ಮಳೆಗಾಲದಲ್ಲಿ ಬಿಸಿಬಿಸಿ ಬಿರಿಯಾನಿ, ಕಬಾಬ್ ತಿನ್ನೋ ಮುನ್ನ ಈ ವಿಚಾರ ತಿಳ್ಕೊಂಡಿರಿ

By Suvarna News  |  First Published Jul 3, 2022, 11:30 AM IST

ಮಳೆಗಾಲ (Monsoon) ಎಂಜಾಯ್ ಮಾಡೋಕೆ ಚೆನ್ನಾಗಿದ್ರೂ ಈ ಋತುವಿನಲ್ಲಿ ಸುಲಭವಾಗಿ ಆರೋಗ್ಯ (Health) ಹದಗೆಡುತ್ತದೆ. ಹೀಗಾಗಿ ತಿನ್ನೋ ಆಹಾರದ (Food) ಬಗ್ಗೆ ಹೆಚ್ಚಿನ ಕಾಳಜಿ (Care) ವಹಿಸಬೇಕು. ಹಾಗಿದ್ರೆ ಮಾನ್ಸೂನ್‌ನಲ್ಲಿ ನಾನ್‌ವೆಜ್‌ (Nonveg) ತಿನ್ಬೋದಾ ?


ಮಳೆಗಾಲ (Monsoon) ಶುರುವಾಗಿದೆ. ಮಳೆಯ ನಂತರ ಹವಾಮಾನ (Weather)ವು ಆಹ್ಲಾದಕರವಾಗಿರುತ್ತದೆ. ಹೀಗಾಗಿ ಜನರು ಈ ತಂಪಾದ ವಾತಾವರಣವನ್ನು ಆನಂದಿಸಲು ಇಷ್ಟಪಡುತ್ತಾರೆ. ಕೆಲವರು ಇಷ್ಟವಾದ ತಿಂಡಿ ತಿಂದರೆ, ಇನ್ನು ಕೆಲವರು ಮಳೆಯಲ್ಲಿ ನೆನೆಯುತ್ತಾ ಬೈಕ್ ನಲ್ಲಿ ಲಾಂಗ್ ಡ್ರೈವ್ ಹೋಗುತ್ತಾರೆ. ಆದರೆ ಈ ವಾತಾವರಣದಲ್ಲಿ ತುಂಬಾ ಜಾಗರೂಕರಾಗಿರಬೇಕು. ಈ ಋತುವಿನಲ್ಲಿ ರೋಗಗಳು (Disease) ಮತ್ತು ಸೋಂಕುಗಳು ಹೆಚ್ಚು ಹರಡುತ್ತವೆ. ಮಳೆಗಾಲದಲ್ಲಿ ಆಹಾರ (Food) ಮತ್ತು ಪಾನೀಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅನಾರೋಗ್ಯ ಕಾಡಬಹುದು. ಮಳೆಯಲ್ಲಿ ಜೀರ್ಣಕ್ರಿಯೆ ದುರ್ಬಲವಾಗುತ್ತದೆ. ಆದ್ದರಿಂದ, ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ನಾನ್ ವೆಜ್ (Nonveg) ತಿನ್ನುವುದಾ ಅನ್ನುವುದರ ಬಗ್ಗೆ ಹಲವರಿಗೆ ಗೊಂದಲವಿದೆ. ಆ ಬಗ್ಗೆ ತಿಳಿಯೋಣ.

ಮಳೆಗಾಲದಲ್ಲಿ ನಾನ್ ವೆಜ್ ತಿನ್ನಬಹುದಾ ?
ಮಳೆಗಾಲದಲ್ಲಿ ಮಾಂಸಾಹಾರ ತಿನ್ನುವುದನ್ನು ತಪ್ಪಿಸುವಂತೆ ತಜ್ಞರು ಹೇಳುತ್ತಾರೆ. ಯಾಕೆಂದರೆ ಮಾಂಸಾಹಾರ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೇ ಇಂತಹ ಆಹಾರವನ್ನು ಸೇವಿಸುವುದರಿಂದ ಅತಿ ಶೀಘ್ರವಾಗಿ ಸೋಂಕು ತಗಲುವ ಅಪಾಯವಿದೆ.

Tap to resize

Latest Videos

ಮಳೆಗಾಲದಲ್ಲಿ ಮಶ್ರೂಮ್‌ನಿಂದ ತಯಾರಿಸಿದ ಆಹಾರ ತಿನ್ಬೋದಾ ?

