ತೂಕ 9Weight)ಇಳಿಸಿಕೊಳ್ಳೋಕೆ ಇಸಾಬ್‌ಗೋಲ್ (Isabgol) ಸೇವನೆ ಅತ್ಯುತ್ತಮ. ಆದ್ರೆ ಇದನ್ನು ಹೇಗೆ ಸೇವಿಸಿದರೆ ಬೇಗ ತೂಕ ಇಳಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ. ಹಾಗಿದ್ರೆ ಮೊದಲಿಗೆ ಇಸಾಬ್‌ಗೋಲ್‌ನ್ನು ಯಾವ ವಸ್ತುಗಳ ಜೊತೆ ತೆಗೆದುಕೊಳ್ಳಬೇಕು ಮತ್ತು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.
ತೂಕ (Weight)ಹೆಚ್ಚಳ ಎಂಬುದು ಇವತ್ತಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕವನ್ನು ಇಳಿಸ್ಕೊಂಡು ಸ್ಲಿಮ್ (Slim) ಆಗಿರ್ಬೇಕು ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಇದಕ್ಕಾಗಿ ವ್ಯಾಯಾಮ, ಯೋಗ, ಧ್ಯಾನ, ಡಯೆಟ್ (Diet) ಮೊದಲಾದುದನ್ನು ಮಾಡ್ತಾರೆ. ಆದ್ರೂನು ಸ್ಪಲ್ಪನೂ ಸಣ್ಣಗಾಗಿಲ್ಲ ಅನ್ನೋರು ಇಸಾಬ್‌ಕೋಲ್ ಟ್ರೈ ಮಾಡ್ಬೋದು.
ನೀವು ಅಧಿಕ ತೂಕದ ಸಮಸ್ಯೆ ಎದುರಿಸುತ್ತಿದ್ದರೆ ಇಸಾಬ್ ಕೋಲ್ (Isabgol0 ಸಿಪ್ಪೆಯು ತೂಕ ಕಳೆದುಕೊಳ್ಳಲು ತುಂಬಾ ಉಪಯುಕ್ತವಾಗಿದೆ. ನಾರಿನಂಶ ಮತ್ತು ಒರಟುಗಳಿಂದ ತುಂಬಿರುವ ಈ ಸಿಪ್ಪೆಯು ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ. ಮಾತ್ರವಲ್ಲ, ದೀರ್ಘ ಸಮಯದ ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಮತ್ತು ಹಸಿವನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿಯಾಗಿದೆ. ಹೆಚ್ಚಿನ ಒರಟುತನದಿಂದಾಗಿ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ.
undefined
ಮೊಸರಿನಲ್ಲಿ ಇಸಬ್‌ಗೋಲ್ ಬೆರೆಸಿ ತಿನ್ನೋದರಿಂದೇನು ಪ್ರಯೋಜನ?
ಇಸಾಬ್ ಕೋಲ್ ಎಂದರೇನು ?
ಸಾಮಾನ್ಯವಾಗಿ ಮಲಬದ್ಧತೆಗೆ ನೀಡುವ ಔಷಧವನ್ನು ಡಯಟ್ ಆಹಾರದ ಪಟ್ಟಿಗೆ ಸೇರಿಸಿಕೊಳ್ಳಬಹುದೇ ಎನ್ನುವ ಗೊಂದಲ ಬೇಡ. ಅಸಲಿಗೆ, ಇಸಬ್ ಗೋಲ್ ಅತ್ಯುತ್ತಮ ನಾರುಭರಿತ ಆಹಾರ. ಅದು ಒಂದು ಜಾತಿಯ ಹೊಟ್ಟು. ಇದನ್ನು ಪ್ಲಾಂಟಾಗೊ ಒವಾಟಾ ಎಂದೂ, ಮರುಭೂಮಿಯ ಗೋಧಿ ಎಂದೂ ಕರೆಯಲಾಗುತ್ತದೆ. ಮೆಡಿಟರೇನಿಯನ್ ಪ್ರದೇಶ, ಏಷ್ಯಾದ ಕೇಂದ್ರ, ಪೂರ್ವ, ದಕ್ಷಿಣ ಭಾಗ ಹಾಗೂ ಉತ್ತರ ಅಮೆರಿಕಾಗಳ ಸ್ಥಳೀಯ ಬೆಳೆಯಾಗಿದೆ. ಇದೊಂದು ಔಷಧೀಯ (Medicinal) ಸಸ್ಯವೂ ಹೌದು.
