ಗರ್ಭಾವಸ್ಥೆಯಲ್ಲಿ ಬೊಜ್ಜು ಹೆಚ್ಚಾಗ್ಬಾರದು, ತೂಕ ಇಳಿಬೇಕಂದ್ರೆ ತಿನ್ನೋ ಆಹಾರ ಹೀಗಿರಲಿ

By Suvarna News  |  First Published Jun 16, 2022, 2:59 PM IST

ಗರ್ಭಿಣಿಯರ ತೂಕ ಯರ್ರಾಬಿರ್ರಿ ಹೆಚ್ಚಾಗಿರುತ್ತದೆ. ಹೆರಿಗೆ ನಂತ್ರ ಈ ಬೊಜ್ಜು ಕರಗಿಸೋದು ಸುಲಭವಲ್ಲ. ಗರ್ಭಿಣಿಯಾದಾಗ ತಿಂದ ಆಹಾರವೇ ಇದಕ್ಕೆ ಕಾರಣವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯಾದ್ಮೇಲೆ ಎರಡೂ ಸಂದರ್ಭದಲ್ಲಿ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸ್ಬೇಕಾಗುತ್ತದೆ.
 


ಗರ್ಭಿಣಿ (Pregnant) ಯಾದಾಗ ಮತ್ತು ಹೆರಿಗೆ (Childbirth) ಯ ನಂತರ ಮಹಿಳೆಯರು ತಮ್ಮ ಆರೋಗ್ಯ (Health) ದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಗರ್ಭಿಣಿಯರು ಎಲ್ಲ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ಅವರು ಸೇವಿಸುವ ಆಹಾರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಪೋಷಣೆಗೆ ಬೇಕಾದ ಆಹಾರ ಸೇವನೆ ಮಾಡುವುದು ಅತ್ಯಗತ್ಯ.  ಹೆರಿಗೆಯ ನಂತರ  ದೇಹಕ್ಕೆ ಶಕ್ತಿ ನೀಡಲು ಮತ್ತು ಎದೆ ಹಾಲು ಹೆಚ್ಚಿಸಲು ಪೌಷ್ಟಿಕಾಂಶದ ಆಹಾರವನ್ನು ತೆಗೆದುಕೊಳ್ಳುವ ಮುಖ್ಯವಾಗುತ್ತದೆ. ಈ ಸಂದರ್ಭದಲ್ಲಿ ಯಾವ ಆಹಾರ ಸೇವನೆ ಮಾಡಿದ್ರೆ ಒಳ್ಳೆಯದು, ಹಾಗೆ ಅದ್ರಂದಿ ಏನೆಲ್ಲ ಲಾಭವಿದೆ ಎಂಬುದನ್ನು ನಾವಿಂದು ಹೇಳ್ತೇವೆ.   

ಬೆಳ್ಳುಳ್ಳಿ (Garlic) ರೊಟ್ಟಿ: ಯಸ್,  ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಬೆಳ್ಳುಳ್ಳಿ ರೊಟ್ಟಿಯ ಸೇವನೆ ಮಾಡುವುದ್ರಿಂದ ಅನೇಕ ಲಾಭಗಳಿವೆ. ಬೆಳ್ಳುಳ್ಳಿ ರೊಟ್ಟಿ ಸಹಾಯದಿಂದ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು.  ಆಹಾರದಲ್ಲಿ ಬೆಳ್ಳುಳ್ಳಿ ರೊಟ್ಟಿ ಸೇರಿಸಿದ್ರೆ ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಬೆಳ್ಳುಳ್ಳಿ ರೊಟ್ಟಿಯನ್ನು ಗರ್ಭಿಣಿಯರು ಹಾಗೂ ತಾಯಿ ಇಬ್ಬರೂ ಸೇವನೆ ಮಾಡ್ಬಹುದು. ಬೆಳ್ಳುಳ್ಳಿ ರೊಟ್ಟಿಯನ್ನು ಹೇಗೆ ಮಾಡಬೇಕೆಂದು ನಾವು ಇಲ್ಲಿ ಹೇಳುತ್ತೇವೆ.
ಬೆಳ್ಳುಳ್ಳಿ ರೊಟ್ಟಿ ಮಾಡಲು 3 ಆರೋಗ್ಯಕರ ಹಿಟ್ಟುಗಳಾದ  ಜೋಳದ ಹಿಟ್ಟು, ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಸೇರಿಸಲಾಗಿದೆ. 

