ದೇವಸ್ಥಾನದ ನೈವೇದ್ಯ ಅಂದರೆ ಅದರಲ್ಲಿ ಭಕ್ತಿ ರಸವೂ ತುಂಬಿ ಅದ್ಭುತ ರುಚಿ ಇರುತ್ತದೆ. ಆ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಮಾಡಿದರೆ ಆ ರುಚಿ ಬರೋದಿಲ್ಲ. ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ದೇವರ ನೈವೇದ್ಯಕ್ಕೆ ಬಳಸುವ ಪೊಂಗಲ್ ಅನ್ನು ತಯಾರಿಸೋ ರೀತಿ ಇಲ್ಲಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿ ತಾಯಿ ರಾಜ ರಾಜೇಶ್ವರಿಯ ಬೃಹತ್ ದೇವಾಲಯ ಇದೆ. ಆ ದೇವಾಲಯದ ಮೂಲಕವೇ ಈ ನಗರಕ್ಕೆ ರಾಜರಾಜೇಶ್ವರಿ ನಗರ ಅನ್ನುವ ಹೆಸರು ಬಂದಿದೆ. ಹಲವು ವರ್ಷಗಳ ಇತಿಹಾಸ ಇರುವ ಈ ದೇವಾಲಯಕ್ಕೆ ನಿತ್ಯ ದೇಶದ ವಿವಿದೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಾಲಯದ ಬೃಹದಾಕಾರದ ಗೋಪುರ, ದೇವಾಲಯದ ವಿನ್ಯಾಸ, ಗರ್ಭಗುಡಿ ಎಲ್ಲವೂ ಸೊಗಸಾಗಿವೆ. ಭಕ್ತರನ್ನು ನಿತ್ಯ ತನ್ನತ್ತ ಸೆಳೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜರಾಜೇಶ್ವರಿ ದೇವಿಯ ಮಹಿಮೆಯೂ ಅಪಾರ. ಈ ದೇವಾಲಯದ ಪ್ರಸಾದವೂ ಬಹಳ ಪ್ರಸಿದ್ಧ. ಈ ದೇವಸ್ಥಾನದಲ್ಲಿ ನಿತ್ಯ ಭಕ್ತಾದಿಗಳಿಗೆ ದೇವರ ಪ್ರಸಾದ ನೀಡಲಾಗುತ್ತದೆ. ಬಹಳ ರುಚಿಕಟ್ಟಾದ ಈ ಪ್ರಸಾದವನ್ನು ಹೇಗೆ ಮಾಡ್ತಾರೆ ಅನ್ನೋ ಕುತೂಹಲ ಅನೇಕ ಭಕ್ತಾದಿಗಳಿಗಿದೆ.
ಹಾಗೆ ನೋಡಿದರೆ ಯಾವ ದೇವಸ್ಥಾನಕ್ಕೆ ಹೋದರೂ ಸರಿಯೇ, ಅಲ್ಲಿನ ಪ್ರಸಾದ ಬಲು ರುಚಿಯಾಗಿರುತ್ತದೆ. ಮನೆಯಲ್ಲಿ ಅದೇ ಸಾಮಗ್ರಿ ಹಾಕಿ ಆ ತಿನಿಸು ಸಿದ್ಧ ಪಡಿಸಿದರೂ ಅಂಥ ಅದ್ಭುತ ರುಚಿ ಬರೋದಿಲ್ಲ. ದೇವಾಲಯದಲ್ಲಿ ದೇವರಿಗೆ ನೈವೇದ್ಯ ಸಿದ್ಧಪಡಿಸುವವರೇ ಹೇಳುವ ಪ್ರಕಾರ, ದೇವರಿಗೆ ನೈವೇದ್ಯ ಮಾಡುವ ಮೊದಲಿನ ತಿನಿಸಿಗೂ ನೇವೈದ್ಯವಾದ ಬಳಿಕದ ತಿನಿಸಿನ ರುಚಿಗೂ ಬಹಳ ವ್ಯತ್ಯಾಸ ಇರುತ್ತದೆ. ದೇವರ ಮುಂದೆ ನೇವೇದ್ಯವಾಗಿ ಪರಿವರ್ತನೆಯಾಗುವ ಪ್ರಸಾದ ರುಚಿಗೆ ಯಾವ ತಿನಿಸೂ ಸಾಟಿಯಾಗಲಾರದು.
