ಸಸ್ಯಹಾರಿಗಳಿಗಾಗಿ 'ಪ್ಯೂರ್‌ ವೆಜ್‌ ಮೋಡ್‌, ಫ್ಯೂರ್‌ ವೆಜ್‌ ಫ್ಲೀಟ್‌' ಪರಿಚಯಿಸಿದ ಜೊಮೋಟೋ!

By Santosh Naik  |  First Published Mar 19, 2024, 6:48 PM IST

ಕಂಪನಿಯ ಹೊಸ ಉಪಕ್ರಮಗಳು, ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಗಳನ್ನು ಪೂರೈಸುವುದಿಲ್ಲ ಅಥವಾ ದೂರವಿಡುವುದಿಲ್ಲ ಎಂದು zomato ಸಿಇಒ ಹೇಳಿದ್ದಾರೆ.



ನವದೆಹಲಿ (ಮಾ.19): ದೇಶಾದ್ಯಂತ ಸಸ್ಯಹಾರಿಗಳ ಕಳವಳವನ್ನು ಆಲಿಸಿದ ಫುಡ್ ಡೆಲಿವರಿ ದೈತ್ಯ ಜೊಮೋಟೋ, ಮಂಗಳವಾರ ತನ್ನ ಅಪ್ಲಿಕೇಶನ್‌ನಲ್ಲಿ ಪ್ಯೂರ್‌ ವೆಜ್‌ ಮೋಡ್‌ ಜೊತೆಗೆ ಫ್ಯೂರ್‌ ವೆಜ್‌ ಫ್ಲೀಟ್‌ಅನ್ನು ಆರಂಭ ಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಕಂಪನಿಯ ಸಿಇಒ ದೀಪೆಂದರ್‌ ಗೋಯೆಲ್‌ ಈ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡು ವಿವರ ನೀಡಿದ್ದಾರೆ. ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದ ಸಸ್ಯಹಾರಿಗಳು ಭಾರತದಲ್ಲಿದ್ದಾರೆ. ಸಾಕಷ್ಟು ಬಾರಿ ನಮ್ಮ ಅಪ್ಲಿಕೇಶನ್‌ನಲ್ಲಿ ಪಡೆದ ಪ್ರತಿಕ್ರಿಯೆಗಳನ್ನು ಸಸ್ಯಹಾರಿಗಳು, ತಾವು ಬುಕ್‌ ಮಾಡಿದ ಆಹಾರವನ್ನು ಹೇಗೆ ಬೇಯುಸತ್ತಿದ್ದಾರೆ. ತಮ್ಮ ಆಹಾರವನ್ನು ಹೇಗೆ ಹ್ಯಾಂಡಲ್‌ ಮಾಡುತ್ತಾರೆ ಎನ್ನುವ ಬಗ್ಗೆ ನಿರ್ದಿಷ್ಟವಾಗಿ ತಿಳಿಸುತ್ತಿದ್ದರು ಎಂದು ಗೋಯೆಲ್‌ ಹೇಳಿದ್ದಾರೆ. ಸಸ್ಯಹಾರಿ ಜನರ ಆಹಾರದ ಆದ್ಯತೆಗಳನ್ನು ಪರಿಹರಿಸುವ ಅಲುವಾಗಿ ಶೇ. 100ರಷ್ಟು ಸಸ್ಯಹಾರಿ ಆಹಾರದ ಆದ್ಯತೆಯ ಹೊಂದಿರುವ ಗ್ರಾಹಕರ ಸಲುವಾಗಿ ಜೊಮೋಟೋ ವೇದಿಕೆಯಲ್ಲಿ ಪ್ಯೂರ್ ವೆಜ್ ಮೋಡ್' ಮತ್ತು 'ಪ್ಯೂರ್ ವೆಜ್ ಫ್ಲೀಟ್' ಅನ್ನು ಪರಿಚಯಿಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

'ಪ್ಯೂರ್ ವೆಜ್ ಮೋಡ್' ಮತ್ತು 'ಪ್ಯೂರ್ ವೆಜ್ ಫ್ಲೀಟ್' ಎಂದರೇನು?
ಈ ಮೋಡ್ ಶುದ್ಧ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡುವ ರೆಸ್ಟೋರೆಂಟ್‌ಗಳ ಸಮೂಹವನ್ನು ಅನ್ನು ಒಳಗೊಂಡಿದೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ. ನಮ್ಮ ಅಪ್ಲಿಕೇಶನ್‌ನ ಸಸ್ಯಹಾರಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪರಿಚಯಿಸಲಾಗಿದೆ. ಈ ಮೋಡ್‌ನಲ್ಲಿ ನೀವು ಆಹಾರ ಬುಕ್‌ ಮಾಡಿದರೆ, ಯಾವುದೇ ಮಾಂಸಹಾರಿ ಅಹಾರ ಪದಾರ್ಥಗಳನ್ನು ಒದಗಿಸುವ ರೆಸ್ಟೋರೆಂಟ್‌ಗಳು ಕಾಣಿಸೋದೇ ಇಲ್ಲ ಎಂದಿದ್ದಾರೆ. ಇದಲ್ಲದೆ, ಕಂಪನಿಯು  'ಪ್ಯೂರ್ ವೆಜ್ ಫ್ಲೀಟ್' ಅನ್ನು ಸಹ ಪರಿಚಯಿಸಿದೆ, ಅದು ಕೇವಲ "ಶುದ್ಧ ಸಸ್ಯಹಾರ' ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಮಾತ್ರವೇ ಜನರಿಗೆ ತಲುಪಿಸುತ್ತದೆ.

