Latest Videos

ಕೇಕ್‌ನಲ್ಲಿ ಮೊಟ್ಟೆಯಿದ್ಯಾ ಎಂದು ಪ್ರಶ್ನಿಸಿದ ವ್ಯಕ್ತಿ, ಬೇಕರಿ ಮಾಲೀಕರು ಉತ್ತರ ಕೊಟ್ಟ ರೀತಿಗೆ ಕಂಗಾಲು !

By Suvarna NewsFirst Published May 21, 2022, 11:10 AM IST
Highlights

ಕೇಕ್ (Cake) ತಯಾರಿಕೆಯಲ್ಲಿ ಸಾಮಾನ್ಯವಾಗಿ ಮೊಟ್ಟೆ (Egg) ಬಳಸ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಇದೇ ಕಾರಣಕ್ಕೆ ಸಸ್ಯಾಹಾರಿಗಳು (Vegetarians) ಕೇಕ್ ತಿನ್ನೋಕೆ ಹಿಂಜರಿಯುತ್ತಾರೆ. ಹಾಗೆಯೇ ಆನ್‌ಲೈನ್‌ (Online)ನಲ್ಲಿ ಕೇಕ್‌ ಆರ್ಡರ್ ಮಾಡಿದ ವ್ಯಕ್ತಿ, ಕೇಕ್ ಮೊಟ್ಟೆಯನ್ನು ಒಳಗೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬೇಕರಿ ಮಾಲೀಕರು ಕೇಕ್‌ನಲ್ಲಿಯೇ ಬರೆದು ಉತ್ತರ ಕೊಟ್ಟಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕೇಕ್‌ (Cake) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮೃದುವಾಗಿ, ಸಿಹಿಯಾಗಿ ಪೇಸ್ಟ್ರೀ ಸೇರಿಸಿ ಸಿದ್ಧಪಡಿಸಿರೋ ಸ್ಪಾಂಜಿ ಕೇಕ್‌ನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ವೆಜಿಟೇರಿಯನ್ಸ್ (Vegetarins) ಮಾತ್ರ ಕೇಕ್ ತಯಾರಿಕೆಯಲ್ಲಿ ಮೊಟ್ಟೆ (Egg) ಬಳಸ್ತಾರೆ ಅನ್ನೋ ಕಾರಣಕ್ಕೆ ಕೇಕ್ ತಿನ್ನೋಕೆ ಹಿಂಜರಿಯುತ್ತಾರೆ. ಹೀಗಾಗಿ ಕೆಲವೊಬ್ಬರು ಸ್ಪೆಷಲ್ ಆಗಿ ಮೊಟ್ಟೆ ಹಾಕದ ಕೇಕ್ ಆರ್ಡರ್ (Order) ಮಾಡಿ ಸವಿಯುತ್ತಾರೆ. ಬರ್ತ್‌ಡೇ, ಆನಿವರ್ಸರಿ, ನ್ಯೂ ಇಯರ್‌, ಪ್ರಮೋಷನ್ ಹೀಗೆ ಹಲವು ಸಂದರ್ಭಗಳಲ್ಲಿ ಕೇಕ್ ತಂದು ಕಟ್ ಮಾಡಿ ತಿಂದು, ತಿನಿಸಿ ಸಂಭ್ರಮ ಪಡಲಾಗುತ್ತದೆ. ಆದರೆ ಕೆಲವೊಮ್ಮೆ ಕೇಕ್‌ನಲ್ಲಿ ಬರೆದಿರೋ ರೈಟಿಂಗ್ಸ್ ಎಡವಟ್ಟಿಗೆ ಕಾರಣವಾಗುತ್ತಿದೆ.