ಅಂದ ಹಾಗೆ ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನ ತೆರೆಯುವುದು ಸೂರ್ಯೋದಯದ ಹೊತ್ತಿಗೆ. ಅಂದರೆ ಸುಮಾರು ಆರು ಗಂಟೆಗೆ. ದೇವಸ್ಥಾನದ ಬಾಗಿಲು ತೆರೆಯುವ ಹೊತ್ತಿಗೆ ಗೋಪೂಜೆ ನಡೆಯುತ್ತದೆ. ಗೋವಿಗೆ ಪೂಜೆ ಸಲ್ಲಿಸಿದ ಬಳಿಕ ದೇವಿಯ ಸನ್ನಿಧಿಯನ್ನು ತೆರೆಯಲಾಗುತ್ತದೆ. ದೇವಿಯ ಸನ್ನಿಧಿಯಲ್ಲಿ ಆರಂಭದಲ್ಲಿ ಗಂಟಾನಾದ ಮಾಡಿ ಬಳಿಕ ಬಾಗಿಲು ಪರದೆ ಸರಿಸಲಾಗುತ್ತದೆ. ಬಳಿಕ ಧೂಪ, ದೀಪ, ನೈವೇದ್ಯ ಮಾಡಿ, ಮಂಗಳಾರತಿ ಮಾಡಿದ ಬಳಿಕ ಭಕ್ತಾದಿಗಳು ದೇವಿಯ ದರ್ಶನ ಮಾಡಬಹುದು.
Marriage Muhurat 2023: ಮುಹೂರ್ತವೇ ಇಲ್ಲ ಅನ್ನೋ ಟೈಂ ಮುಗೀತು, ಮೇ ಪೂರ್ತಿ ಮದುವೆ ಊಟನೇ ಮಾಡಿ ಬದುಕ್ಬೋದು!
ಈ ದೇವಸ್ಥಾನದಲ್ಲಿ ನೀಡುವುದು ಸಿಹಿ ಪೊಂಗಲ್. ಈ ಪ್ರಸಾದ ಸಿದ್ಧ ಪಡಿಸುವ ಮೊದಲು ಶ್ರೀ ರಾಜ ರಾಜೇಶ್ವರಿ ದೇವಿಯ ಸ್ತೋತ್ರ ಪಠಿಸಲಾಗುತ್ತದೆ. ಬಳಿಕ ಪ್ರಸಾದದ ಕೆಲಸ ಆರಂಭವಾಗುತ್ತದೆ.
ರಾಜರಾಜೇಶ್ವರಿ ದೇವಾಲಯದ ಪ್ರಸಾದಕ್ಕೆ ಬಳಸುವ ಸಾಮಗ್ರಿಗಳು - ಅಕ್ಕಿ, ಹೆಸರು ಬೇಳೆ, ಬೆಲ್ಲ, ಹಾಲು, ತುಪ್ಪ, ಅರಿಶಿನ, ಒಣ ಕೊಬ್ಬರಿ, ಲವಂಗ, ಗೋಡಂಬಿ, ದ್ರಾಕ್ಷಿ, ಪಚ್ಚ ಕರ್ಪೂರ, ಏಲಕ್ಕಿ ಪುಡಿ.
ಮೊದಲು ಘಮ ಬರುವ ಹಾಗೆ ತೊಳೆದು ಒಣಗಿಸಿಟ್ಟ ಹೆಸರು ಬೇಳೆಯನ್ನು ಹುರಿಯುತ್ತಾರೆ. ಹಸಿ ವಾಸನೆ ಹೋಗಿ ಘಮ ಬರುವ ಹಾಗೆ ಈ ಹೆಸರು ಬೇಳೆ ಹುರಿದ ಬಳಿಕ ಪೊಂಗಲ್ ತಯಾರಿಸಲಾಗುತ್ತದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗೋ 'ಸವಿರುಚಿ ಸೀಸನ್ 2' ಕಾರ್ಯಕ್ರಮವನ್ನು ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ನಡೆಸಿಕೊಡ್ತಾರೆ. ಈ ಸೀಸನ್‌ನಲ್ಲಿ(Season) ಪಾರಂಪರಿಕ ಅಡುಗೆಗಳ(Traditional recipe) ಪರಿಚಯ ಮಾಡಿಕೊಡ್ತಿದ್ದಾರೆ. ಅದರಲ್ಲಿ ದೇವಸ್ಥಾನದ ಅಡುಗೆಯೂ ಮಹತ್ವದ್ದು. ಈ ಕಾರ್ಯಕ್ರಮದಲ್ಲಿ ಈ ಸಲ ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಭಟ್ಟರೇ ಬಂದು ಪೊಂಗಲ್ ಪ್ರಸಾದ ತಯಾರಿಸಿದ್ದು ವಿಶೇಷವಾಗಿತ್ತು, ಈ ಕಾರ್ಯಕ್ರಮ)Program) ಸೋಮವಾರದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುತ್ತೆ. ಈ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಅಡುಗೆ ತಯಾರಿಸುವವರು ಬಂದು ದೇವಸ್ಥಾನದಲ್ಲಿ ಮಾಡುವ ಹಾಗೆ ಆರಂಭದಲ್ಲಿ ದೇವಿ ಸ್ತುತಿ ಮಾಡಿ ಸಂಪ್ರದಾಯದಂತೆ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತೀ ದಿನ ತಯಾರಿಸುವ ಪೊಂಗಲ್ ಸಿದ್ಧಪಡಿಸಿದ್ದು ವಿಶೇಷವಾಗಿತ್ತು.
Ayodhya Ram Temple: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನ ನಿಗದಿ