ಇಡ್ಲಿ ಎಲ್ಲಿ ಐಸ್ ಕ್ರೀಂ ಎಲ್ಲಿ. ಇವೆರಡರ ಕಾಂಬಿನೇಷನ್ ಹೇಗಿರುತ್ತೆ? ಟೇಸ್ಟ್ ಮಾಡಿಲ್ಲ ಅಂದ್ರಾ? ಈಗ ಮಾರುಕಟ್ಟೆಗೆ ಐಸ್ ಕ್ರೀಂ ಹಾಕಿರೋ ಇಡ್ಲಿ – ಸಾಂಬಾರ್ ಬಂದಿದೆ. ಟ್ರೈ ಮಾಡಿ ನೋಡಿ.
ಆಹಾರದಲ್ಲಿ ಹೊಸ ಹೊಸ ಪ್ರಯೋಗ ಕಾಮನ್. ಒಂದೇ ಟೇಸ್ಟ್ ಆಹಾರ ತಿಂದು ನಮಗೂ ಬೋರ್ ಆಗಿರುತ್ತೆ. ಹಾಗಾಗಿ ಒಂದೆರಡು ಮಸಾಲೆ ಚೇಂಜ್ ಮಾಡಿ ಅಡುಗೆ ಮಾಡ್ತಿರುತ್ತೇವೆ. ಇಲ್ಲವೆ ಒಂದೇ ತರಕಾರಿಯಲ್ಲಿ ವೆರೈಟಿ ಅಡುಗೆ ಮಾಡೋದನ್ನು ಕಲಿತೇವೆ. ಆದ್ರೆ ಈಗಿನ ದಿನಗಳಲ್ಲಿ ಆಹಾರದ ಮೇಲೆ ಅತ್ಯಾಚಾರ ನಡೀತಾ ಇದೆ. ಕಾಂಬಿನೇಷನ್ ಅಲ್ಲದ ಆಹಾರವನ್ನು ಸೇರಿಸಿ ಜನರು ಮಾರಾಟ ಮಾಡ್ತಿದ್ದಾರೆ. ಬೀದಿ ಬದಿಯಲ್ಲಿ ಇಂಥ ಆಹಾರಗಳ ಮಾರಾಟ ಹೆಚ್ಚಾಗಿದೆ. ಕೆಲ ಫ್ಲೆವರ್ ನೋಡೋಕೆ ಕಷ್ಟವೆನ್ನಿಸಿದ್ರೂ ತಿನ್ನೋಕೆ ರುಚಿಯಾಗಿರುತ್ತೆ. ಮತ್ತೆ ಕೆಲವು ವಾಕರಿಕೆ ತರಿಸುವಂತಿರುತ್ತೆ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದರಂತೆ ಇಂಥ ಆಹಾರಗಳು ವೈರಲ್ ಆಗ್ತಿರುತ್ತವೆ. ಎಲ್ಲವನ್ನೂ ಬಳಕೆದಾರರು ಒಪ್ಪಿಕೊಳ್ಳೋದಿಲ್ಲ. ಈಗ ಈ ಲೀಸ್ಟ್ ಗೆ ಇನ್ನೊಂದು ಆಹಾರ ಸೇರ್ಪಡೆ ಆಗಿದೆ.
ನಮ್ಮಲ್ಲಿ ಐಸ್ ಕ್ರೀಂ (Ice Cream) ಪ್ರೇಮಿಗಳ ಸಂಖ್ಯೆ ಕಡಿಮೆ ಏನಿಲ್ಲ. ಐಸ್ ಕ್ರೀಂನಲ್ಲಿ ನೀವು ಸಾಕಷ್ಟು ಫ್ಲೇವರ್ ನೋಡ್ಬಹುದು. ಗುಲಾಬ್ ಜಾಮೂನ್ ಜೊತೆ ಐಸ್ ಕ್ರೀಂ ಬೆರೆಸಿ ತಿನ್ನೋರು ಅನೇಕರಿದ್ದಾರೆ. ಹಾಗೆ ಇಡ್ಲಿ – ಸಾಂಬಾರ್ (Idli Sambar) ದಕ್ಷಿಣ ಭಾರತದ ಫೇಮಸ್ ತಿಂಡಿ. ಬೆಳಿಗ್ಗೆ ಎದ್ದು ಇಡ್ಲಿ ಮೇಲೆ ಸಾಂಬರ್ ಹಾಕಿಕೊಂಡು ತಿಂದ್ರೆ ಹೊಟ್ಟೆ ತುಂಬಿದಂತೆ. ಇಡೀ ದಿನ ಫ್ರೆಶ್ ಆಗಿರ್ತೇವೆ. ಬಿಸಿಲು ಹೆಚ್ಚಾಗ್ತಿದ್ದಂತೆ ಹೊಟ್ಟೆ ತಂಪು ಮಾಡಿಕೊಳ್ಳೋಕೆ ಐಸ್ ಕ್ರೀಂ ಬಾಯಿಗೆ ಹಾಕ್ತೇವೆ. ಇವೆರಡೂ ಅವರವರ ಸ್ಥಾನದಲ್ಲಿ ಸೂಪರ್ ರುಚಿ ಹೊಂದಿದೆ. ಆದ್ರೆ ಎರಡೂ ಮಿಕ್ಸ್ ಆದ್ರೆ? ಇಡ್ಲಿ – ಸಾಂಬಾರ್ ಜೊತೆ ಐಸ್ ಕ್ರೀಂ ಮಿಕ್ಸ್ ಮಾಡಿ ಕೊಟ್ರೆ?.