ಕೇಕ್‌ ಅಂಗಡಿಯಲ್ಲಿರುವವರು ಏನೋ ಹೇಳಿದ್ದಕ್ಕೆ ಇನ್ನೇನೋ ಬರೆದು ಎಡವಟ್ಟು ಮಾಡೋದು ಇದು ಹೊಸತೇನಲ್ಲ. ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿ ಬರೆದು ಎಡವಟ್ಟು ಮಾಡೋದು ಇದೆ. ಇದು ಕೆಲವೊಮ್ಮೆ ಸಂಪೂರ್ಣ ಕಾರ್ಯಕ್ರಮದ ಖುಷಿಯನ್ನೇ ಹಾಳು ಮಾಡಿದ್ರೆ, ಇನ್ನು ಕೆಲವೊಮ್ಮೆ ನಗೆಪಾಟಲಿಗೀಡಾಗುವಂತೆ ಮಾಡುತ್ತದೆ. ನಾಗ್ಪುರದಲ್ಲಿಯೂ ಇಂಥಹದ್ದೇ ಘಟನೆಯೊಂದು ನಡ್ದಿದೆ. 

So I ordered a cake from a renowned bakery in Nagpur, through . In the order details I mentioned “Please mention if the cake contains egg”. I am speechless after receiving the order 👇🏼 pic.twitter.com/WHN0Ht20r0

— Kapil Wasnik (@kapildwasnik)

ಕೇಕ್‌ ತಯಾರಿಸುವಾಗ ಗ್ರಾಹಕರು ವಿಶೇಷ ಸೂಚನೆಯನ್ನು ನೀಡುತ್ತಾರೆ. ಅದರಲ್ಲಿ ಏನು ಬರೆಯಬೇಕೆಂದು ಸಹ ನಿರ್ದೇಶಿಸುತ್ತಾರೆ. ಜತೆಗೆ ಕೇಕ್‌ ಏನನ್ನೆಲ್ಲಾ ಒಳಗೊಂಡಿರಬೇಕೆಂದು ಪ್ರತ್ಯೇಕವಾಗಿ ಹೇಳುತ್ತಾರೆ. ಹಾಗೆಯೇ ನಾಗ್ಪುರದಲ್ಲಿ ಗ್ರಾಹಕರೊಬ್ಬರು ಸ್ವಿಗ್ಗಿಯಲ್ಲಿ ಕೇಕ್ ಆರ್ಡರ್ ಮಾಡಿದ್ದು, ಅದು ಮೊಟ್ಟೆಯನ್ನು ಒಳಗೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬೇಕರಿ ಮಾಲೀಕರು ಕೇಕ್‌ನಲ್ಲಿಯೇ ಬರೆದು ಉತ್ತರ ಕೊಟ್ಟಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

Kitchen Hacks: ಕೇಕ್ ಮಾಡುವಾಗ ವೆನಿಲ್ಲಾ ಎಸೆನ್ಸ್ ಬದಲು ಇದನ್ನು ಟ್ರೈ ಮಾಡಿ

ಕಪಿಲ್ ವಾಸ್ನಿಕ್‌ ಎಂಬವರು ನಾಗ್ಪುರದ 'ಪ್ರಸಿದ್ಧ' ಬೇಕರಿ ಒಂದರಿಂದ ಸ್ವಿಗ್ಗಿ ಮೂಲಕ ಕೇಕ್ ಅನ್ನು ಆರ್ಡರ್ ಮಾಡಿದ್ದಾರೆ. ಮತ್ತು ಒಂದು ವಿಷಯದ ಬಗ್ಗೆ ಸ್ವಲ್ಪ ಸ್ಪಷ್ಟತೆ ಕೇಳಿದರು. ಕೇಕ್ ಮೊಟ್ಟೆಯನ್ನು ಹೊಂದಿದೆಯೇ, ನಾನು ಉಲ್ಲೇಖಿಸಿರುವ ಆರ್ಡರ್ ವಿವರಗಳಲ್ಲಿ, 'ಕೇಕ್ ಮೊಟ್ಟೆಯನ್ನು ಹೊಂದಿದ್ದರೆ ದಯವಿಟ್ಟು ನಮೂದಿಸಿ' ಎಂದು ಕಪಿಲ್ ಹೇಳಿದ್ದಾರೆ. ಅದಕ್ಕೆ ಬೇಕರಿ ಮಾಲೀಕರು ನೀಡಿರುವ ಉತ್ತರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಕಪಿಲ್, ಶುಕ್ರವಾರದಂದು, ತಮ್ಮ ಆರ್ಡರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಹಾಲಿನ ಕೆನೆ ಸುಳಿಗಳು ಮತ್ತು ಚೆರ್ರಿಗಳೊಂದಿಗೆ ಸುಂದರವಾದ ಚಾಕೊಲೇಟ್ ಕೇಕ್ ಅನ್ನು ತೋರಿಸುತ್ತದೆ. ಕೇಕ್‌ನ ಮೇಲೆ ಇದು ಮೊಟ್ಟೆಯನ್ನು ಒಳಗೊಂಡಿದೆ ಎಂದು ಬರೆಯಲಾಗಿದೆ. 

