ಹೆಸರು ಒಂದೇ ಆದ್ರೂ ಬೇರೆ ಬೇರೆ ಟೇಸ್ಟ್ ನೀಡುವ ಬಿರಿಯಾನಿ ಸ್ಪೆಷಲ್ ಏನು?

By Suvarna News  |  First Published Oct 12, 2023, 2:37 PM IST

ಭಾರತ ಮಸಾಲೆಯುಕ್ತ ಆಹಾರ ಸೇವನೆ ಮಾಡೋದ್ರಲ್ಲಿ ಮುಂದಿದೆ. ಪ್ರತಿಯೊಂದು ಭಾಗದಲ್ಲೂ ಭಿನ್ನ ಖಾದ್ಯಗಳನ್ನು ನೀವು ಸವಿಯಬಹುದು. ಕೆಲ ಖಾದ್ಯಗಳು ತಮ್ಮದೇ ವಿಶೇಷ ಹೊಂದಿವೆ. ಅದ್ರಲ್ಲಿ ಹೈದ್ರಾಬಾದಿ, ಮೊರದಾಬಾದಿ ಹಾಗೂ ಲಕ್ನೋ ಬಿರಿಯಾನಿ ಕೂಡ ಸೇರಿದೆ. 
 


ಬಿರಿಯಾನಿ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಬಿರಿಯಾನಿ ರುಚಿಯೇ ಅಂತಹದ್ದು. ಭಾರತೀಯ ಆಹಾರದ ಜನಪ್ರಿಯ ಖಾದ್ಯಗಳಲ್ಲಿ ಬಿರಿಯಾನಿ ಕೂಡ ಒಂದು. ಈ ಬಿರಿಯಾನಿಯಲ್ಲಿ ನೀವು ವೆರೈಟಿ ನೋಡ್ಬಹುದು. ಹೈದರಾಬಾದಿ ಬಿರಿಯಾನಿ, ಮೊರಾದಬಾದಿ ಬಿರಿಯಾನಿ, ಲಕ್ನೋ ಬಿರಿಯಾನಿ ಹೀಗೆ ಬೇರೆ ಬೇರೆ ಹೆಸರುಗಳನ್ನು ಬಿರಿಯಾನಿ ಹೊಂದಿದೆ. ಈಗ ನಾವು ಬರೆದಿರುವ ಮೂರು ಬಿರಿಯಾನಿಗಳು ತಮ್ಮ ವಿಶೇಷ ರುಚಿ ಮತ್ತು ಮಸಾಲೆಗಳಿಗೆ ಪ್ರಸಿದ್ಧವಾಗಿವೆ. 

ಬಿರಿಯಾನಿ (Biriyani) ಬಿರಿಯಾನಿಯೇ ಆದ್ರೂ ಭಿನ್ನತೆ ಕಾರಣ ಅದರ ಮಸಾಲೆ . ಮಸಾಲೆಗಳು ಬಿರಿಯಾನಿಗೆ ವಿಶಿಷ್ಟವಾದ ರುಚಿ (Taste) ಯನ್ನು ನೀಡುತ್ತವೆ.  ಎಲ್ಲ ಬಿರಿಯಾನಿಗೆ ಒಂದೇ ಮಸಾಲೆ ಬಳಸೋದಿಲ್ಲ. ಬೇರೆ ಬೇರೆ ಮಸಾಲೆ ಬಳಕೆ ಕಾರಣದಿಂದಾಗಿ ಪ್ರತಿಯೊಂದು ಬಿರಿಯಾನಿಯೂ ತನ್ನದೇ ರುಚಿಯನ್ನು ಹೊಂದಿದೆ. ನಾವಿಂದು ಹೈದರಾಬಾದಿ ಬಿರಿಯಾನಿ, ಮೊರಾದಬಾದಿ ಬಿರಿಯಾನಿ, ಲಕ್ನೋ (Lucknow) ಬಿರಿಯಾನಿ ಮಧ್ಯೆ ಇರುವ ಭಿನ್ನತೆಯನ್ನು ನಿಮಗೆ ತಿಳಿಸ್ತೇವೆ.

