ಸ್ಯಾಂಡ್‌ವಿಚ್‌ ಅರ್ಧ ಕಟ್‌ ಮಾಡಿ ಎಂದಿದ್ದಕ್ಕೆ 182 ರೂ. ಚಾರ್ಜ್‌ ಮಾಡಿದ ಕೆಫೆ: ಇಂಟರ್‌ನೆಟ್‌ನಲ್ಲಿ ವೈರಲ್‌

By BK Ashwin  |  First Published Aug 11, 2023, 3:35 PM IST

ಇಟಲಿಯ ಲೇಕ್ ಕೊಮೊ ಬಳಿಯ ಕೆಫೆಯೊಂದು ಸ್ಯಾಂಡ್‌ವಿಚ್‌ ಅನ್ನು ಅರ್ಧ ಕಟ್‌ ಮಾಡಿ ಕೊಡಿ ಎಂದಿದ್ದಕ್ಕೆ 182 ರೂ. ಚಾರ್ಜ್‌ ಮಾಡಿದ್ದಾರೆ.


ನವದೆಹಲಿ (ಆಗಸ್ಟ್‌ 11, 2023): ಇತ್ತೀಚೆಗೆ ಝೊಮ್ಯಾಟೋಗೆ ಟ್ವೀಟ್‌ ಮಾಡಿದ್ದ ಮಹಿಳೆಯೊಬ್ಬಳು ಕಂಟೇನರ್‌ ಚಾರ್ಜ್‌ ಎಂದು 60 ರೂ. ಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ನಾವು ಹೇಳಲು ಹೊರಟಿರೋ ಈ ಲೇಖನದ ಸ್ಟೋರಿ ನೋಡಿ.. ಈ ಕೆಫೆ ಕಂಟೇನರ್‌ಗೆ ಮಾಡಿದ ಚಾರ್ಜ್‌ಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಸ್ಯಾಂಡ್‌ವಿಚ್‌ ಅನ್ನು ಅರ್ಧ ಕಟ್‌ ಮಾಡಿ ಕೊಡಿ ಎಂದಿದ್ದಕ್ಕೆ ಅವರು ಸಿಕ್ಕಾಪಟ್ಟೆ ಎಕ್ಸ್ಟ್ರಾ ಚಾರ್ಜ್‌ ಮಾಡಿದ್ದಾರೆ. ಆ ಬಿಲ್‌ನಲ್ಲೇ ಭಾರತದಲ್ಲಿ ಇನ್ನೂ ಕೆಲ ಸ್ಯಾಂಡ್‌ವಿಚ್‌ಗಳನ್ನು ತಿನ್ಬೋದಿತ್ತಲ್ಲ ಅನ್ನೋದು ನೆಟ್ಟಿಗರ ಆಲೋಚನೆ.

ಇಟಲಿಯ ಲೇಕ್ ಕೊಮೊ ಬಳಿಯ ಜನಪ್ರಿಯ ಹಾಲಿಡೇ ತಾಣವಾದ ಗೆರಾ ಲಾರಿಯೊದಲ್ಲಿನ ಬಾರ್ ಪೇಸ್‌ನಲ್ಲಿ ಟೋಸ್ಟೆಡ್‌ ಸ್ಯಾಂಡ್‌ವಿಚ್‌ ಅನ್ನು ಅರ್ಧ ಕಟ್‌ ಮಾಡಿ ಕೊಡಿ ಎಂದಿದ್ದಕ್ಕೆ ಎಕ್ಸ್ಟ್ರಾ ಚಾರ್ಜ್‌ ಮಾಡಿದ್ದಾರೆ. ಆಹಾರ ಸೇವಿಸಿದ ಬಳಿಕ ಬಿಲ್‌ ನೋಡಿ ಆಶ್ಚರ್ಯಚಕಿತನಾಗಿದ್ದಾನೆ. ಏಕೆಂದರೆ, ಟೋಸ್ಟ್‌ ಅನ್ನು ಅರ್ಧಕ್ಕೆ ಕತ್ತರಿಸಿದ್ದಕ್ಕೆ ನಾವು ದುಡ್ಡು ಕೊಡಬೇಕೇ ಎಂದು ಆತ ಪ್ರಶ್ನೆ ಮಾಡಿದ್ದಾನೆ. ಅಷ್ಟಕ್ಕೂ, ಈ ಕೆಫೆ ಸ್ಯಾಂಡ್‌ವಿಚ್‌ ಅನ್ನು ಕಟ್‌ ಮಾಡಿದ್ದಕ್ಕೆ ಅವು ವಿಧಿಸಿದ ಶುಲ್ಕ ಎಷ್ಟು ಗೊತ್ತಾ 2 ಯೂರೋ ಅಂದರೆ ಅಂದಾಜು 182 ರೂ. ಶುಲ್ಕ ವಿಧಿಸಲಾಗಿದೆ. ಆ ದುಡ್ಡಲ್ಲಿ ನಾವು ಇನ್ನೂ ಕೆಲ ಸ್ಯಾಂಡ್‌ವಿಚ್‌ಗಳನ್ನೇ ತಿನ್ಬೋದಿತ್ತು ಅಲ್ವ..