Tap to resize

Latest Videos

ಎಣ್ಣೆಯುಕ್ತ ಆಹಾರ ತಿನ್ನೋದನ್ನೇ ಬಿಟ್‌ ಬಿಟ್ಟಿದ್ದೀರಾ ? ಜಾಗ್ರತೆ, ಆರೋಗ್ಯ ಕೆಡುತ್ತೆ

ಬೆಳ್ಳುಳ್ಳಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು : ಬೆಳ್ಳುಳ್ಳಿ ರೊಟ್ಟಿ ಮಾಡಲು  1/4 ಕಪ್ ಜೋಳದ ಹಿಟ್ಟು, 1/4 ಕಪ್ ರಾಗಿ ಹಿಟ್ಟು, 1/4 ಕಪ್ ಗೋಧಿ ಹಿಟ್ಟು, 1/4 ಕಪ್ ನುಣ್ಣಗೆ ಕತ್ತರಿಸಿದ ಹಸಿರು ಬೆಳ್ಳುಳ್ಳಿ, 1 ಟೀ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು 1/8 ಕಪ್ ಚಮಚ ಉಪ್ಪು ಬೇಕಾಗುತ್ತದೆ. ರೊಟ್ಟಿ ಮಾಡಲು ಗೋಧಿ ಹಿಟ್ಟು ಮತ್ತು 1 1/4 ಟೀಸ್ಪೂನ್ ಎಣ್ಣೆ ಕೂಡ ಬೇಕಾಗುತ್ತದೆ.

ಬೆಳ್ಳುಳ್ಳಿ ರೊಟ್ಟಿ ಮಾಡುವ ವಿಧಾನ : ಮೊದಲು  ಎಲ್ಲಾ ಹಿಟ್ಟುಗಳನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಹಸಿ ಬೆಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪನ್ನು ಹಾಕಿ, ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರೊಟ್ಟಿ ಹದಕ್ಕೆ ಇದನ್ನು ಕಲಿಸಿಕೊಳ್ಳಿ. ಉಂಡೆ ಮಾಡಿ, ರೊಟ್ಟಿ ತಟ್ಟಿಕೊಳ್ಳಿ. ನಂತ್ರ  ರೊಟ್ಟಿಯನ್ನು ಬಾಣಲೆಯ ಮೇಲೆ ಹಾಕಿ ಎರಡು ಕಡೆ ಎಣ್ಣೆ ಹಾಕಿ  ಬೇಯಿಸಿ. 

ಹಸಿರು ಬೆಳ್ಳುಳ್ಳಿ ರೊಟ್ಟಿಯ ಪ್ರಯೋಜನಗಳು : ಈ ರೊಟ್ಟಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಫೈಬರ್ ನಿಂದ ಸಮೃದ್ಧವಾಗಿದೆ. ಇದು ಹೆರಿಗೆಯ ನಂತರ ಮಲಬದ್ಧತೆಯ ಸಮಸ್ಯೆಯನ್ನು ತಡೆಯುತ್ತದೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು ಹಾಗೂ ಮಧುಮೇಹ ರೋಗಿಗಳು ಬೆಳಿಗ್ಗೆ ಬೆಳ್ಳುಳ್ಳಿ ರೊಟ್ಟಿ ಸೇವನೆ ಮಾಡಬೇಕು.  

ರೋಗನಿರೋಧಕ ಶಕ್ತಿ ಹೆಚ್ಚಳ : ಹಸಿರು ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಅಂಶವಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಮೂರು ವಿಧದ ಹಿಟ್ಟುಗಳನ್ನು ತೆಗೆದುಕೊಳ್ಳಲಾಗಿದೆ. ಹಿಟ್ಟುಗಳು ಮೆಗ್ನೀಸಿಯಮ್ ನ ಉತ್ತಮ ಮೂಲವಾಗಿದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ.

ಕಲ್ಲಂಗಡಿ ತಿಂದು ಬಿಳಿಭಾಗ ಎಸೆಯುತ್ತೀರಾ? ಆ ತಪ್ಪು ಮಾಡ್ಬೇಡಿ…

ಬೆಳ್ಳುಳ್ಳಿ ರೊಟ್ಟಿಯಲ್ಲಿರುವ ಪೋಷಕಾಂಶ : ಒಂದು ರೊಟ್ಟಿಯಲ್ಲಿ 67 ಕ್ಯಾಲೋರಿಗಳು, 1.9 ಗ್ರಾಂ ಪ್ರೋಟೀನ್, 11.4 ಗ್ರಾಂ ಕಾರ್ಬೋಹೈಡ್ರೇಟ್, 1.8 ಗ್ರಾಂ ಫೈಬರ್, 1.7 ಗ್ರಾಂ ಕೊಬ್ಬು, 0 ಮಿಗ್ರಾಂ ಕೊಲೆಸ್ಟ್ರಾಲ್ ಮತ್ತು 80 ಮಿಗ್ರಾಂ ಸೋಡಿಯಂ ಇರುತ್ತದೆ.

 


 

click me!