KFC Chicken Sticks: ಸ್ಪೆಷಲ್ ಅಗರಬತ್ತಿ, ಹಚ್ಚಿದ್ರೆ ಮನೆ ತುಂಬಾ ಚಿಕನ್ ಘಮಘಮ

By Vinutha PerlaFirst Published Jan 31, 2023, 2:45 PM IST
Highlights

ಅಗರಬತ್ತಿ ಅಂದ್ರೆ ಎಲ್ಲರಿಗೂ ಸಾಮಾನ್ಯವಾಗಿ ದೇವರ ಮನೆ, ಪೂಜೆ, ದೇವಾಲಯ, ಪರಿಮಳಭರಿತವಾದ ವಾತಾವರಣ ನೆನಪಾಗುತ್ತೆ. ಆದ್ರೆ  ವಿಶೇಷ ಚಿಕನ್ ತಿನಿಸುಗಳಿಗೆ ಫೇಮಸ್ ಆಗಿರೋ ಕೆಎಫ್‌ಸಿ ಚಿಕನ್ ಅಗರಬತ್ತಿಗಳನ್ನು ತಯಾರಿಸಿದೆ. ಅರೆ, ಇದೇನ್ ವಿಚಿತ್ರ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.

ಕೆಎಫ್‌ಸಿ ಅಂದ್ರೆ ಚಿಕನ್ ಪ್ರಿಯರ ಬಾಯಲ್ಲಿ ನೀರೂರುತ್ತೆ. ಚಿಕನ್ ವಿಂಗ್ಸ್, ಚಿಕನ್ ಫ್ರೈಡ್, ಚಿಕನ್ ಪಾಪ್‌ಕಾರ್ನ್‌, ಬಕೆಟ್ ಚಿಕನ್ ಅಂತ ಕೆಎಫ್‌ಸಿ ನಾನಾ ರೀತಿಯ ಚಿಕನ್ ಖಾದ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಹಾಗೆಯೇ ಸದ್ಯ ಹೊಸದಾಗಿ ತಯಾರಿಸಿರುವ ಪ್ರಾಡಕ್ಟ್‌ ಎಲ್ಲೆಡೆ ವೈರಲ್ ಆಗಿದೆ. ಕೆಎಫ್​ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್​ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ

ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಹೊಂದಿರುವ ಅಗರಬತ್ತಿ
ಅಗರಬತ್ತಿ ಅಂದ್ರೆ ಎಲ್ಲರಿಗೂ ಸಾಮಾನ್ಯವಾಗಿ ದೇವರ ಮನೆ, ಪೂಜೆ, ದೇವಾಲಯ, ಪರಿಮಳಭರಿತವಾದ ವಾತಾವರಣ ನೆನಪಾಗುತ್ತೆ. ಆಧ್ಯಾತ್ಮಿಕ ಚಿಂತನೆಗಳು ಮುಡಿಬರುತ್ತವೆ. ಆದ್ರೆ ಈ ಅಗರಬತ್ತಿ ಹಚ್ಚಿದ್ರೆ ಮಾತ್ರ ಮನೆ ತುಂಬಾ ಚಿಕನ್ ಪರಿಮಳ (Smell) ಬರೋದು ಖಂಡಿತ. ಜನಪ್ರಿಯ ಚಿಕನ್ ಖಾದ್ಯಗಳ (Chicken dish)ಸ್ಟೋರ್ ಆಗಿರುವ ಕೆಎಫ್​ಸಿ ಈ ವಿಶಿಷ್ಟ ಅಗರಬತ್ತಿಯನ್ನು ತಯಾರಿಸಿದೆ. ಥಾಯ್ಲೆಂಡ್ ವಿಭಾಗದ ಕೆಎಫ್​ಸಿ ಇಂಥದ್ದೊಂದು ಪ್ರಯೋಗ ಮಾಡಿದ್ದು, ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ನೋಡಲೂ ಕೂಡ ಕೆಎಫ್​ಸಿಯ ಡ್ರಮ್​ಸ್ಟಿಕ್ ಚಿಕನ್​ಗಳಂತೆ ಕಂಡರೂ ಈ ಅಗರಬತ್ತಿಯನ್ನು ತಿನ್ನಲಾಗುವುದಿಲ್ಲ. ಕೇವಲ ನೋಡಲು ಮತ್ತು ಆಘ್ರಾಣಿಸಲು ಮಾತ್ರ ಸಾಧ್ಯವಾಗುತ್ತದೆ. ಈ ಊದುಬತ್ತಿಯನ್ನು ಹಚ್ಚಿದರೆ ಎಲ್ಲೆಡೆ ಥೇಟ್ ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ. 

ಮೈಕ್ರೋವೇವ್‌ನಲ್ಲಿ ತಯಾರಿಸಿದ ಚಿಕನ್‌ ತಿನ್ತೀರಾ? ಹುಷಾರ್‌ ಸಾವಿಗೆ ಬೇಗ ಹತ್ತಿರವಾಗ್ತೀರಿ

ಕೆಎಫ್​ಸಿಯ ಥಾಯ್ಲೆಂಡ್ ವಿಭಾಗವು ಈ ಫ್ರೈಡ್ ಚಿಕನ್ ಅಗರಬತ್ತಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ತಕ್ಷಣ ಇದು ಎಲ್ಲೆಡೆ ವೈರಲ್ ಆಯಿತು, ಆದರೆ ಸಾಮಾಜಿಕ ಜಾಲತಾಣದಲ್ಲಿ (Social media) ಜನರು ಇದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅದಾದ ಬಳಿಕ ಕೆಎಫ್​ಸಿ ಈ ಪೋಸ್ಟ್ ಅನ್ನು ಅಳಿಸಿಹಾಕಿದೆ.

