ಮಂಚೂರಿ, ಪಿಜ್ಜಾ, ಬರ್ಗರ್.. ಇಂಥ ಫುಡ್ ಹೆಸ್ರು ಕೇಳಿದ್ರೆ ಸಾಕು, ಬಾಯಲ್ಲಿ ನೀರಿಳಿಯುತ್ತದೆ. ಆದರೆ, ಇವು ನಾಲಿಗೆಗೆ ಎಷ್ಟು ರುಚಿಯನ್ನು ನೀಡುತ್ತವೆಯೋ ಅಷ್ಟೇ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಇದೆಲ್ಲ ಗೊತ್ತಿದ್ದರೂ ಜಂಕ್ ಫುಡ್‌ನಿಂದ ದೂರ ಉಳಿಯುವುದು ಕಷ್ಟವೇ ಆಗುತ್ತದೆ. ಆದ್ದರಿಂದ ಜಂಕ್ ಫುಡ್‌ನಿಂದ ದೂರವಿರೋಕೆ ನೀವೇನ್ ಮಾಡ್ಬೇಕು ಗೊತ್ತಾ?
ಮಂಚೂರಿ, ಪಿಜ್ಜಾ, ಬರ್ಗರ್, ಬೋಂಡಾ... ಆಹಾಹಾ, ಬಾಯಲ್ಲಿ ನೀರೂರ್ತಿದೆ ಅಲ್ವಾ? ಈಗ್ಲೇ ತಿನ್ಬೇಕು ಅನ್ನಿಸ್ತಿದೆ ಅಲ್ವಾ? ಅದ್ಕೇ ಹೇಳೋದು ಮನಸ್ಸು ಮರ್ಕಟ ಅಂತ. ಮನಸ್ಸು ಹೇಳೋದನ್ನ ಬದಿಗಿಟ್ಟು ಬುದ್ಧಿಯ ಕೈಗೆ ನಿಮ್ಮ ಆಸೆಗಳ ಜುಟ್ಟು ಕೊಡಿ. ಯಾಕಂದ್ರೆ ಆರೋಗ್ಯಕ್ಕಿಂತ ದೊಡ್ದು ಯಾವ್ದೂ ಇಲ್ಲ. ಈ ಜಂಕ್ ಫುಡ್‌ನಿಂದ ದೂರವಿರೋದು ಅಂದ್ರೆ ಛೋಟುದ್ದ ನಾಲಿಗೆಗಲ್ಲ, ಮಾರುದ್ದ ದೇಹಕ್ಕೆ ನೀವು ಗೌರವ ಕೊಡ್ತಿದೀರಾ ಅಂತರ್ಥ. ಆಗ ದೇಹವೂ ಪ್ರತಿಯಾಗಿ ನಿಮಗೆ ಉತ್ತಮ ಆರೋಗ್ಯ, ಆಯಸ್ಸು, ನೆಮ್ಮದಿ ನೀಡುತ್ತದೆ. ಈ ಕೆಲವು ಸಲಹೆಗಳಿಂದ ಜಂಕ್ ಫುಡ್ ತಿನ್ನದಂತೆ ನಿಮ್ಮ ಮೆದುಳಿಗೆ ನೀವೇ ತರಬೇತಿ ನೀಡಬಹುದು.
ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಿ(Understand)
ನಿಮ್ಮ ಮನಸ್ಸಿಗಿಂತ ಮುಖ್ಯವಾದುದು ಯಾವುದು ಇಲ್ಲ. ಜಂಕ್ ಫುಡ್‌ನಿಂದ ಆಗಬಹುದಾದ ಅಪಾಯಗಳನ್ನು ಮನಸ್ಸಿಗೆ ಅರ್ಥ ಮಾಡಿಸಿ.
