ರಾತ್ರಿ ಹಾಲಿನ‌ ಜೊತೆ‌ ಕ್ಯಾಲ್ಸಿಯಂ ಪೂರಕ ಬೇಡವೇ ಬೇಡ‌

By Suvarna NewsFirst Published May 6, 2024, 2:38 PM IST
Highlights

ಆರೋಗ್ಯದ ವಿಷ್ಯ ಬಂದಾಗ ನಾವು ಎಚ್ಚರವಿದ್ದಷ್ಟೂ ಸಾಲೋದಿಲ್ಲ. ಹಾಲು, ತರಕಾರಿ, ಹಣ್ಣು ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ಸೇವನೆ ಮಾಡ್ಬೇಕು. ಯಾವುದು ಹೆಚ್ಚಾದ್ರೂ ಅಥವಾ ಯಾವುದನ್ನು ತಪ್ಪಾಗಿ ಸೇವನೆ ಮಾಡಿದ್ರೂ ಅಪಾಯ ತಪ್ಪಿದ್ದಲ್ಲ. 
 

ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.  ಸ್ನಾಯುಗಳ ಬಲ ಹೆಚ್ಚಿಸಲು, ಹೃದಯ, ನರಗಳ ಆರೋಗ್ಯಕ್ಕೂ ಕ್ಯಾಲ್ಸಿಯಂ ಬಹಳ ಅಗತ್ಯ.  ವಯಸ್ಸಾದಂತೆ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆಗ್ತಾ ಬರುತ್ತದೆ. ಮಹಿಳೆಯರಿಗೆ ಕ್ಯಾಲ್ಸಿಯಂ ಸಮಸ್ಯೆ ಕಾಡೋದು ಹೆಚ್ಚು. ನಿಯಮಿತವಾಗಿ ಕ್ಯಾಲ್ಸಿಯಂ ಪ್ರಮಾಣವನ್ನು ಪರೀಕ್ಷೆ ಮಾಡುವ ಜೊತೆಗೆ ಅದಕ್ಕೆ ತಕ್ಕಂತೆ ಆಹಾರ, ಔಷಧಿ ಸೇವನೆ ಮಾಡಬೇಕು. 

ಕ್ಯಾಲ್ಸಿಯಂ (Calcium) ದೇಹಕ್ಕೆ ಅಗತ್ಯ ಸರಿ, ಆದ್ರೆ ಅದು ಅತಿಯಾದ್ರೂ ತೊಂದರೆ ತಪ್ಪಿದ್ದಲ್ಲ. ಕೆಲವರು ಕ್ಯಾಲ್ಸಿಯಂ ಅನಿವಾರ್ಯ ಎನ್ನುವ ಕಾರಣಕ್ಕೆ ಹಾಲು, ಕ್ಯಾಲ್ಸಿಯಂ ಇರುವ ಆಹಾರ (Food) ದ ಜೊತೆ ಹೆಚ್ಚುವರಿ ಮಾತ್ರೆ - ಔಷಧಿ ಸೇವನೆ ಮಾಡ್ತಾರೆ.  ನೀವು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವನೆ ಮಾಡೋದು ಹೇಗೆ ಅಪಾಯಕಾರಿಯೋ ಅದೇ ರೀತಿ ಕ್ಯಾಲ್ಸಿಯಂ ತೆಗೆದುಕೊಳ್ಳುವ ವಿಧಾನ ಸರಿಯಾಗಿಲ್ಲವೆಂದ್ರೂ ಅದು ಅಪಾಯಕಾರಿಯಾಗಿದೆ.  

34 ವರ್ಷದ 317 ಕೆಜಿ ತೂಕದ ಮನುಷ್ಯ ಬಹು ಅಂಗಾಂಗ ವೈಫಲ್ಯದಿಂದ ಸಾವು, ಇವನನ್ನು ಎತ್ತಲು ಕ್ರೇನ್ ಬೇಕಿತ್ತು!