undefined
ಗೋಬಿ ಮಂಚುರಿಯನ್ ನಿಷೇಧಿಸಿದ ಭಾರತದ ಈ ನಗರ, ಮಾರಾಟ ಮಾಡಿದರೆ ಲೈಸೆನ್ಸ್ ರದ್ದು!
ಈಗ ಇಂಥ ರೆಸಿಪಿಯೊಂದು ಸುದ್ದಿ ಮಾಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಒಂದಾಗ ಇನ್ಸ್ಟಾಗ್ರಾಂ ನಲ್ಲಿ ಇಡ್ಲಿ ಸಾಂಬಾರ್ ಜೊತೆ ಐಸ್ ಕ್ರೀಮ್ ಬೆರೆಸಿ ನೀಡುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಐಸ್ ಕ್ರೀಮ್ ರೋಲ್ ಅನ್ನು ತಯಾರಿಸಲು ಸಾಂಬಾರ್ ಮತ್ತ ಚಟ್ನಿಯನ್ನು ಬಳಸಲಾಗಿದೆ. ಇದನ್ನು ಫುಡ್ ಬ್ಲಾಗರ್ ಸುಕೃತ್ ಜೈನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೀಗೆ ತಯಾರಾಗುತ್ತೆ ನೋಡಿ ಇಡ್ಲಿ – ಸಾಂಬಾರಿನ ಐಸ್ ಕ್ರೀಮ್ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಇಡ್ಲಿ ಸಾಂಬಾರಿನ ಐಸ್ ಕ್ರೀಮ್ ತಯಾರಿಸುವಾಗ ಮೊದಲು, ಇಡ್ಲಿಯ ಅರ್ಧ ಭಾಗವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಲಾಗುತ್ತದೆ. ನಂತರ ಇದರ ಮೇಲೆ ಕೆಂಪು ಚಟ್ನಿ ಹಾಗೂ ತೆಂಗಿನ ಕಾಯಿಯ ಚಟ್ನಿ, ಸಾಂಬಾರ ಮತ್ತು ಸ್ವಲ್ಪ ಐಸ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಲಾಗುತ್ತದೆ. ಕೊನೆಯಲ್ಲಿ ಉಳಿದ ಅರ್ಧ ಭಾಗ ಇಡ್ಲಿಯನ್ನು ಐಸ್ ಕ್ರೀಮ್ ಮೇಲಿಟ್ಟು ಅಲಂಕಾರ ಮಾಡಿ, ಸರ್ವ್ ಮಾಡಲಾಗುತ್ತದೆ.
ಸುಲಭವಾಗಿ ಬಟಾಣಿ ಸಿಪ್ಪೆ ಬಿಡಿಸೋದು ಹೇಗೆ? ಸಿಂಪಲ್ ಟ್ರಿಕ್ ಇಲ್ಲಿದೆ..
ಇನ್ಸ್ಟಾದಲ್ಲಿ ಅಪ್ ಲೋಡ್ ಆಗಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ 12.7 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ಈ ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೆಸಿಪಿ (Recipe) ನೋಡಿ ಅನೇಕ ಮಂದಿ ತಮ್ಮ ಅನಿಸಿಕೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಐಸ್ ಕ್ರೀಮ್ ಬಹಳ ರುಚಿಕರವಾಗಿದೆ ಎಂದರೆ, ಕೆಲವರು ಈ ಐಸ್ ಕ್ರೀಮ್ (Ice Cream) ತಯಾರಿಸಿದವರನ್ನು ಬಂಧಿಸಬೇಕು ಎಂದಿದ್ದಾರೆ. ಇನ್ಸ್ಟಾ ಬಳೆಕೆದಾರರೊಬ್ಬರು ಇದು ಕಾನೂನು ಬಾಹಿರ ಎಂದು ಕೂಡ ಹೇಳಿದ್ದಾರೆ. ಆಹಾರದ ವಿಷಯದಲ್ಲಿ ಇಷ್ಟು ಹೆಚ್ಚು ಜಾಗ್ರತೆ ವಹಿಸಬೇಕು ಇಂತಹ ಹೊಸ ಪ್ರಯೋಗಗಳು ಜನರ ಆರೋಗ್ಯಕ್ಕೆ ಮಾರಕವಾಗಬಹುದೆಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.