ಬ್ಯಾಂಕ್‌ ಜಾಬ್‌ ಬಿಟ್ಟು ಬಿಸಿ ಬಿಸಿ ಇಡ್ಲಿ ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸ್ತಿರೋ ಬೆಂಗಳೂರಿನ ವ್ಯಕ್ತಿ!

By Vinutha PerlaFirst Published Feb 10, 2024, 9:14 AM IST
Highlights

ಬಿಸಿನೆಸ್ ಆರಂಭಿಸಬೇಕೆಂದು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಪರಿಶ್ರಮದಿಂದ ಉದ್ಯಮ ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರೂ ಅದಕ್ಕೆ ಸಿದ್ಧವಿರುವುದಿಲ್ಲ. ಆದ್ರೆ ಬ್ಯಾಂಕರ್ ಆಗಿದ್ದ ಬೆಂಗಳೂರಿನ ವ್ಯಕ್ತಿ, ತಮ್ಮ ಲಕ್ಷಗಟ್ಟಲೆ ಸ್ಯಾಲರಿಯ ಕೆಲಸ ಬಿಟ್ಟು ಇಡ್ಲಿ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿದ್ದಾರೆ.

ಬಿಸಿನೆಸ್ ಆರಂಭಿಸಬೇಕೆಂದು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಪರಿಶ್ರಮದಿಂದ ಉದ್ಯಮ ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರೂ ಅದಕ್ಕೆ ಸಿದ್ಧವಿರುವುದಿಲ್ಲ. ಆದ್ರೆ ಬ್ಯಾಂಕರ್ ಆಗಿದ್ದ ಬೆಂಗಳೂರಿನ ವ್ಯಕ್ತಿ, ತಮ್ಮ ಲಕ್ಷಗಟ್ಟಲೆ ಸ್ಯಾಲರಿಯ ಕೆಲಸ ಬಿಟ್ಟು ಇಡ್ಲಿ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿದ್ದಾರೆ. ತಮ್ಮ ತಂದೆ ಆರಂಭಿಸಿದ ಉದ್ಯಮವನ್ನು ಮುನ್ನಡೆಸಲು ಈ ವ್ಯಕ್ತಿ ಬ್ಯಾಂಕ್‌ ಜಾಬ್‌ನ್ನು ತೊರೆದು ಇಡ್ಲಿ ಮಾರಾಟಕ್ಕೆ ಮುಂದಾದರು.

ಕೃಷ್ಣನ್ ಮಹದೇವನ್, ಗೋಲ್ಡ್‌ಮನ್ ಸ್ಯಾಚ್ಸ್‌ನ ಅತಿದೊಡ್ಡ ಮತ್ತು ಹಳೆಯ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಹೂಡಿಕೆ ಬ್ಯಾಂಕರ್ ಆಗಿದ್ದವರು. ಆದರೆ ತನ್ನದೇ ಸ್ವಂತ ಉದ್ಯಮವನ್ನು ಆರಂಭಿಸಬೇಕೆಂದು ಇಡ್ಲಿ ಅಂಗಡಿ ಆರಂಭಿಸಿದ್ದಾರೆ. ಈಗ ಈ ಇಡ್ಲಿ ಬಿಸಿನೆಸ್ ಸಕ್ಸಸ್‌ ಆಗಿದ್ದು ಎಲ್ಲೆಡೆ ಹೆಸರು ಮಾಡಿದೆ.ಬೆಂಗಳೂರಿನ ವಿಜ್ಞಾನ ನಗರದಲ್ಲಿ ಕೃಷ್ಣನ್ ಮಹದೇವನ್, ಅಯ್ಯರ್ ಇಡ್ಲಿ ಎಂಬ ಸಣ್ಣ ಅಂಗಡಿಯನ್ನು ಪ್ರಾರಂಭಿಸಿದರು. ಇದಕ್ಕೂ ಮೊದಲು 2001ರಲ್ಲಿ ಅವರ ತಂದೆ ಬಿಸಿ ಬಿಸಿ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಿಸಿನೆಸ್‌ನ್ನು ಮುನ್ನಡೆಸಲು ಕೃಷ್ಣನ್ ತಮ್ಮ ಬ್ಯಾಂಕಿಂಗ್‌ ಕೆಲಸವನ್ನು ತೊರೆದರು. ಪ್ರಸ್ತುತ ಅಯ್ಯರ್ ಇಡ್ಲಿ ಬಹುತೇಕರಿಗೆ ಅಚ್ಚುಮೆಚ್ಚು.

ದಿನಕ್ಕೆ ಕೇವಲ 20 ರೂ. ಗಳಿಸ್ತಿದ್ದ ಬೆಂಗಳೂರಿನ ಮಹಿಳೆ ಈಗ ಕೋಟಿಗಳ ಒಡತಿ, ಮಾಡೆಲ್‌ಗಳನ್ನು ಮೀರಿಸುವಷ್ಟು ಚೆಲುವೆ!

