Viral Video: ಪರ್ಮಿಷನ್​ ಪಡೆದು ನಟಿ ಹುಮಾ ಖುರೇಷಿಗೆ ಕಿಸ್​ ಕೊಟ್ಟ ಶೆಫ್!

Published : Jul 06, 2023, 01:35 PM IST
Viral Video: ಪರ್ಮಿಷನ್​ ಪಡೆದು ನಟಿ ಹುಮಾ ಖುರೇಷಿಗೆ ಕಿಸ್​ ಕೊಟ್ಟ ಶೆಫ್!

ಸಾರಾಂಶ

ಬಾಲಿವುಡ್​ ನಟಿ ಹುಮಾ ಖುರೇಷಿ ಅವರನ್ನು ಕಿಸ್ ಮಾಡುವ ಮುನ್ನ ಆಸ್ಟ್ರೇಲಿಯಾದ ಖ್ಯಾತ ಬಾಣಸಿಗ   ಗ್ಯಾರಿ ಮೆಹಿಗನ್ ಅವರು ಪರ್ಮಿಷನ್​ ಕೇಳಿರುವ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ.   

ಬಾಲಿವುಡ್​ ನಟಿ ಹುಮಾ ಖುರೇಷಿ ಪ್ರಸ್ತುತ ತರ್ಲಾ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ, ಅಲ್ಲಿ ಅವರು ಗೃಹಿಣಿಯಾಗಿರುವ ತರ್ಲಾ ದಲಾಲ್​ ಅವರು ಹೇಗೆ ಖ್ಯಾತ  ಬಾಣಸಿಗರಾಗಿ ಪರಿವರ್ತರಾದರು ಎಂಬ ಬಗೆಗಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರ  ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ, ಆಸ್ಟ್ರೇಲಿಯಾದ ಖ್ಯಾತ ಬಾಣಸಿಗ  ಮಾಸ್ಟರ್‌ಚೆಫ್ ಗ್ಯಾರಿ ಮೆಹಿಗನ್ (Gary Mehigan) ಅವರು ಹುಮಾ ಅವರನ್ನು ಸ್ವಾಗತಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಇದಕ್ಕೆ  ಕಾರಣ, ಗ್ಯಾರಿ ಮೆಹಿಗನ್ ಅವರು ನಡೆದುಕೊಂಡಿರುವ ರೀತಿ. ಅಷ್ಟಕ್ಕೂ ಅವರು ಮಾಡಿದ್ದೇನೆಂದರೆ, ನಟಿ ಹುಮಾ ಖುರೇಷಿ ಅವರಿಗೆ ಮುತ್ತು ಕೊಡಲು ಬಯಸಿದ್ದರು. ವಿದೇಶಿ ಸಂಸ್ಕೃತಿಯಲ್ಲಿ ಕಿಸ್ಸಿಂಗ್​ ಎನ್ನುವುದು ಸಹಜ ಪ್ರಕ್ರಿಯೆ. ಭಾರತ ಕೂಡ ಈಗ ಅದಕ್ಕೇನೂ ಹೊರತಾಗಿಲ್ಲ. ಮೊದಲೆಲ್ಲಾ ನಮಸ್ಕಾರ ಮಾಡಿ ಸ್ವಾಗತಿಸುತ್ತಿದ್ದರೆ, ಈಗ ಕಿಸ್ಸಿಂಗ್​ ಮಾಡುವುದು, ತಬ್ಬಿಕೊಳ್ಳುವ ವಿದೇಶಿ ಸಂಸ್ಕೃತಿ ಮಾಮೂಲಾಗಿದೆ. ಆದರೆ ಈ ಘಟನೆಯಲ್ಲಿ ಗ್ಯಾರಿ ಮೆಹಿಗನ್​ ಅವರು ನಡೆದುಕೊಂಡ ರೀತಿಗೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಗ್ಯಾರಿ ಮೆಹಿಗನ್​ ಅವರು ಮಾಡಿದ್ದೇನೆಂದರೆ, ಅವರು ನಟಿ ಹುಮಾ ಖುರೇಷಿ (Huma Qureshi) ಅವರಿಗೆ ಕಿಸ್​ ಮಾಡಲು ಬಯಸಿದ್ದರು. ಆದರೆ ನೇರವಾಗಿ ಕಿಸ್​  ಮಾಡದೇ ಮುತ್ತಿಕ್ಕುವ ಮೊದಲು ಹುಮಾ ಅವರ ಪರ್ಮಿಷನ್​  ಕೋರಿದರು. ಯಾವುದೇ ಅಳುಕು ಇಲ್ಲದೆ ಅದರಲ್ಲೇನು ಎಂದು ನಟಿ ಮುತ್ತು ಕೊಡಲು ಅನುಮತಿ ನೀಡಿದರು. ನಂತರ ಗ್ಯಾರಿ ಅವರು ಹುಮಾ ಅವರ ಕೆನ್ನೆಗೆ  ಮುತ್ತು ಕೊಟ್ಟರು. ಹೀಗೆ  ಪರ್ಮಿಷನ್​ ಕೇಳಿ ಕಿಸ್​ ಮಾಡಿರುವ ವಿಡಿಯೋ ಅಪರೂಪ ಎನ್ನಿಸಿದ್ದು, ಥಹರೇವಾರಿ ಕಮೆಂಟ್​ಗಳೊಂದಿಗೆ ಭಾರಿ ಸುದ್ದಿ ಮಾಡುತ್ತಿದೆ. 

