ಲಕ್ನೋದ ಪ್ರಸಿದ್ಧ ತುಂಡೆ ಕಬಾಬ್ ಪರಿಚಯಿಸಿದ Dr. Bro, ಬಾಲಿವುಡ್ ಸ್ಟಾರ್ಸ್ಗೆ ಇಷ್ಟವಿದು, ಏನಿದರ ಸ್ಪೆಷಲ್?

By Suvarna News  |  First Published Oct 30, 2023, 2:39 PM IST

ಭಾರತೀಯರು ರುಚಿ ರುಚಿ ಆಹಾರ ಸೇವನೆ ಮಾಡೋದ್ರಲ್ಲಿ ಮುಂದಿದ್ದಾರೆ. ಹಾಲಿನಿಂದ ಮಾಂಸದವರೆಗೆ ಎಲ್ಲದರಲ್ಲೂ ವೆರೈಟಿ ಆಹಾರ ತಯಾರಿಸುವ ಕಲೆ ಅವರಿಗೆ ಗೊತ್ತು. ಈ ಬಾರಿ ಲಕ್ನೋದಲ್ಲಿರುವ ಡಾ. ಬ್ರೋ ಅಲ್ಲಿನ ಫೇಮಸ್ ತಿನಿಸನ್ನು ನಮಗೆ ಪರಿಚಯಿಸಿದ್ದಾರೆ.
 


ಡಾ. ಬ್ರೋ ಎಲ್ಲರಿಗೂ ಗೊತ್ತಿರುವ ಯುಟ್ಯೂಬರ್. ಕನ್ನಡದ ಯುಟ್ಯೂಬರ್ ಗಗನ್ ಅನೇಕ ದೇಶಗಳನ್ನು ಸುತ್ತಿದ್ದಾರೆ. ಆಫ್ರಿಕಾ, ಚೀನಾ, ಪಾಕಿಸ್ತಾನ ಹೀಗೆ ನಾನಾ ದೇಶ ಸುತ್ತಿ, ಅಪಾಯಕಾರಿ ಬುಡಕಟ್ಟು ಜನಾಂಗಗಳನ್ನು ಭೇಟಿಯಾಗಿ ಅವರು, ಅವರ ಜೀವನ ಶೈಲಿಯನ್ನು ನಮಗೆ ಪರಿಚಯಿಸಿಕೊಟ್ಟ ಹೆಮ್ಮೆಯ ಹುಡುಗ. ಈ ಬಾರಿ ಡಾ. ಬ್ರೋ ನಮ್ಮ ದೇಶದಲ್ಲೇ ಒಂದು ಸುಂದರ ವಿಡಿಯೋ ಮಾಡಿದ್ದಾರೆ. 

ಡಾ. ಬ್ರೋ (Dr. Bro) ಈಗ ಲಕ್ನೋ (Lucknow) ದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ – ಇಂಗ್ಲೆಂಡ್ ವಿಶ್ವಕಪ್ ಪಂದ್ಯಕ್ಕಿಂತ ಮೊದಲು ಲಕ್ನೋ ತಲುಪಿದ ಡಾ. ಬ್ರೋ, ಅಲ್ಲಿ ಸಿಗುವ ಕೆಲವೊಂದು ಆಹಾರವನ್ನು ನಮಗೆ ಪರಿಚಯಿಸಿದ್ದಾರೆ.

Tap to resize

Latest Videos

undefined

10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ

ಕರ್ನಾಟಕ ಹಾಗೂ ಲಕ್ನೋಗೆ ಅವಿನಾಭಾವ ಸಂಬಂಧವಿದೆ ಎಂದ ಗಗನ್, ಐಪಿಎಲ್ ಜೊತೆ ಈ ಮಾತನ್ನು ಥಳಕು ಹಾಕಿದ್ದಾರೆ. ಲಕ್ನೋ ಐಪಿಎಲ್  ಟೀಂನ ಕ್ಯಾಪ್ಟನ್ ನಮ್ಮ ಕನ್ನಡಿಗ ಕೆ.ಎಲ್. ರಾಹುಲ್ ಎಂದ ಡಾ. ಬ್ರೋ, ರಾಹುಲ್ ಬಗ್ಗೆ ಲಕ್ನೋ ಜನರನ್ನು ಮಾತನಾಡಿಸಿದ್ರು.  ಆ ನಂತ್ರ ಡಾ. ಬ್ರೋ ಹೋಗಿದ್ದು ಲಕ್ನೋದ ಅತ್ಯಂತ ಪ್ರಸಿದ್ಧ ಸ್ವೀಟ್ ಅಂಗಡಿಗೆ. ಈ ಅಂಗಡಿ 1805ರಿಂದ ಅಸ್ತಿತ್ವದಲ್ಲಿದೆ. ಅಲ್ಲಿ ಸಾಕಷ್ಟು ವೆರೈಟಿ ಸ್ವೀಟ್ ಗಳಿವೆ ಎಂದು ಡಾ. ಬ್ರೋ, ಮಲೈ ಪಾನ್ ತಿಂದ್ರು. ಹಾಲಿನ ಕೆನೆಯಲ್ಲಿ ಮಾಡುವ ಮಲೈ ಪಾನ್ ತಿಂದ ಡಾ. ಬ್ರೋ, ಈ ಸ್ವೀಟ್ ಗೆ ಎರಡು ನೂರಕ್ಕಿಂತಲೂ ಹೆಚ್ಚು ಇತಿಹಾಸವಿದೆ ಎಂದಿದ್ದಾರೆ.