ಬಿಸಿಬಿಸಿ ಇಡ್ಲಿ, ತೆಂಗಿನಕಾಯಿ ಚಟ್ನಿ ಇಲ್ಲಿ ಫೇಮಸ್
ಕೃಷ್ಣನ್ ಅವರ ತಂದೆ 2009ರಲ್ಲಿ ನಿಧನರಾದಾಗ, ಅಂಗಡಿಯ ಆಡಳಿತವು ಅವರ ಮತ್ತು ಅವರ ತಾಯಿ ಉಮಾ ನೋಡಿಕೊಳ್ಳಲು ಆರಂಭಿಸಿದರು. ಕೃಷ್ಣನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನಂತರ ಕಾಲೇಜಿಗೆ ಹೋಗುತ್ತಿದ್ದರು; ಅವನಿಗೆ ಕೆಲಸ ಸಿಕ್ಕ ನಂತರವೂ ಈ ದಿನಚರಿ ಮುಂದುವರೆಯಿತು. ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕ ಬಳಿಕ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. ಈಗ ಕೆಲಸ ಬಿಟ್ಟು ಸಂಪೂರ್ಣವಾಗಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಸುಮಾರು 19 ವರ್ಷಗಳ ಕಾಲ, ಅವರ ತಂದೆ ತೆಂಗಿನಕಾಯಿ ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದರು. ಸಮೀಪದಲ್ಲಿ ಅನೇಕ ರೆಸ್ಟೋರೆಂಟ್‌ಗಳಿದ್ದರೂ ಸಹ, ಅಯ್ಯರ್ ಇಡ್ಲಿಯು ಅದರ ವಿಶಿಷ್ಟವಾದ, ನಯವಾದ ಮತ್ತು ಮೃದುವಾದ ಇಡ್ಲಿಗಳಿಗಾಗಿ ಇನ್ನೂ ಬಹಳ ಜನಪ್ರಿಯವಾಗಿದೆ. ಕಳೆದ 20 ವರ್ಷಗಳಲ್ಲಿ ಎಲ್ಲಾ ವಯಸ್ಸಿನವರಿಗೂ ಅಯ್ಯರ್ ಇಡ್ಲಿ ಮೆಚ್ಚುಗೆಯಾಗಿದೆ. ಪ್ರತಿ ತಿಂಗಳು, ಅಂಗಡಿಯು 50,000 ಕ್ಕೂ ಹೆಚ್ಚು ಇಡ್ಲಿಗಳನ್ನು ಮಾರಾಟ ಮಾಡುತ್ತದೆ.

Harsh Jain: ಒಂದಲ್ಲ ಎರಡಲ್ಲ 150 ಬಾರಿ ಫೇಲ್ ಆದ್ರೂ ಛಲ ಬಿಡದೆ ಕೋಟಿ ಕೋಟಿ ಸಂಪಾದಿಸಿದ ವ್ಯಕ್ತಿ

ಇಡ್ಲಿ ಅಂಗಡಿಯು ಕೇವಲ 20ರಿಂದ 10 ಅಡಿ ಜಾಗವನ್ನು ಆಕ್ರಮಿಸಿಕೊಂಡಿದ್ದರೂ ಸಹ, ಅಯ್ಯರ್ ಇಡ್ಲಿ ವೆಚ್ಚವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ತಿಂಗಳು, ಅಂಗಡಿಯು 50,000ಕ್ಕೂ ಹೆಚ್ಚು ಇಡ್ಲಿಗಳನ್ನು ಮಾರಾಟ ಮಾಡುತ್ತದೆ. ಯಾವುದೇ ಆಡಂಬರದ ಹೊರಭಾಗಗಳು ಅಥವಾ ಒಳಾಂಗಣ ಈ ಹೊಟೇಲ್‌ಗಿಲ್ಲ. ಆದರೆ ಆಹಾರದ ಗುಣಮಟ್ಟ, ತಾಜಾತನ, ಶುಚಿತ್ವ ಮತ್ತು ರುಚಿ ಇಲ್ಲಿ ಅತ್ಯುತ್ತಮವಾಗಿದೆ. ಇತ್ತೀಚಿಗೆ, ಕೃಷ್ಣನ್ ವಡಾ, ಕೇಸರಿ ಬಾತ್  ಮತ್ತು ಖಾರಾ ಭಾತ್ ಅನ್ನು ಮೆನುವಿನಲ್ಲಿ ಸೇರಿಸಲಾಗಿದೆ. 

ಅಯ್ಯರ್ ಇಡ್ಲಿ ಅಂಗಡಿ ಎಲ್ಲಿದೆ?

Iyer Idly, 2, ಕಾರಿಯಪ್ಪ ಬಿಲ್ಡಿಂಗ್‌, ಕುವೆಂಪು ರೋಡ್, ವಿಜ್ಞಾನ ನಗರ, ತಿಪ್ಪಸಂದ್ರ

click me!