ಅಡುಗೆ ಬರದವರೂ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಬಹುದಾದ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ಆಲೂ ಕಟ್ಲಿ

Published : Jul 08, 2026, 10:17 PM IST
Alu Katli Recipe in Kannada

ಸಾರಾಂಶ

Alu Katli Recipe in Kannada: ಸಂಜೆ ಚಹಾ ಸಮಯಕ್ಕೆ ಏನಾದರೂ ಹೊಸದಾಗಿ ಮತ್ತು ಗರಿಗರಿಯಾಗಿ ತಿನ್ನಬೇಕೆನಿಸಿದರೆ 'ಆಲೂ ಕಟ್ಲಿ' ಅತ್ಯುತ್ತಮ ಆಯ್ಕೆ. ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ಸ್ಪೈಸಿ ಸ್ನ್ಯಾಕ್ ಅಡುಗೆ ಬರದವರಿಗೂ ಸುಲಭ. ಬಾಯಲ್ಲಿ ನೀರೂರಿಸುವ ಈ ರುಚಿಕರ ರೆಸಿಪಿ ಮಾಡೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಸಂಜೆ ಹೊತ್ತಿನಲ್ಲಿ ಬಿಸಿ ಬಿಸಿ ಚಹಾದ ಜೊತೆಗೆ ಏನಾದರೂ ಗರಿಗರಿಯಾದ ಕುರುಕುಲು ತಿಂಡಿ ತಿನ್ನಬೇಕೆನಿಸುವುದು ಸಹಜ. ಬಜ್ಜಿ, ಪಕೋಡ ಅಥವಾ ಸಮೋಸಾಗಳನ್ನು ನಾವು ಯಾವಾಗಲೂ ತಿನ್ನುತ್ತೇವೆ. ಆದರೆ ಸ್ಪೈಸಿ ಮತ್ತು ಕ್ರಂಚಿಯಾಗಿರುವ 'ಆಲೂ ಕಟ್ಲಿ'ಯನ್ನು ಯಾವತ್ತಾದರೂ ಟ್ರೈ ಮಾಡಿದ್ದೀರಾ? ಇದು ಕೇಳಲು ಮಾತ್ರವಲ್ಲ, ತಿನ್ನಲು ಕೂಡ ಅದ್ಭುತವಾಗಿರುತ್ತದೆ. ಅಡುಗೆ ಬಾರದವರು ಕೂಡ ಬಹಳ ಸುಲಭವಾಗಿ ತಯಾರಿಸಬಹುದಾದ ರೆಸಿಪಿ ಇದಾಗಿದೆ. ಮಳೆಗಾಲ ಅಥವಾ ಚಳಿಗಾಲದ ಸಂಜೆಗಳಲ್ಲಿ ಬಿಸಿ ಚಹಾ ಕುಡಿಯುತ್ತಾ ಈ ಆಲೂ ಕಟ್ಲಿ ಸವಿಯುವ ಮಜವೇ ಬೇರೆ.

ಆಲೂ ಕಟ್ಲಿ ತಯಾರಿಸಲು ಬೇಕಾಗುವ ಪದಾರ್ಥಗಳು

ಆಲೂಗಡ್ಡೆ - 500 ಗ್ರಾಂ
ಅಕ್ಕಿ ಹಿಟ್ಟು - 2 ಟೀಸ್ಪೂನ್
ಸಾಸಿವೆ ಎಣ್ಣೆ - ಬೇಕಾದಷ್ಟು
ಇಂಗು - ಒಂದು ಚಿಟಿಕೆ
ಜೀರಿಗೆ - 1 ಟೀಸ್ಪೂನ್
ಅರಿಶಿನ - ಅರ್ಧ ಟೀಸ್ಪೂನ್
ಉಪ್ಪು - 1 ಟೀಸ್ಪೂನ್ (ರುಚಿಗೆ ತಕ್ಕಷ್ಟು)
ಹಸಿಮೆಣಸಿನಕಾಯಿ - 4 ರಿಂದ 5
ಧನಿಯಾ ಪುಡಿ - 1 ಟೀಸ್ಪೂನ್
ಕಾರದ ಪುಡಿ - 1 ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ (ಒಣಮೆಣಸಿನಕಾಯಿ ಚೂರುಗಳು) - 1 ಟೀಸ್ಪೂನ್
ಕಪ್ಪು ಉಪ್ಪು (Black Salt) - ಅರ್ಧ ಟೀಸ್ಪೂನ್
ಗರಂ ಮಸಾಲಾ - ಅರ್ಧ ಟೀಸ್ಪೂನ್
ಪುದೀನಾ ಪುಡಿ - ಅರ್ಧ ಟೀಸ್ಪೂನ್

