ರೊಟ್ಟಿ, ಚಪಾತಿ ಅಂದಾಗ ನಮ್ಮ ಮನಸ್ಸಿನಲ್ಲಿ ಮೊದಲು ಹೋಗೋದೆ ಗೋಧಿ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸ್ಥಾನ ಪಡೆದಿರುವ ಈ ಗೋಧಿ ಹಿಟ್ಟಿನಿಂದ ನಾನಾ ಬಗೆಯ ತಿಂಡಿ ತಯಾರಿಸಬಹುದು. ಆದ್ರೆ ಪ್ರತಿ ದಿನ ಇದ್ರಿಂದ ಸಿದ್ಧವಾಗುವ ಚಪಾತಿ ನೀವಂದುಕೊಂಡಷ್ಟು ಒಳ್ಳೆಯದಲ್ಲ.
ಚಪಾತಿ, ರೊಟ್ಟಿ, ಪುಲ್ಕಾ ಹೀಗೆ ಹಿಟ್ಟಿನಿಂದ ಮಾಡಿದ ಒಂದಾದ್ರೂ ಆಹಾರವನ್ನು ನಾವು ಪ್ರತಿ ದಿನ ಸೇವನೆ ಮಾಡ್ತೇವೆ. ಕೆಲವರು ಪ್ರತಿ ದಿನ ಚಪಾತಿ ಅಥವಾ ರೋಟಿ ತಿನ್ನುತ್ತಾರೆ. ಚಪಾತಿ ಅಥವಾ ರೊಟ್ಟಿಯನ್ನು ನಾನಾ ಬಗೆಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ರಾಗಿ, ಗೋಧಿ, ಜೋಳ, ಬಾರ್ಲಿ ಹೀಗೆ ಬೇರೆ ಬೇರೆ ಹಿಟ್ಟಿನಿಂದ ರೊಟ್ಟಿ ತಯಾರಾಗುತ್ತದೆ. ಇದ್ರಲ್ಲಿ ಗೋಧಿ ರೋಟಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹಿಂದೆ ಪ್ರತಿ ದಿನ ಎರಡು ಇಲ್ಲ ಒಂದು ಹೊತ್ತು ಗೋಧಿ ರೊಟ್ಟಿ ಸೇವನೆ ಮಾಡ್ತಿದ್ದವರು ಈಗ ಅದರ ಸೇವನೆ ಕಡಿಮೆ ಮಾಡಿದ್ದಾರೆ. ಗೋಧಿ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದ್ರಿಂದ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ ಎನ್ನುವ ಕಾರಣಕ್ಕೆ ಗೋಧಿ ರೊಟ್ಟಿಯನ್ನು ಅನೇಕರು ತ್ಯಜಿಸಿದ್ದಾರೆ. ರಾತ್ರಿ ಸಮಯದಲ್ಲಿ ಚಪಾತಿ ಏಕೆ ಸೇವನೆ ಮಾಡಬಾರದು ಎನ್ನುವ ಬಗ್ಗೆ ಈಗಾಗ್ಲೇ ಹೇಳಲಾಗಿದೆ, ಈಗ ಗೋಧಿ ರೊಟ್ಟಿ ತೂಕ ಏರಿಕೆ ಮಾಡುತ್ತಾ? ರೊಟ್ಟಿಯನ್ನು ಯಾರು ತಿನ್ನಬೇಕು, ಯಾರು ತಿನ್ನಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ಗೋಧಿ (Wheat) ಹಿಟ್ಟಿನ ಚಪಾತಿ ಕೆಟ್ಟದ್ದಲ್ಲ. ಅದನ್ನು ಎಲ್ಲರೂ ತಿನ್ನಬಹುದು. ಆದರೆ ಅದರ ಪ್ರಮಾಣದ ಬಗ್ಗೆ ಕಾಳಜಿ ವಹಿಸಬೇಕು. ನೀವು ಬರೀ ಗೋಧಿ ಹಿಟ್ಟಿನ ರೊಟ್ಟಿ ತಯಾರಿಸಬಾರದು. ಅದರ ಬದಲು ಬಹುಧಾನ್ಯದ ಹಿಟ್ಟಿನಿಂದ ಮಾಡಿದ ರೊಟ್ಟಿ ಒಳ್ಳೆಯದು. ಬಹುಧಾನ್ಯದ ರೊಟ್ಟಿ ಗೋಧಿಗಿಂತ ಹೆಚ್ಚು ಆರೋಗ್ಯ (Health) ಕರ. ಜೋಳ, ರಾಗಿ ಅಥವಾ ಬಹು ಧಾನ್ಯದ ಹಿಟ್ಟಿಗೆ ಗೋಧಿಯನ್ನು ಬೆರೆಸಬೇಕು. ಇದರಿಂದ ಹಿಟ್ಟು ಇನ್ನಷ್ಟು ಪೌಷ್ಟಿಕವಾಗುತ್ತದೆ. ಬಹುಧಾನ್ಯದ ಹಿಟ್ಟಿನಿಂದ ತಯಾರಿಸಿದ ರೊಟ್ಟಿ ಜೀರ್ಣಕ್ರಿಯೆ (Digestion) ಗೆ ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಗೋಧಿ ಹಿಟ್ಟಿನ ಚಪಾತಿಗಿಂತ ಬಹುಧಾನ್ಯದ ರೊಟ್ಟಿ ತೂಕ (Weight) ಇಳಿಸಲು ಬಹಳ ಪ್ರಯೋಜನಕಾರಿ.
