Fitness tips: ಯಾವಾಗಲೂ ಅವಲಕ್ಕಿ ಅಂತ ಬೇಜಾರು ಬೇಡ, ತೂಕ ಇಳಿಸುತ್ತೆ ಇದು

By Suvarna News  |  First Published Jun 10, 2022, 2:30 PM IST

ತೂಕ ಹೆಚ್ಚಾಗ್ತಿದ್ದಂತೆ ನಾವು ಆಹಾರ ಬಿಡ್ತೇವೆ. ವ್ಯಾಯಾಮ ಶುರು ಮಾಡ್ತೇವೆ. ಆದ್ರೆ ಯೋಗ,ವ್ಯಾಯಾಮದ ಜೊತೆ ಒಂದಿಷ್ಟು ಪೌಷ್ಟಿಕ ಆಹಾರ ದೇಹ ಸೇರ್ಬೇಕು. ಆರೋಗ್ಯಕರ ಡಯಟ್ ಬಯಸೋರು ಅವಲಕ್ಕಿ ಸೇವನೆ ಶುರು ಮಾಡಿ.
 


ಅಧಿಕ ತೂಕ (Weight) ಹೊಂದಿರುವವರು ಮತ್ತು ಬೊಜ್ಜು (Obesity) ಕಡಿಮೆ ಮಾಡಲು ಬಯಸೋರು  ವ್ಯಾಯಾಮ (Exercise), ಯೋಗ ಇತ್ಯಾದಿಗಳ ಜೊತೆಗೆ ತಮ್ಮ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಾಗುತ್ತೆ. ಉತ್ತಮ ಮತ್ತು ಆರೋಗ್ಯ (Health) ಕರ ಆಹಾರವು ತ್ವರಿತವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ ಎಂಬುದು ನಿಮಗೆ ತಿಳಿದಿರಲಿ. ಅಕ್ಕಿ, ಆಲೂಗಡ್ಡೆ, ಸಕ್ಕರೆ ಇತ್ಯಾದಿಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತೆ. ಇದೇ ಕಾರಣಕ್ಕೆ ಬೊಜ್ಜು ಹೆಚ್ಚು ಮಾಡುವ ಆಹಾರ ಸೇವನೆಯನ್ನು ಜನರು ಕಡಿಮೆ ಮಾಡ್ತಾರೆ ಇಲ್ಲವೆ ನಿಲ್ಲಿಸ್ತಾರೆ.  ಬರೀ ನೀವು ಕೆಲ ಆಹಾರ ಸೇವನೆ ನಿಲ್ಲಿಸಿದ್ರೆ ಮಾತ್ರ ಬೊಜ್ಜು ಕಡಿಮೆಯಾಗೋದಿಲ್ಲ. ಬೊಜ್ಜು ಕರಗಿಸಲು ನೆರವಾಗುವ ಕೆಲ ಆಹಾರದ ಸೇವನೆಯನ್ನು ನೀವು ಶುರು ಮಾಡ್ಬೇಕು. ಅವಲಕ್ಕಿ (poha) ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಪ್ರತಿಯೊಂದು ಮನೆಯಲ್ಲೂ ಬೆಳಗಿನ ಉಪಾಹಾರ ರೂಪದಲ್ಲಿ ಅವಲಕ್ಕಿ ಸೇವನೆ ಮಾಡಲಾಗುತ್ತದೆ. ಅವಲಕ್ಕಿ ಅಂದರೆ ಕೆಲವರು ಮೂಗು ಮೂರಿಯುತ್ತಾರೆ. ಅವಲಕ್ಕಿಯನ್ನು ನೀವು ಅನೇಕ ವಿಧದಲ್ಲಿ ತಯಾರಿಸಬಹುದು. ರುಚಿ – ರುಚಿಯಾಗಿ ಸೇವನೆ ಮಾಡ್ಬಹುದು. ಆದ್ರೂ ಕೆಲವರಿಗೆ ಅವಲಕ್ಕಿ ಇಷ್ಟವಾಗುವುದಿಲ್ಲ. ಅವಲಕ್ಕಿ ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಪ್ಲಾನ್ ನಿಮಗೂ ಇದ್ದರೆ ಇಂದಿನಿಂದ್ಲೇ ನಿಮ್ಮ ಡಯಟ್ ನಲ್ಲಿ ಅವಲಕ್ಕಿ ಸೇರಿಸಿ. ಅವಲಕ್ಕಿ ಆರೋಗ್ಯಕರ ಆಹಾರವಾಗಿದೆ. ಇಂದು ಅವಲಕ್ಕಿ ಹೇಗೆ ತೂಕ ಇಳಿಕೆಗೆ ಸಹಾಯ ಮಾಡುತ್ತೆ ಎಂಬುದನ್ನು ನಾವು ಹೇಳ್ತೇವೆ.  

ಅವಲಕ್ಕಿ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕಬ್ಬಿಣ ಮತ್ತು ವಿಟಮಿನ್‌ಗಳು ಹೇರಳವಾಗಿ ಕಂಡುಬರುತ್ತವೆ. ಆಹಾರ ತಜ್ಞರು ಮತ್ತು ಪೌಷ್ಟಿಕತಜ್ಞರ ಪ್ರಕಾರ, ಅವಲಕ್ಕಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.  

