ಪುರಿಗೆ ಖಾರ - ಸಿಹಿ ಮಿಶ್ರಿತ ಪಾನಿ ಹಾಕಿಕೊಂಡು ತಿನ್ನುತ್ತಿದ್ರೆ ಎಷ್ಟು ಪುರಿ ಒಳಗೆ ಹೋಯ್ತು ಅನ್ನೋದೇ ಗೊತ್ತಾಗೋದಿಲ್ಲ. ಎಲ್ಲರ ಬಾಯಲ್ಲಿ ನೀರೂರಿಸುವ ಈ ಪಾನಿ ಪುರಿ ಮೇಲೆ ಮತ್ತೊಂದು ಪ್ರಯೋಗ ನಡೆದಿದೆ.
ಆಹಾರದಲ್ಲಿ ದಿನಕ್ಕೊಂದು ಪ್ರಯೋಗ ನಡೆಯುತ್ತಿರುತ್ತದೆ. ಜನರು ಹೊಸ ರುಚಿಗಳನ್ನು ಟೇಸ್ಟ್ ಮಾಡ್ತಿರುತ್ತಾರೆ. ಕೆಲವೊಂದು ಪ್ರಯೋಗ ರುಚಿಯಾಗಿರುತ್ತದೆ. ಮತ್ತೆ ಕೆಲವೊಂದು ಹೇಸಿಗೆ ತರಿಸಿದ್ರೆ ಇನ್ನೊಂದಿಷ್ಟು ವಿಡಿಯೋ ಹೀಗೂ ಉಂಟೆ ಎನ್ನುವಂತೆ ಮಾಡುತ್ತದೆ. ಐಸ್ ಕ್ರೀಂ, ಪಾನಿಪುರಿ ಸೇರಿದಂತೆ ಜನರು ಇಷ್ಟಪಟ್ಟು ತಿನ್ನುವ ಆಹಾರದ ಮೇಲೆ ಆಹಾರ ತಯಾರಕರು ಪ್ರಯೋಗ ಮಾಡ್ತಿರುತ್ತಾರೆ. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ಜನರು ಗೋಲ್ಗಪ್ಪದ ಜೊತೆ ಪಾನಿ ಬದಲು ಆಲ್ಕೋಹಾಲ್ ಹಾಕಿಕೊಂಡು ತಿನ್ನುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇದೆಂಥ ರುಚಿ, ಪ್ರಯೋಗ ಮಾಡಿ ನೋಡ್ಬೇಕು ಎನ್ನುವ ಮದ್ಯಪ್ರಿಯರೂ ಇದ್ದಾರೆ.
ಗೋಲ್ಗಪ್ಪ (Golgappa), ಪಾನಿಪುರಿ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಭಾರತದ ಸ್ಟ್ರೀಟ್ ಫುಡ್ (Street Food) ನಲ್ಲಿ ಪಾನಿಪುರಿ (Panipuri) ಮೊದಲ ಸ್ಥಾನದಲ್ಲಿದೆ. ಬೇಸಿಗೆ ಇರಲಿ, ಮಳೆ ಇರಲಿ ಇಲ್ಲ ಚಳಿ ಇರಲಿ ಜನರು ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ತಿನ್ನುತ್ತಾರೆ. ಪಾನಿಪುರಿಗೆ ಏನು ಹಾಕ್ತಾರೆ ಅಂತ ಕೇಳಿದ್ರೆ, ಆಲೂಗಡ್ಡೆ, ಮಸಾಲೆ, ಪಾನಿ ಅಂತ ನಾವು ಥಟ್ ಅಂತ ಹೇಳ್ತೇವೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಾನಿ ಜಾಗವನ್ನು ಬೇರೆ ವಸ್ತು ಆವರಿಸಿದೆ.
7-8 ಕೋಟಿ ಖರ್ಚು ಮಾಡಿದ್ರೂ 1 ಕೆಜಿ ಟೀ ಪುಡಿ ಖರೀದಿಸಲಾರಿರಿ! ವಿಶ್ವದ ಅತ್ಯಂತ ದುಬಾರಿ ಚಹಾ ಬೆಲೆ ಎಷ್ಟು ಅಂದ್ರೆ..
