ಬಹುತೇಕರು ಇಷ್ಟಪಡುವ ಮ್ಯಾಗಿ ಹಲವರ ಆಪತ್ಭಾಂಧವ. ಎರಡೇ ನಿಮಿಷದಲ್ಲಿ ಮ್ಯಾಗಿ ರೆಡಿಯಾಗಲಿದೆ. ಹೀಗೆ ಹೆಚ್ಚು ಶ್ರಮವಿಲ್ಲದೆ ಮ್ಯಾಗಿ ರೆಡಿ ಮಾಡಿ ತಿಂದು ಸಾವನ್ನಪ್ಪಿದ ಘಟನೆ ನಡೆದಿದೆ.
ಮುಂಬೈ(ಜು.29): ಯಾವುದೇ ಆಹಾರ ತಯಾರಿಸುವಾಗ ಅತೀವ ಎಚ್ಚರಿಕೆ ವಹಿಸಬೇಕು. ಕೊಂಚ ಅಜಾಗರೂಕತೆ ಅತೀ ದೊಡ್ಡ ಅಪಾಯ ತಂದೊಡ್ಡಲಿದೆ. ಈ ಮಾತು ಹೇಳಲು ಕಾರಣವಿದೆ. ಮುಂಬೈನಲ್ಲಿ 35 ವರ್ಷ ಮಹಿಳೆ ಮ್ಯಾಗಿ ಮಾಡಿ ಸೇವಿಸಿದ್ದಾರೆ. ಇಷ್ಟೇ ನೋಡಿ, ಮಹಿಳೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಪರಿಸ್ಥಿತಿ ಕೈಮೀರಿದೆ. ಮಹಿಳೆ ಮೃತಪಟ್ಟಿದ್ದಾರೆ. ಇದು ಮ್ಯಾಗಿಯ ಎಫೆಕ್ಟ್ ಎಂದು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮ್ಯಾಗಿ ಅಡುಗೆಯಲ್ಲಿ ಮಾಡಿದ ಅತೀ ದೊಡ್ಡ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ. ಮಹಿಳೆ ಮ್ಯಾಗಿ ತಯಾರಿ ಮಾಡುವಾಗ ಕೆಲ ತರಕಾರಿಗಳನ್ನು ಕಟ್ ಮಾಡಿ ಹಾಕಿದ್ದಾರೆ. ಇದರ ಜೊತೆಗೆ ಟೋಮೋಟೋ ಕೂಡ ಹಾಕಿದ್ದಾರೆ. ಆದರೆ ಮ್ಯಾಗಿಯಲ್ಲಿ ಸೇರಿಸಿದ ಟೋಮೋಟೋ ವಿಷಪೂರಿತವಾಗಿತ್ತು. ಮನೆಯಲ್ಲಿನ ಇಲಿಗಳ ಕಾಟಕ್ಕೆ ಇಲಿ ವಿಷವನ್ನು ಟೋಮೋಟೋಗೆ ಬೆರಸಲಾಗಿತ್ತು. ಇದೇ ಟೋಮೋಟೋವನ್ನು ಮ್ಯಾಗಿಗೆ ಹಾಕಲಾಗಿದೆ.
ಪಶ್ಚಿ ಮುಂಬೈನ ಮಲಾಡ್ ನಿವಾಸಿಯಾಗಿರುವ ರೇಖಾ ನಿಶಾದ್ ಮೃತ ದುರ್ದೈವಿ. ಪತಿ ಹಾಗೂ ಮತ್ತೊರ್ವ ಕುಟುಂಬ ಸದಸ್ಯರ ಜೊತೆ ಮುಂಬೈನಲ್ಲಿ ನೆಲೆಸಿರುವ ರೇಖಾ ನಿಶಾದ್ ಜುಲೈ 20 ರಂದು ರಂದು ಮ್ಯಾಗಿ ಮಾಡಿದ್ದಾರೆ. ಕೂಲಿ ಕೆಲಸ ಮಾಡುವ ರೇಖಾ, ಬಹುಬೇಗನೆ, ಹೆಚ್ಚಿನ ಶ್ರಮವಿಲ್ಲದೆ ಆಹಾರ ಮಾಡಲು ಬಯಸಿದ್ದಾರೆ. ಹೀಗಾಗಿ ಮ್ಯಾಗಿ ಮಾಡಿದ್ದಾರೆ.