ಅತಿಯಾದ ಕ್ಯಾಲ್ಸಿಯಂ ಸೇವನೆ ಹೃದಯ (Heart) ದ ಆರೋಗ್ಯಕ್ಕೆ ಹಾನಿಕಾರಕ.  ಅಧ್ಯಯನಗಳ ಪ್ರಕಾರ ರಾತ್ರಿಯ ಊಟದಲ್ಲಿ ಹೆಚ್ಚು ಕ್ಯಾಲ್ಸಿಯಂ ಸೇವನೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನೀವು ರಾತ್ರಿ ಬದಲು ಬೆಳಗಿನ ಉಪಾಹಾರದಲ್ಲಿ ಕ್ಯಾಲ್ಸಿಯಂ ಸೇವನೆಗೆ ಆದ್ಯತೆ ನೀಡ್ಬೇಕು. 

2003-2018 ರ ನಡುವೆ 36,000 ಕ್ಕೂ ಹೆಚ್ಚು ಅಮೇರಿಕನ್ ವಯಸ್ಕರ ಮೇಲೆ ಅಧ್ಯಯನ ನಡೆದಿದೆ. ಈ ಅಧ್ಯಯನದಲ್ಲಿ ಅಮೇರಿಕನ್‌ ವಯಸ್ಕರ  ಆಹಾರದ ಕ್ಯಾಲ್ಸಿಯಂ ಸೇವನೆಯನ್ನು ಪರೀಕ್ಷಿಸಲಾಯಿತು. ಅವರ ಬೆಳಿಗ್ಗೆ ಮತ್ತು ಸಂಜೆಯ ಊಟದ ಕ್ಯಾಲ್ಸಿಯಂ ಸೇವನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಯಿತು. ರಾತ್ರಿಯ ಊಟದಲ್ಲಿ ಕ್ಯಾಲ್ಸಿಯಂ ಸೇವನೆಯು ಹೃದ್ರೋಗದ ಅಪಾಯವನ್ನು ಶೇಕಡಾ 5 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

ಬೆಳಗಿನ ಉಪಾಹಾರದಲ್ಲಿ ನೀವು ಕ್ಯಾಲ್ಸಿಯಂ ಸೇವನೆ ಮಾಡಿದ್ರೆ ಹೃದಯ ರೋಗ ಕಾಡುವ ಅಪಾಯ, ರಾತ್ರಿಗೆ ಹೋಲಿಸಿದ್ರೆ ಶೇಕಡಾ 6 ರಷ್ಟು ಕಡಿಮೆ ಇರುತ್ತದೆ. ರಾತ್ರಿಯಲ್ಲಿ ಕ್ಯಾಲ್ಸಿಯಂ ಸೇವನೆಯಿಂದ ಹೃದ್ರೋಗದ ಅಪಾಯ ಹೆಚ್ಚು ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.  ಕ್ಯಾಲ್ಸಿಯಂ ಅನ್ನು ಹೆಚ್ಚು ಅಥವಾ ಕಡಿಮೆ ಸೇವಿಸುವುದರಿಂದ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಒತ್ತಿಹೇಳುತ್ತವೆ.

ರಾತ್ರಿಯಲ್ಲಿ ಕ್ಯಾಲ್ಸಿಯಂ ತಿನ್ನಬಾರದು ಏಕೆ? : ಕ್ಯಾಲ್ಸಿಯಂ ಅನ್ನು ಮಧ್ಯಾಹ್ನ ಅಥವಾ ಸಂಜೆ ತೆಗೆದುಕೊಳ್ಳಬಾರದು. ಯಾಕೆಂದ್ರೆ ಕ್ಯಾಲ್ಸಿಯಂ ಸುಲಭವಾಗಿ ಸಂಗ್ರಹವಾಗುತ್ತದೆ. ಇದ್ರಿಂದ ಮೂತ್ರಪಿಂಡದ ಕಲ್ಲು, ಮೂತ್ರನಾಳದ ಕಲ್ಲು, ಮಲಬದ್ಧತೆ ಮತ್ತು ಮಕ್ಕಳಿಗೆ ನಿದ್ರಾಹೀನತೆ ಸಮಸ್ಯೆಯನ್ನುಂಟು ಮಾಡುತ್ತದೆ.   

ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆಯಿರುವ ವಯಸ್ಕರಿಗೆ ದಿನಕ್ಕೆ ಸುಮಾರು 1000 ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯು ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ, ಉಪಹಾರ ಮತ್ತು ಊಟದ ನಂತರ ಅದನ್ನು ಎರಡು ಭಾಗಗಳಾಗಿ ವಿಂಗಡಿಸಿ. ಇದು ದೇಹವು ಕ್ಯಾಲ್ಸಿಯಂ ಅನ್ನು ನಿಧಾನವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.  ಕ್ಯಾಲ್ಸಿಯಂ ಅನ್ನು ಮಧ್ಯಾಹ್ನ ಅಥವಾ ಸಂಜೆ ತೆಗೆದುಕೊಳ್ಳಬಾರದು, ವಿಶೇಷವಾಗಿ ರಾತ್ರಿ 9 ರ ನಂತರ ತೆಗೆದುಕೊಳ್ಳಬಾರದು. ಇದು ಕ್ಯಾಲ್ಸಿಫಿಕೇಶನ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಲಗುವ ಮುನ್ನ ಹಾಲು ಕುಡಿಯೋದು ಎಷ್ಟು ಸರಿ? :  ಹಾಲಿನಲ್ಲಿ ಕ್ಯಾಲ್ಸಿಯಂ ಇರುವ ಕಾರಣ ಅನೇಕರು ಮಲಗುವ ಮುನ್ನ ಇದರ ಸೇವನೆ ಮಾಡ್ತಾರೆ. ಮೆಲಟೋನಿನ್ ಉತ್ಪಾದನೆಯಲ್ಲಿ ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಇದು ಮೆದುಳಿನಲ್ಲಿ ನಿದ್ರೆಯನ್ನು ಉಂಟುಮಾಡುತ್ತದೆ. ಡೈರಿ ಉತ್ಪನ್ನ ಟ್ರಿಪ್ಟೊಫಾನ್ ಮತ್ತು ಕ್ಯಾಲ್ಸಿಯಂ ಎರಡನ್ನೂ ಒಳಗೊಂಡಿರುತ್ತವೆ. ಇದು ನಿದ್ರೆಯನ್ನು ಪ್ರಚೋದಿಸುವ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ಆದ್ದರಿಂದ ಮಲಗುವ ಮುನ್ನ ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ.

ಐಸ್‌ಕ್ರೀಂ ಬಾಕ್ಸ್‌ನಲ್ಲಿ ಜಿರಳೆ, ಫಂಗಸ್ ಬಂದ ಕ್ಯಾರೆಟ್‌; ಹೊಟೇಲ್‌ ರೈಡ್ ಮಾಡಿದ ಆರೋಗ್ಯ ಅಧಿಕಾರಿಗಳೇ ಬೆಚ್ಚಿಬಿದ್ರು!

ಹಾಲಿನೊಂದಿಗೆ ಕ್ಯಾಲ್ಸಿಯಂ ಪೂರಕ ಎಷ್ಟು ಸರಿ? :  ಹಾಲಿನೊಂದಿಗೆ ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಮತ್ತು ಕ್ಯಾಲ್ಸಿಯಂ ಮಾತ್ರೆಗಳಲ್ಲಿನ ಕ್ಯಾಲ್ಸಿಯಂ ಪ್ರಮಾಣ ದೇಹಕ್ಕೆ ಹೀರಿಕೊಳ್ಳಲು ಸಮಸ್ಯೆಯನ್ನುಂಟು ಮಾಡುತ್ತದೆ.  ಇದು ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ದೇಹದ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಬೆಳಗಿನ ಉಪಾಹಾರದ ನಂತರ ಸುಮಾರು 1 ಗಂಟೆಯ ನಂತರ ನೀವು ಕ್ಯಾಲ್ಸಿಯಂ ಪೂರಕ ತೆಗೆದುಕೊಳ್ಳಿ. ಇಲ್ಲವೇ ಹಾಲು ಕುಡಿಯುವ ಮೊದಲು ನೀವು ಕ್ಯಾಲ್ಸಿಯಂ ಪೂರಕ ತೆಗೆದುಕೊಳ್ಳಬೇಕು. 

click me!