Tap to resize

Latest Videos

undefined

HEALTHY DRINK: ಗ್ರೀನ್ ಟೀ ವರ್ಸಸ್ ಬ್ಲಾಕ್ ಕಾಫಿ.. ಯಾವುದು ಬೆಸ್ಟ್?

ಹೈದರಾಬಾದಿ ಬಿರಿಯಾನಿ : ಹೈದರಾಬಾದಿ ಬಿರಿಯಾನಿ ತಿನ್ನೋಕೆ ಹೆಚ್ಚು ರುಚಿ. ಇದಕ್ಕೆ ಕಾರಣ ಅದರ ಕಟುವಾದ ಮತ್ತು ಖಾರದ  ಮಸಾಲೆ. ಇದ್ರಲ್ಲಿ ಖಾರದ ಮಸಾಲೆಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.  ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಮತ್ತು ಗರಂ ಮಸಾಲಾ ಮುಂತಾದ ಮಸಾಲೆಗಳನ್ನು ಮುಖ್ಯವಾಗಿ ಹೈದರಾಬಾದಿ ಬಿರಿಯಾನಿಯಲ್ಲಿ  ಬಳಸಲಾಗುತ್ತದೆ. ಹೈದರಾಬಾದಿ ಬಿರಿಯಾನಿಯನ್ನು   ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ. ಇದರಿಂದ ಮಸಾಲೆಗಳು ಸರಿಯಾಗಿ ಬೇಯುತ್ತವೆ. ಮಸಾಲೆ ಸುವಾಸನೆ ಸಂಪೂರ್ಣವಾಗಿ ಬಿರಿಯಾನಿ ಜೊತೆ ಬೆರೆಯುತ್ತದೆ.  

ಲಕ್ನೋ ಬಿರಿಯಾನಿ : ಲಕ್ನೋ ಬಿರಿಯಾನಿ ಉತ್ತರ ಪ್ರದೇಶದ ಪ್ರಸಿದ್ಧ ಮತ್ತು ಜನಪ್ರಿಯ ಬಿರಿಯಾನಿ. ಈ ಬಿರಿಯಾನಿ ತಯಾರಿಸಲು ಬಳಸುವ ಮಸಾಲೆಗಳ ಪ್ರಮಾಣ ಕಡಿಮೆ. ಏಲಕ್ಕಿ, ಜಾಯಿಕಾಯಿ, ಕೇಸರಿ ಮುಂತಾದ ಸುಗಂಧಭರಿತ ಮಸಾಲೆಗಳನ್ನು ಇದರಲ್ಲಿ ಬಳಸಲಾಗುತ್ತದೆ. ಅದು ಸಿಹಿ ಮತ್ತು ಸೌಮ್ಯವಾದ ರುಚಿಯನ್ನು ಹೊಂದಿರುತ್ತದೆ. ಕೆಂಪು ಮೆಣಸಿನಕಾಯಿಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಲಕ್ನೋದ ಬಿರಿಯಾನಿಯನ್ನು ಮೊಸರಿನಲ್ಲಿ ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ.  

Health Tips: ಪೌಷ್ಟಿಕ ರೊಟ್ಟಿ ಆರೋಗ್ಯ ಹಾಳು ಮಾಡೋದ್ಯಾವಾಗ?

