ನಯನತಾರಾ, ವಿಘ್ನೇಶ್‌ ಶಿವನ್‌ ಅದ್ಧೂರಿ ಮದುವೆಯ ಊಟದ ಮೆನುವಿನಲ್ಲಿ ಏನೇನಿತ್ತು ?

Published : Jun 10, 2022, 04:23 PM IST
ನಯನತಾರಾ, ವಿಘ್ನೇಶ್‌ ಶಿವನ್‌ ಅದ್ಧೂರಿ ಮದುವೆಯ ಊಟದ ಮೆನುವಿನಲ್ಲಿ ಏನೇನಿತ್ತು ?

ಸಾರಾಂಶ

ಎಲ್ಲೆಡೆ ಸದ್ಯ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayanthara And Vignesh shivan) ಮದುವೆಯದ್ದೇ ಸುದ್ದಿ. ನವಜೋಡಿಯ ಖುಷಿಯ ಕ್ಷಣದ ಫೋಟೋಗಳು ಎಲ್ಲೆಡೆ ವೈರಲ್ (Viral) ಆಗುತ್ತಿವೆ. ಇದೆಲ್ಲದರ ಜೊತೆಗೆ ಅದ್ದೂರಿ ಮದುವೆಯ (Marriage) ಊಟದ ಮೆನುವಿನ ಪೋಟೋ ಸಹ ವೈರಲ್ ಆಗಿದೆ.

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayanthara And Vignesh shivan) ಮದುವೆ ಅದ್ದೂರಿಯಾಗಿ ನೆರವೇರಿದೆ. ಜೂನ್ 9ರಂದು ಮಹಾಬಲಿಪುರಂ (Mahabalipuram)ನಲ್ಲಿ ನಡೆದ ಅದ್ದೂರಿ ಮದುವೆ (Marriage) ಸಮಾರಂಭದಲ್ಲಿ ಗಣ್ಯಾತಿಗಣ್ಯರು ಹಾಜರಿದ್ದು ನವಜೋಡಿಗೆ ಶುಭಹಾರೈಸಿದ್ದರು. ಗ್ರ್ಯಾಂಡ್ (Grand) ಆಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರು ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಗಣ್ಯರು ಹಾಜರಿದ್ದರು. ನಯನತಾರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೈರಲ್ ಆಗಿದೆ. ಅಂದಹಾಗೆ ನಯನತಾರಾ ಮದುವೆಯಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ರಜನಿಕಾಂತ್, ದಳಪತಿವಿಜಯ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಬೋನಿ ಕಪೂರ್ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ  ಶುಭಹಾರೈಸಿದರು. 

ಇದೆಲ್ಲದರ ಮಧ್ಯೆ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿವಾಹದಲ್ಲಿ ಸಂಪೂರ್ಣ ಸಸ್ಯಾಹಾರ ಭೋಜನವನ್ನು ಸಿದ್ಧಪಡಿಸಲಾಗಿತ್ತು ಎಂದು ತಿಳಿದುಬಂದಿದೆ. ಮದುವೆಯ ಮೆನುವಿನ ಫೋಟೋ ಹೊರಬಂದಿದೆ ಮತ್ತು ಅದರಲ್ಲಿ ದಂಪತಿಗಳು ತಮಿಳುನಾಡು (Tamilnadu) ಮತ್ತು ಕೇರಳ (Kerala)ದಿಂದ ಸಸ್ಯಾಹಾರಿ ಭಕ್ಷ್ಯಗಳನ್ನು ಆರಿಸಿಕೊಂಡಿರುವುದು ತಿಳಿದುಬಂದಿದೆ. ಕಥಲ್ (ಹಲಸು) ಬಿರಿಯಾನಿಯಿಂದ ಹಿಡಿದು ಅಣಕು ಮಾಂಸದ ಕರಿಯವರೆಗೆ, ಅವರು ತಮ್ಮ ಮದುವೆಯಲ್ಲಿ ಸಸ್ಯಾಹಾರ (Vegetarian)ವನ್ನೇ ಆಯ್ದುಕೊಂಡಿದ್ದಾರೆ.

