1,680 ಕೋಟಿ ಸಂಪಾದಿಸುವ Google ಸಿಇಓ ಉಪಾಹಾರ ಕೇವಲ 1 ಆಮ್ಲೆಟ್‌, ಟೋಸ್ಟ್!

By Suvarna News  |  First Published Jan 13, 2020, 11:36 AM IST

1,680 ಕೋಟಿ ಸಂಪಾದಿಸುವ ಸುಂದರ್‌ ಪಿಚೈ ಮುಂಜಾನೆ ಆಹಾರ ಕೇವಲ ಒಂದು ಆಮ್ಲೆಟ್‌!| ತೀರಾ ಸರಳ ಆಹಾರ ಸೇವಿಸುವ ಗೂಗಲ್ ಸಿಇಓ


ವಾಷಿಂಗ್ಟನ್‌[ಜ.13]: ಗೂಗಲ್‌ ಹಾಗೂ ಅಲ್ಫಾಬೆಟ್‌ ಸಿಇಒ ಸುಂದರ್‌ ಪಿಚೈ ವರ್ಷಕ್ಕೆ ಸುಮಾರು 1,680 ಕೋಟಿ ರು. ವೇತನ ಪಡೆಯುತ್ತಿದ್ದರೂ, ತೀರಾ ಸರಳ ಆಹಾರ ಸೇವಿಸುತ್ತಾರೆ.

ಕೇವಲ ಒಂದು ಆಮ್ಲೆಟ್‌ನಲ್ಲಿ ಅವರ ಮುಂಜಾನೆಯ ಉಪಾಹಾರ ಮುಗಿಯುತ್ತದೆ. ಇದರ ಜೊತೆಗೆ ಒಂದು ಟೀ ಮತ್ತು ಟೋಸ್ಟ್‌ ಇದ್ದರೆ ಸಾಕು. ದೇಹಕ್ಕೆ ಎಷ್ಟುಪ್ರೋಟಿನ್‌ ಅಗತ್ಯವೋ ಅಷ್ಟನ್ನೇ ಸುಂದರ್‌ ಪಿಚೈ ಸೇವಿಸುತ್ತಾರೆ. ಈ ಸಂಗತಿಯನ್ನು ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Tap to resize

Latest Videos

undefined

ಗೂಗಲ್ ಪಿಚ್ಚೈಗೆ ಅಲ್ಫಾಬೆಟ್ ಮಣೆ ; ಭಾರತೀಯನ ಹೆಗಲಿಗೆ ಮಾತೃಕಂಪನಿಯ ಹೊಣೆ

ಮುಂಜಾನೆ 6.30 ಅಥವಾ 7 ಗಂಟೆಯ ಸುಮಾರಿಗೆ ಏಳುವ ಅವರು, ತಪ್ಪದೇ ವಾಲ್‌ಸ್ಟ್ರೀಟ್‌ ಜರ್ನಲ್‌ ಅನ್ನು ಓದುತ್ತಾರೆ. ಆನ್‌ಲೈನ್‌ನಲ್ಲೇ ಸುದ್ದಿ ಲಭ್ಯ ಇದ್ದರೂ ಮುಂಜಾನೆ ಪೇಪರ್‌ ಓದಿದರೆ ಹೆಚ್ಚು ಸಮಯ ನೆನಪಿನಲ್ಲಿ ಇರುತ್ತದೆ ಎಂಬುದು ಅವರ ಅನಿಸಿಕೆ.

click me!