ಪಾಚಿಯನ್ನೂ ಚಪ್ಪರಿಸಿ ತಿನ್ನುತ್ತಾರೆ ಇವರು! ಯಾವ ದೇಶದವರು ಅಂತ ಗೆಸ್ ಮಾಡ್ತೀರಾ?

By Suvarna NewsFirst Published Aug 10, 2023, 3:47 PM IST
Highlights

ಮನೆ ಹೊರಗೆ, ಸಮುದ್ರದಲ್ಲಿ ಪಾಚಿ ಕಟ್ಟಿದ್ರೆ ವಾಕರಿಗೆ ಬಂದಂತೆ ಆಗುತ್ತದೆ. ಪಾಚಿಕಟ್ಟಿದ ನದಿ ನೀರನ್ನೇ ನಾವು ಕುಡಿಯೋದಿಲ್ಲ. ಆದ್ರೆ ಈ ಪುಣ್ಯಾತ್ಮರು ಪಾಚಿಯನ್ನೇ ತಿನ್ನುತ್ತಾರೆ. ಅದ್ರ ರೆಸಿಪಿ ನಿಮಗಾಗಿ./
 

ಚಿತ್ರ ವಿಚಿತ್ರ ಆಹಾರಗಳನ್ನು ತಿನ್ನುವುದರಲ್ಲಿ ಚೀನಾದವರದು ಎತ್ತಿದ ಕೈ. ಕ್ರಿಮಿ, ಕೀಟ ವಿಷಜಂತುಗಳನ್ನು ಅವರು ತಿನ್ನುತ್ತಾರೆ. ಭಾರತದಲ್ಲೂ ಅನೇಕ ಚೈನಿಸ್ ಡಿಶ್ ಗಳು ಬಹಳ ಪ್ರಖ್ಯಾತಿ ಗಳಿಸಿದೆ. ಹಲವಾರು ಮಂದಿ ಚೈನಿಸ್ ಫುಡ್ ಗಳನ್ನು ಇಷ್ಟಪಡುತ್ತಾರೆ.

ಚೀನೀ (Chinese) ಯರ ಕೆಲವು ಆಹಾರಗಳು ನಮಗೆ ಭಯವುಂಟುಮಾಡಿದರೆ ಇನ್ಕೆಲವು ವಾಕರಿಕೆ ತರಿಸುತ್ತವೆ. ಯಾವಾಗಲೂ ತಮ್ಮ ವಿಶಿಷ್ಟ ತಿಂಡಿಗಳಿಂದ ಜನರ ಗಮನ ಸೆಳೆಯುವ ಚೀನೀಯರು ಈ ಬಾರಿ ಪಾಚಿ (Algae) ಯನ್ನು ತಿನ್ನುವ ಮೂಲಕ ಜನರು ಹುಬ್ಬೇರಿಸುವಂತೆ ಮಾಡಿದ್ದಾರೆ. ಚೀನೀಯರು ಪಾಚಿಯನ್ನು ಚಪ್ಪರಿಸಿ ತಿನ್ನುತ್ತಿರುವ ವಿಡಿಯೋ ನೋಡಿ ಜನರು ಹೌಹಾರಿದ್ದಾರೆ. ಈ ಮೊದಲು ಕೂಡ ಚೀನೀಯರು ಹಲ್ಲಿ, ಹಾವು, ಚೇಳುಗಳನ್ನು ತಿನ್ನುವ ವಿಡಿಯೋಗಳು ಜನರನ್ನು ದಂಗಾಗುವಂತೆ ಮಾಡಿತ್ತು. ಈಗ ಚೀನೀಯರು ಪಾಚಿಯ ಹೊಸ ಡಿಶ್ ಅನ್ವೇಷಣೆ ಮಾಡಿದ್ದಾರೆ. ಇವರು ಇದನ್ನು ತಿನ್ನುವುದನ್ನು ನೋಡಿದ ನೆಟ್ಟಿಗರು ಇನ್ಯಾವ ವೈರಸ್ ಹರಡಲಿದ್ದೀರಿ ಎಂದು ಚೀನೀಯರ ಕಾಲೆಳೆದಿದ್ದಾರೆ.

ಮಳೆಗಾಲದಲ್ಲಿ ಕೀಲು ನೋವು ಬೇಡವೆಂದರೆ ಇದನ್ನು ಅಗತ್ಯವಾಗಿ ಸೇವಿಸಬೇಕು

ಈ ಬಾರಿ ಪಾಚಿ  ತಿನ್ನುತ್ತಿದ್ದಾರೆ ಚೀನೀಯರು : ಚೀನಾದ ಜನರು ಯಾವಾಗಲೂ ಜಗತ್ತಿನಲ್ಲಿ ಯಾರೂ ತಿನ್ನದ ಆಹಾರಗಳನ್ನು ತಿನ್ನುತ್ತಾರೆ. ಅವರ ಅಪರೂಪದ ಆಹಾರ ಪದ್ಧತಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಅವರು ಹಾವು, ಹಲ್ಲಿಗಳನ್ನು ಬೇಯಿಸಿ ತಿನ್ನುವ ವಿಡಿಯೋಗಳು ಕೂಡ ವೈರಲ್ ಆಗಿದೆ. ಇಷ್ಟೇ ಅಲ್ಲದೇ ಇವರು ನಾಯಿ ಮುಂತಾದ ಬೇರೆ ಬೇರೆ ಪ್ರಾಣಿಗಳ ಮಾಂಸಗಳನ್ನು ಕೂಡ ಬಹಳ ಇಷ್ಟಪಟ್ಟು ತಿಂತಾರೆ. ಈ ಬಾರಿ ನದಿಯ ದಡದಲ್ಲಿ ಹೆಪ್ಪುಗಟ್ಟಿದ ಪಾಚಿಯನ್ನು ಸೇವಿಸುವ ವಿಡಿಯೋ ಎಲ್ಲ ಕಡೆ ಹರಡಿದೆ.