Sacred Games-2: ಪೀರಿಯಡ್ಸ್​ ಡೇಟ್​ ಕೇಳಿ ಸೆಕ್ಸ್​ ಸೀನ್​ ಮಾಡಿಸಿದ ನಿರ್ದೇಶಕ, ನಟಿ ಅಮೃತಾ ಸುಭಾಷ್ ಖುಷ್​

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಗ್ಯಾರಿ ಅವರು ಆರಂಭದಲ್ಲಿ ಹುಮಾ ಅವರಿಗೆ ಶುಭಾಶಯ ಕೋರಿದರು.  ನಂತರ ಅವರು  'ನಾನು ಕಿಸ್ (kiss) ಮಾಡಬಹುದಾ ಹುಮಾ' ಎಂದು ಪ್ರಶ್ನಿಸಿದರು. ಆಗ ಹುಮಾ ಅವರು ಓಕೆ ಎಂದರು. ನಂತರ ಕಿಸ್​ ಮಾಡಿದ ಗ್ಯಾರಿ ಅವರು,  ಮುಂದಿನ ಕಾರ್ಯ ಕೈಗೊಳ್ಳುವ ಪೂರ್ವದಲ್ಲಿ  ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದರು. ಇದನ್ನು ಕಂಡ ನೆಟ್ಟಿಗರು,  ಗ್ಯಾರಿ ಅವರ ಸಭ್ಯ ಮತ್ತು ಗೌರವಾನ್ವಿತ ನಡವಳಿಕೆಯನ್ನು ಹೊಗಳುತ್ತಿದ್ದಾರೆ.  ಅವರು ಅನುಮತಿ ಪಡೆದ ರೀತಿ ನನಗೆ ಇಷ್ಟವಾಯಿತು ಎಂದು ಹಲವರು ಕಮೆಂಟ್​ ಮಾಡುತ್ತಿದ್ದರೆ,  ಇಂಥವರನ್ನು ನೋಡಿ ಭಾರತೀಯರೂ ಭಾರತದ ಸಂಸ್ಕೃತಿ ಕಲಿಯುವ ಕಾಲ ಬಂದಿದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. 

ಅಂದಹಾಗೆ ಗ್ಯಾರಿ ಮೆಹಿಗನ್​ ಅವರು ಆಸ್ಟ್ರೇಲಿಯಾದ ಪ್ರಸಿದ್ಧ ಬಾಣಸಿಗ. ಇವರು ಹೆಚ್ಚು ಇಷ್ಟಪಡುವುದು ಭಾರತದ ಅಡುಗೆಯನ್ನು. ತಮ್ಮ ಇನ್​ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಭಾರತದ ಅಡುಗೆಗಳ ಬಗ್ಗೆ ಸಾಕಷ್ಟು ಪಾಕ ವಿಧಾನಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇನ್ನು ತರ್ಲಾ (Tarla) ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರವನ್ನು ಯೂಷ್ ಗುಪ್ತಾ ನಿರ್ದೇಶಿಸಿದ್ದಾರೆ. ಈ ಚಿತ್ರವು ಬಾಣಸಿಗ ಮತ್ತು ಅಡುಗೆ ಪುಸ್ತಕ ಲೇಖಕ ತರ್ಲಾ ದಲಾಲ್ ಅವರ ಜೀವನ ಮತ್ತು ವೃತ್ತಿಜೀವನವನ್ನು ಆಧರಿಸಿದ ಜೀವನಚರಿತ್ರೆಯಾಗಿದೆ. ತರ್ಲಾ ಪಾತ್ರದಲ್ಲಿ ಹುಮಾ ಖುರೇಷಿ ನಟಿಸಿದ್ದು, ತರ್ಲಾ ಅವರ ಪತಿಯಾಗಿ ಶರೀಬ್ ಹಶ್ಮಿ ಕೂಡ ಇದ್ದಾರೆ. ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಮೂವೀಸ್ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ಅವರ ಅರ್ಥ್‌ಸ್ಕಿ ಪಿಕ್ಚರ್ಸ್ ನಿರ್ಮಿಸಿದ ತರ್ಲಾ ಜುಲೈ 7 ರಂದು ZEE5 ನಲ್ಲಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ.

ಆತ ಬಿಟ್ಟು ತಮ್ಮನ್ನು ಯಾರು ಟಚ್​ ಮಾಡ್ಬಾರ್ದೆಂದು ಕಿರಿಕ್​ ಮಾಡಿದ್ರಾ ಬಿಂದಾಸ್ ನಟಿ ಹನ್ಸಿಕಾ ಮೋಟ್ವಾನಿ?

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks