ನಾವೆಲ್ಲ ನೈರ್ಮಲ್ಯಕ್ಕೆ ಹೆಚ್ಚು ಮಹತ್ವ ನೀಡ್ತೇವೆ. ಎರಡು ಭಾರಿ ಪಾತ್ರೆ ಕ್ಲೀನ್ ಮಾಡಿ ನಂತ್ರ ಅದ್ರಲ್ಲಿ ಅಡುಗೆ ಮಾಡ್ತೇವೆ. ಆದ್ರೆ ಕೆಲ ಹೊಟೇಲ್ ತಿಂಡಿ ರುಚಿ ಹೆಚ್ಚಾಗೋದೇ ಈ ಹಳೆ, ಕೊಳಕು ಪಾತ್ರೆಯಿಂದ ಅಂದ್ರೆ ನೀವು ನಂಬ್ಲೇಬೇಕು.
ಹಣ ನೀಡಿ ಆಹಾರ ಸೇವನೆ ಮಾಡುವಾಗ ನಾವು ರುಚಿಗೆ ಹೆಚ್ಚು ಮಹತ್ವ ನೀಡ್ತೇವೆ. ರುಚಿಯಾದ ಆಹಾರಕ್ಕೆ ಎಷ್ಟು ಬೆಲೆ ನೀಡಿದ್ರೂ ವಿಷಾಧವೆನಿಸೋದಿಲ್ಲ. ಅದೆ ರುಚಿ ಕಳಪೆಯಾಗಿದ್ರೆ ಎಲ್ಲ ಹಣ ವೇಸ್ಟ್ ಆಯ್ತು, ಬೆಲೆಗೆ ತಕ್ಕಂತೆ ಖಾದ್ಯವಿಲ್ಲ ಎಂದುಕೊಂಡು ಬರೋದಲ್ಲದೆ ಮತ್ತೆ ಆ ರೆಸ್ಟೋರೆಂಟ್ ಕಡೆ ಹೋಗೋದಿಲ್ಲ. ತನ್ನ ರುಚಿಯಿಂದಲೇ ರೆಸ್ಟೋರೆಂಟ್ ಗಳು ಗ್ರಾಹಕರನ್ನು ಸೆಳೆಯುತ್ತವೆ. ಕೆಲ ಹಳೆಯ ಹೊಟೇಲ್ ಗಳು ಈಗ್ಲೂ ಭರ್ಜರಿ ಲಾಭ ಮಾಡ್ತಿರಲು ಇದೇ ಕಾರಣ. ಸಣ್ಣ ತಳ್ಳುಗಾಡಿ ಅಥವಾ ಚಿಕ್ಕ ಹೊಟೇಲ್ ಇಟ್ಟುಕೊಂಡು ಎಷ್ಟೋ ವರ್ಷಗಳಿಂದ ಬ್ಯುಸಿನೆಸ್ ಮಾಡ್ತಿರುವವರಿದ್ದಾರೆ. ಜನರು ಅವರ ಹೊಟೇಲ್ ಸೌಂದರ್ಯ ಹೇಗಿದೆ 60 ವರ್ಷಗಳಿಂದ ತನ್ನ ಸ್ವಾದಿಷ್ಟ ಹಂದಿ ಮಾಂಸಕ್ಕೆ ಹೆಸರುವಾಸಿಯಾಗಿರುವ ಹೊಟೇಲ್ ಒಂದು ಈಗ ತನ್ನ ಗುಟ್ಟು ಬಯಲು ಮಾಡಿದೆ. ಇದು ಎಲ್ಲರಲ್ಲಿ ಚರ್ಚೆ ಹುಟ್ಟುಹಾಕಿದೆ. ಆ ಹೊಟೇಲ್ ನಲ್ಲಿ ಇಷ್ಟೊಂದು ಸ್ವಾದಿಷ್ಟ ಹಂದಿ ಮಾಂಸ ಸಿಗಲು ಕಾರಣವೇನು ಎಂಬ ರಹಸ್ಯ ಈಗ ಹೊರಬಿದ್ದಿದೆ.
