Veg Dum Biryani: ರೆಸ್ಟೋರೆಂಟ್ ಸೈಲ್ ಘಮಘಮಿಸುವ ವೆಜ್ ದಮ್ ಬಿರಿಯಾನಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಬಾಸ್ಮತಿ ಅಕ್ಕಿ, ತಾಜಾ ತರಕಾರಿಗಳು ಮತ್ತು ವಿಶೇಷ ಮಸಾಲೆಗಳನ್ನು ಬಳಸಿ ರುಚಿಕರವಾದ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ. ಈ ಸುಲಭ ರೆಸಿಪಿ ಮೂಲಕ ಮನೆಯಲ್ಲೇ ಬಿರಿಯಾನಿ ಸವಿಯಿರಿ!
ರುಚಿಕರವಾದ ವೆಜ್ ದಮ್ ಬಿರಿಯಾನಿ ಮನೆಯಲ್ಲೇ ಮಾಡಿ
ನಿಮಗೆ ಬಿರಿಯಾನಿ ತಿನ್ನುವ ಆಸೆಯಿದ್ದರೆ, ಅದಕ್ಕಾಗಿ ಇನ್ನು ಮುಂದೆ ರೆಸ್ಟೋರೆಂಟ್ಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಸುಲಭವಾಗಿ ರೆಸ್ಟೋರೆಂಟ್ನಂತೆಯೇ ರುಚಿಕರವಾದ ವೆಜ್ ದಮ್ ಬಿರಿಯಾನಿ ತಯಾರಿಸಬಹುದು. ಹಾಗಾದರೆ ರುಚಿಯಾದ ವೆಜ್ ದಮ್ ಬಿರಿಯಾನಿ ಮಾಡುವ ಸುಲಭ ರೆಸಿಪಿ ಹೇಗೆ ನೋಡಿ.
ವೆಜ್ ದಮ್ ಬಿರಿಯಾನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ
ಈರುಳ್ಳಿ 6 ಮಧ್ಯಮ ಗಾತ್ರದ್ದು
ಬೆಳ್ಳುಳ್ಳಿ 20-25 ಎಸಳು
ಶುಂಠಿ 2 ಇಂಚು
ಹಸಿಮೆಣಸಿನಕಾಯಿ 3-4
ಟೊಮೆಟೊ 1
ತಾಜಾ ಕೊತ್ತಂಬರಿ ಸೊಪ್ಪು
ಪುದೀನಾ ಎಲೆಗಳು
ಕ್ಯಾರೆಟ್ 2
ಫ್ರೆಂಚ್ ಬೀನ್ಸ್
ಅರ್ಧ ಹೂಕೋಸು
ಮಧ್ಯಮ ಗಾತ್ರದ ಆಲೂಗಡ್ಡೆ 2
ಬಿರಿಯಾನಿ ಮಸಾಲೆ ತಯಾರಿಗೆ:
ಎಣ್ಣೆ 3-4 ದೊಡ್ಡ ಚಮಚ
ಅರಿಶಿನ ಪುಡಿ ಅರ್ಧ ಚಮಚ
ಕಾಳುಮೆಣಸಿನ ಪುಡಿ 1 ದೊಡ್ಡ ಚಮಚ
ಖಾರದ ಪುಡಿ 1 ಚಮಚ
ಧನಿಯಾ ಪುಡಿ 2 ಚಮಚ
ಬಿರಿಯಾನಿ ಮಸಾಲೆ 1.5 ಚಮಚ
ಅಗತ್ಯಕ್ಕೆ ತಕ್ಕಷ್ಟು ಬಿಸಿ ನೀರು
ಮೊಸರು 200 ಗ್ರಾಂ
ರುಚಿಗೆ ತಕ್ಕಷ್ಟು ಉಪ್ಪು
ಹಸಿರು ಬಟಾಣಿ ಅರ್ಧ ಕಪ್
ಕೊತ್ತಂಬರಿ ಸೊಪ್ಪು ಮತ್ತು ಪುದೀನಾ
ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ
ಮೊದಲನೆಯದಾಗಿ ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನೀರು ತಿಳಿಯಾಗುವವರೆಗೆ ತೊಳೆಯಬೇಕು. ನಂತರ ಅಕ್ಕಿಯನ್ನು ಕನಿಷ್ಠ 30-45 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಆನಂತರ ಅಕ್ಕಿಯನ್ನು ಅರ್ಧ ಬೇಯಿಸಿಟ್ಟುಕೊಳ್ಳಬೇಕು. .