ಮಳೆಗಾಲದಲ್ಲಿ ನಾನ್‌ವೆಜ್ ಯಾಕೆ ತಿನ್ನಬಾರದು ?
ಮಾನ್ಸೂನ್‌ನಲ್ಲಿ ಮಾಂಸಾಹಾರಿ ತಿನ್ನಬಾರದು ಎಂಬ ಧಾರ್ಮಿಕ ಕಾರಣವಿದೆ, ಅದು ಸಾವನ ಭಗವಾನ್ ಶಿವನ ತಿಂಗಳು. ಈ ತಿಂಗಳಲ್ಲಿ ಜನರು ಪೂಜೆ ಮತ್ತು ಉಪವಾಸ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳು ಆಹಾರ ಸೇವನೆಯಿಂದ ದೂರ ಉಳಿಯುತ್ತಾರೆ. ಈಗ ಇದರ ಹಿಂದಿನ ವೈಜ್ಞಾನಿಕ ವಿಧಾನದ ಬಗ್ಗೆ ಮಾತನಾಡೋಣ, ಇದರಲ್ಲಿ ಮಾಂಸಾಹಾರಿ ಆಹಾರವನ್ನು ತಡವಾಗಿ ಜೀರ್ಣವಾಗುವ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವೆಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ದುರ್ಬಲವಾದ ಜೀರ್ಣಾಂಗ ವ್ಯವಸ್ಥೆಯಿಂದ, ನಾನ್ ವೆಜ್ ತಡವಾಗಿ ಜೀರ್ಣವಾಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್, ಶಾಖ, ಅಜೀರ್ಣ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿಯೇ ಮಳೆಗಾಲದಲ್ಲಿ ನಾನ್‌ವೆಜ್‌ ತಿನ್ನದಂತೆ ಅಥವಾ ಕಡಿಮೆ ತಿನ್ನುವಂತೆ ವೈದ್ಯರು ಸೂಚಿಸುತ್ತಾರೆ.
 
ಮಳೆಗಾಲದಲ್ಲಿ ನಾನ್ ವೆಜ್ ಅಪಾಯಕಾರಿ ಯಾಕೆ ?
1. ದುರ್ಬಲ ಜೀರ್ಣಕ್ರಿಯೆ: ಮಳೆಗಾಲದಲ್ಲಿ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ. ವಿಶೇಷವಾಗಿ ಮಳೆಗಾಲದಲ್ಲಿ ಮಾಂಸಾಹಾರಿ ಆಹಾರ ಸೇವಿಸುವುದನ್ನು ತಪ್ಪಿಸಿ. ಮಾಂಸವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಜೀರ್ಣಕ್ರಿಯೆಯ ವಿಳಂಬದಿಂದಾಗಿ, ಆಹಾರವು ಕರುಳಿನಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಇದು ಆಹಾರ ವಿಷದ ಅಪಾಯವನ್ನು ಹೆಚ್ಚಿಸುತ್ತದೆ.

ಕಲ್ಲಣಬೆ ಸಾಂಬರಿನಲ್ಲಿ ನೀರುದೋಸೆ ತಿನ್ನೋ ಮಜಾನೆ ಬೇರೆ, ಉಡುಪಿ ಕಡೆ ಬಂದ್ರೆ ಮರೀಬೇಡಿ...!

2. ಶಿಲೀಂಧ್ರದ ಅಪಾಯ: ಮಾನ್ಸೂನ್‌ನಲ್ಲಿ ತೇವಾಂಶವು ಹೆಚ್ಚಾಗುತ್ತದೆ, ಇದರಿಂದಾಗಿ ಶಿಲೀಂಧ್ರ ಸೋಂಕುಗಳು, ಮತ್ತು ಶಿಲೀಂಧ್ರಗಳ ಅಪಾಯವು ಹೆಚ್ಚಾಗುತ್ತದೆ. ಆಹಾರ ಪದಾರ್ಥಗಳು ಬೇಗನೆ ಹಾಳಾಗಲು ಪ್ರಾರಂಭಿಸುತ್ತವೆ. ಅದರಲ್ಲೂ ನಾನ್ ವೆಜ್ ನಲ್ಲಿ ಸೋಂಕಿನ ಅಪಾಯ ಇನ್ನಷ್ಟು ಹೆಚ್ಚಿದೆ.

3. ಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ: ಮಳೆಯಲ್ಲಿ ಕೀಟಗಳು ಹೆಚ್ಚಾಗುತ್ತವೆ ಮತ್ತು ಪ್ರಾಣಿಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಈ ಋತುವಿನಲ್ಲಿ, ಪ್ರಾಣಿಗಳಲ್ಲಿ ಅನೇಕ ರೀತಿಯ ರೋಗಗಳು ಹರಡುತ್ತವೆ, ಇದರಿಂದಾಗಿ ಮಾಂಸಾಹಾರಿ ತಿನ್ನುವುದರಿಂದ ನಿಮಗೂ ಹಾನಿಯಾಗುತ್ತದೆ.

4. ಮೀನುಗಳು ಕಲುಷಿತಗೊಳ್ಳುತ್ತವೆ: ಮಳೆಯಲ್ಲಿ, ನೀರಿನೊಂದಿಗೆ ಕೊಳಕು ನದಿಗಳಿಗೆ ಹರಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೀನುಗಳು ಕಲುಷಿತ ನೀರು ಮತ್ತು ಆಹಾರವನ್ನು ಸೇವಿಸುತ್ತವೆ. ಈ ಋತುವಿನಲ್ಲಿ ಮೀನು ತಿನ್ನುವುದನ್ನು ಸಹ ತಪ್ಪಿಸಬೇಕು. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

click me!