ನಮ್ಮ ಆಹಾರ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತದೆ. ಹಾಗೆಯೇ ಕೆಲ ಆಹಾರಗಳು ಹಾರ್ಮೋನ್ ನಲ್ಲಿ ಬದಲಾವಣೆ ಮಾಡುತ್ತವೆ. ಸದಾ ಸಂತೋಷವಾಗಿರಬೇಕು, ಪ್ರೀತಿ ಭಾವನ ಮನಸ್ಸಿನಲ್ಲಿರಬೇಕೆಂದ್ರೆ ಈ ಆಹಾರ ಸೇವನೆ ಮಾಡಿ.
ಆಕ್ಸಿಟೋಸಿನ್ ಬಗ್ಗೆ ಬಹುತೇಕ ಎಲ್ಲರೂ ಕೇಳಿರ್ತಾರೆ. ಇದನ್ನು ಲವ್ ಹಾರ್ಮೋನ್ ಅಥವಾ ಬಾಂಡಿಂಗ್ ಹಾರ್ಮೋನ್ ಎಂದೂ ಕರೆಯುತ್ತಾರೆ. ಸಂಬಂಧಗಳು ಮತ್ತು ಭಾವನಾತ್ಮಕ ಮನೋಭಾವ ನಿರ್ಮಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾದರೆ ಆಗ ಬಹಳ ವಿಚಿತ್ರವಾದ ಭಾವನೆ ಉಂಟಾಗುತ್ತದೆ. ಒಬ್ಬ ವ್ಯಕ್ತಿಯು ತಬ್ಬಿಕೊಳ್ಳುವ, ಚುಂಬಿಸುವ ಅಥವಾ ಲೈಂಗಿಕ ಅನ್ಯೋನ್ಯತೆಯಲ್ಲಿ ಕಳೆದುಹೋಗುವ ಕ್ಷಣ ಇದು. ಈ ಹಾರ್ಮೋನ್ ಜನರ ಮನಸ್ಥಿತಿ ಮತ್ತು ಭಾವನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳ್ತಾರೆ. ಆಕ್ಸಿಟೋಸಿನ್ ಮೆದುಳಿನ ಸಣ್ಣ ಭಾಗವಾದ ಹೈಪೋಥಾಲಮಿಸ್‌ನಲ್ಲಿ ಉತ್ಪತ್ತಿಯಾಗುವ ನ್ಯೂರೋಪೆಪ್ಟೈಡ್ ಆಗಿದೆ. ಇಂಡಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಕ್ಸಿಟೋಸಿನ್ ಎಂಬ ಹಾರ್ಮೋನ್ ಪ್ರೀತಿ ಮತ್ತು ಕಾಮದೊಂದಿಗೆ ಸಂಬಂಧ ಹೊಂದಿದೆ. ನಿಮ್ಮ ದೇಹವು ನೈಸರ್ಗಿಕವಾಗಿ ಆಕ್ಸಿಟೋಸಿನ್ ಅನ್ನು ಉತ್ಪಾದಿಸುತ್ತದೆ. ನೀವು ಹೆಚ್ಚು ಪ್ರೀತಿಯನ್ನು ಅನುಭವಿಸಲು ಬಯಸಿದರೆ, ಈ ಪ್ರೀತಿಯ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಬೇಕು. ಅದಕ್ಕೆ ಕೆಲವು ಆಹಾರಗಳನ್ನು ತಿನ್ನುವುದು ಉತ್ತಮ. ಹ್ಯಾಪಿ ಹಾರ್ಮೋನ್ ಬಿಡುಗಡೆ ಮಾಡುವ ಆಹಾರಗಳು ಯಾವುವು ಎಂಬುದರ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.
ಸಾಲ್ಮನ್ : ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮನ್ ನೈಸರ್ಗಿಕವಾಗಿ ಆಕ್ಸಿಟೋಸಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಸಮುದ್ರಾಹಾರವು ಒತ್ತಡವನ್ನು ನಿಭಾಯಿಸಲು ನೆರವಾಗುತ್ತದೆ.
