ಇಲ್ಲೊಂದು ಕಡೆ ಫುಡ್ ಡೆಲಿವರಿ ಬಾಯ್ ವೀಡಿಯೋವೊಂದು ಬೇಡದ ಕಾರಣಕ್ಕೆ ಸುದ್ದಿಯಾಗಿದ್ದು, ಅನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನೇ ಸೃಷ್ಟಿಸಿದೆ.
ಆನ್‌ಲೈನ್ ಆಹಾರ ಪೂರೈಕೆ ಘಟಕಗಳಲ್ಲಿ ಕೆಲಸ ಮಾಡುವ ಫುಡ್ ಡೆಲಿವರಿ ಬಾಯ್‌ಗಳು ರಾತ್ರಿ ಹಗಲೆನ್ನದೇ ಮಳೆ ಬಿಸಿಲೆನ್ನದೇ ಹಸಿದ ಗ್ರಾಹಕರಿಗೆ ಆಹಾರ ಪೂರೈಸುವ ಕಾರ್ಯದಲ್ಲಿ ತೊಡಗುತ್ತಾರೆ. ಆಹಾರ ಪೂರೈಕೆ ವೇಳೆ ಅವರು ಪಡುವ ಪಾಡುಗಳನ್ನು ಕೆಲವು ಗ್ರಾಹಕರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫುಡ್ ಡೆಲಿವರಿ ಬಾಯ್‌ಗಳ ಕಷ್ಟಕ್ಕೆ ಮಿಡಿದಿದ್ದಾರೆ. ಹಾಗೆಯೇ ಇಲ್ಲೊಂದು ಕಡೆ ಫುಡ್ ಡೆಲಿವರಿ ಬಾಯ್ ವೀಡಿಯೋವೊಂದು ಬೇಡದ ಕಾರಣಕ್ಕೆ ಸುದ್ದಿಯಾಗಿದ್ದು, ಅನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನೇ ಸೃಷ್ಟಿಸಿದೆ.
ವೀಡಿಯೋದಲ್ಲಿ ಇರೋದೇನು?
ವೀಡಿಯೋದಲ್ಲಿ ಕಾಣಿಸುವಂತೆ ಸಿಗ್ನಲ್‌ನಲ್ಲಿ ನಿಂತಿದ್ದ ಡೆಲಿವರಿ ಸಿಬ್ಬಂದಿಯೋರ್ವರು ತಮ್ಮ ಫುಡ್ ಬ್ಯಾಗ್‌ಗೆ ಕೈ ಹಾಕಿ ಏನೋ ಬಾಯಿಗೆ ಹಾಕಿಕೊಳ್ಳುತ್ತಾರೆ. ಅಷ್ಟೇ ಫುಡ್ ಡೆಲಿವರಿ ಬಾಯಿ ಮಾಡಿದ್ದು ಕೇವಲ ಇಷ್ಟೇ ಆದರೆ ಇದನ್ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಬರೀ ವೀಡಿಯೋ ಹಾಕಿಲ್ಲ, ಝೋಮ್ಯಾಟೋ ಹಾಗೂ ಸ್ವಿಗ್ಗಿಯಲ್ಲಿ ಸದಾ ಆಹಾರ ಆರ್ಡರ್ ಮಾಡುವವರಿಗಾಗಿ ಈ ವೀಡಿಯೋ ಎಂದು ಅವರು ಬರೆದಿದ್ದಾರೆ. ಹೀಗಾಗಿ ಈ ವೀಡಿಯೋ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಡೆಲಿವರಿ ಬಾಯ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ ತುಂಬಾ ಜನ ಆತನನ್ನು ಬೆಂಬಲಿಸಿದ್ದಾರೆ.
