ಬಾಲಿವುಡ್‌ನ ಬೋಲ್ಡ್ ಆಂಡ್ ಬ್ಯೂಟಿಫುಲ್‌ ನಟಿ ಜಾನ್ವಿ, ಫಿಗರ್ ಮೈಂಟೇನ್ ಮಾಡ್ಕೊಳ್ಳೋಕೆ ಏನ್ ತಿನ್ತಾರೆ?

By Vinutha PerlaFirst Published Apr 24, 2024, 12:53 PM IST
Highlights

ಬಾಲಿವುಡ್‌ನ ಮಾದಕ ಬ್ಯೂಟಿ ಹಾಗೂ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ತಮ್ಮ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇಷ್ಟಕ್ಕೂ ಬೋಲ್ಡ್ ಆಂಡ್ ಬ್ಯೂಟಿಫುಲ್‌ ಆಗಿರೋ ಈ ನಟಿ ಫಿಗರ್ ಮೈಂಟೇನ್ ಮಾಡ್ಕೊಳ್ಳೋಕೆ ಏನ್ ತಿನ್ತಾರೆ?

ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ನಟಿಯರಲ್ಲಿ ಒಬ್ಬರು ಜಾನ್ವಿ ಕಪೂರ್‌. ತಮ್ಮ ಹಾಟ್ ಲುಕ್‌ ಹಾಗೂ ಸ್ಟೈಲಿಶ್ ಫೋಟೋಶೂಟ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. 2018ರಲ್ಲಿ ಧಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ನಟಿಸಿದ ಹಲವು ಸಿನಿಮಾಗಳು ಸಕ್ಸಸ್ ಆಗಿಲ್ಲದಿದ್ದರೂ ಜಾನ್ವಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ತಮ್ಮ ಬಾಯ್‌ಫ್ರೆಂಡ್ ಶಿಖರ್‌ ಪಹಾರಿಯಾ ಜೊತೆ ಟೆಂಪಲ್ ರನ್‌ ಮಾಡಿ ಗಮನ ಸೆಳೆದಿದ್ದರು. 

ಬಾಲಿವುಡ್‌ನ ಮಾದಕ ಬ್ಯೂಟಿ ಹಾಗೂ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ತಮ್ಮ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇಷ್ಟಕ್ಕೂ ಬೋಲ್ಡ್ ಆಂಡ್ ಬ್ಯೂಟಿಫುಲ್‌ ಆಗಿರೋ ಈ ನಟಿ ಫಿಗರ್ ಮೈಂಟೇನ್ ಮಾಡ್ಕೊಳ್ಳೋಕೆ ಏನ್ ತಿನ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದ ಅತಿಹೆಚ್ಚು ಅಂಕುಡೊಂಕಾದ ಮೈಮಾಟವುಳ್ಳ ಟಾಪ್-10 ನಟಿಯರು; ಸ್ಯಾಂಡಲ್‌ವುಡ್‌ ಸ್ಟಾರ್ಸ್ ಯಾರಿದ್ದಾರೆ?

ಜಾನ್ವಿ ಬೆಳಗ್ಗೆದ್ದು ಏನ್ ತಿನ್ತಾರೆ?
ಬೆಳಗ್ಗಿನ ಉಪಾಹಾರವು ದಿನದ ಪ್ರಮುಖ ಊಟವಾಗಿದ್ದರೂ ಜಾನ್ವಿ ಕಪೂರ್ ಬೆಳಗ್ಗೆದ್ದು ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸುವುದಿಲ್ಲ. ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಇದಕ್ಕೆ ಕೆಲವು ಹನಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಮಾತ್ರ ಬೆರೆಸುತ್ತಾರೆ. ಈ ಡಿಟಾಕ್ಸ್ ಪಾನೀಯವು ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಇದರಿಂದಾಗಿ ಕರುಳಿನ ಆರೋಗ್ಯ ಗಮನಾರ್ಹವಾಗಿ ಸುಧಾರಣೆಯಾಗುತ್ತದೆ.

ಇದಲ್ಲದೆ, ಜೇನುತುಪ್ಪದಲ್ಲಿರುವ ಅಂಶವು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದರ ನಂತರ, ಪ್ರತಿದಿನ ಬೆಳಗ್ಗೆ ಉಪಾಹಾರದ ಮೊದಲು ಜಾನ್ವಿ ಕಪೂರ್ ಒಂದು ಚಮಚ ತುಪ್ಪವನ್ನು ಸೇವಿಸುತ್ತಾರೆ. ತುಪ್ಪದ ಶಕ್ತಿಯು ಹಸಿವನ್ನು ನಿಯಂತ್ರಿಸಲು ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರಲು ನೆರವಾಗುತ್ತದೆ.

