ಮಾವಿನ ಹಣ್ಣು (Mango) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದರೆ ಮಾವಿನ ಹಣ್ಣಿನೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಸೇವಿಸಿದರೆ ಆರೋಗ್ಯಕ್ಕೆ (Health) ಅಪಾಯ (Danger)ವಿದೆ ಎಂಬುದು ನಿಮಗೆ ತಿಳಿದಿದೆಯೇ ? ಅದು ಯಾವುದೆಲ್ಲಾ ?
ಮಾವಿನ ಹಣ್ಣಿನ (Mango) ಸೀಸನ್ ಶುರುವಾಯ್ತು. ಮಾರುಕಟ್ಟೆಯಲ್ಲಿ ಅಲ್ಫೋನ್ಸಾ, ನೀಲಂ, ತೋತಾಪುರಿ ಸೇರಿದಂತೆ ತರಹೇವಾರಿ ಮಾವುಗಳು ಲಭ್ಯವಿವೆ. ಸಿಹಿ ಸಿಹಿಯಾದ, ರುಚಿಕರವಾದ ಮಾವನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಮ್ಯಾಂಗೋ ಜ್ಯೂಸ್, ಮಿಲ್ಕ್ ಶೇಕ್, ಮ್ಯಾಂಗೋ ಹಲ್ವಾ, ಕಸ್ಟರ್ಡ್, ಮ್ಯಾಂಗೋ ಕೇಕ್ ಮೊದಲಾದವುಗಳನ್ನು ಮಾಡಿ ಸವಿಯುತ್ತಾರೆ. ಇನ್ನು ಕೆಲವೊಬ್ಬರು ಮಾವಿನಹಣ್ಣಿನ ಜೊತೆಗೆ ಬೇರೆ ಪದಾರ್ಥಗಳನ್ನು ಸೇರಿಸಿ ಹಲವು ಪ್ರಯೋಗಗಳನ್ನು ಮಾಡಿ ಹೊಸ ಖಾದ್ಯ ಮಾಡಲು ಯತ್ನಿಸುತ್ತಾರೆ. ನೀವು ಸಹ ಹೀಗೇ ಮಾಡುವವರು ಆಗಿದ್ರೆ ಈ ವಿಚಾರ ತಿಳ್ಕೊಳ್ಳಿ. ಮಾವಿನ ಹಣ್ಣಿನೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಸೇವಿಸಿದರೆ ಅದು ವಿಷಕಾರಿಯಾಗಿ (Poisonous) ಪರಿಣಮಿಸುತ್ತದೆ. ಇದರಿಂದ ಆರೋಗ್ಯಕ್ಕೇ (Health) ಅಪಾಯವಿದೆ.
ಮಾವಿನ ಹಣ್ಣಿನೊಂದಿಗೆ ಬೆರೆಸಿದ ಕೆಲವು ಪದಾರ್ಥಗಳನ್ನು ತಿನ್ನುವುದರಿಂದ ಅಲರ್ಜಿ, ಹೊಟ್ಟೆ ನೋವು, ಚರ್ಮ ರೋಗಗಳು ಅಥವಾ ಉಸಿರಾಟದ ತೊಂದರೆಗಳು ಉಂಟಾಗಬಹುದು. ಹಾಗಾದರೆ ಮಾವಿನ ಹಣ್ಣಿನೊಂದಿಗೆ ಯಾವ ಪದಾರ್ಥಗಳನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿಯೋಣ.
ಮಾವಿನ ಹಣ್ಣು ಮಾತ್ರವಲ್ಲ, ಆರೋಗ್ಯ ವೃದ್ಧಿಗಾಗಿ ಮಾವಿನ ಕಾಯಿಯನ್ನೂ ತಿನ್ನಿ
ಮಾವಿನ ಹಣ್ಣಿನೊಂದಿಗೆ ಈ ಆಹಾರಗಳನ್ನು ಸೇವಿಸಲೇಬೇಡಿ:
ಮಾವು ಮತ್ತು ತಂಪು ಪಾನೀಯ: ಬೇಸಿಗೆಯಲ್ಲಿ ತಂಪು ಪಾನೀಯವನ್ನು ಆಗಾಗ ಕುಡಿಯಬೇಕು ಎಂದು ಅನಿಸುತ್ತದೆ. ಹಾಗೆಂದು ಮಾವಿನ ಹಣ್ಣಿನೊಂದಿಗೆ ತಂಪು ಪಾನೀಯ (Cold Drinks)ವನ್ನು ತಿನ್ನಲು ಹೋಗಬೇಡಿ. ಇದು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ತಂಪು ಪಾನೀಯಗಳು ಮತ್ತು ಮಾವಿನಹಣ್ಣುಗಳು ಕೆಟ್ಟ ಸಂಯೋಜನೆಯಾಗಿದೆ. ಮಾವಿನ ಹಣ್ಣನ್ನು ತಿನ್ನುವ ಮೊದಲು ಅಥವಾ ನಂತರವೂ ತಂಪು ಪಾನೀಯಗಳನ್ನು ಸೇವಿಸಬಾರದು, ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಇದ್ದಕ್ಕಿದ್ದಂತೆ ಹೆಚ್ಚಿಸಬಹುದು. ಮಾವಿನಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ತಂಪು ಪಾನೀಯಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ವ್ಯಕ್ತಿ ಕೋಮಾಗೆ ಹೋಗುವ ಸಾಧ್ಯತೆಯೂ ಇದೆ.