ಜಪಾನ್ (Japan) ನ ಟೋಕಿಯೊದ ಪ್ರಸಿದ್ಧ ರೆಸ್ಟೋರೆಂಟ್ (Restaurant) ತನ್ನ ರುಚಿಕರವಾದ ಹಂದಿ (Pig) ಮಾಂಸವನ್ನು ವಿಶೇಷ ಸಾಸ್ ಜಾರ್‌ನಲ್ಲಿ ಮುಳುಗಿಸುತ್ತದೆ. ಈ ವಿಷ್ಯವನ್ನು ಹೊಟೇಲ್ ಹೇಳ್ತಿದ್ದಂತೆ ವಿವಾದ ಶುರುವಾಗಿದೆ. ಜಪಾನೀಸ್ ದೂರದರ್ಶನ ಕಾರ್ಯಕ್ರಮವೊಂದರಲ್ಲಿ, ಟೋಕಿಯೊದ ಹಂದಿಮಾಂಸ ತಯಾರಿಕಾ ಹೊಟೇಲ್ ಅಬೆ-ಚಾನ್ ಬಗ್ಗೆ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ವೇಳೆ ರೆಸ್ಟೋರೆಟ್ ತನ್ನ ರುಚಿಯ ಬಗ್ಗೆ ಮಾಹಿತಿ ನೀಡಿದೆ.
ಮಗುವಾದ್ಮೇಲೂ ಕುಗ್ಗಿಲ್ಲ ಆಲಿಯಾ ಬ್ಯೂಟಿ, ಫಿಗರ್ ಮೆಂಟೇನ್ ಮಾಡೋಕೆ ಏನ್ ತಿನ್ತಾರೆ?
60 ವರ್ಷಗಳಿಂದ ಕಡಾಯಿ ತೊಳೆದೇ ಇಲ್ಲ : ಮನೆಯಲ್ಲಿ ಅಡುಗೆ ಮಾಡಿದ ಪಾತ್ರೆಯನ್ನು ಒಂದು ದಿನ ತೊಳೆಯದೆ ಬಳಸಲು ನಮ್ಮಿಂದ ಸಾಧ್ಯವಿಲ್ಲ. ಆದ್ರೆ ಈ ಹೊಟೇಲ್ ನಲ್ಲಿ ಕಳೆದ ೬೦ ವರ್ಷಗಳಿಂದ ಕಡಾಯೊ ಒಂದನ್ನು ತೊಳೆದಿಲ್ಲ. ಭಕ್ಷ್ಯದ ಸುವಾಸನೆಯ ರಹಸ್ಯ ಕೊಳಕು ಜಿಗುಟಾದ ಕಡಾಯಿ. ಕಳೆದ 60 ವರ್ಷಗಳಿಂದ ಜನರಿಗೆ ಬಡಿಸುವ ಮೊದಲು ಹಂದಿ ಮಾಂಸವನ್ನು ಈ ಕಡಾಯಿ ಸಾಸ್ ಜಾರ್ ನಲ್ಲಿ ಅದ್ದಲಾಗುತ್ತದೆ. ಪ್ಯಾನ್ ಸುತ್ತಲೂ ಗಾಢ ಕಂದು, ಜಿಗುಟಾದ ಸಾಸ್ ಇದೆ, ಅದು ವರ್ಷಗಳಿಂದ ಕೊಳೆಯುತ್ತಿದೆ ಮತ್ತು ಹೆಚ್ಚು ಗಟ್ಟಿಯಾಗಿದೆ. ಅಬೆ-ಚಾನ್ ಮೂರನೇ ತಲೆಮಾರಿನ ಜನರು ಈ ಹೋಟೆಲ್ ನೋಡಿಕೊಳ್ತಿದ್ದಾರೆ. ಅವರ ಪ್ರಕಾರ, ಕಳೆದ ಆರು ದಶಕಗಳಲ್ಲಿ ಜಾಡಿಗಳನ್ನು ಎಂದಿಗೂ ಸ್ವಚ್ಛಗೊಳಿಸಲಾಗಿಲ್ಲ. ಇದು ಸಾಸ್‌ನ ಅದ್ಭುತ ಪರಿಮಳದ ಪ್ರಮುಖ ಮೂಲವಾಗಿದೆ ಎಂದು ಅವರು ನಂಬುತ್ತಾರೆ.