ಕೇಕ್‌ನಲ್ಲಿ ಬರೆದಿರೋ ಬರಹ ಈ ರೀತಿ ತಪ್ಪಾಗಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಇಂಥಾ ಎಡವಟ್ಟುಗಳು ಆಗಿವೆ. 
ಅರುಣ್ ನಾಯರ್ ಎಂಬ ಟ್ವಿಟರ್ ಬಳಕೆದಾರರು, ಕಪಿಲ್ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿ, ಅವರು ಡಿಸೆಂಬರ್‌ನಲ್ಲಿ ಪಡೆದ ಕೇಕ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಕೇಕ್‌ನಲ್ಲಿ ಅರುಣ್ ನಾಯರ್‌ ನೀಡಿದ್ದ ಸೂಚನೆಯನ್ನೇ ಯಥಾವತ್ತಾಗಿ ಬರೆಯಲಾಗಿದೆ. ಕಟ್ಲರಿಗಳನ್ನು ಕಳುಹಿಸಬೇಡಿ ಎಂದು ಕೇಕ್‌ನಲ್ಲಿ ನಮೂದಿಸಲಾಗಿದೆ. 

Fish Cake Recipe: ಟೇಸ್ಟೀ ಫಿಶ್ ಕೇಕ್ ತಯಾರಿಸುವುದು ಹೇಗೆ ?

ಕಪಿಲ್‌ ಟ್ವಿಟರ್‌ಗೆ ಕಾಮೆಂಟ್ ಮಾಡಿರುವ ಇತರ ಬಳಕೆದಾರರು ಸಹ ತಮಗಾಗಿರುವ ಇಂಥಹದ್ದೇ ಅನುಭವವನ್ನು ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಒನ್ ದಿ ಕೇಕ್ ಎಂದು ಸೂಚನೆ ನೀಡಿದ್ದಕ್ಕೆ ಕೇಕ್‌ನಲ್ಲಿ ಯಥವತ್ತಾಗಿ ಬರೆದಿರೋದಾಗಿ ಹೇಳಿದ್ದಾರೆ. ಬೇಕರಿಯಲ್ಲಿರುವವರ ಯಡವಟ್ಟಿಗೆ ನೆಟ್ಟಿಗರು ಫನ್ನಿ ಪ್ರತಿಕ್ರಿಯೆ ನೀಡಿದ್ದಾರೆ.  ಅದೇನೆ ಇರ್ಲಿ, ಕೇಕ್‌ನಲ್ಲಿ ಮೊಟ್ಟೆಯಿದೆಯಾ ಎಂದು ಪ್ರಶ್ನಿಸಿದಾತ ಕೇಕ್‌ ಆರ್ಡರ್ ಮಾಡಿದ್ದ ಉದ್ದೇಶವಂತೂ ಹಾಳಾಗಿರೋದು ಖಂಡಿತ. ಹಾಗೆಯೇ ಇನ್ಮುಂದೆ ಬಹುಶಃ ಅವರು ಕೇಕ್‌ನಲ್ಲಿ ಮೊಟ್ಟೆಯಿದೆಯೇ ಎಂದು ಕೇಳುವ ಧೈರ್ಯವನ್ನು ತೋರಿಸಲಿಕ್ಕಿಲ್ಲ.

click me!