ಹೈದರಾಬಾದ್ ನಿಜಾಮರ ಲುಕ್‌ನಲ್ಲಿ ಕಂಗೊಳಿಸಿದ ನಯನತಾರಾ; ಕೆಂಪು ಸೀರೆ-ಜ್ಯುವೆಲ್ಲರಿಯ ವಿಶೇಷತೆ ಇಲ್ಲಿದೆ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿವಾಹವು ಸ್ಟಾರ್-ಸ್ಟಾಡ್ ಅಫೇರ್ ಆಗಿತ್ತು. ಶಾರುಖ್ ಖಾನ್, ರಜನಿಕಾಂತ್, ಮಣಿರತ್ನಂ, ಬೋನಿ ಕಪೂರ್, ವಿಜಯ್ ಸೇತುಪತಿ ಮತ್ತು ಅಟ್ಲಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದರು. ದಂಪತಿಗಳು ಮದುವೆಯ ಚಿತ್ರಗಳು ಹೆಚ್ಚಾಗಿ ಲೀಕ್ ಆಗದಂತೆ ಯತ್ನಿಸಿದ್ದರು. ಆದರೆ, ಮದುವೆಯ ಫೋಟೋ ಜೊತೆಗೆ ಮೆನುವಿನ ಫೋಟೋ ಸೋರಿಕೆಯಾಗಿದೆ. 

ಪೂರ್ಣ ಮೆನು ಇಲ್ಲಿದೆ
ಕಥಾಲ್ (ಹಲಸು) ಬಿರಿಯಾನಿ, ಪನೀರ್ ಪತ್ತಾನಿ ಕರಿ, ಅವಿಯಲ್, ಮೋರ್ ಕೊಝಂಬು, ಮಿಕ್ಕನ್ ಚೆಟ್ಟಿನಾಡ್ ಕರಿ, ಚೇಪಕೆಜ್ಜು ಪುಳಿ ಕೊಜಾಂಬು, ಪೂಂಡು ಮಿಲಗು ರಸಂ, ರೊಟ್ಟಿ ಹಲ್ವಾ, ಎಳನೀರ್ ಪಾಯಸಂ ಮೊದಲಾದ ಭಕ್ಷ್ಯಗಳು ಸೆಲೆಬ್ರಿಟಿ ಜೋಡಿಯ ಮದುವೆ ಮೆನುವಿನ ಲಿಸ್ಟ್‌ನಲ್ಲಿದೆ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಲವ್
2015ರಲ್ಲಿ ನಾನು ರೌಡಿ ಧಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಪರಸ್ಪರ ಪ್ರೀತಿಸುತ್ತಿದ್ದರು. ಅಂದಿನಿಂದ ಅವರ ಸಂಬಂಧವು ಹೆಚ್ಚು ಆತ್ಮೀಯತೆಗೆ ತಿರುಗಿತು.. ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ದಂಪತಿಗಳು ಮದುವೆಯಾಗಲು ನಿರ್ಧರಿಸಿದರು ಮತ್ತು ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.

ಪತ್ನಿ ನಯನಾತಾರಾಗೆ ದುಬಾರಿ ಉಡುಗೊರೆ ನೀಡಿದ ವಿಘ್ನೇಶ್ ಶಿವನ್; ಗಿಫ್ಟ್‌ನ ಬೆಲೆ ಎಷ್ಟು?

18 ಸಾವಿರ ಮಕ್ಕಳಿಗೆ ಊಟದ ವ್ಯವಸ್ಥೆ
ವಿವಾಹದ ಆಚರಣೆಯ ಭಾಗವಾಗಿ, ನಯನತಾರಾ ಮತ್ತು ವಿಗೇಶ್ ಶಿವನ್ ಅವರು ಜೂನ್ 9 ರಂದು ತಮಿಳುನಾಡಿನಾದ್ಯಂತ ಸುಮಾರು 18,000 ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅನಾಥ ಮಕ್ಕಳಿಗೆ ಈ ರೀತಿ ಊಟದ ವ್ಯವಸ್ತೆ ಮಾಡಿದ್ದು, ನಯನತಾರಾ ಹಾಗೂ ವಿಘ್ನೇಶ್​ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