ತಯಾರಿಸುವ ವಿಧಾನ

*ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ಸುಲಿದು ಸ್ವಚ್ಛವಾಗಿ ತೊಳೆದುಕೊಳ್ಳಿ. ಎಲ್ಲಾ ಆಲೂಗಡ್ಡೆಗಳು ಒಂದೇ ಗಾತ್ರದಲ್ಲಿದ್ದರೆ ಒಳ್ಳೆಯದು. ಇವುಗಳನ್ನು ತುಂಬಾ ದಪ್ಪವೂ ಅಲ್ಲದ, ತುಂಬಾ ತೆಳುವೂ ಅಲ್ಲದ ಹದವಾದ ಗಾತ್ರದಲ್ಲಿ ಚಕ್ರದ ಆಕಾರದಲ್ಲಿ (Round Slices) ಕತ್ತರಿಸಿಕೊಳ್ಳಿ.
*ಕತ್ತರಿಸಿದ ಚೂರುಗಳನ್ನು ಎರಡು-ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ನೀರನ್ನೆಲ್ಲಾ ಸೋಸಿ ತೆಗೆಯಿರಿ.
*ಆಲೂಗಡ್ಡೆ ಚೂರುಗಳು ಸ್ವಲ್ಪ ತೇವವಾಗಿದ್ದರೂ ಕೂಡ ಹುರಿಯುವಾಗ ಬಾಂಡ್ಲಿಗೆ ಅಂಟಿಕೊಳ್ಳುತ್ತವೆ. ಆದ್ದರಿಂದ, ಒಂದು ಒಣಗಿದ ಹತ್ತಿ ಬಟ್ಟೆಯ (Cotton cloth) ಮೇಲೆ ಇವುಗಳನ್ನು ಹರಡಿ, ತೇವಾಂಶ ಸಂಪೂರ್ಣವಾಗಿ ಹೋಗುವಂತೆ ಚೆನ್ನಾಗಿ ಒಣಗಿಸಿಕೊಳ್ಳಿ.
*ಆಲೂಗಡ್ಡೆ ಚೂರುಗಳು ಪೂರ್ತಿ ಒಣಗಿದ ನಂತರ ಅವುಗಳ ಮೇಲೆ 2 ಟೀಸ್ಪೂನ್ ಅಕ್ಕಿ ಹಿಟ್ಟನ್ನು ಚಿಮುಕಿಸಿ ಚೆನ್ನಾಗಿ ಕಲಸಿ.
*ಈಗ ಸ್ಟವ್ ಹಚ್ಚಿ, ಒಂದು ದಪ್ಪ ತಳದ ಬಾಂಡ್ಲಿಯಲ್ಲಿ ಸಾಸಿವೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಚಿಟಿಕೆ ಇಂಗು ಮತ್ತು ಒಂದು ಚಮಚ ಜೀರಿಗೆ ಹಾಕಿ ಚಟಪಟ ಎನ್ನಲು ಬಿಡಿ.
*ಅದಾದ ಮೇಲೆ ಅಕ್ಕಿ ಹಿಟ್ಟು ಸವರಿದ ಆಲೂಗಡ್ಡೆ ಚೂರುಗಳನ್ನು ಹಾಕಿ ಹುರಿಯಿರಿ. ಚೂರುಗಳು ಮುರಿಯದಂತೆ ಮೆಲ್ಲನೆ ಕೈಯಾಡಿಸಿ. *ಸ್ವಲ್ಪ ಅರಿಶಿನ ಹಾಕಿ, ಬಾಂಡ್ಲಿಗೆ ಅಂಟಿಕೊಳ್ಳದಂತೆ ಕಲಸಿ, ಮುಚ್ಚಳ ಮುಚ್ಚಿ ಆಲೂಗಡ್ಡೆಗಳು ಚೆನ್ನಾಗಿ ಬೇಯಲು ಬಿಡಿ.
*ಆಲೂಗಡ್ಡೆ ಬೆಂದ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನಕಾಯಿ, ಧನಿಯಾ ಪುಡಿ, ಖಾರದ ಪುಡಿ, ಚಿಲ್ಲಿ ಫ್ಲೇಕ್ಸ್, ಕಪ್ಪು ಉಪ್ಪು, ಗರಂ ಮಸಾಲಾ ಮತ್ತು ಪುದೀನಾ ಪುಡಿ ಸೇರಿಸಿ ಚೆನ್ನಾಗಿ ಕಲಸಿ.
*ಮಸಾಲೆಯ ಘಮವು ಆಲೂಗಡ್ಡೆಗೆ ಚೆನ್ನಾಗಿ ಹಿಡಿಯುವಂತೆ ಇನ್ನೆರಡು ನಿಮಿಷ ಬೇಯಿಸಿ ಸ್ಟವ್ ಆಫ್ ಮಾಡಿ.

ಅಷ್ಟೇ! ಬಾಯಲ್ಲಿ ನೀರೂರಿಸುವ, ಸ್ಪೈಸಿ ಮತ್ತು ಗರಿಗರಿಯಾದ ಆಲೂ ಕಟ್ಲಿ ಸವಿಯಲು ಸಿದ್ಧ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Fish: ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು! ಆದರೆ ಹೀಗೆ ತಿಂದರೆ ಏನಾಗುತ್ತದೆಂದು ಗೊತ್ತಾದರೆ ಮುಟ್ಟಲೂ ಇಷ್ಟಪಡುವುದಿಲ್ಲ!
Fertility Issues: ತಡವಾಗಿ ಗರ್ಭಿಣಿಯಾಗಲು ಕಾರಣಗಳೇನು? ಇಲ್ಲಿವೆ ನೀವು ತಿಳಿದಿರಲೇಬೇಕಾದ 6 ಸಂಗತಿಗಳು