
ಇಂದು ಮನೆಯಲ್ಲಿ ಆರಾಮಾಗಿ ಕೂತು ತಿನ್ನಲು ಕಂಫರ್ಟ್ ಇರುತ್ತದೆ ಎಂದೋ ಅಥವಾ ಸಮಯ ಉಳಿತಾಯ ಮಾಡಲು ಫುಡ್ ಆರ್ಡರ್ ಮಾಡಿಕೊಂಡು, ಮನೆಗೆ ತರಿಸಿಕೊಂಡು ತಿನ್ನೋದುಂಟು. ಆದರೆ ಈಗ ಡೆಲಿವರಿ ಫುಡ್ ಆಪ್‌ಗಳು ಸಿಕ್ಕಾಪಟ್ಟೆ ಹಣ ಹೂಡುತ್ತಿವೆ. ಕೊಯಂಬತ್ತೂರು ಮೂಲದ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ವ್ಯಕ್ತಿಯೊಬ್ಬ ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡಿದ್ದಾರೆ. ರೆಸ್ಟೋರೆಂಟ್‌ನಿಂದ ಅದೇ ಫುಡ್‌ನ್ನು ನೇರವಾಗಿ ಖರೀದಿ ಮಾಡಿದಾಗ 81% ಬೆಲೆ ವ್ಯತ್ಯಾಸ ಆಗಿದೆ. ಇದಕ್ಕೆ ಕಾರಣ ಏನು ಎಂದು ಚರ್ಚೆ ಶುರುವಾಗಿದೆ. ಕೆಲವರು ರೆಸ್ಟೋರೆಂಟ್‌ಗಳು ಕಮಿಷನ್ ಬ್ಯಾಲೆನ್ಸ್ ಮಾಡಲು ಬೆಲೆಯನ್ನು ಹೆಚ್ಚಿಸುತ್ತವೆ ಎಂದು ಸೂಚಿಸಿದ್ದಾರೆ.
ಆನ್‌ಲೈನ್‌ಲ್ಲಿ ಫುಡ್ ಆರ್ಡರ್ ಮಾಡೋದು ತುಂಬ ಸರಳ, ಆರಾಮ್. ಆದರೆ ಇದಕ್ಕೆ ಭಾರೀ ಬೆಲೆ ತೆರಬೇಕಾಗಿ ಬರುವುದು. ಇದು ಯೋಗ್ಯವೇ ಎಂಬ ಪ್ರಶ್ನೆ ಎದ್ದಿದೆ. ಕೊಯಂಬತ್ತೂರು ವ್ಯಕ್ತಿಯೊಬ್ಬರು ಸ್ವಿಗ್ಗಿ ಆಪ್ ಮೂಲಕ ಫುಡ್ ಆರ್ಡರ್ ಮಾಡಿದ್ದಾರೆ. ಅವರು ಫುಡ್ ಆರ್ಡರ್ ಮಾಡಿದ್ದ ರೆಸ್ಟೋರೆಂಟ್ ಕೇವಲ ಎರಡು ಕಿಲೋಮೀಟರ್ ದೂರದಲ್ಲಿತ್ತು. ಅಲ್ಲಿ ಖರೀದಿ ಮಾಡುವ ಫುಡ್‌ಗೂ, ಡೆಲಿವರಿ ಆಪ್ ಫುಡ್ ದರ ನೋಡಿದಾಗ 81% ಹೆಚ್ಚು ದುಬಾರಿಯಾಗಿದೆ ಎಂದು ಅವರಿಗೆ ಅರ್ಥ ಆಗಿದೆ.
ಗ್ರಾಹಕ ಸುಂದರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಎರಡೂ ಬಿಲ್‌ಗಳನ್ನು ಕಂಪೇರ್ ಮಾಡಿ ಬರೆದುಕೊಂಡಿದ್ದಾರೆ. “ಹೇ @Swiggy, ದಯವಿಟ್ಟು ವಿವರಿಸಿ. ಆಪ್‌ನಲ್ಲಿ ಆಹಾರ ಆರ್ಡರ್ ಮಾಡುವುದು ಒಂದೇ ರೆಸ್ಟೋರೆಂಟ್‌ನಿಂದ, ಕೇವಲ 2 ಕಿಮೀ ದೂರದಿಂದ ಖರೀದಿಸಿದ ಆಹಾರಕ್ಕಿಂತ 81% ದುಬಾರಿಯಾಗಿದ್ದೇಕೆ? ಇದು ಕಂಫರ್ಟ್ ಆಗಿರೋ ವೆಚ್ಚವೇ? ಫುಡ್ ಡೆಲಿವರಿಗೆ ನಾನು ಹೆಚ್ಚುವರಿಯಾಗಿ 663 ರೂಪಾಯಿ ಕೊಡಬೇಕು” ಎಂದು ಅವರು ಹೇಳಿದ್ದಾರೆ. ಸ್ಕ್ರೀನ್‌ಶಾಟ್ ಪ್ರಕಾರ, ಸ್ವಿಗ್ಗಿ ಆರ್ಡರ್ ಒಟ್ಟು 1,473 ರೂ. ಆಗಿದ್ದರೆ, ಅದೇ ಫುಡ್ ನೇರವಾಗಿ ಖರೀದಿಸಿದಾಗ ಕೇವಲ 810 ರೂಪಾಯಿ ಆಗಿತ್ತು.
