ತವಾದಿಂದ ಗರಿಗರಿಯಾಗಿ ಏಳ್ಬೇಕಾ ರವೆ ದೋಸೆ? ಹೊಟೇಲ್‌ ರುಚಿ ಇರಬೇಕು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ

Published : Oct 30, 2026, 02:58 PM IST
Rava Dosa

ಸಾರಾಂಶ

ದಕ್ಷಿಣ ಭಾರತದ ಪ್ರಸಿದ್ಧ ದೋಸೆಗಳಲ್ಲಿ ರವೆ ದೋಸೆ ಕೂಡ ಒಂದು. ಫಟಾ ಫಟ್‌ ಆಗುವ ರವಾ ದೋಸೆ ತಿನ್ನೋಕು ರುಚಿ. ಅನೇಕರು ಇದನ್ನು ಮನೆಯಲ್ಲಿ ಟ್ರೈ ಮಾಡಿ ಸೋತಿರ್ತಾರೆ. ರವೆ ದೋಸೆ ಪ್ಯಾನ್‌ ನಿಂದ ಏಳೋದಿಲ್ಲ, ಗರಿಗರಿಯಾಗೋದಿಲ್ಲ ಎನ್ನುವವರಿಗೆ ಕ್ರಿಸ್ಪಿ ರವೆ ದೋಸೆ ರೆಸಿಪಿ ಇಲ್ಲಿದೆ.

ಸಾಮಾನ್ಯ ಅಕ್ಕಿ ದೋಸೆಗಿಂತ ರವೆ ದೋಸೆ ಸ್ವಲ್ಪ ವಿಭಿನ್ನ. ರವೆ ದೋಸೆ ಮಾಡಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಗಂಟೆಗಟ್ಟಲೆ ನೆನೆಸಿ, ರುಬ್ಬುವ ಅಗತ್ಯವಿಲ್ಲ. ಬದಲಿಗೆ ರವೆ ಮತ್ತು ಇತರ ಕೆಲವು ಪದಾರ್ಥಗಳನ್ನು ಬಳಸಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.

ರವೆ ದೋಸೆ ಮಾಡೋದು ಹೇಗೆ?

ರವೆ ದೋಸೆ ತುಂಬಾ ತೆಳುವಾಗಿ, ಗರಿಗರಿಯಾಗಿರುತ್ತೆ. ಹಾಗಾಗಿ ಜನರು ರವೆ ದೋಸೆಯನ್ನು ಹೆಚ್ಚು ಇಷ್ಟಪಡ್ತಾರೆ. ಬೆಳಗಿನ ತಿಂಡಿ, ಸಂಜೆ ಹೊತ್ತಿನಲ್ಲಿ ಅಥವಾ ಲಘು ರಾತ್ರಿಯ ಊಟಕ್ಕೆ ರವಾ ದೋಸೆ ಉತ್ತಮ ಆಯ್ಕೆ. ಇದನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.

ಆದರೆ ಮನೆಯಲ್ಲಿ ರವೆ ದೋಸೆ ಮಾಡುವಾಗ ಕೆಲವರಿಗೆ ಅದು ತವಾಕ್ಕೆ ಅಂಟಿಕೊಳ್ಳುತ್ತದೆ ಅಥವಾ ಹೋಟೆಲ್ನಲ್ಲಿರುವಂತೆ ಗರಿಗರಿಯಾಗಿ ಬರುವುದಿಲ್ಲ. ಇದಕ್ಕೆ ಹಿಟ್ಟಿನ ಹದ, ತವೆಯ ಉಷ್ಣತೆ ಮತ್ತು ದೋಸೆ ಮಾಡುವ ವಿಧಾನ ಮುಖ್ಯ ಕಾರಣ.

ರವೆ ದೋಸೆ ಹಿಟ್ಟು ತಯಾರಿಸುವ ವಿಧಾನ

ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು ಮತ್ತು ಮೈದಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀವು ಬಯಸಿದರೆ ಸ್ವಲ್ಪ ಮೊಸರನ್ನೂ ಸೇರಿಸಬಹುದು. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ತೆಳುವಾದ ಹಿಟ್ಟನ್ನು ತಯಾರಿಸಿ. ಸಾಮಾನ್ಯ ದೋಸೆ ಹಿಟ್ಟಿಗಿಂತ ರವಾ ದೋಸೆ ಹಿಟ್ಟು ಹೆಚ್ಚು ತೆಳುವಾಗಿರಬೇಕು. ರವೆಯನ್ನು ನೀವು ಸ್ವಲ್ಪ ಸಮಯ ನೀರಿನಲ್ಲಿ ನೆನೆಹಾಕಿ, ರುಬ್ಬಿಕೊಳ್ಳಬಹುದು.

