ಕ್ಲೋರಿನೇಟೆಡ್ ನೀರು ಕುಡಿದ್ರೆ ಆರೋಗ್ಯಕ್ಕೆ ಪ್ರಯೋಜನಕ್ಕಿಂತ ತೊಂದ್ರೇನೆ ಹೆಚ್ಚಂತೆ !

By Suvarna News  |  First Published Apr 28, 2022, 5:32 PM IST

ಹೋಟೆಲ್‌ (Hotel), ರೆಸ್ಟೋರೆಂಟ್‌ ಅಥವಾ ಔತಣಕೂಟಕ್ಕೆ ಹೋದಾಗ ಅಲ್ಲಿನ ಪರಿಚಾರಕರು ಸಾಮಾನ್ಯ ನೀರಿನ ಬದಲು ಮಿನೆರಲ್ ವಾಟರ್ ಬಾಟಲಿಯನ್ನೇ ಕುಡಿಯಲು ನೀಡುವುದನ್ನು ಗಮನಿಸಿರಬಹುದು. ಸಾಮಾನ್ಯ ನೀರಿಗಿಂತಲೂ ಈ ನೀರು (Water) ಹೆಚ್ಚು ನೈಸರ್ಗಿಕ ಹಾಗೂ ಆರೋಗ್ಯಕರ (Healthy) ಎಂದು ಪರಿಗಣಿಸಲ್ಪಡುತ್ತದೆ. ಹಾಗಾದರೆ ಸಾಮಾನ್ಯ ನೀರಿಗಿಂತ ಇದ್ರಲ್ಲೇನು ವಿಶೇಷ. ತಿಳ್ಕೊಳ್ಳೋಣ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನೀರು-ಸಂಬಂಧಿತ ರೋಗಗಳನ್ನು ತಡೆಗಟ್ಟಲು ಕ್ಲೋರಿನೇಟೆಡ್ ನೀರನ್ನು (Chlorinated water)  ಕುಡಿಯಲು ಶಿಫಾರಸು ಮಾಡುತ್ತದೆ. ಎನ್‌ಡಿಎಂಎ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಕಾರ ಆರೋಗ್ಯ ಇಲಾಖೆ (Health Department)ಯು ಕುದಿಯುವ ನೀರಿಗೆ ಪರ್ಯಾಯವಾಗಿ ಕ್ಲೋರಿನೇಶನ್ ಅನ್ನು ಶಿಫಾರಸು ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಕ್ಲೋರಿನ್ ನೀರನ್ನು ನಿಗದಿತ ಮಿತಿಗಿಂತ ಹೆಚ್ಚು ನೀರಿನಲ್ಲಿ ಬೆರೆಸಿದರೆ ಅಥವಾ ಕ್ಲೋರಿನ್ ನೀರಿನಲ್ಲಿ ದೀರ್ಘಕಾಲ ಉಳಿದಿದ್ದರೆ, ಅದರ ಅನಾನುಕೂಲತೆಗಳೂ ಇವೆ. ಹಾಗಾದರೆ ಕ್ಲೋರಿನ್ ನೀರಿನ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂಬುದನ್ನು ನಾವು ಇಂದು ನಿಮಗೆ ಹೇಳೋಣ.

ಕ್ಲೋರಿನೇಟೆಡ್ ನೀರಿನ ಪ್ರಯೋಜನಗಳು 
ಕ್ಲೋರಿನ್ ನೀರನ್ನು ಸೋಂಕುನಿವಾರಕಗೊಳಿಸಲು ಆರ್ಥಿಕ, ಪರಿಣಾಮಕಾರಿ ಮತ್ತು ಸ್ವೀಕಾರಾರ್ಹ ಸೋಂಕು ನಿವಾರಕವಾಗಿದೆ. ಒಂದು ಲೀಟರ್ ನೀರಿಗೆ ಎರಡು ಹನಿ ಕ್ಲೋರಿನೇಟ್ ಅನ್ನು ಮಾತ್ರ ಸೇರಿಸಬೇಕು. ಇದಕ್ಕಿಂತ ಹೆಚ್ಚಿನದನ್ನು ಬಳಸುವುದು ಹಾನಿಕಾರಕವಾಗಿದೆ. ಇದಕ್ಕಿಂತ ಕಡಿಮೆ ಕ್ಲೋರಿನೇಟ್ ಹಾಕಿದರೆ ನೀರಿನ ಅಶುದ್ಧತೆ ದೂರವಾಗದೆ ರೋಗ ಬರುವ ಸಾಧ್ಯತೆ ಇರುತ್ತದೆ.ಕ್ಲೋರಿನ್ ನೀರಿನಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಯುತ್ತದೆ ಎಂದು ತಿಳಿದುಬಂದಿದೆ.  

Latest Videos

undefined

ಮಲಗುವ ಮುನ್ನ ನೀರು ಕುಡಿಯೋದು ಒಳ್ಳೇದೋ ಅಲ್ವೋ?