ಚೀನಾ ಹೊಗಳಿದ ಕನ್ನಡ ಯೂಟ್ಯೂಬರ್ ಡಾ ಬ್ರೋಗೆ ದೇಶದ್ರೋಹಿ ಪಟ್ಟ: ಟಾರ್ಗೆಟ್ ಅಗ್ಬಿಟ್ಯಲ್ಲ ದೇವ್ರು ಎಂದ ಫ್ಯಾನ್ಸ್.!

ನಂತ್ರ ಡಾ. ಬ್ರೋ ಹೋಗಿದ್ದು ಲಕ್ನೋದ ಪ್ರಸಿದ್ಧ ತುಂಡೆ ಕಬಾಬ್ (Tunday Kebab) ಹೊಟೇಲ್ ಗೆ.  ಹೈದರಾಬಾದಿ ಬಿರಿಯಾನಿ ಅಥವಾ ಇತರ ಯಾವುದೇ ಖಾದ್ಯಕ್ಕಿಂತ ಲಕ್ನೋದ ತುಂಡೆ ಕಬಾಬ್‌ಗಳು ಮಾಂಸಾಹಾರಿ ಆಹಾರ ಪ್ರಿಯರಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ನೂರು ವರ್ಷ ಹಳೆಯದಾದ ಈ ಹೊಟೇಲ್ ಗೆ ತುಂಡೆ ಕಬಾಬ್ ತಿನ್ನಲು ದೂರದೂರುಗಳಿಂದ ಜನರು ಬರ್ತಾರೆ. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್, ಕಪಿಲ್ ದೇವ್ ಸೇರಿದಂತೆ ಅನೇಕ ದಿಗ್ಗಜರು ಈ ಹೊಟೇಲ್ ಗೆ ಭೇಟಿ ನೀಡಿ ತುಂಡೆ ಕಬಾಬ್ ರುಚಿ ನೋಡಿದ್ದಾರೆ.

ತುಂಡೆ ಕಬಾಬನ್ನು 1905 ರಲ್ಲಿ ಅಕ್ಬರಿ ಗೇಟ್‌ನಲ್ಲಿ ಮೊದಲ ಬಾರಿಗೆ ಶುರು ಮಾಡಲಾಯ್ತು. ವಯಸ್ಸಾದವರಿಗೆ ಕಬಾಬ್ ತಿನ್ನಲು ಕಷ್ಟವಾಗ್ಬಾರದು ಎನ್ನುವ ಉದ್ದೇಶ ಇಟ್ಟುಕೊಂಡು ಇದನ್ನು ಶುರು ಮಾಡಲಾಗಿದೆ. ಇದು ಭೋಪಾಲ್ ನವಾಬ್ ರಿಂದ ಬಂದ ರೆಸಿಪಿ ಎನ್ನಬಹುದು. ಅವರಿಗೆ ಹಲ್ಲಿಲ್ಲದ ಕಾರಣ ಮಾಂಸವನ್ನು ನುಣ್ಣಗೆ ರುಬ್ಬಿ ಕಬಾಬ್ ತಯಾರಿಸಲಾಯ್ತು. ತುಂಡೆ ಅಂದ್ರೆ ಕೈ ಇಲ್ಲದಿರುವುದು ಎಂದರ್ಥ. ರಯೀಸ್ ಅಹ್ಮದ್ ಹೊಟೇಲ್ ಗೆ ಅವರ ಮಗ ಹಾಜಿ ಮುರಾದ್ ಅಲಿ ಬಂದು ಕುಳಿತುಕೊಳ್ತಿದ್ದ. ಆತನಿಗೆ ಕೈ ಇರಲಿಲ್ಲ. ಅದನ್ನು ನೋಡಿದ ಜನರು ತುಂಡೇಕಿ ಕಬಾಬ್ ಎಂದು ಕರೆಯಲು ಶುರು ಮಾಡಿದ್ದರು. ಅದೇ ಮುಂದೆ ತುಂಡೆ ಕಬಾಬ್ ಆಯ್ತು. 

ತುಂಡೆ ಕಬಾಬ್ ಸದಾ ಗ್ರಾಹಕರಿಂದ ತುಂಬಿರುತ್ತದೆ. ಕನಿಷ್ಟ ಒಂದು ಗಂಟೆ ಕಾದ್ಮೇಲೆ ನೀವು ತುಂಡೆ ಕಬಾಬ್ ತಿನ್ನಬಹುದು ಎನ್ನುತ್ತಾರೆ ಡಾ. ಬ್ರೋ. ಗಗನ ಲಕ್ನೋದ ಪ್ರಸಿದ್ಧ ಇನ್ನೊಂದು ತಿಂಡಿ ಮಲಾಯಿ ಮಕ್ಕನ್ ಸೇವನೆ ಮಾಡಿ ಎಲ್ಲರ ಬಾಯಲ್ಲಿ ನೀರೂರಿಸಿದ್ರು. ಮಲಾಯಿ ಮಕ್ಕನನ್ನು  ಹಾಲು, ಕೆನೆ, ಕೇಸರಿ ಅಥವಾ ಕಿತ್ತಳೆ ಬಣ್ಣ, ಸಕ್ಕರೆ, ಡ್ರೈ ಫ್ರೂಟ್ಸ್ ಬೆರೆಸಿ ತಯಾರಿಸಲಾಗುತ್ತದೆ. 
 

click me!