ಮದ್ಯ ಪ್ರೇಮಿಗಳಿಗೆ ಯಾವುದು ಕೊಟ್ಟರೂ ಸಮಾಧಾನ ಆಗೋದಿಲ್ಲ. ಮದ್ಯಕ್ಕಿಂತ ಬೆಸ್ಟ್ ಯಾವುದೂ ಇಲ್ಲ ಎನ್ನುತ್ತಾರೆ. ಎಲ್ಲ ಆಹಾರದ ಜೊತೆ ಮದ್ಯವಿದ್ರೆ ಎಷ್ಟು ರುಚಿಯಾಗಿರ್ತಿತ್ತು ಅಲ್ವಾ ಎಂದು ಕೊಳ್ತಿರುತ್ತಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮದ್ಯ ಸೇವಿಸುವ ಜನರಿದ್ದಾರೆ. ಆಲ್ಕೋಹಾಲ್ ಒಂದು ಗ್ಲಾಸ್‌ನಲ್ಲಿಟ್ಟು, ಇನ್ನೊಂದು ಪ್ಲೇಟಿನಲ್ಲಿ ಬಜ್ಜಿ, ಬೋಂಡಾ ತಿನ್ನೋದನ್ನು ನಾವು ನೋಡ್ಬಹುದು. ಆದ್ರೆ ಈ ವಿಡಿಯೋ ಅಚ್ಚರಿ ಹುಟ್ಟಿಸುತ್ತದೆ. ಇನ್ಸ್ಟಾಗ್ರಾಮ್ ನ royal_boy_himu_007 ಹೆಸರಿನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ನಾನು ಪ್ರಯಾಣವನ್ನು ಗಮ್ಯಸ್ಥಾನಕ್ಕಿಂತ ಹೆಚ್ಚು ಆನಂದಿಸುತ್ತೇನೆ ಎಂದು ಹಿಂದಿಯಲ್ಲಿ ಶೀರ್ಷಿಕೆ ಹಾಕಲಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ಕೈನಲ್ಲಿ ಮದ್ಯದ ಬಾಟಲಿಯನ್ನು ನೋಡ್ಬಹುದು. ಇನ್ನಿಬ್ಬರ ಕೈನಲ್ಲಿ ಗೋಲ್ಗಪ್ಪ ಪುರಿಯಿದೆ. ಅದರ ಮಧ್ಯದಲ್ಲಿ ಮದ್ಯವನ್ನು ಹಾಕಲಾಗ್ತಿದೆ. ಮದ್ಯವನ್ನು ನೋಡಿದ್ರೆ ಅದು ಲೋಕಲ್ ಬ್ರ್ಯಾಂಡ್ ನಂತೆ ಕಾಣ್ತಿದೆ. ಹೇ ಪ್ರಭು, ಓ ಹರಿರಾಮ ಕೃಷ್ಣ ಜಗನ್ನಾಥಂ ಪ್ರೇಮಾನಂದ, ಏನಾಯಿತು ಎಂಬ ಆಡಿಯೋವನ್ನು ನೀವು ವಿಡಿಯೋದಲ್ಲಿ ಕೇಳ್ಬಹುದು.
ಮದ್ಯದ ಈ ವಿಡಿಯೋವನ್ನು 11.9 ಮಿಲಿಯನ್ ಅಂದರೆ 1.19 ಕೋಟಿ ಜನ ವೀಕ್ಷಿಸಿದ್ದಾರೆ. 18 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ನೂರಾರು ಮಂದಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಪಾನಿಪುರಿ ಅಲ್ಲ ಇದು ದಾರು ಪುರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನೀರನ್ನು ರಕ್ಷಿಸಿ, ಕ್ವಾಟರ್ ಕುಡಿಯಿರಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಹುಡುಗರು ನೀರನ್ನು ಉಳಿಸುತ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದೊಂದು ಬಾಕಿ ಇತ್ತು ಅಂತ ಮತ್ತೊಬ್ಬರು ಹೇಳಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಪ್ರಯತ್ನಿಸಬೇಡಿ. ಇದು ಅತ್ಯಂತ ಕೆಟ್ಟ ಪ್ರಯತ್ನ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ. ನನಗೂ ಕೊಡಿ ಅಂತ ಅನೇಕರು ಹೇಳಿದ್ರೆ, ಬಾಯಲ್ಲಿ ನೀರು ಬರ್ತಿದೆ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ನೀವು ಶುಂಠಿ ಚಹಾ ಪ್ರಿಯರೇ? ಹಾಗಿದ್ರೆ ಕುಡಿಯೋ ಮುನ್ನ ಆರೋಗ್ಯದ ಬಗ್ಗೆ ಇರಲಿ ಗಮನ
ಕೆಲ ದಿನಗಳ ಹಿಂದೆ ಐಸ್ ಕ್ರೀಂ ನ್ಯಾಚೋಸ್ ವಿಡಿಯೋ ವೈರಲ್ ಆಗಿತ್ತು. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿತ್ತು. ತಾರಾ ಪನಾಸಿಯುಕ್, ವಿಡಿಯೋ ಆರಂಭದಲ್ಲೇ ಈ ಐಸ್ ಕ್ರೀಮ್ ನ್ಯಾಚೋಸ್ ಬೇಸಿಗೆಯಲ್ಲಿ ಬೆಸ್ಟ್ ಎನ್ನುತ್ತಲೇ ವಿಡಿಯೋ ಶುರು ಮಾಡಿದ್ದರು. ಇದ್ರಲ್ಲಿ ಸಾಫ್ಟಿಗೆ ಹಾಕುವ ಬಿಸ್ಕತ್, ಐಸ್ ಕ್ರೀಂ, ಹಣ್ಣು ಸೇರಿದಂತೆ ಅನೇಕ ಪದಾರ್ಥವಿದ್ದು, ಜನರು ಇದನ್ನು ಇಷ್ಟಪಟ್ಟಿದ್ದಾರೆ.