ಸ್ವಿಗ್ಗಿ ಆಪ್ ಈ ಹಿಂದೆ ತಮ್ಮ ಸೇವೆಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ತೀವಿ ಅಂತ ಹೇಳಿತ್ತು. ಆನ್‌ಲೈನ್, ಆಫ್‌ಲೈನ್‌ನಲ್ಲಿ ಬೆಲೆಗಳು ಡಿಫರೆಂಟ್ ಆಗಿರಬಹುದು ಅಂತ ಕೂಡ ಹೇಳಿತ್ತು. ಇದು ರೆಸ್ಟೋರೆಂಟ್‌ನ ಸಂಪೂರ್ಣ ವಿವೇಚನೆಗೆ ಬಿಡಲಾಗಿದೆ. ಆಪ್ ಸೇವೆಗೆ ನೀಡುವ ಶುಲ್ಕ, ಫುಡ್ ದರ, ಡೆಲಿವರಿ ರೇಟ್, ರೆಸ್ಟೋರೆಂಟ್ ದರ, ಪ್ಯಾಕೇಜಿಂಗ್ ವೆಚ್ಚ, ತಕ್ಷಣ ನೀಡುವ ಸೇವೆ, GST ಕೂಡ ಇರುತ್ತದೆ. ಇದನ್ನು ಬಿಲ್‌ನಲ್ಲಿ ಪ್ರತ್ಯೇಕವಾಗಿ ಹಾಕಿರಲಾಗುತ್ತದೆ.
ಈ ಪೋಸ್ಟ್‌ಗೆ NISM ರಿಸರ್ಚ್ ಅನಲಿಸ್ಟ್ ಸರ್ಟಿಫೈಡ್ ನಿಫ್ಟಿ ಬುಲ್ಸ್ ಅವರು ವಿವರಣೆ ಮಾಡಿದ್ದಾರೆ. “ಆಪ್‌ನಲ್ಲಿ ನೀವು ನೋಡುವ ಪ್ರತಿ ಫುಡ್ ಬೆಲೆಯನ್ನು ರೆಸ್ಟೋರೆಂಟ್ ಮ್ಯಾನೇಜರ್/ಮಾಲೀಕರು ನಮೂದಿಸುತ್ತಾರೆ. ಇದನ್ನು ಸ್ವಿಗ್ಗಿ / ಜೊಮ್ಯಾಟೊ ನಮೂದಿಸುವುದಿಲ್ಲ. ಸ್ವಿಗ್ಗಿ, ಜೊಮ್ಯಾಟೊ ಪ್ರತಿ ಮಾರಾಟಕ್ಕೆ ಗರಿಷ್ಠ 30% ಕಮಿಷನ್ ವಿಧಿಸುತ್ತವೆ. ಇದನ್ನು ಬ್ಯಾಲೆನ್ಸ್ ಮಾಡಲು, ರೆಸ್ಟೋರೆಂಟ್ ಮ್ಯಾನೇಜರ್ / ಮಾಲೀಕರು ತಮ್ಮ 100 ರೂಪಾಯಿ ಫುಡ್‌ನ್ನು ಸುಮಾರು 140 ರೂ.ಗೆ (40% ಹೆಚ್ಚು) ಹಾಕುತ್ತಾರೆ. ಇದರಿಂದ ಅವರಿಗೆ 100 ರೂ. ಮರಳಿ ಬರುತ್ತದೆ. (140 ರೂ.ನ ಮೇಲೆ 30% ಕಮಿಷನ್ ಕಟ್ ಮಾಡಿದರೆ 100 ರೂಪಾಯಿ ಸಿಗುವುದು)
ರೆಸ್ಟೋರೆಂಟ್‌ಗೆ ಹೋಗದಿರುವ ಹೆಚ್ಚುವರಿ ಗ್ರಾಹಕರು ಇಲ್ಲಿ ಸಿಗ್ತಾರೆ. ಡೆಲಿವರಿ ಬಾಯ್ಸ್, ಡೆಲಿವರಿ ಮಾಡುವ ದಾರಿ, ದಾರಿ ಟ್ರ್ಯಾಕಿಂಗ್ ಮಾಡುವುದು, ಗ್ರಾಹಕರ ಅಭಿಪ್ರಾಯಗಳನ್ನು ನೋಡಿಕೊಳ್ಳಲು ಒಂದಿಷ್ಟು ಜನರು ಇರುತ್ತಾರೆ. ಆಪ್ ಡೆವಲಪ್‌ಮೆಂಟ್, ಬಿಲ್ ಪೇ ಮಾಡುವುದು, ವಂಚನೆ ತಡೆಗಟ್ಟುವುದು, ರಿಯಾಯಿತಿಗಳು, ಜಾಹೀರಾತುಗಳು, ಆಪ್ ಮ್ಯಾನೇಜ್‌ಮೆಂಟ್ ಕೂಡ ಇರುತ್ತದೆ. ಇದನ್ನೆಲ್ಲ ನೋಡಿಕೊಳ್ಳಲು ಕಮಿಷನ್ ಆದಾಯ ಬೇಕು. ಈಗ ರೆಸ್ಟೋರೆಂಟ್‌ನಿಂದ ಊಟ ತರಿಸಿಕೊಂಡು ತಿನ್ನಬೇಕೆ? ರೆಸ್ಟೋರೆಂಟ್‌ನಲ್ಲೇ ತಿನ್ನಬೇಕೆ ಎಂದು ಕಾದು ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.