ಕೆಎಫ್‌ಸಿ ಅಗರಬತ್ತಿ ತಯಾರಿಸುವುದು ಹೇಗೆ ?
ಈ ಅಗರಬತ್ತಿಗಳು ಹುರಿದ ಕೋಳಿಯ ವಾಸನೆಯನ್ನು ಮಾತ್ರವಲ್ಲದೆ ತಿನ್ನಲು ಯೋಗ್ಯವಾಗಿಯೂ ಕಾಣುತ್ತವೆ. ಅದೇ ಸಮಯದಲ್ಲಿ ಆಸಕ್ತಿದಾಯಕ ಮತ್ತು ವಿಲಕ್ಷಣವಾಗಿ ಕಾಣಿಸುತ್ತದೆ. ಕೆಎಫ್‌ಸಿ ಅಗರಬತ್ತಿಯನ್ನು ತಯಾರಿಸಲು ಸಂಸ್ಥೆಯದ್ದೇ ವಿಶೇಷವಾದ ರೆಸಿಪಿ ಇದೆ. 11 ಸಸ್ಯ ಮತ್ತು ಮಸಾಲೆ (Spice)ಗಳನ್ನೊಳಗೊಂಡ ರೆಸಿಪಿ ಇದು. 

ಕೆಎಫ್‌ಸಿ ಚಿಕನ್‌ನಂತೆಯೇ ಸ್ಮೆಲ್ ಇರುವ ಅಗರಬತ್ತಿಯನ್ನು ತಯಾರಿಸುವುದು ಕೆಎಫ್​ಸಿಗೆ ಸವಾಲಿನ ಕೆಲಸವಾಗಿತ್ತು. ಅದಕ್ಕಾಗಿ ಕೆಎಫ್​ಸಿ ಸೆಂಟ್ ವಿಭಾಗವು ಕೆಲ ತಜ್ಞ ಸಂಸ್ಥೆಗಳ ಜೊತೆ ಸೇರಿ ಈ ಕಾರ್ಯ ಮಾಡಿತ್ತು. ಕೊನೆಯಲ್ಲಿ ಈ ಕೆಎಫ್‌ಸಿ ಚಿಕನ್ ಸುವಾಸನೆಯ ಅಗರಬತ್ತಿಯನ್ನು ಸಿದ್ಧಪಡಿಸಿದೆ. ಆದರೆ ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿಯು ಮಾರಾಟಕ್ಕಿಲ್ಲ. ಸೌರಮಾನ ಹೊಸ ವರ್ಷದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೊಡಲು ಮಾತ್ರ ಇದರ ತಯಾರಿಕೆ ಮಾಡಲಾಗಿತ್ತು. 

Viral News: ಅಬ್ಬಬ್ಬಾ.. ಒಂದೆರಡಲ್ಲ.. ಬರೋಬ್ಬರಿ 40 ದಿನ, 40 ಕೋಳಿ ತಿಂದ!

ಈ ಅಗರಬತ್ತಿಯನ್ನು ಕೆಎಫ್‌ಸಿ ಸಿಗ್ನೇಚರ್ ಕೆಂಪು ಮತ್ತು ಬಿಳಿ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಲಾಗುತ್ತದೆ. ಆದರೆ, ಈ ಅಗರಬತ್ತಿಗಳು ಮಾರಾಟಕ್ಕಿಲ್ಲ. ಕೆಎಫ್‌ಸಿ ಥೈಲ್ಯಾಂಡ್‌ನ ಫೇಸ್‌ಬುಕ್ ಪುಟದಲ್ಲಿ ನಡೆಸಿದ ರಾಫೆಲ್ ಮೂಲಕ ಈ ವಿಶೇಷ ಉತ್ಪನ್ನವನ್ನು ಗೆಲ್ಲಬಹುದು ಎಂದು ಆಡಿಟಿ ಸೆಂಟ್ರಲ್ ವರದಿ ಮಾಡಿದೆ. "' ಸ್ಪರ್ಧೆಯಲ್ಲಿ ಭಾಗವಹಿಸುವವರು ಕೆಎಫ್‌ಸಿ ಥೈಲ್ಯಾಂಡ್‌ನ ಫೇಸ್‌ಬುಕ್ ಪುಟದಲ್ಲಿ 32.000 ಬಹ್ತ್‌ನ 100 ಬಹುಮಾನಗಳಲ್ಲಿ ಒಂದನ್ನು ಮತ್ತು ಹುರಿದ ಚಿಕನ್ ಅಗರಬತ್ತಿಯ ಪೆಟ್ಟಿಗೆಯನ್ನು ಗೆಲ್ಲುವ ಅವಕಾಶಕ್ಕಾಗಿ ಕಾಮೆಂಟ್ ಮಾಡಬೇಕು' ಎಂದು ವರದಿ ಹೇಳುತ್ತದೆ.

ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರ ಪತ್ನಿ ಮೇಡಮ್ ಹೋ ಚಿಂಗ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹುರಿದ ಚಿಕನ್ ರುಚಿಯ ಅಗರಬತ್ತಿಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.

This is an ad by KFC Thailand for Chinese New Year. So many things wrong with this. You’d that they would know Chinese culture better. pic.twitter.com/2Hv9N9VR4b

— May (@eatcookexplore_)
click me!