ಇದು ದುಬೈನ ಅತ್ಯಂತ ದುಬಾರಿ ಚಾಕೋಲೇಟ್, ನಿಮ್ಮ ಮನಸ್ಸಿನಲ್ಲಿ ಬೇರೆ ಚಿತ್ರಣ ಬಂದ್ರೆ ಅಚ್ಚರಿಯಿಲ್ಲ!

By Chethan Kumar  |  First Published Jul 28, 2024, 4:55 PM IST

ದುಬೈನ ದುಬಾರಿ ಹಾಗೂ ಸ್ವಾದಿಷ್ಟ ಚಾಕೋಲೇಟ್ ಭಾರತದಲ್ಲಿ ವೈರಲ್ ಆಗಿದೆ. ಈ ಚಾಕೋಲೇಟ್ ನೋಡಿದ ತಕ್ಷಣ ಬೇರೆ ನೆನಪಾಗುತ್ತಿದೆ. ಹೀಗಾಗಿ ತಿನ್ನಲು ಮನಸ್ಸಾಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. 
 


ದುಬೈ(ಜು.28)  ದುಬೈ ಐಷಾರಾಮಿತನ, ಪ್ರವಾಸೋದ್ಯಮ, ಆಕರ್ಷಿಣೀಯ ಸ್ಥಳಗಳ ಜೊತೆಗೆ ಖಾದ್ಯಗಳು ಅಷ್ಟೇ ಪ್ರಖ್ಯಾತಿ ಪಡೆದಿದೆ. ಈ ಪೈಕಿ ಡ್ರೈ ಫ್ರ್ಯೂಟ್ಸ್‌ಗೆ ಹೆಚ್ಚಿನ ಬೇಡಿಕೆ. ಡ್ರೈ ಫ್ರೂಟ್ಸ್ ತಿನಿಸು, ಚಾಕೋಲೇಟ್, ಕೇಕ್ ಸೇರಿದಂತೆ ಹಲವು ವೈರೆಟಿಗಳು ದುಬೈನಲ್ಲಿ ಸಿಗುತ್ತದೆ. ಇದೀಗ ದುಬೈನಲ್ಲಿ ಅತ್ಯಂತ ದುಬಾರಿ ಹಾಗೂ ಸ್ವಾದಿಷ್ಟ ಚಾಕೋಲೇಟ್ ವೈರಲ್ ಆಗಿದೆ. ಭಾರತೀಯರು ಸೇರಿದಂತೆ ಹಲವರು ಈ ಚಾಕೋಲೇಟ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಾಕೋಲೇಟ್ ಭಾರತದಲ್ಲಿ ಮಾರಾಟವಾಗುವ ಸಾಧ್ಯತೆ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ದುಬೈನ ಈ ಸ್ವಾದಿಷ್ಠ ಪಿಸ್ತಾ ಚಾಕೋಲೇಟನ್ನು ರಿಭಾ ಖಾನ್ ಅನ್ನೋ ಸೋಶಿಯಲ್ ಮೀಡಿಯಾ ಕ್ರಿಯೆಟರ್ ಮೊದಲ ಬಾರಿಗೆ ಸವಿದಿದ್ದರೆ. ಈ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಸ್ವಾದಿಷ್ಟ ಚಾಕೋಲೇಟ್ ಹೆಸರು ಪಿಸ್ತಾಚಿಯೋ ಕುನಾಫಾ. ಹೊರಗೆ ಚಾಕೋಲೇಟ್ ಒಳಗೆ ಪಿಸ್ತಾ ಒಳಗೊಂಡಿರುತ್ತದೆ. ಇದರ ಬೆಲೆ 65 ಎಇಡಿ, ಅಂದರೆ ಭಾರತೀಯ ರೂಪಾಯಿಗಳಲ್ಲಿ 1,481 ರೂಪಾಯಿ.