Tap to resize

Latest Videos

undefined

ಪ್ಯೂರ್‌ ವೆಜ್‌ ಫ್ಲೀಟ್‌ಅನ್ನು ಆಯ್ಕೆ ಮಾಡಿಕೊಂಡು ಬುಕ್‌ ಮಾಡಿದರೆ, ಶುದ್ಧ ಸಸ್ಯಹಾರ ರೆಸ್ಟೋರೆಂಟ್‌ಗಳಿಂದ ಮಾತ್ರವೇ ಆಹಾರ ನಿಮ್ಮ ಕೈ ಸೇರಲಿದೆ. ಇದರ ಅರ್ಥ ಏನೆಂದರೆ, ಸಸ್ಯಹಾರಿ-ಮಾಂಸಾಹಾರಿ ರೆಸ್ಟೋರೆಂಟ್‌, ಸಸ್ಯಹಾರಿ ಊಟವನ್ನೂ ನೀಡುವ ಮಾಂಸಹಾರಿ ರೆಸ್ಟೋರೆಂಟ್‌ ಗಳು ಫ್ಯೂರ್‌ ವೆಜ್ ಫ್ಲೀಟ್‌ಗೆ ಮೀಸಲಾದ ಹಸಿರು ಡೆಲಿವರಿ ಬಾಕ್ಸ್‌ನೊಳಗೆ ಎಂದಿಗೂ ಹೋಗುವುದಿಲ್ಲ ಎಂದು ಗೋಯಲ್ ಬರೆದಿದ್ದಾರೆ. ಅದಲ್ಲದೆ, ಕಂಪನಿಯ ಈ ಎಲ್ಲಾ-ಹೊಸ ಕ್ರಮವು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಗಳನ್ನು ಪೂರೈಸುವುದಿಲ್ಲ ಅಥವಾ ದೂರವಿಡುವುದಿಲ್ಲ ಎಂದ್ದಾರೆ. ಕಂಪನಿಯು ಈಗ  ವಿಶೇಷ ಗ್ರಾಹಕರ ಅಗತ್ಯಗಳಿಗಾಗಿ ಹೆಚ್ಚು ವಿಶೇಷವಾದ ಫ್ಲೀಟ್‌ಗಳನ್ನು ಶೀಘ್ರದಲ್ಲೇ ಸೇರಿಸಲು ಯೋಜಿಸುತ್ತಿದೆ ಎಂದು ಗೋಯಲ್ ಹೇಳಿದರು.

ಉದಾಹರಣೆಗೆ ಸ್ಪೆಷಲ್‌ ಕೇಕ್‌ ಡೆಲಿವರಿ ಕೂಡ ಶೀಘ್ರದಲ್ಲೇ ಜಾರಿಗೆ ಬರಲಿದೆ. ಹೈಡ್ರಾಲಿಕ್ ಬ್ಯಾಲೆನ್ಸರ್‌ಗಳನ್ನು ಬಳಕೆ ಮಾಡಿ ಇದನ್ನು ಡೆಲಿವರಿ ಮಾಡಲಿದೆ. ಇದು ಡೆಲಿವರಿ ಸಮಯದಲ್ಲಿ ನಿಮ್ಮ ಕೇಕ್ ಬಿದ್ದು ಹಾಳಾಗುವುದನ್ನು ತಡೆಯುತ್ತದೆ" ಎಂದು ಅವರು ಹೇಳಿದ್ದಾರೆ. ಮುಂದಿನ ಕೆಲವೇ ವಾರಗಳಲ್ಲಿ ಇದು ಜಾರಿ ಬರಲಿದೆ. ನಮ್ಮ ಗ್ರಾಹಕರ ಆದ್ಯತೆಗಳನ್ನು ನಾವು ಕೇಳುತ್ತೇವೆ. ಮತ್ತು ನಮ್ಮ ಸಮುದಾಯಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ನಾವು ಬದ್ಧರಾಗಿರುತ್ತೇವೆ ಎಂದು ಗೋಯಲ್ ಎಕ್ಸ್‌ನಲ್ಲಿ ಬರೆದಿದ್ದಾರೆ. 

ದಾಖಲೆ ಬರೆದ ಜೊಮೆಟೋ ಸಂಸ್ಥಾಪಕ, ಆಸ್ಟನ್ ಮಾರ್ಟಿನ್ DB12 ಕಾರು ಖರೀದಿಸಿದ ಮೊದಲ ಭಾರತೀಯ!

ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನದಂದು ತನ್ನ ಮಹಿಳಾ ಉದ್ಯೋಗಿಗಳಿಗೆ ಸಾಂಪ್ರದಾಯಿಕ ಟಿ-ಶರ್ಟ್‌ಗಳ ಹೊರತಾಗಿ ಆಹಾರ ವಿತರಣಾ ದೈತ್ಯ ಕುರ್ತಾಗಳನ್ನು ಹೊಸ ಏಕರೂಪದ ಆಯ್ಕೆಯಾಗಿ ಪರಿಚಯಿಸಿದ ವಾರಗಳ ನಂತರ ಇವುಗಳನ್ನು ಪರಿಚಯಿಸಿದೆ.

ಬಿಲ್ ಬೇಡ, ಚಿಕನ್ ಇರೋದನ್ನ ಹೇಳೋದೂ ಬೇಡ, ಮನೆಯಲ್ಲಿ ನಾನ್ ವೆಜ್ ತಿನ್ನೋ ಹಾಗಿಲ್ಲ; ಗ್ರಾಹಕರೊಬ್ಬರ ಅಳಲು ವೈರಲ್‌

India has the largest percentage of vegetarians in the world, and one of the most important feedback we’ve gotten from them is that they are very particular about how their food is cooked, and how their food is handled.

— Deepinder Goyal (@deepigoyal)
click me!