ಕಿತ್ತಳೆ ರಸ : ಪ್ರೀತಿಯ ಹಾರ್ಮೋನ್ ಅನ್ನು ಸುಧಾರಿಸಲು ಕಿತ್ತಳೆ ರಸವು ಉತ್ತಮ ಆಯ್ಕೆಯಾಗಿದೆ. ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ ರಸ ಪ್ರಮುಖ ಉತ್ಕರ್ಷಣ ನಿರೋಧಕವಾಗಿದೆ. ಇದನ್ನು ಸೇವಿಸಿದರೆ ನಿಮ್ಮ ಮನಸ್ಥಿತಿ ಮತ್ತು ಸಕಾರಾತ್ಮಕ ಭಾವನೆಗಳು ಸುಧಾರಿಸುತ್ತವೆ. ಅಷ್ಟೇ ಅಲ್ಲ, ಕಿತ್ತಳೆ ರಸದ ಸೇವನೆಯು ಚಿಕಿತ್ಸೆ ಮತ್ತು ಸಾಮಾಜಿಕ ಸಂಬಂಧಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಪ್ರಾಣಿ ಮಾಂಸಕ್ಕಿಂತ PLANT BASED MEAT ಆರೋಗ್ಯಕ್ಕೆ ಒಳ್ಳೇದು; ಅಧ್ಯಯನ
ಚಿಯಾ ಬೀಜಗಳು : ಚಿಯಾ ಬೀಜಗಳಂತಹ ಸ್ಯಾಚುರೇಟೆಡ್ ಕೊಬ್ಬುಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದರೆ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ದೇಹದಲ್ಲಿ ಆಕ್ಸಿಟೋಸಿನ್ ನಂತಹ ಲವ್ ಹಾರ್ಮೋನ್ ಕಡಿಮೆಯಾದಾಗ ಚಿಯಾ ಬೀಜಗಳನ್ನು ಸೇವಿಸಿ. ಇದು ಸಾಮಾಜಿಕ ಸಂವಹನ, ಒತ್ತಡ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
ಡಾರ್ಕ್ ಚಾಕೋಲೇಟ್ : ಡಾರ್ಕ್ ಚಾಕೊಲೇಟ್ ಸ್ವಲ್ಪ ಕಹಿಯಾಗಿರುತ್ತದೆ. ಆದರೆ ಇದು ಸಾಕಷ್ಟು ಆರೋಗ್ಯ ಪ್ರಯೋಜಗಳನ್ನು ಹೊಂದಿದೆ. ಡಾರ್ಕ್ ಟಾಕೋಲೇಟ್ ಪ್ರೀತಿಯ ಹಾರ್ಮೋನ್ ಅಂದರೆ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೆಗ್ನೀಸಿಯಮ್ ನಿಂದ ಸಮೃದ್ಧವಾಗಿದೆ. ಇದು ಹೈಪೋಥಾಲಮಸ್ ನಿಂದ ಹಾರ್ಮೋನ್ ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಕಾಫಿ : ಕಾಫಿ ಕುಡಿದರೆ ನಿಮ್ಮ ಲವ್ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ಆಕ್ಸಿಟೋಸಿನ್ ನ್ಯೂರಾನ್‌ಗಳನ್ನು ಉತ್ತೇಜಿಸುವ ಮೂಲಕ ಭಾವನಾತ್ಮಕ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಆಕ್ಸಿಟೋಸಿನ್ ಮಟ್ಟವನ್ನು ಸಮತೋಲನದಲ್ಲಿಡಲು ಕಾಫಿಯನ್ನು ಮಿತವಾಗಿ ಸೇವಿಸಬೇಕು. ಕಾಫಿ ಸೇವನೆ ಹೆಚ್ಚಾದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ.
ಬ್ರೊಕೊಲಿ : ಪ್ರೀತಿಯ ಭಾವನೆಯನ್ನು ಜಾಗೃತಗೊಳಿಸಲು ಬಯಸಿದರೆ ಬ್ರೊಕೊಲಿ ಸೇವನೆ ಶುರು ಮಾಡಿ. ಇದು ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ.
ಈ ಹಣ್ಣು ತಿನ್ನಿ, ಹೃದ್ರೋಗಕ್ಕೆ ಹೇಳಿ ಗುಡ್ ಬೈ
ಮೊಟ್ಟೆಯ ಹಳದಿ ಭಾಗ : ಮೊಟ್ಟೆಯ ಹಳದಿ ಭಾಗದ ಸೇವನೆಯು ಪುರುಷರು ಮತ್ತು ಮಹಿಳೆಯರಲ್ಲಿ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ಸಮೃದ್ಧವಾಗಿರುವ ಮೊಟ್ಟೆಯ ಹಳದಿಗಳು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆ ಮತ್ತು ವೀರ್ಯ ಚಲನೆಗೆ ಬಹಳ ಪ್ರಯೋಜನಕಾರಿ.
ಬಾಳೆಹಣ್ಣು : ಆತಂಕದ ಅಸ್ವಸ್ಥತೆಗಳಂತಹ ಅನೇಕ ಮನೋವೈದ್ಯಕೀಯ ಪರಿಸ್ಥಿತಿಗಳನ್ನು ತಪ್ಪಿಸಲು ಬಾಳೆಹಣ್ಣು ಉತ್ತಮ ಆಹಾರ ಪದಾರ್ಥವಾಗಿದೆ. ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡಲು ಕಾರಣವಾಗಿದೆ.