ಮೊದಲು ನಿಮ್ಮ ಅಡುಗೆಮನೆಯ ಕಪಾಟಿನಲ್ಲಿ (pantry) ಇಂತಹ ಆಹಾರ ಇರುದಂತೆ ನೋಡಿಕೊಳ್ಳಿ. ನಿಮಗೆ ಸಕ್ಕರೆ ಅಂಶ ಇಷ್ಟವಾಗುತ್ತದೆಯಾದರೆ ಅಲ್ಲಿ ಹಣ್ಣುಗಳನ್ನು, ನಟ್ಸ್ (nuts) ಗಳನ್ನು ಮತ್ತು ಸಂಪೂರ್ಣ ಗೋಧಿಯ ಉತ್ಪನ್ನಗಳನ್ನು ಮಾತ್ರ ಇರಿಸಿ. ಮನೆಯಲ್ಲೇ ಬೆಲ್ಲದಲ್ಲಿ ತಯಾರಿಸಿದ ಸಿಹಿ ತಿನಿಸುಗಳನ್ನು ಇಟ್ಟುಕೊಳ್ಳಿ.
ಸಂಶೋಧನೆಗಳ ಪ್ರಕಾರ, ನಾವು ಸುಲಭವಾಗಿ ಕೈಗೆಟುಕುವ ವಸ್ತುಗಳನ್ನು ತಿನ್ನುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಕೆಲಸಕ್ಕೆ ಹೋಗುವ ಮಾರ್ಗದಲ್ಲಿ ಜಂಕ್ ಫುಡ್ ಅಂಗಡಿಗಳು ಸಿಗುತ್ತವೆ ಎಂದಾದರೆ ದಾರಿಯನ್ನು ಬದಲಾಯಿಸುವುದು ಒಳ್ಳೆಯದು. ನೀವೇನಾದರೂ ಸ್ನೇಹಿತರನ್ನು ಒಗ್ಗೂಡಿಸಿ ಹೊರಗೆ ಹೋಗಲು ಬಯಸಿದರೆ ಆದಷ್ಟು ಫಾಸ್ಟ್ ಫುಡ್ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ.
undefined
ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಲು ಕ್ರಿಯಾಶೀಲ ಉದ್ದೇಶ
ನೀವು ದೊಡ್ಡ ಮನಸಿಂದ ಯಾವುದೇ ಕೆಲಸ ಮಾಡುವವರೆಗೂ ಅದು ಬರಿಯ ಯೋಜನೆ ಮಾತ್ರವಾಗಿರುತ್ತದೆ. ಆರೋಗ್ಯಕರ ಆಹಾರವು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಮತ್ತು ಸ್ವತಃ ಅದೇ ಅಡುಗೆ ಮಾಡುತ್ತದೆ ಎಂದು ಭಾವಿಸಬೇಡಿ. ಅಡುಗೆ ಮನೆಯಲ್ಲಿ ಹಾಗೂ ಫ್ರಿಡ್ಜ್ ನಲ್ಲಿ ಇರುವ ಜಂಕ್ ಫುಡ್ಡನ್ನು ಮೊದಲು ಹೊರಗೆ ಹಾಕಿ.
ಆಗಾಗ ನಿಮಗೆ ನೀವೇ ನೆನಪಿಸಿಕೊಳ್ಳುತ್ತ ಇರಿ, ನೀವು ಜಂಕ್ ಫುಡ್ ನಿಂದ ದೂರ ಉಳಿಯುತ್ತಿದ್ದೀರಿ ಹಾಗೂ ಆರೋಗ್ಯಕರವಾದ ಆಹಾರವನ್ನೇ ಸೇವಿಸುತ್ತೀರಿ ಎಂದು.
Side Effects of Wine: ಒಂದು ಪೆಗ್ ವೈನ್ ಕುಡಿದರೆ ಆರೋಗ್ಯಕ್ಕೆ ಎಷ್ಟು ಹಾನಿಯಿದೆ ಗೊತ್ತಾ ?
