
ಸಸ್ಯಹಾರಿಗಳಂತೆ ಮಾಂಸಹಾರಿಗಳಿಗೂ ಆಹಾರದಲ್ಲಿ ಸಾಕಷ್ಟು ವೆರೈಟಿ ಇದೆ. ಆದ್ರೆ ಜನರು ಚಿಕನ್, ಮಟನ್ ಹೆಚ್ಚು ತಿನ್ನುತ್ತಾರೆ ಎನ್ನುವ ಭಾವನೆ ಇದೆ. ಇದ್ರ ಜೊತೆ ಮೊಟ್ಟೆ ತಿನ್ನುವವರ ಸಂಖ್ಯೆ ಕೂಡ ಸಾಕಷ್ಟಿದೆ. ಆದ್ರೆ ಈಗ ಚಿಕನ್, ಮಟನ್ ಗಿಂತ ಇನ್ನೊಂದು ಮಾಂಸಹಾರವನ್ನು ಜನರು ಅತಿ ಹೆಚ್ಚು ಸೇವನೆ ಮಾಡ್ತಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.
ಎನ್ ಎಫ್ ಹೆಚ್ ಎಸ್ (NFHS) ಸಮೀಕ್ಷೆಯಲ್ಲಿ ಆಸಕ್ತಿಕರ ವಿಷ್ಯವೊಂದು ಹೊರಬಿದ್ದಿದೆ. ಭಾರತೀಯ ಜನರು ಈಗ ಚಿಕನ್, ಮಟನ್ ಮತ್ತು ಮೊಟ್ಟೆಗಳಿಗಿಂತ ಹೆಚ್ಚಾಗಿ ಮೀನು (fish)ಗಳನ್ನು ತಿನ್ನಲು ಇಷ್ಟಪಡುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಕರಾವಳಿ ಪ್ರದೇಶದ ಜನರು ಹೆಚ್ಚು ಮೀನು ತಿನ್ನುತ್ತಾರೆ ಅನ್ನೋದು ಕಾಮನ್ ಆದ್ರೂ ಕರಾವಳಿಗಿಂತ ಬೇರೆ ಪ್ರದೇಶದಲ್ಲೂ ಮೀನು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಸಮೀಕ್ಷೆ (survey) ವರದಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಒಂದರಲ್ಲೇ ಮೀನು ತಿನ್ನುವವರ ಸಂಖ್ಯೆಯಲ್ಲಿ ಶೇಕಡಾ 20.09ರಷ್ಟು ಹೆಚ್ಚಳ ಕಂಡು ಬಂದಿದೆ. ಇದು ಅಚ್ಚರಿ ಹುಟ್ಟಿಸುವ ವಿಷ್ಯ.
ಸಸ್ಯಹಾರಿಗಳಿಗಾಗಿ 'ಪ್ಯೂರ್ ವೆಜ್ ಮೋಡ್, ಫ್ಯೂರ್ ವೆಜ್ ಫ್ಲೀಟ್' ಪರಿಚಯಿಸಿದ ಜೊಮೋಟೋ!
ವರ್ಲ್ಡ್ ಫಿಶ್ ಇಂಡಿಯಾ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಮತ್ತು ಇತರ ಸರ್ಕಾರಿ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಸಂಶೋಧನೆಯನ್ನು ಮಾಡಲಾಗಿದೆ. 2005-06 ಮತ್ತು 2019-21 ರ ನಡುವೆ ಈ ಸಮೀಕ್ಷೆ ನಡೆದಿದೆ. 15 ವರ್ಷಗಳ ಡೇಟಾ ಆಧಾರದ ಮೇಲೆ ಈ ಸಮೀಕ್ಷೆ ವರದಿಯನ್ನು ನೀಡಲಾಗಿದೆ.