ಈಗ ಗ್ರೇವಿ ತಯಾರಿಸಲು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ತಾಜಾ ಕೊತ್ತಂಬರಿ ಸೊಪ್ಪು ಮತ್ತು ಪುದೀನಾವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ಈಗ ಎಲ್ಲಾ ತರಕಾರಿಗಳನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಹೆಚ್ಚಿಕೊಳ್ಳಿ. ಆದರೆ ಆಲೂಗಡ್ಡೆಯ ತುಂಡುಗಳನ್ನು ಸ್ವಲ್ಪ ದೊಡ್ಡದಾಗಿ ಕತ್ತರಿಸಿಕೊಳ್ಳಿ.
ಬಿರಿಯಾನಿ ಮಸಾಲೆ ತಯಾರಿಸಲು ಅಗಲವಾದ ಬಾಯಿ ಮತ್ತು ದಪ್ಪ ತಳವಿರುವ ಪಾತ್ರೆಯನ್ನು ಬಳಸಿ. ಪಾತ್ರೆಯನ್ನು ಹೆಚ್ಚಿನ ಉರಿಯಲ್ಲಿ ಬಿಸಿಮಾಡಿ, ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿ. ಈರುಳ್ಳಿ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಮಧ್ಯಮದಿಂದ ಹೆಚ್ಚಿನ ಉರಿಯಲ್ಲಿ ಹುರಿಯಿರಿ.
ನಂತರ ಹೆಚ್ಚಿಕೊಂಡ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಬೇಯಿಸಿ. ಆನಂತರ ಪುಡಿ ಮಸಾಲೆಗಳನ್ನು ಸೇರಿಸಿ.
ಈಗ ಹೆಚ್ಚಿಕೊಂಡ ಟೊಮೆಟೊ, ಚೆನ್ನಾಗಿ ಕಡೆಯಲಾದ ಮೊಸರು ಮತ್ತು ಉಪ್ಪನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆ ಬೇರ್ಪಡುವವರೆಗೆ ಹೆಚ್ಚಿನ ಉರಿಯಲ್ಲಿ ಬೇಯಿಸಿ.
ಗ್ರೇವಿ ಚೆನ್ನಾಗಿ ಬೆಂದು ಎಣ್ಣೆ ಬೇರ್ಪಡಲು ಆರಂಭಿಸಿದಾಗ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಸೇರಿಸಿ 2-3 ನಿಮಿಷ ಬೇಯಿಸಿ. ಆಲೂಗಡ್ಡೆ ಚೆನ್ನಾಗಿ ಬೇಯುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
ಆಲೂಗಡ್ಡೆ ಬೆಂದ ನಂತರ ಉಳಿದ ಎಲ್ಲಾ ತರಕಾರಿಗಳನ್ನು ಸೇರಿಸಿ. ನಂತರ ಗ್ರೇವಿಯ ಹದವನ್ನು ಸರಿಪಡಿಸಲು ಅಗತ್ಯವಿರುವಷ್ಟು ನೀರನ್ನು ಹಾಕಿ.
ಈಗ ಅದರ ಮೇಲೆ ಅರ್ಧ ಬೆಂದ ಅನ್ನವನ್ನು ಹಾಕಿ. ಅನ್ನದ ಮೇಲೆ ಒಂದು ಹಿಡಿಯಷ್ಟು ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಕರಗಿಸಿದ ತುಪ್ಪವನ್ನು ಎಲ್ಲೆಡೆ ಸಮಾನವಾಗಿ ಸುರಿಯಿರಿ.
ತರಕಾರಿಗಳೊಂದಿಗೆ ಅನ್ನವನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಚ್ಚಳ ಮುಚ್ಚಿ ಬಿರಿಯಾನಿಯನ್ನು ಐದು ನಿಮಿಷ ಸಣ್ಣ ಉರಿಯಲ್ಲಿ ಇಟ್ಟು, ಬಳಿಕ ಸ್ಟೌ ಆಫ್ ಮಾಡಿ.ಕನಿಷ್ಠ 20-30 ನಿಮಿಷಗಳ ಕಾಲ ಮುಚ್ಚಿ ಹಾಗೆಯೇ ಬಿಡಿ.
ಸ್ವಲ್ಪ ಸಮಯದ ನಂತರ ಮುಚ್ಚಳ ತೆಗೆದು ರುಚಿಕರವಾದ ವೆಜ್ ದಮ್ ಬಿರಿಯಾನಿಯನ್ನು ಬಡಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.