ಹೆಚ್ಚು ಅಗಿಯಿರಿ (chew) ಕಡಿಮೆ ತಿನ್ನಿರಿ (eat)
ನೀವು ಊಟ ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತೀರಿ ಎಂದಾದರೆ ಆಗ ತಿನ್ನುವ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ. ಇಂದು ಜಂಕ್ ಫುಡ್‍ಗೆ ಕೂಡ ಅನ್ವಯವಾಗುತ್ತದೆ. ವಿಜ್ಞಾನದ ಪ್ರಕಾರ ನೀವು ಆಹಾರವನ್ನು ಜಗಿಯಲು ಕಳೆಯುವ ಸಮಯವು ನೀವು ಸೇವಿಸುವ ಒಟ್ಟು ನಿಮಿಷಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಸಂಶೋಧನೆಯ ಪ್ರಕಾರ ತಿನ್ನಲು ಪ್ರಾರಂಭಿಸಿದ ಇಪ್ಪತ್ತು ನಿಮಿಷಗಳಲ್ಲಿ ನಿಮಗೆ ಹೊಟ್ಟೆ ತುಂಬಿದಂತ ಅನುಭವ ಉಂಟಾಗುತ್ತದೆ. ಅಪರೂಪಕ್ಕೆ ತಿನ್ನುವ ಜಂಕ್ ಆಹಾರವನ್ನೂ ನಿಧಾನವಾಗಿ ಹೊಟ್ಟೆಗಿಳಿಸಿ.
Long Hair Village: ಈ ಊರಿನ ತುಂಬಾ ನೀಳವೇಣಿಯರೇ!
ಬಣ್ಣ (color) ಹಾಗೂ ಪರಿಸರದ (environment) ಬಗ್ಗೆ ಗಮನ ಹರಿಸಿ
ಕೆಂಪು, ಹಳದಿ ಹಾಗೂ ಕೇಸರಿ ಬಣ್ಣಗಳು ಹಸಿವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನೀವು ತಿನ್ನುವ ಪ್ರದೇಶವು ಈ ಬಣ್ಣಗಳಿಂದ ದೂರವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ಸಣ್ಣ ತಟ್ಟೆಯಲ್ಲಿ ಊಟ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ತೆಗೆದುಕೊಳ್ಳಬಹುದು.
ಆಹಾರದ ಟೆಕ್ಸ್‌ಚರ್ (texture) ಮತ್ತು ಬಣ್ಣಗಳು
ಆಹಾರವು ಆಕರ್ಷಕವಾಗಿ ಕಾಣಲು ಅದರ ಬಣ್ಣ, ವಿನ್ಯಾಸ ಕಾರಣವಾಗುತ್ತದೆ. ಮನೆಯಲ್ಲೇ ತಯಾರಿಸುವ ಆಹಾರದಲ್ಲಿ ಎಲ್ಲ ಬಣ್ಣದ ತರಕಾರಿ, ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
ಜಂಕ್ ಫುಡ್ ಬಗ್ಗೆ ಹೆಚ್ಚು ತಿಳಿದುಕೊಳ್ಳಿ
ಇದಕ್ಕಾಗಿ ಮಾಡಬೇಕಾಗಿರುವುದು ತುಂಬಾ ಸರಳ ಕೆಲಸ. ಜಂಕ್ ಫುಡ್ಡನ್ನು ಹೇಗೆ ತಯಾರಿಸುತ್ತಾರೆ ಎಂದು ತಿಳಿದುಕೊಳ್ಳಲು ವೀಡಿಯೊಗಳನ್ನು ವೀಕ್ಷಿಸಿ ಮತ್ತು ಓದಿ.
ಹ್ಯಾವ್ ಚೀಟ್ ಡೇಸ್ (have cheat days)
ನೀವು ಒಂದೇ ಬಾರಿಗೆ ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು ಎನ್ನುವುದು ಅಸಾಧ್ಯ. ಆದ್ದರಿಂದ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೆ ಒಮ್ಮೆ ಮಾತ್ರ ತಿನ್ನಿರಿ. ಹೀಗೆ ಮಾಡುವುದರಿಂದ ಉಳಿದ ದಿನಗಳಲ್ಲಿ ಜಂಕ್ ಫುಡ್ ನಿಂದ ದೂರವಿರಲು ಸಹಾಯವಾಗುತ್ತದೆ.