ದಾಲ್ ಮಖಾನಿ: ಜೇಸಿಬಿ ಬಳಸಿ ತಯಾರಿಸಿದ್ರು ಉತ್ತರ ಭಾರತದ ಸ್ವಾದಿಷ್ಟ ಆಹಾರ: ವೀಡಿಯೋ ಭಾರಿ ವೈರಲ್

Published : Sep 18, 2025, 05:48 PM IST
JCB Used for Prepare Dal Makhani

ಸಾರಾಂಶ

ಸಭೆಯೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಿದ್ದ ದಾಲ್ ಮಖಾನಿ ತಳ ಹಿಡಿಯದಂತೆ ತಿರುಗಿಸಲು ಜೆಸಿಬಿಯನ್ನು ಬಳಸಲಾಗಿದೆ. ಈ ವಿಚಿತ್ರ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಹಾರ ತಯಾರಿಕೆಯಲ್ಲಿನ ಈ ಅಶುಚಿತ್ವದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಲ್ ಮಖಾನಿ ತಳ ಹಿಡಿಯದಂತೆ ಜೆಸಿಬಿ ಬಳಸಿ ತಿರುಗಿಸಿದ್ರು…

ಸಾಮಾನ್ಯವಾಗಿ ಸಭೆ ಸಮಾರಂಭಗಳು ಇದ್ದಾಗ ನೂರು ಸಾವಿರ ಜನರಿಗೆ ಅಡಿಗೆ ಮಾಡಬೇಕಾದಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಸಾಂಬಾರು ಪದಾರ್ಥಗಳು, ಅನ್ನಾಹಾರಗಳನ್ನು ಬೇಯಿಸಲಾಗುತ್ತದೆ. ಸಾಂಬಾರುಗಳನ್ನು ತಳ ಹಿಡಿಯದಂತೆ ತಿರುಗಿಸಿ ಹದಗೊಳಿಸಲು ದೊಡ್ಡ ದೊಡ್ಡ ಮರದ ಹುಟ್ಟುಗಳನ್ನು(ಸೌಟುಗಳನ್ನು) ಬಳಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಸಾಮಬಾರು ತಳ ಹಿಡಿಯದಂತೆ ತಿರುಗಿಸುವುದಕ್ಕೆ ಜೇಸಿಬಿಯನ್ನು ಬಳಸಲಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಅಚ್ಚರಿ ಹಾಗೂ ಆಕ್ರೋಶ ಎರಡನ್ನು ವ್ಯಕ್ತಪಡಿಸಿದ್ದಾರೆ.

ಇದು ಉತ್ತರ ಭಾರತದ ಸ್ವಾದಿಷ್ಟ ಆಹಾರ ದಾಲ್ ಮಖಾನಿ:

ದಾಲ್ ಮಖಾನಿ ಉತ್ತರ ಭಾರತದ ಒಂದು ಸ್ವಾದಿಷ್ಟ ಆಹಾರವಾಗಿದ್ದು, ರಾಜ್ಮಾ ಹಾಗೂ ಉದ್ದಿನ ಬೇಳೆಯಿಂದ ಮಾಡುವ ಸೈಡ್ ಡಿಶ್ ಬಹಳ ದಪ್ಪವಾಗಿದ್ದು, ಇದನ್ನು ರೋಟಿ, ಬಟರ್‌ನಾನ್, ಜೀರಾ ರೈಸ್, ಅಥವಾ ಮಾಮೂಲಿ ವೈಟ್ ರೈಸ್‌ ಜೊತೆ ತಿನ್ನುವುದಕ್ಕೆ ನೀಡಲಾಗುತ್ತದೆ. ರುಚಿಕರವಾಗಿರುವ ಈ ಕರಿ ಉತ್ತರ ಭಾರತದ ಥಾಲಿಯಲ್ಲಿ ಅಥವಾ ಉತ್ತರ ಭಾರತದ ಊಟದಲ್ಲಿ ಕಡ್ಡಾಯವಾಗಿ ಇರುತ್ತದೆ. ಈ ದಾಲ್ ಮಖಾನ್ ಅನೇಕ ಆಹಾರಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಉತ್ತರ ಭಾರತದ ಮದುವೆಯ ಆಹಾರದ ಮೆನುವಿನಲ್ಲಿ ಇದು ಕಡ್ಡಾಯವಾಗಿ ಇದ್ದೇ ಇರುತ್ತದೆ. ಇದನ್ನು ತಯಾರಿಸುವಾಗ ಜಾಗರೂಕವಾಗಿರಬೇಕು, ಸ್ವಲ್ಪ ಹೆಚ್ಚು ಕಡಿಮೆ ಆದರೂ ತಳ ಹಿಡಿದು ಬಿಡುತ್ತದೆ. ದೊಡ್ಡ ಮಟ್ಟದಲ್ಲಿ ಇದನ್ನು ತಯಾರಿಸುವ ವೇಳೆ ಆಗಾಗ ತಿರುಗಿಸುತ್ತಲೇ ಇರಬೇಕಾಗುತ್ತದೆ.