ಮೊರಾದಬಾದಿ ಬಿರಿಯಾನಿ : ಮೊರಾದಬಾದಿ ಬಿರಿಯಾನಿ ಮತ್ತು ಲಕ್ನೋ ಬಿರಿಯಾನಿಯಲ್ಲಿ ಸ್ವಲ್ಪ ಹೋಲಿಕೆ ಇದೆ. ಇವುಗಳಲ್ಲಿ ಮಸಾಲೆ ಕಡಿಮೆ ಇರುತ್ತದೆ. ಮಾಂಸದ ಮೇಲೆ ಸೌಮ್ಯವಾದ ಮಸಾಲೆ ಇರುತ್ತದೆ.  ಸಾಮಾನ್ಯವಾಗಿ ಮೊರಾದಬಾದಿ ಬಿರಿಯಾನಿ ಎಂದಾಗ ಮೊರಾದಬಾದಿ ಚಿಕನ್ ಬಿರಿಯಾನಿಯೇ ನೆನಪಿಗೆ ಬರುತ್ತೆ. ಉತ್ತರ ಭಾರತದ ಜನಪ್ರಿಯ ಬಿರಿಯಾನಿಗಳಲ್ಲಿ ಇದು ಒಂದು. ಈ ಬಿರಿಯಾನಿ ವಿಭಿನ್ನ ರುಚಿಗೆ ಹೆಸರುವಾಸಿಯಾಗಿದೆ. ಈ ಬಿರಿಯಾನಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ದಾಲ್ಚಿನ್ನಿ ಪ್ರಮಾಣ ಹೆಚ್ಚಿದ್ದರೆ ಕೆಂಪು ಮೆಣಸಿನಕಾಯಿಯನ್ನು ಕಡಿಮೆ ಬಳಸಲಾಗುತ್ತದೆ. ಖಾರ ಕಡಿಮೆ ಇರುವ ಕಾರಣಕ್ಕೆ ಬಿರಿಯಾನಿ ಸೌಮ್ಯವಾಗಿರುತ್ತದೆ. ಹೆಚ್ಚು ಮಸಾಲೆ ತಿಂದ ಅನುಭವವಾಗೋದಿಲ್ಲ. ಇದನ್ನು ಆವಿಯಲ್ಲಿ ಬೇಯಿಸಲಾಗುವುದಿಲ್ಲ. ನೇರವಾಗಿ ಪ್ಯಾನ್‌ನಲ್ಲಿ ಬೇಯಿಸಲಾಗುತ್ತದೆ. ಹಾಗಾಗಿ ಇದು ತನ್ನ ರುಚಿ ಹಾಗೂ ಸುವಾಸನೆಯನ್ನು ಕಳೆದುಕೊಳ್ಳೋದಿಲ್ಲ.  

ಇದ್ರಲ್ಲಿ ಯಾವುದು ಬೆಸ್ಟ್? : ಹೈದ್ರಾಬಾದಿ ಬಿರಿಯಾನಿ, ಲಕ್ನೋ ಬಿರಿಯಾನಿ ಮತ್ತು ಮೊರಾದಬಾದಿ ಬಿರಿಯಾನಿ ಇದ್ರಲ್ಲಿ ಯಾವುದು ಬೆಸ್ಟ್ ಎಂದು ಹೇಳೋಕೆ ಸಾಧ್ಯವಿಲ್ಲ. ಯಾಕೆಂದ್ರೆ ಒಬ್ಬೊಬ್ಬರಿ ಒಂದೊಂದು ರುಚಿ ಇಷ್ಟವಾಗುತ್ತೆ. ಹೆಚ್ಚು ಮಸಾಲೆ ಹಾಗೂ ಖಾರವನ್ನು ಬಯಸುವವರಿಗೆ ಹೈದ್ರಾಬಾದಿ ಬಿರಿಯಾನಿ ಯಾವಾಗ್ಲೂ ಮೊದಲ ಸ್ಥಾನದಲ್ಲಿರುತ್ತದೆ. ಹೈದ್ರಾಬಾದಿ ಚಿಕನ್ ಬಿರಿಯಾನಿ ಮತ್ತಷ್ಟು ಖಾರ ಹಾಗೂ ಮಸಾಲೆಯುಕ್ತವಾಗಿರುತ್ತದೆ. ಅದೇ ಹೆಚ್ಚು ಮಸಾಲೆ ಅಗತ್ಯವಿಲ್ಲ ಎನ್ನುವವರು ಲಕ್ನೋ ಅಥವಾ ಮೊರಾದಬಾದಿ ಬಿರಿಯಾನಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. 
 

click me!