ಹೊರಗೆ ಗರಿಗರಿ, ಒಳಗೆ ಸಾಫ್ಟ್! ಶೇ. 90 ರಷ್ಟು ಜನರಿಗೆ ಗೊತ್ತಿಲ್ಲದ ಹೋಟೆಲ್ ಶೈಲಿಯ ಈರುಳ್ಳಿ ಪಕೋಡದ ಸೀಕ್ರೆಟ್ ಇಲ್ಲಿದೆ

Published : Jul 10, 2026, 10:13 PM IST
Crispy Onion Pakoda Recipe

ಸಾರಾಂಶ

Crispy Onion Pakoda Recipe: ಮಳೆಗಾಲದಲ್ಲಿ ನಿಮಗೂ ಹೋಟೆಲ್ ಶೈಲಿಯ ಈರುಳ್ಳಿ ಪಕೋಡ ತಿನ್ನಲು ಇಷ್ಟವಿದ್ದರೆ, ಈ ರೆಸಿಪಿಯನ್ನು ಮನೆಯಲ್ಲೇ ಟ್ರೈ ಮಾಡಿ. ಮತ್ಯಾಕೆ ತಡ, ಥೇಟ್ ಹೋಟೆಲ್‌ನಲ್ಲಿ ಸಿಗುವಂತೆಯೇ ಹೊರಗಿನಿಂದ ಸಂಪೂರ್ಣ ಗರಿಗರಿಯಾಗಿ (Cruchy) ಮತ್ತು ಒಳಗಿನಿಂದ ಸಾಫ್ಟ್ ಆಗಿರುವ ಪಕೋಡ ಮಾಡುವುದು ಹೇಗೆಂದು ನೋಡೋಣ ಬನ್ನಿ...

ಳೆಗಾಲ ಆರಂಭವಾಗುತ್ತಿದ್ದಂತೆ ಚಹಾದ ಜೊತೆ ಗರಮಾ-ಗರಂ ಈರುಳ್ಳಿ ಪಕೋಡದ ನೆನಪು ಖಂಡಿತ ಬರುತ್ತದೆ. ಆದರೆ ಮನೆಯಲ್ಲಿ ಮಾಡುವ ಪಕೋಡಗಳು ಹೆಚ್ಚಾಗಿ ಹೋಟೆಲ್‌ನಷ್ಟು ಗರಿಗರಿಯಾಗುವುದಿಲ್ಲ. ಹೋಟೆಲ್‌ಗಳಲ್ಲಿ ಅಥವಾ ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಪಕೋಡ ವಿಶೇಷತೆಯೆಂದರೆ, ಅದು ಹೊರಗಿನಿಂದ ಅತ್ಯಂತ ಕ್ರಿಸ್ಪಿಯಾಗಿ ಮತ್ತು ಒಳಗಿನಿಂದ ಸಾಫ್ಟ್ ಆಗಿರುತ್ತದೆ. ಇದರ ರಹಸ್ಯ ಕೇವಲ ಮಸಾಲೆಗಳಲ್ಲಷ್ಟೇ ಇಲ್ಲ, ಬದಲಿಗೆ ಈರುಳ್ಳಿ ಕತ್ತರಿಸುವ ವಿಧಾನ, ಹಿಟ್ಟು ತಯಾರಿಸುವ ತಂತ್ರ ಮತ್ತು ಸರಿಯಾಗಿ ಕರಿಯುವ ವಿಧಾನದಲ್ಲಿ ಅಡಗಿದೆ.

ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಈ ಪಕೋಡ ತನ್ನ ವಿಶಿಷ್ಟವಾದ ಆಕಾರದಿಂದಾಗಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ನೀವು ಸಹ ಮನೆಯಲ್ಲೇ ತದ್ರೂಪು ಹೋಟೆಲ್ ಶೈಲಿಯ ಪಕೋಡ ಮಾಡಲು ಬಯಸಿದರೆ, ಕೆಲವು ಸುಲಭವಾದ ಟಿಪ್ಸ್ ಫಾಲೋ ಮಾಡಿ ಅದ್ಭುತ ರುಚಿ ಪಡೆಯಬಹುದು. ಬನ್ನಿ, ರುಚಿಕರ ಮತ್ತು ಗರಿಗರಿಯಾದ ಪಕೋಡ ಮಾಡುವ ಸುಲಭ ರೆಸಿಪಿಯನ್ನು ತಿಳಿಯೋಣ.

ಮನೆಯಲ್ಲೇ ಪಕೋಡ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿಗಳು
ಈರುಳ್ಳಿ – 500 ಗ್ರಾಂ
ಉಪ್ಪು – 1.5 ಚಮಚ
ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ
ಹಸಿರು ಮೆಣಸಿನಕಾಯಿ – 3
ಕೊತ್ತಂಬರಿ ಸೊಪ್ಪು – 20 ಗ್ರಾಂ
ಬೆಳ್ಳುಳ್ಳಿ ಎಸಳುಗಳು – 3
ಶುಂಠಿ – 1 ಇಂಚು
ಕರಿಬೇವು – 10-12 ಎಲೆಗಳು
ಜೀರಿಗೆ – 1 ಚಮಚ
ಓಂಕಾಳು (ಅಜ್ವೈನ್) – ½ ಚಮಚ
ತರಿತರಿಯಾಗಿ ಜಜ್ಜಿದ ಕೊತ್ತಂಬರಿ ಬೀಜ – 1 ದೊಡ್ಡ ಚಮಚ
ಇಂಗು – ಒಂದು ಚಿಟಿಕೆ
ಅರಿಶಿನ ಪುಡಿ – ¼ ಚಮಚ
ಕೆಂಪು ಮೆಣಸಿನಕಾಯಿ ಪುಡಿ – ½ ಚಮಚ
ಅಕ್ಕಿ ಹಿಟ್ಟು – 3-4 ದೊಡ್ಡ ಚಮಚ
ಕಡಲೆ ಹಿಟ್ಟು – 1 ಕಪ್
ಬಿಸಿ ಎಣ್ಣೆ – 1 ದೊಡ್ಡ ಚಮಚ