ಮಳೆಗಾಲದಲ್ಲಿ ಕಾಡೋ ಫುಡ್ ಪಾಯ್ಸನ್ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ
ಮನೆಯಲ್ಲಿ ವಿಪರೀತ ಇಲಿಗಳ ಸಮಸ್ಯೆಗೆ ಮುಕ್ತಿ ನೀಡಲು ಟೋಮೋಟೋ ಕತ್ತರಿಸಿ ಅದರಲ್ಲಿ ಇಲಿ ವಿಷ ಬೆರೆಸಿ ಇಡಲಾಗಿತ್ತು. ಮ್ಯಾಗಿ ತಯಾರಿಕೆ ವೇಳೆ ಇತರ ತರಕಾರಿಗಳನ್ನು ಕತ್ತರಿಸಿ ಮ್ಯಾಗಿಗೆ ಬಳಿಸಿದ್ದಾರೆ. ಇದೇ ವೇಳೆ ವಿಷ ಬೆರೆಸಿದ ಟೋಮೋಟವನ್ನು ಮ್ಯಾಗಿಗೆ ಹಾಕಿ ಬೇಯಿಸಿದ್ದಾರೆ. ಮ್ಯಾಗಿ ತಯಾರಿಸಿ ತಿಂದ ರೇಖಾ ಕೆಲ ಕ್ಷಣಗಳಲ್ಲೇ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದರಿಂದ ರೇಖಾಳನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ತಾನು ಮ್ಯಾಗಿ ತಿಂದ ಬಳಿಕ ಈ ರೀತಿ ಆಗಿದೆ ಎಂದಿದ್ದಾಳೆ. ವೈದ್ಯರು ಸತತ ಚಿಕಿತ್ಸೆ ನೀಡಿದರೂ ಫಲಪ್ರದವಾಗಲಿಲ್ಲ. ಕಾಲ ಮಿಂಚಿಹೋಗಿದ್ದ ಕಾರಣ ರೇಖಾ ಮೃಪಟ್ಟಿದ್ದಾಳೆ. ಮನೆಯಲ್ಲಿ ಇಲಿ ಹೆಚ್ಚಾಗಿರುವ ಕಾರಣ ಆಕೆಯ ಇಲಿ ವಿಷ ತರಿಸಿಕೊಂಡು ಟೋಮೋಟೋದಲ್ಲಿ ಬೆರೆಸೆ ಇಟ್ಟಿದ್ದರು. ಆದರೆ ಅಜಾಗರೂಕತೆಯಿಂದ ಮ್ಯಾಗಿಯಲ್ಲಿ ಇದೇ ಟೋಮೋಟೋ ಬಳಸಿ ದುರಂತ ಅಂತ್ಯಕಂಡಿದ್ದಾರೆ.
ಫುಡ್ ಪಾಯ್ಸನ್ ಯಾಕಾಗುತ್ತೆ ? ತಕ್ಷಣವೇ ಕಡಿಮೆಯಾಗಲು ಏನು ಮಾಡ್ಬೋದು ?
ತಂಬಾಕು ಎಂದು ಇಲಿ ಪಾಶಾಣ ಸೇವಿಸಿ ಸಾವು
ಕರ್ನಾಟಕದ ಕೋಟದ ಮಣೂರು ಗ್ರಾಮದ ಹೆಬ್ಬಾರ್‌ಬೆಟ್ಟು ಎಂಬಲ್ಲಿ ನಾರಾಯಣ ಖಾರ್ವಿ (58) ಅವರು ಆಕಸ್ಮಿಕವಾಗಿ ಇಲಿ ಪಾಷಾಣ ತಿಂದು ಮೃತಪಟ್ಟಿದ್ದ ಘಟನೆ ನಡೆದಿತ್ತು.. ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಅವರು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಜುಲೈ 13ರಂದು ಬೆಳಗ್ಗೆ 4 ಗಂಟೆಗೆ ಎದ್ದವರು, ಸಾರಾಯಿ ಕುಡಿದು ನಶೆಯಲ್ಲಿ, ಮಧು (ತಂಬಾಕು) ಎಂದು ಭಾವಿಸಿ ಕಿಟಕಿ ಮೇಲಿದ್ದ ಇಲಿ ಪಾಶಾಣ ತಿಂದು ಅಸ್ವಸ್ಥರಾಗಿದ್ದರು. ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ನಂತರ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.