HEALTH : ಫ್ರಿಜ್‌ನಲ್ಲಿಟ್ಟ ತಾಮ್ರದ ಬಾಟಲ್ ನೀರು ಎಷ್ಟು ಸೇಫ್?
ಯಾರು ಗೋಧಿ ಹಿಟ್ಟಿನ ರೊಟ್ಟಿ ತಿನ್ನಬಾರದು ಗೊತ್ತಾ? : ಮೊದಲೇ ಹೇಳಿದಂತೆ ಪ್ರಮಾಣದ ಜೊತೆ ಯಾರು ಇದನ್ನು ತಿನ್ನಬಾರದು ಎಂಬುದನ್ನು ತಿಳಿದಿರಬೇಕು. ಗೋಧಿ ತೂಕ ಇಳಿಸುವ ಕೆಲಸವನ್ನು ಮಾಡೋದಿಲ್ಲ. ಹಾಗಾಗಿ ಅಧಿಕ ತೂಕ ಹೊಂದಿರುವವರು ಅಥವಾ ಜೀವನಶೈಲಿಯಲ್ಲಿ ಸಮಸ್ಯೆ ಹೊಂದಿದ್ದರೆ ಅಂಥವರು ಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬಾರದು.
ನಿಮಗೆ ಹೊಟ್ಟೆ ಊದಿಕೊಳ್ಳುವ ಸಮಸ್ಯೆಯಿದ್ದರೆ, ಗ್ಯಾಸ್ಟ್ರಿಕ್ ಕಾಡ್ತಿದ್ದರೆ, ಅಜೀರ್ಣ ಸಮಸ್ಯೆಯಾಗ್ತಿದ್ದರೆ ನೀವು ಯಾವುದೇ ಕಾರಣಕ್ಕೂ ಗೋಧಿ ಹಿಟ್ಟಿನ ರೊಟ್ಟಿ ಸೇವನೆ ಮಾಡಬೇಡಿ. ಇದನ್ನು ತಿನ್ನುವುದ್ರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗದೆ ಸಮಸ್ಯೆ ಹೆಚ್ಚಾಗುತ್ತದೆ. ಗೋಧಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಗೋಧಿಯ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚು. ಅದು ಸ್ವಲ್ಪಮಟ್ಟಿಗೆ ಸಿಹಿ ಸುಹಾಸನೆ ಹೊಂದಿರುತ್ತದೆ. ಮಧುಮೇಹ ಖಾಯಿಲೆ ಹೊಂದಿರುವವರು ಗೋಧಿ ಹಿಟ್ಟಿನಿಂದ ತಯಾರಿಸಿದ ರೊಟ್ಟಿ ತಿನ್ನದೆ ಇರುವುದು ಒಳ್ಳೆಯದು.
ನೀವು ಕಫದ ಪ್ರವೃತ್ತಿ ಹೊಂದಿದ್ದರೆ ಗೋಧಿ ಹಿಟ್ಟಿನ ಚಪಾತಿ ಸೇವನೆ ಮಾಡಬೇಡಿ. ಇದು ಕಫದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಜ್ವರ, ಕೆಮ್ಮು, ಶೀತವಿದ್ರೆ ಗೋಧಿ ಹಿಟ್ಟಿನ ಚಪಾತಿ ತಿನ್ನುವ ಸಹವಾಸಕ್ಕೆ ಹೋಗ್ಬೇಡಿ.
Fruit Juice : ಬಾಯಾರಿಕೆ ಅಂತ ಹೋಗ್ತಾ ಬರ್ತಾ ಹಣ್ಣಿನ ಜ್ಯೂಸ್ ಕುಡಿಬೇಡಿ
ಗೋಧಿ ಹಿಟ್ಟಿನ ಚಪಾತಿಯನ್ನು ಯಾರು ಸೇವಿಸಬೇಕು? : ಪಿತ್ತರಸವು ಹೆಚ್ಚಿರುವವರು ಅಥವಾ ಹೊಟ್ಟೆಯಲ್ಲಿ ಸುಡುವ ಸಂವೇದನೆಯ ಸಮಸ್ಯೆ ಇದ್ದವರು ಆಹಾರದಲ್ಲಿ ಗೋಧಿ ಹಿಟ್ಟಿನ ರೊಟ್ಟಿ ತಿನ್ನಬೇಕು ಎನ್ನುತ್ತಾರೆ ತಜ್ಞರು.
ತೂಕ ಹೆಚ್ಚಳ ಬಯಸುವವರು ಗೋಧಿ ಹಿಟ್ಟಿನ ರೊಟ್ಟಿ ತಿನ್ನೋದು ಒಳ್ಳೆಯದು. ಇದು ತೂಕ ಹೆಚ್ಚಿಸಲು ಮತ್ತು ಸ್ನಾಯುವನ್ನು ಬಲಪಡಿಸಲು ನೆರವಾಗುತ್ತದೆ.