Asafoetida Farming: ಹಿಮಾಲಯದ 11 ಸಾವಿರ ಅಡಿ ಎತ್ತರದಲ್ಲಿ ಕೃಷಿ : ರೈತರಿಗೆ ಬಂಪರ್ ಆದಾಯ!

By Suvarna News  |  First Published Aug 6, 2023, 5:45 PM IST

ನಮ್ಮ ದೇಶದ ರೈತರಿಗೆ ಖುಷಿ ಸುದ್ದಿಯೊಂದಿದೆ. ಐದು ವರ್ಷಗಳ ಶ್ರಮಕ್ಕೆ ಫಲ ಸಿಗುವ ಕಾಲ ಹತ್ತಿರ ಬಂದಿದೆ. ಇನ್ನೆರಡು ವರ್ಷಗಳಲ್ಲಿ ರೈತರ ಜೇಬು ತುಂಬುವ ಜೊತೆಗೆ ನಮ್ಮ ನೆಲದಲ್ಲಿ ಬೆಳೆದ ಬೆಳೆ ನಮ್ಮ ಕೈ ಸೇರಲಿದೆ.  
 


ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ ಅನ್ನೋ ಗಾದೆ   ಇದೆ. ಭಾರತೀಯ ಅಡುಗೆಯಲ್ಲಿ ಇಂಗಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಅಡುಗೆಯ ರುಚಿಯನ್ನು ಹೆಚ್ಚಿಸುವಲ್ಲಿ ಇಂಗಿನ ಪಾತ್ರ ಬಹಳ ದೊಡ್ಡದು. ಇಂಗಿನ ಒಂದು ಒಗ್ಗರಣೆ ನೀಡಿದ್ರೆ ಸಾಕು, ಅಡುಗೆ ಹೊಸ ರುಚಿಯನ್ನೇ ಪಡೆಯುತ್ತೆ. ಆರೋಗ್ಯಕ್ಕೂ ಇಂಗು ಬಹಳ ಪ್ರಯೋಜನಕಾರಿ ಎಂದು ನಾವು ನಂಬುತ್ತೇವೆ. ಅನೇಕ ಮನೆ ಮದ್ದುಗಳಿಗೆ ಇಂಗಿನ ಬಳಕೆ ಮಾಡಲಾಗುತ್ತದೆ. ಇಂಗು ಇಷ್ಟು ಅವಶ್ಯಕವಾಗಿದ್ರೂ, ಇಂಗಿಗೆ ಇಷ್ಟು ಬೇಡಿಕೆಯಿದ್ರೂ ನಮ್ಮ ದೇಶದಲ್ಲಿ ಇಂಗಿನ ಬೆಳೆ ಬೆಳೆಯಲಾಗ್ತಿರಲಿ. ಆದ್ರೆ ಇನ್ಮುಂದೆ ನಾವು ಭಾರತದಲ್ಲೇ ಬೆಳೆದ ಇಂಗನ್ನು ಬಳಕೆ ಮಾಡ್ಬಹುದಾಗಿದೆ.   

ಹಿಮಾಲಯ (Himalaya) ದ 11000 ಅಡಿ ಎತ್ತರದಲ್ಲಿ ಇಂಗು (Asafetida) ಬೆಳೆ : ಭಾರತೀಯ ಪಾಕಪದ್ಧತಿಯಲ್ಲಿ ಇಂಗು ಅತ್ಯಗತ್ಯ ಮಸಾಲೆ ಎನ್ನಿಸಿದ್ರೂ ಇಂಗನ್ನು ಅಪಘಾನಿಸ್ತಾನ (Afghanistan) ಮತ್ತು ಇರಾನ್ ನಿಂದ ಆಮದು ಮಾಡಿಕೊಳ್ಳಬೇಕಿತ್ತು. ಹಾಗಾಗಿ ಕೃಷಿ ವಿಜ್ಞಾನಿಗಳು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇಂಗು ಬೆಳೆಯುವ ಕುರಿತು ಸಂಶೋಧನೆ ನಡೆಸುತ್ತಿದ್ದರು. ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ, ಪಾಲಂಪುರದ ವಿಜ್ಞಾನಿಗಳು ಅಪಘಾನಿಸ್ತಾನ ಹಾಗೂ ಇರಾನ್ ನಿಂದ ಇಂಗಿನ ಬೀಜಗಳನ್ನು ಭಾರತಕ್ಕೆ ತಂದು ಪ್ರಯೋಗ ನಡೆಸಿದ್ದಾರೆ.  

Latest Videos

undefined

PRICE RISE: ರಾಜಭವನದಲ್ಲಿ ಅಡುಗೆಗೆ ಟೊಮ್ಯಾಟೋವನ್ನೇ ಬ್ಯಾನ್‌ ಮಾಡಿ ಗವರ್ನರ್ ಆದೇಶ!