ಏನಿದು ಪಾಚಿಯ ಹೊಸ ಡಿಶ್? (Dish) : ಈ ಪಾಚಿಯ ಹೊಸ ಅಡುಗೆಗೆ ಮೊದಲು ನದಿ ಅಥವಾ ಕೆರೆಯ ದಡದಲ್ಲಿ ಬೆಳೆದಿರುವ ತಾಜಾ ಪಾಚಿಯನ್ನು ತರಲಾಗುತ್ತದೆ. ನಂತರ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅದನ್ನು ಕಾದ ಬಾಣಲೆಗೆ ಹಾಕಿ ಬೇಯಿಸಲಾಗುತ್ತದೆ. ನಂತರ ಅದಕ್ಕೆ ಕೆಂಪುಮೆಣಸಿನ ಕಾಯಿಯನ್ನು ಹಾಕಿ ಹದಗೊಳಿಸುತ್ತಾರೆ. ಈ ಹೊಸ ಡಿಶ್ ಅನ್ನು ಚೀನಾದ ಜನರು ಬಹಳ ಉತ್ಸಾಹದಿಂದ ಸವಿಯುತ್ತಿದ್ದಾರೆ.

ಬೆಂಗಳೂರಿನಿಂದ ಜೋಗ್ ಫಾಲ್ಸ್‌ಗೆ ಅತೀ ಕಡಿಮೆ ದರದಲ್ಲಿ KSRTC ಪ್ಯಾಕೇಜ್, ಮಿಸ್ ಮಾಡ್ಬೇಡಿ

ಅನೇಕ ದೇಶಗಳು ಚೀನಾದ ಆಹಾರವನ್ನು (Food) ವಿರೋಧಿಸುತ್ತಿವೆ :   ಚೀನೀಯರ ಆಹಾರ ಪದ್ಧತಿಯಿಂದ ಅನೇಕ ರೀತಿಯ ವೈರಸ್ ಗಳು ಹರಡುತ್ತಿವೆ. ಮಹಾಮಾರಿ ಕೊರೋನಾ ಕೂಡ ಚೀನಾದಿಂದಲೇ ಹರಡಿದೆ ಎನ್ನುವುದು ಜಗಜ್ಜಾಹಿರವಾಗಿದೆ. ಅಲ್ಲಿನ ಜನರು ಬಾವಲಿಯನ್ನು ತಿಂದದ್ದರಿಂದ ಕೊರೋನಾ ವೈರಸ್ ಹುಟ್ಟಿಕೊಂಡಿತು ಎಂದು ಅನೇಕ ದೇಶಗಳು ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದವು.

ಭಾರತದಲ್ಲೂ ಕೂಡ ಅನೇಕ ಚೈನಿಸ್ ಆಹಾರಗಳು ಪ್ರಸಿದ್ಧವಾಗಿವೆ. ಅಲ್ಲಿನ ಚ್ಯಾಮಿನ್ ಚಿಲ್ಲಿ ಭಾರತದಲ್ಲಿ ಬಹಳ ಫೇಮಸ್ ಆಗಿದೆ. ಆದರೆ ಚೀನಾದಲ್ಲಿ ಆಹಾರದ ಬಗ್ಗೆ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತದೆ. ಅವುಗಳ ಸಾಧಕ ಬಾಧಕಗಳ ಕುರಿತು ಅವರು ಚಿಂತಿಸುವುದೇ ಇಲ್ಲ. ಚೀನಾದ ಜನಪ್ರಿಯ ‘ಡಾಗ್ ಮೀಟ್ ಪೆಸ್ಟಿವಲ್’ ಅನ್ನು ಇಡೀ ಜಗತ್ತು ವಿರೋಧಿಸುತ್ತದೆ. ಎಲ್ಲರ ವಿರೋಧದ ನಡುವೆಯೂ ಅಲ್ಲಿ ಇಂದಿಗೂ ಬರೋಬ್ಬರಿ ಹತ್ತು ದಿನಗಳ ಕಾಲ ಡಾಗ್ ಫೆಸ್ಟಿವಲ್ ನಡೆಸಲಾಗುತ್ತದೆ. ಈ ಹಬ್ಬದಲ್ಲಿ ಚೀನಾದ ಜನರು ನಾಯಿಯನ್ನು ಬೆಂಕಿಯಲ್ಲಿ ಹುರಿದು ತಿನ್ನುತ್ತಾರೆ. ನಿಯತ್ತಿಗೆ ಇನ್ನೊಂದು ಹೆಸರಾಗಿರುವ ನಾಯಿಗಳ ಮಾರಣಹೋಮ ಪ್ರತಿವರ್ಷವೂ ಅಲ್ಲಿ ನಡೆಯುತ್ತದೆ.

ಈಗ ಚೀನಾದ ಜನರು ಪಾಚಿ ತಿನ್ನುವುದರ ಮೂಲಕ ಜಗತ್ತಿನ ಗಮನ ಸೆಳೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚೀನಾದವರ ಈ ಹೊಸ ಡಿಶ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಚೀನಾದವರು ಪಾಚಿ ತಿನ್ನುವ ವಿಡಿಯೋವನ್ನು ನೋಡಿದ ಒಬ್ಬರು “ಪಾಚಿ ತಿಂದು ಇನ್ಯಾವ ವೈರಸ್ ಹರಡಲಿದ್ದೀರಿ?” ಎಂದು ಚೀನೀಯರನ್ನು ಪ್ರಶ್ನಿಸಿದ್ದಾರೆ.

click me!