ತೆಂಗಿನಕಾಯಿ ಹಾಲಿನಲ್ಲಿ ಸಿಂಪಲ್‌ ಆಗಿ ಸೂಪರ್‌ ಟೊಮೆಟೊ ರೈಸ್ ಹೀಗೆ ಮಾಡಿ

By Gowthami KFirst Published Oct 2, 2024, 4:26 PM IST
Highlights

ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ : ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ ಮಾಡುವ ವಿಧಾನ ಇಲ್ಲಿದೆ.

ಟೊಮೆಟೊ ರೈಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರೂ ಇಷ್ಟಪಟ್ಟು ತಿನ್ನುವ ಖಾದ್ಯಗಳಲ್ಲಿ ಇದೂ ಒಂದು. ಇವತ್ತು ಮಧ್ಯಾಹ್ನ ಊಟಕ್ಕೆ ಟೊಮೆಟೊ ರೈಸ್ ಮಾಡೋಣ ಅಂತ ಅಂದುಕೊಂಡಿದ್ದೀರಾ? ಹಾಗಾದ್ರೆ, ಈ ಸಲ ಸ್ವಲ್ಪ ಡಿಫರೆಂಟ್ ಆಗಿ ತೆಂಗಿನಕಾಯಿ ಹಾಲು ಹಾಕಿ ಮಾಡಿ ನೋಡಿ. ಈ ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ ತಿನ್ನೋಕೆ ತುಂಬಾ ರುಚಿಯಾಗಿರುತ್ತೆ.

ಮುಖ್ಯವಾಗಿ ಈ ರೆಸಿಪಿ ಮಾಡೋಕೆ ಹೆಚ್ಚು ಸಮಯ ತೆಗೆದುಕೊಳಗಳುವುದಿಲ್ಲ. ತುಂಬಾ ಸುಲಭವಾಗಿ ಮಾಡಿ ಮುಗಿಸಿ ಬಿಡಬಹುದು. ಅಷ್ಟೇ ಅಲ್ಲ, ಈ ರೆಸಿಪಿನ ಊಟಕ್ಕೆ ಟಿಫನ್ ಬಾಕ್ಸ್‌ನಲ್ಲಿ ಹಾಕಿಕೊಂಡು ಹೋದ್ರೆ, ಮಕ್ಕಳು ಖುಷಿ ಖುಷಿಯಾಗಿ ತಿಂದು ಬರ್ತಾರೆ. ಒಂದು ಸಲ ನಿಮ್ಮ ಮನೆಯವರಿಗೆಲ್ಲಾ ಈ ರೆಸಿಪಿ ಮಾಡಿ ಕೊಡಿ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಸರಿ ಬನ್ನಿ, ಈಗ ಈ ಪೋಸ್ಟ್‌ನಲ್ಲಿ ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ ಮಾಡೋದು ಹೇಗೆ ಅಂತ ತಿಳಿದುಕೊಳ್ಳೋಣ.

Latest Videos

ಶಿಶಿರ್‌ ಹಸ್ತರೇಖೆ ನೋಡಿ 38ರಲ್ಲಿ ಮದುವೆ ಎಂದ ಚೈತ್ರಾ, ರಂಜಿತ್ ಮನಸ್ಸು ಗೆದ್ದು ಐಶೂ ಬ್ಲಶಿಂಗ್!

ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು:

ಅಕ್ಕಿ - 1/2 ಕೆಜಿ
ಟೊಮೆಟೊ - 1/2 ಕೆಜಿ
ಹಸಿಮೆಣಸಿನಕಾಯಿ - 4
ಸಣ್ಣ ಈರುಳ್ಳಿ - 1/2 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ಪುದೀನಾ - ಸ್ವಲ್ಪ
ಬೆಳ್ಳುಳ್ಳಿ - 20 ಗ್ರಾಂ
ಶುಂಠಿ - 20 ಗ್ರಾಂ
ಚಕ್ಕೆ - 4
ಲವಂಗ - 7
ಏಲಕ್ಕಿ - 5
ಸ್ಟಾರ್ ಅನಿಸ್ - 4
ಬಿರಿಯಾನಿ ಎಲೆ - 1
ಮೆಣಸಿನ ಪುಡಿ - 1 ಚಮಚ
ಅರಿಶಿನ ಪುಡಿ - 1/4 ಚಮಚ
ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ತುಪ್ಪ - 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ತೆಂಗಿನಕಾಯಿ ಹಾಲು - 200 ಮಿ.ಲೀ
ಹಸಿ ಬಟಾಣಿ - 200 ಗ್ರಾಂ

ಮಾಡುವ ವಿಧಾನ :

ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ ಮಾಡಲು ಮೊದಲು ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸುಮಾರು ಒಂದು ಗಂಟೆ ನೆನೆಸಿಡಿ. ನಂತರ ಟೊಮೆಟೊವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

ಬಿಗ್‌ಬಾಸ್‌ ಮನೆಯಲ್ಲಿ ಕಳ್ಳ, ಪೊಲೀಸ್‌, ಚಿನ್ನ, ಲಾಯರ್‌: ಈ ಸೀಸನ್‌ ಒಂದು ಸಿನಿಮಾ!

ಈಗ ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು, ಅದಕ್ಕೆ ಎಣ್ಣೆ, ತುಪ್ಪ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಸ್ಟಾರ್ ಅನಿಸ್ ಹಾಕಿ ಹುರಿಯಿರಿ. ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಮತ್ತು ಉಳಿದ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ರುಬ್ಬಿದ ಟೊಮೆಟೊ ಮಿಶ್ರಣವನ್ನು ಸೇರಿಸಿ.

ಎಣ್ಣೆ ಬಿಡಿಸಿಕೊಂಡ ನಂತರ ಹಸಿ ಬಟಾಣಿಯನ್ನು ಸೇರಿಸಿ. ಈಗ ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ ಎರಡು ಪಟ್ಟು ನೀರು ಸೇರಿಸಿ ಒಂದು ಕುದಿ ಬರಲು ಬಿಡಿ. ನಂತರ ಅಕ್ಕಿ ಸೇರಿಸಿ. ನಂತರ ಎರಡು ಚಮಚ ತುಪ್ಪ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್‌ನಲ್ಲಿ ಸೀಟಿ ಬಂದ ನಂತರ ಮುಚ್ಚಳ ತೆಗೆದು ಒಮ್ಮೆ ಕಲಸಿ. ಅಷ್ಟೇ, ರುಚಿಕರವಾದ ತೆಂಗಿನಕಾಯಿ ಹಾಲಿನ ಟೊಮೆಟೊ ರೈಸ್ ಸವಿಯಲು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಕಳುಹಿಸಿ. ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್‌ ಮಾಡಿ.

click me!