ತಳ ಹಿಡಿಯದಂತೆ ತಿರುಗಿಸಲು ಜೆಸಿಬಿ ಬಳಕೆ:

ಆದರೆ ಇಲ್ಲೊಂದು ಕಡೆ ದಾಲ್ ಮಖಾನಿಯನ್ನು ಜೆಸಿಬಿ ಬಳಸಿ ತಳ ಹಿಡಿಯದಂತೆ ತಿರುಗಿಸಲಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹೌದು ಇಲ್ಲೊಂದು ಕಡೆ ದಾಲ್ ಮಖಾನಿ ತಯಾರಿಸಲು ಜೆಸಿಬಿ ಬಳಸಲಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಜೆಸಿಬಿಯನ್ನು ಸಾಮಾನ್ಯವಾಗಿ ನಿವೇಶನ ಮಾಡುವುದಕ್ಕೆ ನೆಲಸಮತಟ್ಟು ಮಾಡುವುದಕ್ಕೆ ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ತೆರವು ಕಾರ್ಯಾಚರಣೆ ವೇಳೆ ಚರಂಡಿ ಸ್ವಚ್ಛತೆಯ ಕಾರ್ಯದಲ್ಲಿ ಬಳಸಲಾಗುತ್ತದೆ. ಆದರೆ ಇಲ್ಲಿ ಆಹಾರ ತಯಾರಿಕೆಗೆ ಬಳಸಲಾಗಿದ್ದು, ಈ ವೀಡಿಯೋ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೀಡಿಯೋದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮಾತನಾಡುವುದನ್ನು ಕೇಳಬಹುದು. ಜೇಸಿಬಿಯನ್ನು ರಸ್ತೆ ಮಾಡುವುದಕ್ಕೆ ಪಾರ್ಕ್ ಮಾಡುವುದಕ್ಕೆ ನಿವೇಶನದ ಜಾಗ ಮಾಡುವುದಕ್ಕೆ ಬಳಸುವುದನ್ನು ನೋಡಿದ್ದೀರಿ ಆದರೆ ಇಲ್ಲಿ ಅಡುಗೆಗೆ ಬಳಸಲಾಗಿದೆ. ಇದನ್ನು ನೋಡಿದ ಮೇಲೆ ನಾವು ನಮಗೆ ಯಮರಾಜನ ಬಳಿ ಇದಕ್ಕಿಂತಲೂ ದೊಡ್ಡದಾದ ಕಡಾಯಿ ಇರಬಹುದು ಎಂದು ಅನಿಸುತ್ತಿದೆ ಎಂದು ಅವರು ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.

ಗ್ರೇವಿಯ ಜೊತೆ ಗ್ರೀಸ್ ಉಚಿತ ಎಂದ ನೆಟ್ಟಿಗರು:

ವೀಡಿಯೋ ನೋಡಿದವರು ಹಲವು ಕಾಮೆಂಟ್ ಮಾಡಿದ್ದಾರೆ. ಗ್ರೇವಿಯ ಜೊತೆ ಗ್ರೀಸ್ ಉಚಿತ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಹಾಗೆಯೇ ಮತ್ತೊಬ್ಬರು ಅರ್ಧಗಂಟೆಯ ಹಿಂದೆ ಈ ಜೆಸಿಬಿ ಚರಂಡಿ ಸ್ವಚ್ಛತೆ ಮಾಡಿದ್ದಿದ್ದಾರೆ ಹೇಗಿರಬಹುದು ಊಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಮೇಲೆ ನಿಮಗೇನನಿಸಿತು ಕಾಮೆಂಟ್ ಮಾಡಿ...

ಇದನ್ನೂ ಓದಿ: ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ್ರೆ ಲಕ್ಸುರಿ ಥಾರ್ ಗಾಡಿಲಿ ಬಂದ ಡೆಲಿವರಿ ಬಾಯ್ ನೋಡಿ ಯುವತಿ ಶಾಕ್..!

ಇದನ್ನೂ ಓದಿ: ಜೋಗುಳ ಹಾಡಿ ಮಲಗಿಸಿದವಳೇ 3 ವರ್ಷದ ಮಗಳ ಉಸಿರು ನಿಲ್ಲಿಸಿದಳು: ಲವ್ವರ್‌ಗಾಗಿ ಕಂದನ ಕೊಲೆ

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