ವಾರೆ ವ್ಹಾ..ಇನ್ಮುಂದೆ ಡ್ರೋನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಪಿಜ್ಜಾ, ವಿಡಿಯೋ ವೈರಲ್
ನೋಟ ಬದಲಿಸಿಕೊಳ್ಳಿ ಎಂದ ನೆಟ್ಟಿಗರು
ಈ ವೀಡಿಯೋವನ್ನು ಫೇಸ್‌ಬುಕ್‌ನ proud To Be An Indian ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಅನೇಕರಲ್ಲಿ ಒಬ್ಬರು ನಿಮ್ಮ ನೋಟ ಬದಲಿಸಿಕೊಳ್ಳಿ ಇದು ಆತನದ್ದೇ ಆಹಾರ ಎಂದೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ತಪ್ಪು ನಿರ್ಧಾರ ಏಕೆಂದರೆ ನಮಗೆ ಆಹಾರ ಪೂರೈಕೆ ಮಾಡುವವರು ರೋಬೋಟ್‌ಗಳಲ್ಲ, ಹೀಗಾಗಿ ಅದು ಆತನದ್ದೇ ಆಹಾರ ಆಗಿರಬಹುದು. ಬಹುಶಃ ಆತ ಆಹಾರದ ಡಬ್ಬಿಯನ್ನು ಅದೇ ಬಾಕ್ಸ್‌ನಲ್ಲಿ ಇಟ್ಟಿರಬಹುದು, ಅಲ್ಲದೇ ಮಾರಾಟಗಾರರು ಆಹಾರವನ್ನು ಸೀಲ್ ಮಾಡಿಯೇ ನೀಡುತ್ತಾರೆ. ಒಂದು ವೇಳೆ ಆಹಾರದ ಡಬ್ಬಿ ತೆರೆದಿದ್ದಲ್ಲಿ ಗ್ರಾಹಕನಿಗೆ ತಿಳಿಯುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾವುದನ್ನು ತಿಳಿಯದೇ ಜಡ್ಜ್ ಮಾಡುವುದು ಬೇಡ ಕ್ಯಾಮರಾಮ್ಯಾನ್‌ಗೆ ಹೇಗೆ ಗೊತ್ತು. ಆತ ಆಹಾರ ತಿನ್ನಲು ಶುರು ಮಾಡುತ್ತಾನೆ ಎಂದು ಎಂದೂ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೇ ಬಹುತೇಕ ನೋಡುಗರು ಈ ಡೆಲಿವರಿ ಬಾಯ್ ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನ ವೀಕ್ಷಿಸಿದ್ದು, ವೀಡಿಯೋ ಮಾಡಿದವರಿಗೆ ಜನ ಬೈದಿದ್ದಾರೆ.
ಸೇಡಿಗಾಗಿ ಎಕ್ಸ್ ಬಾಯ್‌ಫ್ರೆಂಡ್‌ಗೆ ಕ್ಯಾಶ್ ಆನ್ ಡೆಲಿವರಿ ಫುಡ್ ಆರ್ಡರ್ ಮಾಡಿದ ಅಂಕಿತಾ!
ಫುಡ್ ಡೆಲಿವರಿ ಮಾಡಿದ ಝೋಮ್ಯಾಟೋದ ಸಿಇಒ
ನಿನ್ನೆಯಷ್ಟೇ ಸ್ನೇಹಿತರ ದಿನ ಕಳೆದು ಹೋಗಿದ್ದು, ಸ್ನೇಹಿತರ ದಿನದ ವಿಶೇಷವಾಗಿ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಯಾದ ಝೋಮ್ಯಾಟೋದ ಸಿಇಒ ದೀಪಿಂದರ್ ಗೋಯಲ್ ಅವರು ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸಿದ್ದರು. ಭಾನುವಾರ ವಿಶ್ವ ಸ್ನೇಹಿತರ ದಿನದ ಅಂಗವಾಗಿ ಅವರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕೆಂಪು ಶರ್ಟ್ ಧರಿಸಿ, ಜೊಮ್ಯಾಟೋ ಬ್ಯಾಗ್ ಅಳವಡಿಸಿಕೊಂಡು ಆಹಾರ ಸರಬರಾಜು ಮಾಡಲು ತೆರಳಿದ್ದರು. ಇದರ ಜೊತೆಗೆ ಸ್ನೇಹಿತರ ದಿನದ ಕಾರಣ ಹೋಟೆಲ್ ಸಿಬ್ಬಂದಿ, ಗ್ರಾಹಕರಿಗೆ ಹಾಗೂ ಡೆಲಿವರಿ ಕೊಡುವ ನೌಕರರಿಗೆ ಕೈಗಳಿಗೆ ಹಾಕುವ ಬ್ಯಾಂಡ್‌ಗಳನ್ನು ಕೊಡುಗೆಯಾಗಿ ನೀಡಿದರು. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರು ಎಲ್ಲರ ಗಮನ ಸೆಳೆದಿದ್ದಾರೆ.