ಮಾವು ಮತ್ತು ಮೊಸರು: ಮೊಸರು (Curd) ಮತ್ತು ಮಾವು ಎರಡೂ ಬೇಸಿಗೆಯಲ್ಲಿ ನೆಚ್ಚಿನ ಆಹಾರಗಳಾಗಿವೆ. ನೀವು ಮ್ಯಾಂಗೋ ಲಸ್ಸಿ ಕುಡಿಯಲು ಇಷ್ಟಪಡುತ್ತಿದ್ದರೆ, ಈ ಅಭ್ಯಾಸವನ್ನು ಬದಲಿಸಿ. ಏಕೆಂದರೆ ಮೊಸರು ಮಾವಿನ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮೊಸರು ಮತ್ತು ಮಾವು ದೇಹದಲ್ಲಿ ಶಾಖ ಮತ್ತು ಶೀತವನ್ನು ಉಂಟುಮಾಡುತ್ತದೆ, ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಾವಿನ ಬೀಜದ ರುಚಿ ರುಚಿಯಾದ ರೆಸಿಪಿ: ಟ್ರೈ ಮಾಡಿ
ಮಾವು ಮತ್ತು ಹಾಗಲಕಾಯಿ: ಮಾವು ತಿಂದ ನಂತರ ಹಾಗಲಕಾಯಿ (Bitted Gourd)ಯನ್ನು ತಿನ್ನುವುದರಿಂದ ವಾಕರಿಕೆ, ವಾಂತಿ ಮತ್ತು ಉಸಿರಾಟದಂತಹ ಸಮಸ್ಯೆಗಳು ಉಂಟಾಗಬಹುದು.
ಮಾವಿನಕಾಯಿಯೊಂದಿಗೆ ಮಸಾಲೆಯುಕ್ತ ಆಹಾರ: ನೀವು ಮಸಾಲೆಯುಕ್ತ (Spicy) ಆಹಾರದೊಂದಿಗೆ ಸಿಹಿ-ಸಿಹಿ ಮಾವು ಅಥವಾ ಮಾವನ್ನು ಬಯಸಿದರೆ, ನೀವು ಈ ಆಹಾರದ ಅಭ್ಯಾಸವನ್ನು ಬದಲಾಯಿಸಬೇಕು. ಏಕೆಂದರೆ ಈ ಸಂಯೋಜನೆಯು ದೇಹದಲ್ಲಿ ಹುಣ್ಣುಗಳು, ಮೊಡವೆಗಳು ಮತ್ತು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು. ಮಾವಿನಹಣ್ಣನ್ನು ತಿಂದ ನಂತರ ಮಸಾಲೆಯುಕ್ತ ಅಥವಾ ಶೀತಲವಾಗಿರುವ ಆಹಾರವನ್ನು ಸೇವಿಸುವುದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ನಿಮ್ಮ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಮಾವಿನಹಣ್ಣಿನೊಂದಿಗೆ ನೀರು ಕುಡಿಯದಿರಿ: ಮಾವಿನ ಹಣ್ಣನ್ನು ತಿಂದ ನಂತರ ನೀರು (Water) ಕುಡಿಯುವುದನ್ನು ತಪ್ಪಿಸಬೇಕು. ಮಾವಿನ ಹಣ್ಣನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೊಟ್ಟೆನೋವು, ಆಮ್ಲೀಯತೆ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಮಾವಿನ ಹಣ್ಣನ್ನು ತಿಂದ ಅರ್ಧ ಗಂಟೆಯ ನಂತರ ನೀರು ಕುಡಿಯಬಹುದು.