ನೀವು ಡೇಟಾವನ್ನು ಗಮನಿಸಿದ್ರೆ 2005-06 ಮತ್ತು 2019-21 ರ ನಡುವೆ ಮೀನು ತಿನ್ನುವವರ ಸಂಖ್ಯೆ ಶೇಕಡಾ 66 ರಿಂದ ಶೇಕಡಾ 72.1 ರಷ್ಟು ಹೆಚ್ಚಾಗಿದೆ ಎಂಬುದನ್ನು ನೀವು ತಿಳಿಯಬಹುದು. ಅದೇ ರೀತಿ 2005 ಮತ್ತು 2020 ರ ನಡುವೆ ತಲಾವಾರು ವಾರ್ಷಿಕ ಮೀನು ಸೇವನೆಯು 4.9 ಕೆಜಿಯಿಂದ 8.9 ಕೆಜಿಗೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ದೇಶದಲ್ಲಿ ಅತಿ ಹೆಚ್ಚು ಮೀನು ತಿನ್ನುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ನೀವು ಗಮನ ಹರಿಸಿದ್ರೆ ಲಕ್ಷದ್ವೀಪ ಮೊದಲ ಸ್ಥಾನದಲ್ಲಿದೆ. ಇದಾದ್ಮೇಲೆ ಅತಿ ಹೆಚ್ಚು ಮೀನು ತಿನ್ನುವ ಪಟ್ಟಿಯಲ್ಲಿ ಗೋವಾ ಎರಡನೇ ಸ್ಥಾನದಲ್ಲಿದೆ. ನಂತ್ರ ಅಂಡಮಾನ್-ನಿಕೋಬಾರ್ ದ್ವೀಪ ಬಂದ್ರೆ ತ್ರಿಪುರ ಮತ್ತು ಛತ್ತೀಸ್‌ಗಢ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ನೀವು ಬಾಯಿ ಚಪ್ಪರಿಸಿ ತಿನ್ನೋ ಈ ಆಹಾರ ಕೊಕೇನ್‌ಗಿಂತ ಡೇಂಜರ್!
ಮೀನು ಸೇವನೆಯಿಂದಾಗುವ ಪ್ರಯೋಜನ : ಕೊಬ್ಬಿನ ಮೀನುಗಳಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಮತ್ತು ವಿಟಮಿನ್ ಬಿ 2 ನಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಸಮೃದ್ಧವಾಗಿದೆ. ಇದು ಕಬ್ಬಿಣ, ಸತು, ಅಯೋಡಿನ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳ ಉತ್ತಮ ಮೂಲವಾಗಿದೆ. ಆರೋಗ್ಯಕರ ಆಹಾರದ ಭಾಗವಾಗಿ ಮೀನುಗಳನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಸೇವಿಸಬೇಕು. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೀನು ತಿನ್ನುವುದ್ರಿಂದ ಅಗತ್ಯ ಪೋಷಕಾಂಶಗಳು ಹೃದಯವನ್ನು ಆರೋಗ್ಯವಾಗಿರಿಸುತ್ತದೆ (Heart Health). ಒಮೆಗಾ -3 (Omega 3) ಕೊಬ್ಬಿನಾಮ್ಲಗಳು ರಕ್ತದೊತ್ತಡವನ್ನು (Blood Pressure) ಕಡಿಮೆ ಮಾಡುವ ಮೂಲಕ ಹಠಾತ್ ಮರಣವನ್ನು ತಡೆಯುತ್ತದೆ. ಇದು ಹೃದಯಾಘಾತ, ಅಸಹಜ ಹೃದಯ ಬಡಿತ ಮತ್ತು ಪಾರ್ಶ್ವವಾಯು (Paralysis) ಅಪಾಯವನ್ನು ಕಡಿಮೆ ಮಾಡುತ್ತದೆ. ಮೆದುಳಿನ ಆರೋಗ್ಯಕ್ಕೆ ಇದು ಒಳ್ಳೆಯದು. ಖಿನ್ನತೆ (Depression), ಆಲ್ಝೈಮರ್ನ ಕಾಯಿಲೆ, ಬುದ್ಧಿಮಾಂದ್ಯತೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಮೀನು ಸಂಧಿವಾತದ ಅಪಾಯ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.