Tap to resize

Latest Videos

ಇದನ್ನು ಓದಿ: Zomato ಮೂಲಕ 60 ರೂ. ಮೌಲ್ಯದ ಫುಡ್‌ ಆರ್ಡರ್ ಮಾಡಿದ ಮಹಿಳೆಗೆ ಕಂಟೇನರ್‌ ಚಾರ್ಜ್‌ಗೂ 60 ರೂ. ಶುಲ್ಕ: ಟ್ವೀಟ್‌ ವೈರಲ್‌

ಈ ಬಿಲ್‌ನ ಪ್ರಕಾರ ಸ್ಯಾಂಡ್‌ವಿಚ್‌ ಅನ್ನು ಕಟ್‌ ಮಾಡಿ ಕೊಟ್ಟಿದ್ದಕ್ಕೆ ಸ್ಯಾಂಡ್‌ವಿಚ್‌ನ ಒಟ್ಟು ವೆಚ್ಚವನ್ನು 7.50 ಯೂರೋದಿಂದ  9.50 ಯೂರೋಗೆ ಹೆಚ್ಚಳವಾಗಿದೆ. ಅಂದರೆ, ಬರೋಬ್ಬರಿ 2 ಯೂರೋ ಹೆಚ್ಚಾಗಿದೆ. ಇದು ಒಂದು ಕಪ್ ಕೆಫೆ ಎಸ್ಪ್ರೆಸ್ಸೋ ಬೆಲೆಗಿಂತ ಹೆಚ್ಚಾಗಿದೆ ಅನ್ನೋದು ಅಚ್ಚರಿಯಲ್ಲವೇ. ಈ ಹಿನ್ನೆಲೆ ಆ ಕೆಫೆ ಮೇಲೆ ಬೇಸತ್ತ ಗ್ರಾಹಕ ಕೇವಲ 1 ಸ್ಟಾರ್‌ ರೇಟಿಂಗ್ ನೀಡಿದ್ದಾನೆ. ಆದರೂ, ಈ ಕೆಫೆಗೆ ಗ್ರಾಹಕರು ಅಂದಾಜು 4.5 ರೇಟಿಂಗ್ ನೀಡಿದ್ದಾರೆ.

ಇನ್ನು, ಈ ಆರೋಪವನ್ನು ಕೆಫೆಯ ಮಾಲೀಕ ಕ್ರಿಸ್ಟಿನಾ ಬಿಯಾಚಿ ಅವರು ಸಮರ್ಥಿಸಿಕೊಂಡಿದ್ದು, ಹೆಚ್ಚುವರಿ ಮನವಿಗೆ ಹೆಚ್ಚು ವೆಚ್ಚ ಉಂಟಾಗುತ್ತದೆ ಎಂದು ವಿವರಿಸಿದ್ದಾರೆ. ಒಂದರ ಬದಲಿಗೆ ಎರಡು ಪ್ಲೇಟ್‌ಗಳನ್ನು ಬಳಸುವುದು ಮತ್ತು ಅವುಗಳನ್ನು ತೊಳೆಯಲು ಸಮಯ ಮತ್ತು ಶ್ರಮವು ಶುಲ್ಕವನ್ನು ಸಮರ್ಥಿಸುತ್ತದೆ ಎಂದೂ ಕ್ರಿಸ್ಟಿನಾ ಬಿಯಾಚಿಹೇಳಿದ್ದಾರೆ. ಸ್ಯಾಂಡ್‌ವಿಚ್‌ನಲ್ಲಿ ಫ್ರೆಂಚ್ ಫ್ರೈಸ್ ಸೇರಿದೆ ಎಂದೂ ಅವರು ತಿಳಿಸಿದ್ದು, ಈ ಹಿನ್ನೆಲೆ ಕತ್ತರಿಸಲು ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದಿದ್ದಾರೆ. 

ಇದನ್ನೂ ಓದಿ: ಕಾರ್ಪೊರೇಟ್‌ ಲೈಫ್‌ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್‌ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ!

ಹಾಗೂ, ಆ ಸಮಯದಲ್ಲಿ ಗ್ರಾಹಕರು ದೂರು ನೀಡಿದ್ದರೆ, ಬಿಲ್‌ನಿಂದ ಶುಲ್ಕವನ್ನು ತೆಗೆದುಹಾಕಲಾಗುತ್ತದೆ ಎಂದೂ ಕೆಫೆ ಮಾಲೀಕ ಕ್ರಿಸ್ಟಿನಾ ಬಿಯಾಚಿ ಹೇಳಿದರು. ಈ ಘಟನೆಯು ಇಟಲಿಯಲ್ಲಿ ಇದೇ ಮೊದಲಲ್ಲ, ಏಕೆಂದರೆ ಪ್ರವಾಸಿಗರು ಈ ಹಿಂದೆಯೂ ಊಟಕ್ಕೆ ಹೆಚ್ಚಿನ ಬೆಲೆ ವಿಧಿಸಿರುವ ಬಗ್ಗೆ ದೂರು ನೀಡಿದ್ದರು. ಊಟಕ್ಕೆ ಆಶ್ಚರ್ಯಕರವಾದ ರೀತಿಯಲ್ಲಿ ಶುಲ್ಕ ವಿಧಿಸೋದು ಇಟಲಿಯಲ್ಲಿ ಪ್ರವಾಸಿಗರಿಗೆ ಕಳವಳವನ್ನುಂಟುಮಾಡುತ್ತಿದೆ ಎಂದು ತೋರುತ್ತದೆ.

ಇದನ್ನೂ ಓದಿ: ಫುಲ್‌ ಟೈಟಾಗಿ ಮಧ್ಯರಾತ್ರಿ ಬಾಸ್‌ಗೆ ಮೆಸೇಜ್‌ ಮಾಡಿದ ಉದ್ಯೋಗಿ: ವೈರಲ್‌ ಆಯ್ತು ಪೋಸ್ಟ್‌!

click me!