ಒಂದು ಪ್ಲೇಟ್ ಪಾನಿಪುರಿ ಬೆಲೆ 830 ರೂಪಾಯಿ.. ಆಸೆಯಿಂದ ಬಂದವ್ರಿಗೆ ಕಾದಿತ್ತು ಶಾಕ್..!

Published : Jul 16, 2026, 01:08 PM IST
pani puri

ಸಾರಾಂಶ

ಒಂದು ಪ್ಲೇಟ್ ಪಾನಿಪುರಿಗೆ 830 ರೂಪಾಯಿ. ಒಂದು ಪಾವ್ ಭಾಜಿಗೆ 1270 ರೂಪಾಯಿ. ತವರು ಮನೆಯ ನೆಚ್ಚಿನ ಸ್ನ್ಯಾಕ್ ಸವಿಯಲು ಬಂದಿದ್ದ NRIಗಳಿಗೆ ಆಘಾತ ತಂದ ಕತೆ ಇದು!

ಲಂಡನ್: ಪಾನಿಪುರಿ ಅಂದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಸಂಜೆ ಟೈಂನಲ್ಲಿ ಸ್ನೇಹಿತರ ಜೊತೆ ತಿನ್ನೋ ಮಜಾನೇ ಬೇರೆ. ಅದ್ರಲ್ಲೂ ಹೆಣ್ಮಕ್ಕಳು ಪಾನಿಪುರಿನ ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ಸಾಮಾನ್ಯ ಜನರಿಂದ ಹಿಡಿದು ಹೈಕ್ಲಾಸ್ ಜನರ ಅಚ್ಚುಮೆಚ್ಚಿನ ಈ ಸ್ನ್ಯಾಕ್ಸ್‌ ಬೆಲೆ ಎಲ್ಲರಿಗೂ ಕೈಗೆಟಕುವಂತದ್ದೇ. ಭಾರತದಲ್ಲಿ 20 ರೂಪಾಯಿಂದ 80 ರೂಪಾಯಿ ಒಳಗೆ ಎಲ್ಲೆಡೆ ಸಿಗುತ್ತಿದೆ. ಅದೇ ಹಲ್ದಿರಾಮ್ಸ್‌ನಂತಹ ಪ್ರೀಮಿಯಂ ಹೋಟೆಲ್‌ಗಳಲ್ಲಿ 100 ರೂಪಾಯಿಯವರೆಗೆ ಇರಬಹುದು. ಆದರೆ ಆ ಒಂದು ನಗರದಲ್ಲಿ ಪಾನಿಪುರಿ ಬೆಲೆ ಭಾರತೀಯರ ನಿದ್ದೆಗೆಡಿಸಿದೆ.

ಹೌದು, ಲಂಡನ್‌ನಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ ಬರೋಬ್ಬರಿ 830 ರೂಪಾಯಿ! ಕೇಳೋಕೆ ಶಾಕ್ ಆದ್ರೂ ಅದರ ಬೆಲೆ ಮಾತ್ರ ಅಷ್ಟೇ ಇರೋದು. ಭಾರತದ ಪ್ರಸಿದ್ಧ ಸ್ನಾಕ್ಸ್ ಬ್ರ್ಯಾಂಡ್ 'ಹಲ್ದಿರಾಮ್ಸ್' (Haldiram's) ಇತ್ತೀಚೆಗೆ ಲಂಡನ್‌ನಲ್ಲಿ ತನ್ನ ಹೊಸ ಶಾಖೆ ತೆರೆದಿದೆ. ಅಪ್ಪಟ ಭಾರತೀಯ ಚಾಟ್ಸ್ ರುಚಿಯನ್ನು ಸವಿಯಲು ಅಲ್ಲಿನ ಅನಿವಾಸಿ ಭಾರತೀಯರು (NRIs) ಮುಗಿಬೀಳುತ್ತಿದ್ದಾರೆ. ಆದರೆ ಅಲ್ಲಿನ ಮೆನುವಿನಲ್ಲಿರುವ ದರಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ದೆಹಲಿ vs ಲಂಡನ್