Tap to resize

Latest Videos

ಅವಲಕ್ಕಿ ಸೇವನೆಯಿಂದಾಗುವ ಪ್ರಯೋಜನಗಳು : ಅವಲಕ್ಕಿ ಸೇವಿಸಿದ ನಂತರ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದ್ರಿಂದಾಗಿ ಬೇರೆ ಆಹಾರ ಸೇವನೆ ಮಾಡಬೇಕೆಂಬ ಬಯಕೆ ಕಡಿಮೆಯಾಗುತ್ತವೆ. ಆಗ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿ ನಮ್ಮ ದೇಹ ಸೇರುವುದಿಲ್ಲ. ಅವಲಕ್ಕಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗ್ತಿಲ್ಲ ಎನ್ನುವವರು ಅವಲಕ್ಕಿ ಸೇವನೆ ಮಾಡ್ಬೇಕು. ಇದರಲ್ಲಿರುವ ನಾರಿನಂಶವು ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಮತ್ತು ಗ್ಲುಟನ್ ಮುಕ್ತವಾಗಿರುವುದು ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. 

ನೀರು ಆರೋಗ್ಯಕ್ಕೆ ಒಳಿತು ಹೌದು, ಸಿಕ್ಕಾಪಟ್ಟೆ ಆದರೆ ಡೇಂಜರಸ್!

ಅವಲಕ್ಕಿಯಲ್ಲಿದೆ ಇಷ್ಟೊಂದು : ಅವಲಕ್ಕಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. 100 ಗ್ರಾಂ ಅವಲಕ್ಕಿಯಲ್ಲಿ 1.9 ಮಿಗ್ರಾಂ ವಿಟಮಿನ್ ಸಿ, 67.6 ಎಂಸಿಜಿ ವಿಟಮಿನ್-ಎ, 6.1 ಮಿಗ್ರಾಂ ಕಬ್ಬಿಣ ಮತ್ತು 79.7 ಮಿಗ್ರಾಂ ರಂಜಕವಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವಲಕ್ಕಿಯನ್ನು ನೀವು ಅನೇಕ ವಿಧಾನಗಳ ಮೂಲಕ ಸೇವನೆ ಮಾಡ್ಬಹುದು. ಕೆಲವರು ಸಿಹಿ ಅವಲಕ್ಕಿ ಇಷ್ಟಪಡ್ತಾರೆ. ಮತ್ತೆ ಕೆಲವರು ತರಕಾರಿಗಳನ್ನು ಸೇರಿಸಿ ಹೆಚ್ಚು ಪೌಷ್ಟಿಕ ಅವಲಕ್ಕಿ ಮಾಡ್ತಾರೆ. ಬರೀ ಅವಲಕ್ಕಿ ಸೇವನೆ ಮಾಡುವವರೂ ನಮ್ಮಲ್ಲಿದ್ದಾರೆ.  

Health Care: ಟೀ ಚಟ ಬಿಡೋದು ಸುಲಭ ಅಲ್ಲ ಸ್ವಾಮಿ

ಅವಲಕ್ಕಿ ತಿನ್ನುವ ಸಮಯ ಮತ್ತು ವಿಧಾನ : ಆಹಾರ ತಜ್ಞರು ಮತ್ತು ಪೌಷ್ಟಿಕತಜ್ಞರ ಪ್ರಕಾರ,  ತೂಕ ಕಡಿಮೆ ಮಾಡಲು ಬಯಸಿದ್ದು, ಅವಲಕ್ಕಿ ತಿನ್ನುವ ಪ್ಲಾನ್ ಮಾಡಿದ್ದರೆ  ಸರಿಯಾದ ಪ್ರಮಾಣದಲ್ಲಿ ಅವಲಕ್ಕಿ ತಿನ್ನುವುದು ಮುಖ್ಯ. ಕಾಲು ಪ್ಲೇಟ್ ಅವಲಕ್ಕಿ ಸೂಕ್ತವಾಗಿದೆ. ಅಷ್ಟೊಂದು ಅವಲಕ್ಕಿ ದೀರ್ಘಕಾಲ ಹಸಿವನ್ನು ತಡೆಯುತ್ತದೆ.  ನಿಮ್ಮನ್ನು ಕ್ರಿಯಾಶೀಲರನ್ನಾಗಿಡುತ್ತೆ.

ಬೆಳಗಿನ ಉಪಾಹಾರದಲ್ಲಿ ಮಾತ್ರ ಅವಲಕ್ಕಿ ಸೇವಿಸುವುದು ಅನಿವಾರ್ಯವಲ್ಲ. ಹೆಚ್ಚು ಹಸಿವಾಗ್ತಿದೆ ಎನ್ನುವವರು ಸಂಜೆ ಸಮಯದಲ್ಲೂ ಇದನ್ನು ಸೇವನೆ ಮಾಡ್ಬಹುದು. ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಅವಲಕ್ಕಿ ತಿನ್ನಬಹುದು. ಪೋಷಕಾಂಶ ಅಗತ್ಯವಾಗಿರುವ ಕಾರಣ ನೀವು ತರಕಾರಿ ಅವಲಕ್ಕಿಯನ್ನು ಹೆಚ್ಚು ಸೇವನೆ ಮಾಡುವುದು ಒಳ್ಳೆಯದು.
 

click me!