ಈ ಹಿಟ್ಟನ್ನು ಸುಮಾರು 20ರಿಂದ 30 ನಿಮಿಷಗಳ ಕಾಲ ಮುಚ್ಚಿಡಿ. ಈ ಸಮಯದಲ್ಲಿ ರವೆ ನೀರನ್ನು ಹೀರಿಕೊಂಡು ಹಿಟ್ಟು ಸ್ವಲ್ಪ ಗಟ್ಟಿಯಾಗುತ್ತದೆ. ದೋಸೆ ಮಾಡುವ ಮೊದಲು ಮತ್ತೆ ಸ್ವಲ್ಪ ನೀರು ಸೇರಿಸಿ ಸರಿಯಾದ ಹದಕ್ಕೆ ತನ್ನಿ. ತವೆಯ ಮೇಲೆ ಸುರಿದಾಗ ಸುಲಭವಾಗಿ ಹರಡುವಷ್ಟು ತೆಳುವಾಗಿರಬೇಕು.

ತವೆಯ ಮೇಲೆ ದೋಸೆ ತಯಾರಿಸುವ ವಿಧಾನ

ಮೊದಲು ಕಬ್ಬಿಣದ ತವೆ ಅಥವಾ ನಾನ್ಸ್ಟಿಕ್ ತವೆಯನ್ನು ಚೆನ್ನಾಗಿ ಬಿಸಿ ಮಾಡಿ. ತವೆ ಅತಿಯಾಗಿ ಬಿಸಿಯಾಗಿದ್ದರೆ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ಈಗ ಒಂದು ಸೌಟು ಅಥವಾ ಬಟ್ಟಲಿನಿಂದ ಹಿಟ್ಟನ್ನು ತವೆಯ ಅಂಚಿನಿಂದ ಮಧ್ಯದ ಕಡೆಗೆ ನಿಧಾನವಾಗಿ ಸುರಿಯಿರಿ. ಸಾಮಾನ್ಯ ದೋಸೆಯಂತೆ ಹಿಟ್ಟನ್ನು ತವೆಯ ಮೇಲೆ ಸುತ್ತಲೂ ಹರಡುವ ಅಗತ್ಯವಿಲ್ಲ. ಹಿಟ್ಟು ತಾನಾಗಿಯೇ ಹರಡಿ ಜಾಲರಿಯಂತಹ ವಿನ್ಯಾಸವನ್ನು ಪಡೆಯುತ್ತದೆ.

ದೋಸೆಯ ಅಂಚುಗಳಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಮಧ್ಯಮ ಉರಿಯಲ್ಲಿ ದೋಸೆಯ ಅಂಚುಗಳು ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಬೇಯಿಸಿ. ನಂತರ ನಿಧಾನವಾಗಿ ಮಗುಚಿ ಇನ್ನೊಂದು ಬದಿಯನ್ನೂ ಸ್ವಲ್ಪ ಹೊತ್ತು ಬೇಯಿಸಿ. ದೋಸೆ ಸಿದ್ಧವಾದ ಬಳಿಕ ಮಡಚಿ ತಟ್ಟೆಗೆ ಹಾಕಿ.

ರವೆ ದೋಸೆ ಗರಿಗರಿಯಾಗಲು ಈ ಟಿಪ್ಸ್ ಪಾಲಿಸಿ

• ರವೆ ದೋಸೆ ಗರಿಗರಿಯಾಗಿ ಬರಲು ಹಿಟ್ಟಿನ ಹದ ಬಹಳ ಮುಖ್ಯ. ಹಿಟ್ಟು ಗಟ್ಟಿಯಾಗಿದ್ದರೆ ಜಾಲರಿಯಂತಹ ವಿನ್ಯಾಸ ಬರುವುದಿಲ್ಲ.

• ರವೆ ಪಾತ್ರೆಯ ತಳದಲ್ಲಿ ಕುಳಿತುಕೊಳ್ಳುವುದರಿಂದ ಪ್ರತಿ ದೋಸೆ ಮಾಡುವ ಮೊದಲು ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ.

• ತವೆ ಅತಿಯಾಗಿ ಬಿಸಿಯಾಗಿದ್ದರೆ ಹಿಟ್ಟು ಸರಿಯಾಗಿ ಹರಡುವುದಿಲ್ಲ. ಆದ್ದರಿಂದ ತಾಪಮಾನ ಗಮನಿಸಿ.

• ದೋಸೆಯ ಕೆಳಭಾಗ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಕಾಯಿರಿ. ನಂತರವೇ ತವೆಯಿಂದ ತೆಗೆಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಳ್ರಪ್ಪಾ… ಈ ಸ್ಟ್ರೀಟ್ ಫುಡ್ ಆರೋಗ್ಯಕ್ಕೆ ತುಂಬಾನೆ ಒಳ್ಳೆದಂತೆ! ವೈದ್ಯರೇ ಹೇಳಿದ್ದಾರೆ
'ನನಗೆ ಊಟಕ್ಕೂ ಹಣವಿರಲಿಲ್ಲ' ಎಂದ ಮಹಿಳೆ… ಗ್ರಾಹಕರು ತಿನ್ನದೇ ಬಿಟ್ಟಿದ್ದ ಆಹಾರ ಮನೆಗೆ ಒಯ್ದಿದ್ದಕ್ಕೆ ಕೆಲಸವೇ ಹೋಯ್ತು