ಇಸಬ್ ಗೋಲ್ ರಚನೆಯೇ ಬಹಳ ಶ್ರೇಷ್ಠವಾಗಿದೆ. ಇದರಲ್ಲಿ ಕರಗಬಹುದಾದ ಹಾಗೂ ಕರಗದೆ ಇರುವ ಎರಡೂ ರೀತಿಯ ನಾರಿನಂಶವಿದೆ. ಗೋಧಿಯ ಬೀಜಗಳ ಈ ಹೊಟ್ಟು (husks)ದೇಹದ ಪ್ರಮುಖ ಅಂಗಗಳಾದ ಪ್ಯಾಂಕ್ರಿಯಾಸ್, ಹೃದಯ (Heart) ಹಾಗೂ ಕರುಳಿನ ಆರೋಗ್ಯಕ್ಕೆ (Health of Gu) ಅತ್ಯಂತ ಪೂರಕವಾಗಿದೆ. ಸಾಮಾನ್ಯವಾಗಿ ಹೊಟ್ಟಿನ ರೂಪದಲ್ಲಿಯೇ ಇದನ್ನು ಸೇವನೆ ಮಾಡಬಹುದು. ಇನ್ನು, ಪುಡಿ ಹಾಗೂ ಅದರ ಕ್ಯಾಪ್ಸೂಲ್ (Capsule) ರೀತಿಯಲ್ಲೂ ಲಭಿಸುತ್ತದೆ. ವಿಶ್ವಾದ್ಯಂತ ಪ್ರಮುಖ ಡಯಟ್ ಆಹಾರವನ್ನಾಗಿ ಇಸಬ್ ಗೋಲ್ ಅನ್ನು ಪರಿಗಣಿಸಲಾಗಿದೆ. ಹಾಗಾದರೆ ತೂಕ ನಷ್ಟಕ್ಕೆ ಇಸಾಬ್ಗೋಲ್ ಅನ್ನು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಮತ್ತು ಹೇಗೆ ತೆಗೆದುಕೊಳ್ಳಬೇಕು ಎಂದು ತಿಳಿಯೋಣ.
ಹೆರಿಗೆಯ ಬಳಿಕ ದೇಹದ ತೂಕ ಸುಲಭವಾಗಿ ಇಳಿಸಿಕೊಳ್ಳುವುದು ಹೇಗೆ ?
ಜ್ಯೂಸ್-ಸ್ಮೂಥಿ ಜೊತೆ ಇಸಾಬ್‌ಗೋಲ್
ಇಸಾಬ್‌ಗೋಲ್‌ನ್ನು ಜ್ಯೂಸ್-ಸ್ಮೂಥಿ ಅಥವಾ ತರಕಾರಿ ತಿರುಳಿನಲ್ಲಿ ಬೆರೆಸಿ ತೆಗೆದುಕೊಳ್ಳಬೇಕು. ಇದು ಹಸಿವನ್ನು ತಣಿಸುತ್ತದೆ. ರಕ್ತದಲ್ಲಿನ ಸಕ್ಕರೆಯಿಂದ ಹಿಡಿದು ಕೊಲೆಸ್ಟ್ರಾಲ್ ಮತ್ತು ತೂಕದವರೆಗೆ ಎಲ್ಲವನ್ನೂ ಕಡಿಮೆ ಮಾಡುತ್ತದೆ. ಇದನ್ನು ಮಾಡುವುದರಿಂದ, ಇದು ಕೊಬ್ಬಿನ ಅಂಗಾಂಶಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ತ್ವರಿತ ಕೊಬ್ಬು ನಷ್ಟವಾಗುತ್ತದೆ.
ಇಸಾಬ್‌ಗೋಲ್ ಮಜ್ಜಿಗೆ
ಇಸಾಬ್‌ಗೋಲ್ ಆರೋಗ್ಯಕರ ಮತ್ತು ರುಚಿಕರವಾಗಿರಲು, ಅದನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಿರಿ. ಇದರೊಂದಿಗೆ ನಿಮ್ಮ ಕರುಳು ಕೂಡ ಸ್ವಚ್ಛವಾಗಿರುತ್ತದೆ ಮತ್ತು ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಸೋಂಕು ಇತ್ಯಾದಿಗಳು ತಗುಲುವ ಭಯವಿರುವುದಿಲ್ಲ. ಹೀಗಾಗಿ ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇಸಾಬ್‌ಗೋಲ್ ತ್ರಿಫಲಾ ಪಾನೀಯ
ಇಸಾಬ್‌ಗೋಲ್‌ನ್ನು ತ್ರಿಫಲದೊಂದಿಗೆ ಕುಡಿಯುವುದರಿಂದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಬಹುದಾಗಿದೆ. ಇದು ಡಿಟಾಕ್ಸ್ ಪಾನೀಯದಂತೆ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಕರುಳಿನ ಚಲನೆಯನ್ನು ವೇಗಗೊಳಿಸುತ್ತದೆ ಮತ್ತು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಇಸಾಬ್‌ಗೋಲ್ ಪಾನೀಯ ತೆಗೆದುಕೊಳ್ಳಿ
ನೀವು ತೂಕ ಇಳಿಸಿಕೊಳ್ಳಲು ಇಸಾಬ್‌ಗೋಲ್ ತೆಗೆದುಕೊಳ್ಳಲು ಬಯಸಿದರೆ, ನೀವು ಅದನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಇಸಾಬ್‌ಗೋಲ್ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಇಸಾಬ್ಗೋಲ್ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ತಿನ್ನುವ ಯಾವುದೇ ಆಹಾರವೂ ಸುಲಭವಾಗಿ ಕರಗುತ್ತದೆ. ದೀರ್ಘಕಾಲದವರೆಗೆ ಹಸಿವು ಕಾಡುವುದಿಲ್ಲ.