ಮಾಡುವ ವಿಧಾನ

ಮೊದಲ ಹಂತ: ಮೊದಲು ಈರುಳ್ಳಿಯನ್ನು ತೆಳ್ಳಗೆ ಮತ್ತು ಉದ್ದುದ್ದವಾಗಿ (ಸ್ಲೈಸ್) ಕತ್ತರಿಸಿಕೊಳ್ಳಿ. ಕತ್ತರಿಸಿದ ಈರುಳ್ಳಿಗೆ ಉಪ್ಪು ಮತ್ತು ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿಯನ್ನು ಸೇರಿಸಿ 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದರಿಂದ ಈರುಳ್ಳಿ ಮೃದುವಾಗುತ್ತದೆ.

ಎರಡನೇ ಹಂತ: ಆಮೇಲೆ ಇದನ್ನು ಕೈಗಳಿಂದ ಚೆನ್ನಾಗಿ ಹಿಸುಕುತ್ತಾ, ಈರುಳ್ಳಿಯಿಂದ ಬಿಟ್ಟುಕೊಳ್ಳುವ ಹೆಚ್ಚುವರಿ ನೀರನ್ನು ಅದೇ ಪಾತ್ರೆಯಲ್ಲಿ ಸಂಗ್ರಹವಾಗುವಂತೆ ಮಾಡಿ. ಹೀಗೆ ಮಾಡುವುದರಿಂದ ಹಿಟ್ಟು ಕಲಸಲು ಮೇಲಿನಿಂದ ಬೇರೆ ನೀರು ಸೇರಿಸುವ ಅಗತ್ಯವಿರುವುದಿಲ್ಲ.

ಮೂರನೇ ಹಂತ: ಈಗ ಇದಕ್ಕೆ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಜೀರಿಗೆ, ಓಂಕಾಳು, ಜಜ್ಜಿದ ಕೊತ್ತಂಬರಿ ಬೀಜ, ಇಂಗು, ಅರಿಶಿನ ಮತ್ತು ಕೆಂಪು ಮೆಣಸಿನಕಾಯಿ ಪುಡಿಯನ್ನು ಸೇರಿಸಿ.

ನಾಲ್ಕನೇ ಹಂತ (ಮುಖ್ಯ ಸೀಕ್ರೆಟ್): ಈ ಪಕೋಡದ ಅತ್ಯಂತ ಮುಖ್ಯವಾದ ಸಾಮಗ್ರಿ ಎಂದರೆ ಅಕ್ಕಿ ಹಿಟ್ಟು. ಪಕೋಡ ಗರಿಗರಿಯಾಗಲು ಈರುಳ್ಳಿ ಮಿಶ್ರಣಕ್ಕೆ ಮೊದಲು ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಕಡಲೆ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಮಿಶ್ರಣವನ್ನು ಕೈಯಿಂದಲೇ ಕಲಸಿಕೊಳ್ಳಿ. ಪಕೋಡದ ಮಿಕ್ಸ್ ಸರಿಯಾಗಿ ಸಿದ್ಧವಾದ ನಂತರ, ಇದಕ್ಕೆ 1 ದೊಡ್ಡ ಚಮಚ ಬಿಸಿ ಎಣ್ಣೆಯನ್ನು ಸೇರಿಸಿ ಮತ್ತೊಮ್ಮೆ ಕಲಸಿ.

ಐದನೇ ಹಂತ: ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಿದ್ಧಪಡಿಸಿದ ಮಿಶ್ರಣವನ್ನು ಬೆರಳುಗಳ ಸಹಾಯದಿಂದ ಸಣ್ಣ ಸಣ್ಣ ಭಾಗಗಳಾಗಿ ನೇರವಾಗಿ ಎಣ್ಣೆಗೆ ಬಿಡಿ. ಇವುಗಳಿಗೆ ಯಾವುದೇ ದುಂಡಗಿನ ಆಕಾರ ನೀಡಬೇಡಿ, ಬದಲಿಗೆ ಎಸಳುಗಳಂತೆಯೇ ಇರಲು ಬಿಡಿ. ಮಧ್ಯಮ-ತೀವ್ರ ಉರಿಯಲ್ಲಿ (Medium-High Flame) ಪಕೋಡಗಳು ಚಿನ್ನದ ಬಣ್ಣಕ್ಕೆ ತಿರುಗಿ, ಗರಿಗರಿಯಾಗುವವರೆಗೆ ಸರಿಯಾಗಿ ಕರಿಯಿರಿ.

ಈಗ ಗರಮಾ-ಗರಂ ಪಕೋಡ ಸಿದ್ಧ! ಇದನ್ನು ಬಿಸಿ ಚಹಾ, ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆಗೆ ಸವಿಯಿರಿ ಮತ್ತು ಮಳೆಗಾಲದ ಆನಂದವನ್ನ ಎಂಜಾಯ್ ಮಾಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI
ಕಂದಮ್ಮಗಳಿಗೆ ಮೊದಲ ಬಾರಿಗೆ ಘನ ಆಹಾರ ಕೊಡ್ತಿರುವಿರಾ? ವೈದ್ಯರ ಈ ಸಲಹೆ ಮೊದಲು ಕೇಳಿ