Tap to resize

Latest Videos

undefined

ವಿಶ್ವದ ಟಾಪ್ 100 ಐಸ್ ಕ್ರೀಂಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ 5 ಐಸ್‌ಕ್ರೀಂಗಳು! ಇಲ್ಲಿದೆ ನೋಡಿ

ರಿಭಾ ಖಾನ್ ಈ ಚಾಕೋಲೇಟ್ ಸವಿದು ಪ್ರತಿಕ್ರಿಯೆ ನೀಡಿದ್ದಾರೆ. ಈ ಚಾಕೋಲೇಟ್ ಕುರಿತು ದುಬೈ ಸ್ಥಳೀಯರು ಪದೇ ಪದೇ ಹೇಳಿದ್ದಾರೆ. ಭಾರಿ ಪ್ರಚಾರ ಮಾಡುತ್ತಾರೆ. ಸಣ್ಣ ಚಾಕೋಲೇಟ್ ಬೆಲೆಯೂ ದುಬಾರಿಯಾಗಿದೆ. ಹೀಗಾಗಿ ಪಿಸ್ತಾಚಿಯೋ ಕುನಾಫಾ ಚಾಕೋಲೇಟ್ ಖರೀದಿಸಿದ್ದೇನೆ ಎಂದು, ಸವಿದಿದ್ದಾರೆ. ಸವಿಯುತ್ತಲೆ ಅದ್ಬುತವಾಗಿದೆ ಎಂದು ಕ್ರೆಡಿಟ್ ನೀಡಿದ್ದಾರೆ. ಇದರ ರುಚಿ ಉತ್ತಮವಾಗಿದೆ. ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತಿದೆ ಎಂದಿದ್ದಾರೆ.

 

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ದುಬೈನಲ್ಲಿ ಈ ಚಾಕೋಲೇಟ್ ಎಲ್ಲಿ ಸಿಗುತ್ತದೆ. ನಾವು ಸವಿಯಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಆನ್‌ಲೈನ್ ಮೂಲಕ ಈ ಚಾಕೋಲೇಟ್ ಲಭ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ. ಚಾಕೋಲೇಟ್ ವಿಡಿಯೋಗೆ ಹಲವರು ಮಾರುಹೋಗಿದ್ದಾರೆ. ಆದರೆ ಮತ್ತೊಬ್ಬ ಸೋಶಿಯಲ್ ಮೀಡಿಯಾ ಬಳಕೆದಾರ, ಈ ಚಾಕೋಲೋಟ್ ನೋಡಿದರ ದನದ ಸೆಗಣಿ ರೀತಿ ಇದೆ. ತಿನ್ನಲು ಮನಸ್ಸಾಗುತ್ತಿಲ್ಲ ಎಂದಿದ್ದಾನೆ.

ನೀರ್​ ದೋಸೆ ತಿಂದ್ರೆ ಪ್ರಭುದೇವ ಥರ ಡಾನ್ಸ್​ ಮಾಡ್ಬೋದು, ಕತ್ರಿನಾರಂತೆ ಸ್ಲಿಮ್​ ಆಗ್ಬೋದು! ನಟರ ಬಾಯಲ್ಲೇ ಕೇಳಿ

ಈ ಚಾಕೋಲೇಟ್ ಸವಿದ ಬಹುತೇಕರು ಫುಲ್ ಮಾರ್ಕ್ಸ್ ನೀಡಿದ್ದರೆ. ಡಾರ್ಕ್ ಚಾಕೋಲೇಟ್ ಜೊತೆಗೆ ಡ್ರೈ ಫ್ರೂಟ್ಸ್ ಮೂಲಕ ಈ ಚಾಕೋಲೇಟ್ ತಯಾರಿಸಿಲಾಗಿದೆ. ಹೀಗಾಗಿ ಇದರ ಬೆಲೆಯೂ ದುಬಾರಿ ಜೊತೆಗೆ ಸ್ವಾದವೂ ಅಷ್ಟೇ ಉತ್ತಮವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಇದು ದುಬೈ ವೈರಲ್ ಚಾಕೋಲೇಟ್ ಎಂದು ಜನಪ್ರಿಯವಾಗಿದೆ.

 

click me!