ಅಪಘಾನಿಸ್ತಾನ ಹಾಗೂ ಇರಾನ್ ನಿಂದ ಇಂಗಿನ ಗಿಡದ ಬೀಜಗಳನ್ನು ತಂದು ಹಿಮಾಚಲ ಪ್ರದೇಶದ ಕೆಲವು ರೈತರಿಗೆ ಇಂಗಿನ ಕೃಷಿಯ ಬಗ್ಗೆ ತರಬೇತಿ ನೀಡಿ, ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗಿತ್ತು. 2020ರಲ್ಲಿ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಸುಮಾರು 11000 ಅಡಿ ಎತ್ತರದಲ್ಲಿ ಇಂಗಿನ ಗಿಡಗಳನ್ನು ನಾಟಿಮಾಡಲಾಯ್ತು. ಸುಮಾರು 3 ವರ್ಷಗಳ ಸತತ ಪರಿಶ್ರಮದ ನಂತರ ಐಎಚ್ ಬಿಟಿ ವಿಜ್ಞಾನಿಗಳು ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯಲ್ಲಿ ಇಂಗಿನ ಗಿಡಗಳನ್ನು ಬೆಳೆಯುವಲ್ಲಿ ಸಫಲರಾಗಿದ್ದಾರೆ. ಈಗ ಇಂಗಿನ ಗಿಡಗಳು ಚೆನ್ನಾಗಿ ಬೆಳೆದಿದ್ದು ಮುಂಬರುವ ಎರಡು ವರ್ಷಗಳಲ್ಲಿ ಬೆಳೆ ಕೈ ಸೇರಲಿದೆ. ಹಿಮಾಚಲ ಮಾತ್ರವಲ್ಲದೆ   ಉತ್ತರಾಖಂಡ, ಲಡಾಕ್, ಕಿನ್ನೌರ್ ಹಾಗೂ ಜಾಂಝೇಲಿಯ ಗುಡ್ಡಗಾಡು ಪ್ರದೇಶಗಳು ಇಂಗಿನ ಕೃಷಿಗೆ ಸೂಕ್ತ ಸ್ಥಳ ಎಂದು ಪರಿಗಣಿಸಲಾಗಿದೆ. ಈಗಾಗಲೇ ಸುಮಾರು 7 ಹೆಕ್ಟೇರ್ ಪ್ರದೇಶಗಳಲ್ಲಿ 47 ಸಾವಿರ ಇಂಗಿನ ಗಿಡಗಳನ್ನು ಬೆಳೆಸಲಾಗಿದೆ.

ಭಾರತದಲ್ಲಿ ಅತೀ ಹೆಚ್ಚು ಇಂಗಿನ ಬಳಕೆ : ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಇಂಗನ್ನು ಬಳಕೆ ಮಾಡುವ ದೇಶವಾಗಿದೆ. ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 1500 ಟನ್ ಇಂಗು ಬಳಕೆಯಾಗುತ್ತದೆ. ಇಷ್ಟು ಪ್ರಮಾಣದ ಇಂಗಿನ ಬೆಲೆ 940 ಕೋಟಿಗಿಂತಲೂ ಹೆಚ್ಚಾಗುತ್ತೆ. ಭಾರತವು ಅಪಘಾನಿಸ್ತಾನದಿಂದ ಪ್ರತಿಶತ 90, ಇರಾನ್ ನಿಂದ ಪ್ರತಿಶತ 2 ಮತ್ತು ಉಜ್ಬೇಕಿಸ್ತಾನದಿಂದ ಪ್ರತಿಶತ 8 ರಷ್ಟು ಇಂಗನ್ನು ಆಮದು ಮಾಡಿಕೊಳ್ಳುತ್ತದೆ.

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ!

20ರಿಂದ 30ಸಾವಿರ ಬೆಲೆಬಾಳುವ ಇಂಗು : ಇಂಗಿನ ಕೃಷಿಗೆ 20 ರಿಂದ 30 ಡಿಗ್ರಿ ತಾಪಮಾನದ ಅಗತ್ಯವಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಇಂಗಿಗೆ 30ರಿಂದ 40 ಸಾವಿರ ರೂಪಾಯಿಗಳ ದರವಿದೆ. ಇಂಗಿನ ಗಿಡವನ್ನು ಬೆಳೆಸಿದ 5 ವರ್ಷದಲ್ಲಿ ಇಂಗು ಮತ್ತು ಅದರ ಬೀಜವನ್ನು ಪಡೆಯಬಹುದಾಗಿದೆ. ಒಂದು ಗಿಡದಿಂದ ಸುಮಾರು ಅರ್ಧ ಕೆಜಿ ಇಂಗನ್ನು ಪಡೆಯಬಹುದು. ಇಂಗಿನ ಕೃಷಿಯಿಂದ ಬೆಳೆಗಾರರಿಗೂ ಒಳ್ಳೆಯ ಲಾಭವಾಗಲಿದೆ.

ಇಂಗಿನ ಬೆಳೆ ಬೆಳೆಯುವ ರೈತರು ಏನಂತಾರೆ? : ಲಾಹೌಲ್ ನ ಕ್ವಾರಿಂಗ್ ಹಳ್ಳಿಯಲ್ಲಿ ಮೊದಲ ಬಾರಿಗೆ ಇಂಗಿನ ಬೆಳೆಯನ್ನು ಬೆಳೆಯುವ ರೈತರು ಖುಷಿಯಾಗಿದ್ದಾರೆ. ಸದ್ಯ ಇಂಗಿನ ಪರಿಮಳ ಬರಲು ಶುರುವಾಗಿದ್ದು ಹೊಸ ಭರವಸೆ ಮೂಡಿಸಿದೆ ಎಂದಿದ್ದಾರೆ.  

click me!