ಬ್ಲೌಸ್​ ಇಲ್ಲದ ಸೀರೆಗಳ ತೊಟ್ಟು ಜಾಹ್ನವಿ ವಿಡಿಯೋ ಶೂಟ್​: ಹಾಟ್​ನೆಸ್​ಗೆ ಫ್ಯಾನ್ಸ್ ಫಿದಾ!

ಇನ್ನು ಮಧ್ಯಾಹ್ನದ ಊಟಕ್ಕೆ ಜಾನ್ವಿ ಕಪೂರ್ ಸರಳವಾದ ಮನೆಯ ಊಟವನ್ನು ಇಷ್ಟಪಡುತ್ತಾರೆ. ಸಾದಾ ರೊಟ್ಟಿ ಮತ್ತು ವಿವಿಧ ತರಕಾರಿಗಳನ್ನು ಸೇರಿಸಿದ ಪಲ್ಯವನ್ನು ತಿನ್ನುತ್ತಾರೆ. ಪಾಲಕ್ ಮತ್ತು ಮೇತಿಯಂತಹ ಸೊಪ್ಪು ತರಕಾರಿಗಳನ್ನು ಹೆಚ್ಚು ತಿನ್ನುತ್ತಾರೆ. ದಾಲ್‌, ಪನೀರ್ ಅಥವಾ ತೋಫು ಸೇವಿಸುವ ಮೂಲಕ ದೇಹಕ್ಕೆ ಬೇಕಾದ ಪ್ರೋಟೀನ್ ಅಗತ್ಯವನ್ನು ಸಹ ಪೂರೈಸುತ್ತಾರೆ.

ಜಾನ್ವಿ ಕಪೂರ್ ರಾತ್ರಿ 10 ಗಂಟೆಯ ಮೊದಲು ಕಡ್ಡಾಯವಾಗಿ ತಮ್ಮ ಊಟವನ್ನು ಮಾಡುತ್ತಾರೆ. ಹೆಚ್ಚಿನ ದಿನಗಳಲ್ಲಿ ರಾತ್ರಿಯೂಟವು ಮನೆಯಲ್ಲೇ ತಯಾರಿಸಿದ ಸರಳವಾದ ಆಹಾರವನ್ನು ಒಳಗೊಂಡಿರುತ್ತದೆ. ಸಲಾಡ್, ಕೆಂಪು ಅಕ್ಕಿಯ ಬಿರಿಯಾನಿ ಮೊದಲಾದವುಗಳನ್ನು ತಿನ್ನುತ್ತಾರೆ. 

ಜಾನ್ವಿ ಕಪೂರ್ ಚೀಟ್ ಮೀಲ್ಸ್‌ಗೆ ಏನ್‌ ತಿನ್ತಾರೆ?
ಜಾನ್ವಿ ಕಪೂರ್ ಎಲ್ಲಾ ದಿನ ಕಟ್ಟುನಿಟ್ಟಾದ ಆಹಾರಕ್ರಮವನ್ನು ಪಾಲಿಸಿದರೂ ಚೀಟ್ ಡೇ ದಿನ ತಮಗಿಷ್ಟವಾದ ಆಹಾರವನ್ನು ಸವಿಯುವುದನ್ನು ಮಿಸ್ ಮಾಡುವುದಿಲ್ಲ. ಮಸಾಲೆಯುಕ್ತ ನೂಡಲ್ಸ್, ಪ್ಯಾನ್‌ಕೇಕ್ ಸೇರಿದಂತೆ ಕೆಲವು ಉತ್ತಮ ಹಳೆಯ ಕೊರಿಯನ್ ಆಹಾರವನ್ನು ಸವಿಯುತ್ತಾರೆ. ಇದಲ್ಲದೆ ಜಪಾನೀಸ್ ಮತ್ತು ಇಟಾಲಿಯನ್ ಪಾಕಪದ್ಧತಿಯ ಕೆಲವು ಭಕ್ಷ್ಯಗಳನ್ನು ಇಷ್ಟಪಡುತ್ತಾರೆ.

click me!