ಕ್ಲೋರಿನೇಟೆಡ್ ನೀರಿನಲ್ಲಿ ವಿವಿಧ ಖನಿಜಗಳಿವೆ. ಇವೆಲ್ಲವೂ ದೇಹದ ಚಟುವಟಿಕೆಗಳಿಗೆ ಅಗತ್ಯವಾಗಿದೆ ಹಾಗೂ ಸ್ನಾಯುಗಳ ಸರಿಯಾದ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಸ್ನಾಯುಗಳು ಸಂಕುಚಿತ ಮತ್ತು ವಿಕಸಿತಗೊಳ್ಳಲು ನೆರವಾಗುತ್ತವೆ. ಅಲ್ಲದೇ ವ್ಯಕ್ತಿಯ ಒಟ್ಟಾರೆ ಆರೋಗ್ಯ ಹಾಗೂ ಬೌತಿಕ ಜಾಗರೂಕತೆ ಹೆಚ್ಚಿಸಲೂ ನೆರವಾಗುತ್ತದೆ.

ಡಯೆಟ್ ಸೋಡಾ, ಲಘುಪಾನೀಯ ಎಂದು ಅನಾರೋಗ್ಯಕರ ಪೇಯಗಳನ್ನು ಕುಡಿಯುವ ಬದಲು ಖನಿಜಯುಕ್ತ ನೀರನ್ನು ಕುಡಿಯಲು ಪ್ರಾರಂಭಿಸಿ. ಇದು ಸೋಡಾ ಅಥವಾ ಡಯೆಟ್ ಸೋಡಾ ಕುಡಿಯುವುದಕ್ಕಿಂತಲೂ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಸೋಡಾ ಬೆರೆತ ಲಘುಪಾನೀಯಗಳಲ್ಲಿ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಸಕ್ಕರೆಗಳಿರುತ್ತವೆ

ನೀರಿನಲ್ಲಿ ಹೆಚ್ಚುವರಿ ಕ್ಲೋರಿನ್‌ನ ಅನಾನುಕೂಲಗಳು
ನೀರಿನಲ್ಲಿ ಹೆಚ್ಚುವರಿ ಕ್ಲೋರಿನ್‌ನ ಪರಿಣಾಮ ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು- ವಾಂತಿ ಮತ್ತು ಭೇದಿ ಇತ್ಯಾದಿ ಸಮಸ್ಯೆ ಉಂಟಾಗಬಹುದು. ಶ್ವಾಸಕೋಶಗಳು ಹಾನಿಗೊಳಗಾಗಬಹುದು, ಹೊಟ್ಟೆಗೆ ಸಂಬಂಧಿಸಿದ ಅಸ್ವಸ್ಥತೆಗಳು ಸಹ ಸಂಭವಿಸಬಹುದು. ಕ್ಲೋರಿನೇಟೆಡ್ ನೀರನ್ನು ಕುಡಿಯುವವರಲ್ಲಿ ಆಹಾರ ಪೈಪ್, ಗುದನಾಳ, ಎದೆ ಮತ್ತು ಗಂಟಲಿನ ಕ್ಯಾನ್ಸರ್ ಬರಬಹುದು. ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಟಿಸಿದ ಜರ್ನಲ್ ಪ್ರಕಾರ, ದೀರ್ಘಕಾಲದವರೆಗೆ ಕ್ಲೋರಿನೇಟೆಡ್ ನೀರನ್ನು ಕುಡಿಯುವುದು ಮೂತ್ರಕೋಶದ ಕ್ಯಾನ್ಸರ್‌ನ ಅಪಾಯವನ್ನು 80 ಪ್ರತಿಶತದಷ್ಟು ಹೆಚ್ಚಿಸುತ್ತದೆ.

ಮಕ್ಕಳಿಗೆ ನಿರ್ಜಲೀಕರಣದ ಸಮಸ್ಯೆಯಿದ್ದರೆ ಗೊತ್ತಾಗೋದು ಹೇಗೆ ?

ಮತ್ತೊಂದೆಡೆ ಕ್ಲೋರಿನೇಟೆಡ್ ನೀರನ್ನು ದೀರ್ಘಕಾಲ ಕುಡಿದರೆ ಮೂತ್ರನಾಳದ ಕ್ಯಾನ್ಸರ್, ಹೊಟ್ಟೆ, ಶ್ವಾಸಕೋಶ, ಗುದನಾಳ, ಹೃದಯ ಸಂಬಂಧಿ ಕಾಯಿಲೆಗಳು, ಅಪಧಮನಿಗಳು ಗಟ್ಟಿಯಾಗುವುದು, ರಕ್ತಹೀನತೆ, ಅಧಿಕ ರಕ್ತದೊತ್ತಡ ಮತ್ತು ಅಲರ್ಜಿಯಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಕ್ಲೋರಿನ್ ನಮ್ಮ ದೇಹದಲ್ಲಿರುವ ಪ್ರೊಟೀನ್ ಗಳನ್ನು ನಾಶಪಡಿಸುತ್ತದೆ ಮತ್ತು ಇದು ಚರ್ಮ ಮತ್ತು ಕೂದಲಿನ ಮೇಲೂ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಕ್ಲೋರಮೈನ್‌ಗಳು (ಕ್ಲೋರಿನ್ ಚಿಕಿತ್ಸೆಯ ನಂತರ ಉತ್ಪತ್ತಿಯಾಗುವ ಸೂಕ್ಷ್ಮಜೀವಿಗಳು) ನೀರಿನಲ್ಲಿ ಕ್ಲೋರಿನ್ ಇರುವಿಕೆಯಿಂದ ರೂಪುಗೊಳ್ಳುತ್ತವೆ, ಇದು ರುಚಿ ಮತ್ತು ವಾಸನೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ನೀವು ಕ್ಲೋರಿನೇಟೆಡ್ ನೀರನ್ನು ಕುಡಿಯುತ್ತಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.

click me!