ತೆಂಗಿನಕಾಯಿ ಚಿಪ್ಪಿನಲ್ಲಿ ಸಿದ್ಧವಾಗುತ್ತೆ ಇಡ್ಲಿ, ರುಚಿ ಹೇಗಿರ್ಬಹುದು ಗೆಸ್ ಮಾಡಿ!
ಸದ್ಯ ಇರುವ ರೆಸ್ಟೋರೆಂಟ್ ಮಾಲೀಕರ ಅಜ್ಜ 1933 ರಲ್ಲಿ ಇದನ್ನು ಸ್ಥಾಪಿಸಿದ್ದರು. ಅದು ಶುರುವಾದಾಗಿನಿಂದ ಇಂದಿನವರೆಗೂ ಅವರು ಸಾಸ್ ಜಾರ್ ಕ್ಲೀನ್ ಮಾಡಿಲ್ಲ. ಹೊಟೇಲ್ ಮುಚ್ಚುವ ಸಂದರ್ಭದಲ್ಲಿ ಸಾಸ್ ಜಾರನ್ನು ಚೆನ್ನಾಗಿ ಸ್ವಚ್ಛಗೊಳಿಸುವ ಬದಲು ಅದಕ್ಕೆ ಇನ್ನೊಂದಿಷ್ಟು ಸಾಸ್ ಹಾಕುತ್ತಾರೆ. ಸಾಸ್ ಅದ್ರಲ್ಲಿ ಚೆನ್ನಾಗಿ ಮಿಕ್ಸ್ ಆಗಲಿ ಎನ್ನುವುದು ಅವರ ಉದ್ದೇಶ. ಈ ಸಾಸ್ ಜಾರ್ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ.
ಅಲ್ಲಿರುವ ಸಾಸ್ ಅನಾರೋಗ್ಯವುಂಟು ಮಾಡುತ್ತೆ ಎನ್ನಲು ಸಾಧ್ಯವಿಲ್ಲ ಹಾಗೆ ಇದರಲ್ಲಿ 60 ವರ್ಷ ಹಿಂದಿನ ಸಾಸ್ ಇರಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಪ್ರತಿ ದಿನ ಇದೇ ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡುವ ನನಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಗ್ರಾಹಕನೊಬ್ಬ ಕಮೆಂಟ್ ಮಾಡಿದ್ದಾನೆ. ಕಡಾಯಿ ಸ್ವಚ್ಛಗೊಳಿಸದೆ ಅನೇಕ ವರ್ಷಗಳಿಂದ ಅದನ್ನು ಬಳಸುತ್ತಿರುವ ರೆಸ್ಟೋರೆಂಟ್ ಇದು ಮಾತ್ರವಲ್ಲ. ಕೆಲ ದಿನಗಳ ಹಿಂದೆ ಜಪಾನಿನ ಇನ್ನೊಂದು ರೆಸ್ಟೋರೆಂಟ್ ಸುದ್ದಿಗೆ ಬಂದಿತ್ತು. ಅಲ್ಲಿ 65 ವರ್ಷದಿಂದ ಸೂಪ್ ಪಾತ್ರೆ ತೊಳೆಯದೆ ಬಳಸುತ್ತಿರುವುದು ಸುದ್ದಿಯಾಗಿತ್ತು.