ಹಾಗೂ ಪಾನೀಯವನ್ನು ಬೆರೆಸಲು ಸ್ಕ್ರೂಡ್ರೈವರ್ ಅನ್ನು ಬಳಸಿದರು. ಹೀಗಾಗಿ ವೋಡ್ಕಾ ಹಾಗೂ ಕಿತ್ತಳೆಯ ರಸದ ಕಾಂಬಿನೇಶನ್‌ಗೆ ಸ್ಕ್ರೂ ಡ್ರೈವರ್ ಎಂಬ ವಿಚಿತ್ರವಾದ ಹೆಸರು ಅಸ್ತಿತ್ವಕ್ಕೆ ಬಂದಿತು.
ಸ್ಕ್ರೂಡ್ರೈವರ್, ಮೊದಲ ವೋಡ್ಕಾ ಕಾಕ್‌ಟೇಲ್
ಸ್ಕ್ರೂಡ್ರೈವರ್ ಎಂಬುದು ವೋಡ್ಕಾ (Vodka)ದೊಂದಿಗೆ ತಯಾರಿಸಲಾದ ಮೊದಲ ಕಾಕ್‌ಟೇಲ್‌ಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಕೊಲ್ಲಿಯಲ್ಲಿನ ಅಮೇರಿಕನ್ ತೈಲ ಕಾರ್ಮಿಕರ ಆವಿಷ್ಕಾರ ಎಂದು ಹೇಳಲಾಗುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ, ಈ ಕಾಕ್ ಟೇಲ್ ಎರಡನೇ ವಿಶ್ವಯುದ್ಧದ ಸಮಯದಲ್ಲಿ ತನ್ನ ಹೆಸರನ್ನು ಪಡೆದುಕೊಂಡಿತು ಎಂದು ಹೇಳಲಾಗುತ್ತದೆ. 1949ರಲ್ಲಿ ಟೈಮ್ ಮ್ಯಾಗಜೀನ್‌ನಲ್ಲಿನ ಪ್ರಕಟವಾದ ಟಿಪ್ಪಣಿಯ ಪ್ರಕಾರ, ಕಾಕ್ ಟೇಲ್ (Cocktail) ಅನ್ನು ಮೊದಲು ಟರ್ಕಿಯ ಗುಪ್ತಚರ ಏಜೆಂಟ್‌ಗಳು, ಬಾಲ್ಕನ್ ನಿರಾಶ್ರಿತರು ಮತ್ತು ಪಾರ್ಕ್ ಹೋಟೆಲ್‌ನಲ್ಲಿರುವ ಅಮೇರಿಕನ್ ಎಂಜಿನಿಯರ್‌ಗಳು ತಯಾರಿಸಿದರು ಎಂದು ತಿಳಿದುಬರುತ್ತದೆ.
Drinking Water : ಹೀಗೆ ನೀರು ಕುಡಿದ್ರೆ ತಿಂದ ಅನ್ನ ಜೀರ್ಣವಾಗೋಲ್ಲ!
ಸ್ಕ್ರೂಡ್ರೈವರ್ ಮಾಡುವುದು ಹೇಗೆ ?
ಉದ್ದನೆ ಗ್ಲಾಸ್ ತೆಗೆದುಕೊಂಡು, ಅದಕ್ಕೆ ಐಸ್ ತುಂಬಿಸಿಕೊಳ್ಳಿ. ಇದಕ್ಕೆ 1 ಭಾಗದಷ್ಟು ವೋಡ್ಕಾ ಮತ್ತು 2 ಭಾಗಗಳ ಕಿತ್ತಳೆ ರಸವನ್ನು ಸೇರಿಸಿಕೊಳ್ಳಿ. ಆ ನಂತರ ಇವೆರಡನ್ನೂ ಚೆನ್ನಾಗಿ ಬೆರೆಸಿ. ಗ್ಲಾಸ್‌ನ ಸೈಡ್‌ನಲ್ಲಿ ಕಿತ್ತಳೆ ಸ್ಲೈಸ್ ಅನ್ನು ಇಟ್ಟು ಅಲಂಕರಿಸಿ. ಸಾಮಾನ್ಯವಾಗಿ ಸ್ಕ್ರೂ ಡ್ರೈವರ್‌ನ್ನು ಹೀಗೆ ಮಾಡಲಾಗುತ್ತದೆ. ಆದರೆ ಈ ರೀತಿ ಅಲ್ಲದೆಯೂ ಇತ್ತೀಚಿಗೆ ಮಾಡುವ ಸ್ಕ್ರೂಡ್ರೈವರ್‌ನಲ್ಲಿ ಹಲವು ಮಾರ್ಪಾಡುಗಳು ಬಂದಿವೆ. ಅಂತಹ ಒಂದು ಬದಲಾವಣೆಯನ್ನು ಸ್ಲೋ ಸ್ಕ್ರೂ ಎಂದು ಕರೆಯಲಾಗುತ್ತದೆ, ಅಲ್ಲಿ ವೋಡ್ಕಾವನ್ನು ಸ್ಲೋ ಜಿನ್‌ನೊಂದಿಗೆ ಬದಲಾಯಿಸಲಾಗುತ್ತದೆ.