Celebrity Food: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್ನೆಸ್‌ ಸೀಕ್ರೆಟ್ ಏನ್ ಗೊತ್ತಾ ?

By Suvarna News  |  First Published Feb 21, 2022, 6:30 PM IST

ಸೆಲೆಬ್ರಿಟಿ (Celebrity)ಗಳ ಬಗ್ಗೆ ಜನಸಾಮಾನ್ಯರಿಗೆ ಯಾವಾಗ್ಲೂ ಒಂದು ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ಅವ್ರ ಲೈಫ್‌ಸ್ಟೈಲ್ (Lifestyle),ಹ್ಯಾಬಿಟ್ಸ್ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಸೌತ್ ಇಂಡಿಯನ್, ಲೇಡಿ ಸೂಪರ್ ಸ್ಟಾರ್ ನಯನತಾರಾ ಕುರಿತಾದ ಟಾಪ್ ಸೀಕ್ರೇಟ್ ನಾವ್ ಹೇಳ್ತೀವಿ. 


ದಕ್ಷಿಣಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara). ಬ್ಯಾಕ್ ಟು ಬ್ಯಾಕ್ ಹಲವಾರು  ಚಿತ್ರಗಳನ್ನು ನೀಡಿದವರು. ಮಾತ್ರವಲ್ಲ ಹೀರೋ ಇಲ್ಲದ ಹೀರೋಯಿನ್ ಓರಿಯೆಂಟೆಡ್ ಆಗಿರುವ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಚಿತ್ರದಲ್ಲಿ ನಟಿಸಿರುವ ನಯನತಾರಾಗೆ ವರುಷ ಮೂವತ್ತು ಕಳೆದರೂ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗಿಲ್ಲ. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗುತ್ತಿವೆ. ಲೇಡಿ ಸೂಪರ್ ಸ್ಟಾರ್ ಫಿಟ್‍ನೆಸ್ (Fitness) ಹೇಗೆ ಮೈಂಟೇನ್ ಮಾಡ್ತಾರೆ ಎಂಬ ಬಗ್ಗೆ ಹಲವರಿಗೆ ಕುತೂಹಲವಿದೆ.

ಸೆಲೆಬ್ರಿಟಿಗಳ ಲೈಫ್‌ಸ್ಟೈಲ್ (Lifestyle) ಎಲ್ಲರಂಥಲ್ಲ. ಅದು ಬೇರೆಯದ್ದೇ ಲೋಕ. ಡಿಸೈನರ್ ಡ್ರೆಸ್, ಸೆಲೆಬ್ರಿಟಿ ಆರ್ಟಿಸ್ಟ್ ಮೇಕಪ್, ನ್ಯೂಟ್ರಿಷಿಯನ್ ಸಜೆಸ್ಟೆಡ್ ಫುಡ್ ಎಲ್ಲಾನೂ ಲಕ್ಸುರಿಯಸ್. ವಯಸ್ಸಾದರೂ ಯಂಗ್ ಆಗಿ ಕಾಣುವ ಸೆಲೆಬ್ರಿಟಿಗಳು ಅದಕ್ಕಾಗಿ ಯೋಗ, ಜಿಮ್ ಎಂದು ಹಲವರು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆಯೇ ಮುಖ್ಯವಾಗಿ ಉತ್ತಮ ಆಹಾರಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಿದ್ರೆ ಲೇಡಿ ಸೂಪರ್ ಸ್ಟಾರ್ ಫಿಟ್ನೆಸ್ ಸೀಕ್ರೆಟ್ ಏನು ?

Tap to resize

Latest Videos

undefined

Fitness Secret: ಸಮಂತಾ ಸ್ಲಿಮ್ ಆಗಿರೋ ಸೀಕ್ರೆಟ್ ಗೊತ್ತಾ ?

ಪ್ರಸಿದ್ಧ ಪೌಷ್ಟಿಕತಜ್ಞ ಮುನ್ಮುನ್ ಗನೇರಿವಾಲ್ ನಯನತಾರಾ ಫಿಟ್ನೆಸ್ ಸೀಕ್ರೆಟ್ ಬಗ್ಗೆ ಮಾಹಿತಿ ನೀಡುತ್ತಾರೆ. ಅನೇಕ ಸೆಲೆಬ್ರಿಟಿಗಳು ವಿಶೇಷವಾಗಿ ಫಿಟ್ನೆಸ್ ಮೈಂಟೇನ್ ಮಾಡಲು ಸ್ಪೆಷಲ್ ಡಯಟ್ (Diet) ಅನುಸರಿಸುತ್ತಾರೆ. ಅದು ನಿರ್ದಿಷ್ಟ ಪ್ರಮಾಣದಲ್ಲಿ ತೂಕವನ್ನು ಕಳೆದುಕೊಳ್ಳಲು ಅಥವಾ ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂಥಾ ಆಹಾರಗಳು ಎಲ್ಲಾ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ. ಕೆಲವೊಮ್ಮೆ, ಸೆಲೆಬ್ರಿಟಿಗಳು ತಮ್ಮ ಆಹಾರದ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಅನೇಕ ಬಾರಿ ಅವರ ಪೌಷ್ಟಿಕತಜ್ಞರು ಈ ರೀತಿ ಮಾಹಿತಿ ಹಂಚಿಕೊಳ್ಳುತ್ತಾರೆ.