ದೆಹಲಿಯ ಹಲ್ದಿರಾಮ್ಸ್ ಔಟ್‌ಲೆಟ್‌ಗೆ ಹೋಲಿಸಿದರೆ ಲಂಡನ್‌ನಲ್ಲಿನ ಬೆಲೆಗಳು ಆಕಾಶ ಮುಟ್ಟಿವೆ. ದೆಹಲಿಯಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ ಸುಮಾರು 75 ರೂ. ಇದ್ದರೆ, ಲಂಡನ್‌ನಲ್ಲಿ ಇದು 6.50 ಪೌಂಡ್ (ಸುಮಾರು 830 ರೂಪಾಯಿ). ದೆಹಲಿಯಲ್ಲಿ ಪಾವ್ ಬಾಜಿ 198 ರೂ. ಇರುವ ಪಾವ್ ಬಾಜಿ ಬೆಲೆ ಲಂಡನ್‌ನಲ್ಲಿ 9.90 ಪೌಂಡ್ (ಸುಮಾರು 1,270 ರೂಪಾಯಿ). ದೆಹಲಿಯಲ್ಲಿ ಗಾರ್ಲಿಕ್ ನಾನ್ 95 ರೂ. ಇದ್ದರೆ, ಲಂಡನ್‌ನಲ್ಲಿ ಇದರ ಬೆಲೆ 5 ಪೌಂಡ್ (ಸುಮಾರು 640 ರೂಪಾಯಿ) ಇದೆ.

ಇಷ್ಟೊಂದು ಬೆಲೆ ಏಕೆ ಎಂದು ನೀವು ಕೇಳಬಹುದು. ಲಂಡನ್‌ನಲ್ಲಿ ಕಟ್ಟಡದ ಬಾಡಿಗೆ, ನಿರ್ವಹಣಾ ವೆಚ್ಚ, ಸ್ಥಳೀಯ ತೆರಿಗೆಗಳು ಮತ್ತು ಭಾರತದಿಂದ ಮಸಾಲೆ ಅಥವಾ ಇತರ ಪದಾರ್ಥಗಳ ಆಮದು ವೆಚ್ಚ ಹೆಚ್ಚಾಗಿರುವುದರಿಂದ ಬೆಲೆಗಳು ಈ ಮಟ್ಟದಲ್ಲಿವೆ ಎನ್ನಲಾಗುತ್ತಿದೆ. ಭಾರತದಲ್ಲಿ ಹಲ್ದಿರಾಮ್ಸ್ ಮೆನುವಿನಲ್ಲಿ ಸೌತ್ ಇಂಡಿಯನ್, ಚೈನೀಸ್ ಸೇರಿದಂತೆ 80ಕ್ಕೂ ಹೆಚ್ಚು ಖಾದ್ಯಗಳಿರುತ್ತವೆ. ಲಂಡನ್ ಶಾಖೆಯಲ್ಲಿ ಕೇವಲ ಆಯ್ದ 40 ಖಾದ್ಯಗಳನ್ನು ಮಾತ್ರ ಇರಿಸಲಾಗಿದೆ. 

ಇಲ್ಲಿ ಮುಖ್ಯವಾಗಿ ಉತ್ತರ ಭಾರತದ ಸ್ಟ್ರೀಟ್ ಫುಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಕ್ಷಿಣ ಭಾರತದ ದೋಸೆ, ಇಡ್ಲಿ ಹಾಗೂ ಸ್ಯಾಂಡ್‌ವಿಚ್ ವಿಭಾಗಗಳನ್ನು ಅಲ್ಲಿನ ಮೆನುವಿನಿಂದ ಕೈಬಿಡಲಾಗಿದೆ. ಬೆಲೆ ಎಷ್ಟೇ ಹೆಚ್ಚಿದ್ದರೂ, ತಾಯ್ನಾಡಿನ ರುಚಿಯನ್ನು ಮಿಸ್ ಮಾಡಿಕೊಳ್ಳುವ ಅನಿವಾಸಿ ಭಾರತೀಯರು ಮತ್ತು ಮೊದಲ ಬಾರಿ ಭಾರತೀಯ ಖಾದ್ಯಗಳನ್ನು ಸವಿಯುವ ಬ್ರಿಟಿಷರು ಹಲ್ದಿರಾಮ್ಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Antiliaನಲ್ಲಿ ಕೆಲಸ ಮಾಡಬೇಕಾ? ಅಂಬಾನಿ ಮನೆಯ ಉದ್ಯೋಗಕ್ಕೆ ಬೇಕಾದ ಅರ್ಹತೆಗಳಿವು
ಗ್ಯಾಸ್ ಉರಿಯ ಮೇಲೆ ನೇರವಾಗಿ ಚಪಾತಿ ಬೇಯಿಸಿದರೆ ಕ್ಯಾನ್ಸರ್ ಬರುತ್ತದೆಯೇ? ಇಲ್ಲಿದೆ ಡಾಕ್ಟರ್ ಉತ್ತರ