
ನವದೆಹಲಿ: ಇಂದು ತಂತ್ರಜ್ಞಾನ ಅತೀವೇಗದಲ್ಲಿ ಮುಂದುವರೆದಿದ್ದು, ಹಣ ಹಾಗೂ ಸ್ಮಾರ್ಟ್ ಫೋನ್ ಒಂದು ಇದ್ದರೆ ಸಾಕು ಎಲ್ಲವೂ ಮನೆ ಬಾಗಿಲಿಗೆ ಬಂದು ತಲುಪುವಷ್ಟರ ಮಟ್ಟಿಗೆ ಇಂದು ತಂತ್ರಜ್ಞಾನ ಮುಂದುವರೆದಿದೆ. ಆದರೆ ಇದರಲ್ಲೂ ಕೆಲ ಎಡವಟ್ಟುಗಳಾಗುವುದನ್ನು ಅಪಾರ್ಥಗಳಾಗುವುದನ್ನು ನಾವು ನೋಡಿದ್ದೇವೆ. ಬಟ್ಟೆ ಬುಕ್ ಮಾಡಿದರೆ ಹಳೆತಾದ ಬಳಸಿದ ಬಟ್ಟೆ ಬರುವುದು, ಹಳೆ ಶೂ ಬರುವುದು. ಬುಕ್ ಮಾಡಿದ್ದು ಯಾವುದೋ ಡೆಲಿವರಿ ಆಗುವುದು ಇನ್ಯಾವುದು ಹೀಗೆ ಹಲವು ರೀತಿಯಲ್ಲಿ ಎಡವಟ್ಟುಗಳಾಗುತ್ತವೆ. ಇಲ್ಲೊಂದು ಯುವಕನಿಗೂ ಇದೇ ರೀತಿಯ ಎಡವಟ್ಟಿನ ಅನುಭವ ಆಗಿದ್ದು, ತನಗೆ ಉಂಟಾದ ತೊಂದರೆಯನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಫುಲ್ ವೈರಲ್ ಆಗಿದೆ.
ಯುವಕನೋರ್ವ ಆನ್‌ಲೈನ್‌ನಲ್ಲಿ ಈರುಳ್ಳಿಯ ಕರಿದ ಉತ್ಪನ್ನ(onion rings)ವನ್ನು ಆರ್ಡರ್ ಮಾಡಿದ್ದ. ಸ್ವಲ್ಪ ಹೊತ್ತಿನ ನಂತರ ಮನೆಗೆ ಬಂದ ಆಹಾರದ ಪೊಟ್ಟಣವನ್ನು ಬಿಚ್ಚಿ ನೋಡಿದ್ದ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಅಲ್ಲಿ ಈತನಿಗೆ ಈರುಳ್ಳಿಯ ಕರಿದ ಉತ್ಪನ್ನದ ಬದಲು ದುಂಡನೆಯಾಗಿ ಕತ್ತರಿಸಲ್ಪಟ್ಟ ಹಸಿ ಈರುಳ್ಳಿಯ ತುಂಡುಗಳು ಬಂದಿದ್ದವು. ಇದನ್ನು ಆತ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ನಗೆ ಗಡಲಲ್ಲಿ ತೇಲಿದ್ದಾರೆ ಜೊತೆಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ರುಚಿಯಾದ ಚಿಕನ್ ಆರ್ಡರ್, ತಿಂದಾದ ಬಳಿಕ ಬಾಕ್ಸ್ ನೋಡಿ 12 ಗಂಟೆ ವಾಂತಿ!
ಆನ್‌ಲೈನ್‌ನಲ್ಲಿ ಈರುಳ್ಳಿಯ ಕರಿದ ಉತ್ಪನ್ನ ಆಹಾರ ಬುಕ್ ಮಾಡಿದ ಈತನಿಗೆ ಆರು ತುಂಡು ಈರುಳ್ಳಿ ಬಂದಿದೆ. ಆನ್‌ಲೈನ್ ಬುಕ್ ಮಾಡಿದ ನನಗೆ ಏನು ಬಂತು ನೋಡಿ ಎಂದು ಆತ ಸಣ್ಣ ಪಾರದರ್ಶಕ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ರೆಸ್ಟೋರೆಂಟ್‌ನಿಂದ ಪಡೆದ ಹಸಿ ಈರುಳ್ಳಿಯ ಆರು ಹೋಳುಗಳನ್ನು ತೋರಿಸಿದ್ದಾನೆ.
ದೆಹಲಿಯ Instagram ಬಳಕೆದಾರ Ubaidu ಅವರಿಗೆ ಈ ಅನುಭವ ಆಗಿದೆ. ಅವರು ಲೈಟ್ ಆಗಿ ಏನನ್ನಾದರೂ ತಿನ್ನಬೇಕು ಎಂದು ಬಯಸಿದ್ದರು. ಹಾಗಾಗಿ ಗರಿಗರಿಯಾದ ಕರಿದ ಈರುಳ್ಳಿಯನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ. ಆದಾಗ್ಯೂ, ಡೆಲಿವರಿ ತಲುಪಿದಾಗ ಬೆಚ್ಚಿ ಬೀಳುವ ಸ್ಥಿತಿ ಅವರದಾಗಿತ್ತು. ಅಸಮಾಧಾನಗೊಂಡ ಅವರು ತಮ್ಮ ಕಷ್ಟವನ್ನು ಇನ್ಸ್ಟಾಗ್ರಾಮ್ ರೀಲ್‌ನಲ್ಲಿ ಹಾಕಿದ್ದಾರೆ. ತಾನು ಆರ್ಡರ್ ಮಾಡಿದ್ದೇನು ತನಗೆ ಏನು ಬಂತು ಎಂಬುದನ್ನು ಅವರು ತೋರಿಸಿದರು. ರೀಲ್ಸ್‌ನಲ್ಲಿ ಹಸಿ ಈರುಳ್ಳಿ ಉಂಗುರಗಳನ್ನು ಕೈಯಲ್ಲಿ ಹಾಕಿ ವಿಜಯ ಸಂಕೇತವನ್ನು ಅವರು ನಗುತ್ತಾ ತೋರಿಸುತ್ತಿರುವುದನ್ನು ನೋಡಿದರೆ ನೋಡುಗರಿಗೆ ನಗು ಉಕ್ಕಿ ಬರುತ್ತಿದೆ.
Cybrer Crime ವೈನ್ ಡೆಲಿವರಿಗೆ 10 ರೂ ನೀಡಲು ಹೇಳಿ ಯುವತಿಯ ಅಕೌಂಟ್‌ನಿಂದ 50 ಸಾವಿರ ಧೋಖಾ!
ಇದು ತಾಂತ್ರಿಕವಾಗಿ ತಪ್ಪಾಲ್ಲ ಆದರೆ ರೆಸ್ಟೋರೆಂಟ್‌ನವರು ಜೊತೆಗೆ ಸ್ವಲ್ಪ ಎಣ್ಣೆ ಹಾಗೂ ಈ ಈರುಳ್ಳಿಯನ್ನು ಕರಿಯಲು ಪಾತ್ರೆಯನ್ನು ಕೂಡ ಕಳುಹಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಹೀಗೆ ಮಾಡಿದ್ದಕ್ಕೆ ರೆಸ್ಟೋರೆಂಟ್ ಕ್ಷಮೆ ಕೇಳಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.