ಸೆಲೆಬ್ರಿಟಿ ಪೌಷ್ಟಿಕತಜ್ಞ ಮುನ್ಮುನ್ ಗನೇರಿವಾಲ್ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಇಷ್ಟದ ಆಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ.  ಗನೇರಿವಾಲ್ ಅವರ ಮಾಹಿತಿಯ ಪ್ರಕಾರ, ತಮಿಳು ನಟಿ ನಯನತಾರಾ ತೆಂಗಿನಕಾಯಿ ಸ್ಮೂಥಿಯ ಪಾಕವಿಧಾನವನ್ನು ಇಷ್ಟಪಡುತ್ತಾರೆ. ಗನೇರಿವಾಲ್ ಮೊದಲ ಬಾರಿ ಈ ಪಾನೀಯವನ್ನು ಊಟದ ಮೆನುವಿನಲ್ಲಿ ಸೇರಿಸಿದಾಗ ನಯನತಾರಾ ತುಂಬಾ ಇಷ್ಟಪಟ್ಟರಂತೆ. ತೆಂಗಿನಕಾಯಿ ಸ್ಮೂಥಿ ನಯನತಾರಾ ಬೆಳಗ್ಗಿನ ಉಪಾಹಾರ, ಸಂಜೆಯ ಊಟದ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಗನೇರಿವಾಲ್ ತಿಳಿಸಿದ್ದಾರೆ.

Celebrity Food: ಬಾಲಿವುಡ್ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ ಏನು ತಿನ್ತಾರೆ ?

ಹಾಗಿದ್ರೆ ನಯನತಾರಾಗೆ ಇಷ್ಟವಾದ ತೆಂಗಿನಕಾಯಿ ಸ್ಮೂಥಿ (Coconut Smoothie)ಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾದ ಪದಾರ್ಥಗಳು
2 ಕಪ್-ತೆಂಗಿನ ನೀರು
1 ಕಪ್- ಎಳನೀರು ಗಂಜಿ
½ ಕಪ್- ತೆಂಗಿನ ಹಾಲು
ಸಕ್ಕರೆ ಸ್ಪಲ್ಪ
ದಾಲ್ಚಿನ್ನಿ ಪುಡಿ ಸ್ಪಲ್ಪ
ಏಲಕ್ಕಿ ಪುಡಿ ಸ್ಪಲ್ಪ

ಮಾಡುವ ವಿಧಾನ
ಬ್ಲೆಂಡರ್ ಜಾರ್‌ನಲ್ಲಿ ರುಚಿಗೆ ತಕ್ಕಂತೆ ತೆಂಗಿನ ನೀರು, ಎಳನೀರು ಗಂಜಿ ಮತ್ತು ತೆಂಗಿನ ಹಾಲು ಮತ್ತು ಸಕ್ಕರೆ ಸೇರಿಸಿ. ಯಾವುದೇ ಉಂಡೆಗಳು ಉಳಿಯದಂತೆ ಚೆನ್ನಾಗಿ, ನಯವಾಗುವ ವರೆಗೆ ಗ್ರೈಂಡ್ ಮಾಡಿ. ನಂತರ ಚಿಟಿಕೆ ದಾಲ್ಚಿನ್ನಿ ಮತ್ತು ಏಲಕ್ಕಿ ಪುಡಿ, ಐಸ್ ಕ್ಯೂಬ್‌ಗಳನ್ನು ಸೇರಿಸಿ, ಗ್ಲಾಸ್‌ಗೆ ಸುರಿಯಿರಿ. ಈಗ ತೆಂಗಿನ ಕಾಯಿಯ ಟೇಸ್ಟೀ ಸ್ಮೂಥಿ ಸವಿಯಲು ಸಿದ್ಧ

ಗನೇರಿವಾಲ್ ಪ್ರಕಾರ, ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಸ್ಮೂಥಿಗಳು ಅಥವಾ ಪಾನೀಯಗಳನ್ನು ಬೇಸಿಗೆಯ ತಿಂಗಳುಗಳಲ್ಲಿ ತಂಪಾಗಿರಿಸಲು ಮತ್ತು ಹೈಡ್ರೀಕರಿಸಲು ಉಪಹಾರವಾಗಿ ಸೇವಿಸಲಾಗುತ್ತದೆ. ಕೂಲ್‌ಡ್ರಿಂಕ್ಸ್, ಕೃತಕ ಪಾನೀಯಗಳ ಬದಲು ಇಂಥಹಾ ಸ್ಮೂಥಿ ಸೇವನೆ ಉತ್ತಮ ಎಂದು ಅವರು ಹೇಳುತ್ತಾರೆ. ಸ್ಮೂಥಿಯು ಟೇಸ್ಟಿ ಮಾತ್ರವಲ್ಲ, ಕೊಬ್ಬನ್ನು ಕರಗಿಸಲು, ಚಯಾಪಚಯ ಪ್ರಕ್ರಿಯೆ ವೇಗಗೊಳಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ ಫೈಬರ್‌ನಲ್ಲಿ ಸಮೃದ್ಧವಾಗಿರುವ ಕೊಕೊನೇಟ್ ಸ್ಮೂಥಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತದೆ.

click me!